
No Cylinder for these :: ಯಾರ್ಯಾರಿಗೆ ಸಿಲಿಂಡರ್ ಇಲ್ಲ!! ಸುಲಭವಾಗಿ ಸಿಲೆಂಡರ್ ಬುಕ್ ಮಾಡುವುದು ಹೇಗೆ?
ಹೋಟೆಲ್ ಗ್ಯಾಸ್ ಕಟ್, ಮನೆಗೆ ಮಾತ್ರ ಫುಲ್ ಸಪ್ಲೈ!
Hotel gas cut, full supply for homes only!
ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದ ಪ್ರಭಾವದಿಂದ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ಏರುಪೇರುಗಳು ಮತ್ತು ಅದನ್ನು ನಿಭಾಯಿಸುವ ಬಗ್ಗೆ
ಸಿಲಿಂಡರ್ ಲಭ್ಯತೆ ಮತ್ತು ಪೂರೈಕೆಯ ವಿವರ:-
Current LPG Supply Situation in India:-
• ಗೃಹ ಬಳಕೆ (Domestic) – ಮನೆಗಳಲ್ಲಿ ಉಪಯೋಗಿಸುವ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಗಳಿಲ್ಲ. ಸಾರ್ವಜನಿಕರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪನವರು ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ಅಡುಗೆ ಅನಿಲವನ್ನು ಜಾಗರೂಕತೆಯಿಂದ ಮತ್ತು ಮಿತವಾಗಿ ಬಳಸಲು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
• ವಾಣಿಜ್ಯ ಬಳಕೆ (Commercial) – ಹೋಟೆಲ್‌ಗಳು, ಮದುವೆಗಳು ಮತ್ತು ಇತರೆ ಸಮಾರಂಭಗಳಿಗೆ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೆ, ಆಸ್ಪತ್ರೆಗಳು, ಹಾಸ್ಟೆಲ್‌ಗಳು ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳಿಗೆ ಸಿಲಿಂಡರ್ ಪೂರೈಕೆ ಎಂದಿನಂತೆ ಮುಂದುವರೆಯುತ್ತದೆ.
ಸಿಲಿಂಡರ್ ಬುಕಿಂಗ್ ನಿಯಮಗಳು:-
Revised Booking Limits & Regulations:-
* ಸಿಂಗಲ್ ಸಿಲಿಂಡರ್ ಬಳಕೆದಾರರು- ಒಂದು ಬಾರಿ ಸಿಲಿಂಡರ್ ಬುಕ್ ಮಾಡಿದ ನಂತರ, ಮುಂದಿನ 25 ದಿನಗಳವರೆಗೆ ಮತ್ತೆ ಬುಕ್ ಮಾಡಲು ಅವಕಾಶವಿರುವುದಿಲ್ಲ. ಈ ನಿಯಮವು ಸಿಂಗಲ್ ಸಿಲಿಂಡರ್ ಬಳಕೆದಾರರಿಗೆ ಅನ್ವಯಿಸುತ್ತದೆ.
• ಡಬಲ್ ಸಿಲಿಂಡರ್ ಬಳಕೆದಾರರು – ತಿಂಗಳಿಗೆ ಒಂದು ಸಿಲಿಂಡರ್ ಮಾತ್ರ ಬುಕ್ ಮಾಡಲು ಅವಕಾಶವಿದ್ದು, 30 ದಿನಗಳ ಮಿತಿಯನ್ನು ವಿಧಿಸಲಾಗಿದೆ. ಒಂದು ವೇಳೆ ಅವಧಿಗೂ ಮುನ್ನ ಬುಕ್ ಮಾಡಲು ಪ್ರಯತ್ನಿಸಿದರೆ, “Booking limit reached” ಎಂಬ ಸಂದೇಶವು ಬರುತ್ತದೆ.
ಸಾರ್ವಜನಿಕರಿಗೆ ನೀಡಲಾದ ಸೂಚನೆಗಳು:-
Government Directives & Gas Supply Management:-
• ಸಿಲಿಂಡರ್ ಅಭಾವವಾಗುತ್ತದೆ ಎಂಬ ಭಯದಿಂದ ಅನಗತ್ಯವಾಗಿ ಮುಂಚಿತವಾಗಿ ಬುಕ್ ಮಾಡಿ ಸಿಲಿಂಡರ್‌ಗಳನ್ನು ಸಂಗ್ರಹಿಸಿಡುವುದು (Hoarding) ಕಾನೂನಿನ ಪ್ರಕಾರ ಅಪರಾಧ. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
* ಅನಿಲವನ್ನು ಉಳಿತಾಯ ಮಾಡಲು ಪರ್ಯಾಯವಾಗಿ ಇಂಡಕ್ಷನ್ ಸ್ಟೌವ್‌ಗಳನ್ನು ಬಳಸಲು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ. ಇದು ಅನಿಲದ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ನಮ್ಮ ದೇಶಕ್ಕೆ ಬೇಕಾಗುವ ಒಟ್ಟು ಅಡುಗೆ ಅನಿಲದಲ್ಲಿ ಸುಮಾರು ಶೇ. 35 ರಷ್ಟು ಭಾರತದಲ್ಲೇ ಉತ್ಪಾದನೆಯಾಗುತ್ತದೆ. ಉಳಿದ ಶೇ. 65 ರಷ್ಟನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಸದ್ಯಕ್ಕೆ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಸಂಚಾರದ ಸಮಸ್ಯೆಯಿಂದಾಗಿ ಈ ತಾತ್ಕಾಲಿಕ ಪರಿಸ್ಥಿತಿ ಎದುರಾಗಿದೆ.
