New Method of planting Arecanut :: ಅಡಕೆ ನೆಡುವ ಹೊಸ ವಿಧಾನ!! ಒಂದು ಎಕ್ಕರೆಯಲ್ಲಿ ಹೆಚ್ಚು ಸಸಿಗಳು ಹೆಚ್ಚು ಇಳುವರಿ!!

"Agriculture is our CULTURE"

New Method of planting Arecanut :: ಅಡಕೆ