ಸಿಲಿಂಡರ್ ಬುಕಿಂಗ್ ಮಾಡುವ ವಿಧಾನ:-
Digital Booking Process:-
• ಫೋನ್ ಪೇ (PhonePe) ಅಪ್ಲಿಕೇಶನ್ ಮೂಲಕ ಸುಲಭವಾಗಿ ಸಿಲಿಂಡರ್ ಬುಕ್ ಮಾಡಬಹುದು. ಇದು ತುಂಬಾ ಸರಳ ಮತ್ತು ಅನುಕೂಲಕರವಾಗಿದೆ.

Book cylinder
• ಫೋನ್ ಪೇ ಅಪ್ಲಿಕೇಶನ್‌ನಲ್ಲಿ ‘Recharge & Bills‘ ವಿಭಾಗದಲ್ಲಿರುವ ‘Book a Cylinder‘ ಆಯ್ಕೆಯನ್ನು ಆರಿಸಿ, ನಿಮ್ಮ ಗ್ಯಾಸ್ ಏಜೆನ್ಸಿಯನ್ನು (HP, Bharat, Indane) ಆಯ್ಕೆ ಮಾಡಿಕೊಳ್ಳಿ.
ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಕನ್ಸ್ಯೂಮರ್ ಸಂಖ್ಯೆಯನ್ನು ನಮೂದಿಸಿ ಸುಲಭವಾಗಿ ಬುಕ್ ಮಾಡಬಹುದು.

Selection method
ಅಡುಗೆ ಮನೆಗೂ ತಟ್ಟಿದ ಯುದ್ಧದ ಬಿಸಿ:-
The heat of war reaches the kitchen:-
ಮಧ್ಯ ಪ್ರಾಚ್ಯದ ಸಂಘರ್ಷದಿಂದ ಅನಿಲ ಪೂರೈಕೆಯಲ್ಲಿ ವ್ಯತ್ಯಯವು ತಾತ್ಕಾಲಿಕ. ಸರ್ಕಾರದ ಕ್ರಮಗಳು ಮತ್ತು ಬುಕಿಂಗ್ ಮಿತಿಗಳು ಜನರಿಗೆ ಅನುಕೂಲಕರ. ವಾಣಿಜ್ಯ ಸಿಲಿಂಡರ್‌ಗಳ ನಿಯಂತ್ರಣದಿಂದ ಮನೆಗಳಿಗೆ ಅನಿಲ ಪೂರೈಕೆಯಲ್ಲಿ ಕಡಿತವಾಗುವುದಿಲ್ಲ,
ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುತ್ತದೆ, ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯುತ್ತದೆ.ಹೋಟೆಲ್‌ಗಳಲ್ಲಿ ಬೆಲೆ ಏರಿಕೆ ಮತ್ತು ಗೃಹ ಬಳಕೆದಾರರು ಬಳಕೆಯನ್ನು ಮಿತಗೊಳಿಸಬೇಕಾಗುತ್ತದೆ.
25-30 ದಿನಗಳ ಅಂತರದ ನಿಯಮ ದೊಡ್ಡ ಕುಟುಂಬಗಳಿಗೆ ಸವಾಲಾಗಬಹುದು.ಇಂಡಕ್ಷನ್ ಸ್ಟೌವ್‌ಗಳಂತಹ ಪರ್ಯಾಯ ಇಂಧನ ಬಳಸಬಹುದು. ಸಾರ್ವಜನಿಕರು ಸಹಕರಿಸಿದರೆ, ಸಂಪನ್ಮೂಲಗಳನ್ನು ಹಂಚಿಕೆ ಮಾಡಲು ಸಹಕಾರಿಯಾಗುತ್ತದೆ.
The gas shortage caused by the Middle East conflict is not expected to last long. The government’s actions and limits on gas purchases are helpful for people.
By controlling the sale of gas cylinders for businesses, homes will not get less gas. This helps low-income and middle-income families and stops illegal sales.
However, hotels might raise prices, and people using gas at home may need to use less. The rule that you can only buy gas every 25-30 days might be hard for big families.
People can use other energy sources, like induction stoves. If people work together, it will help to share resources well.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
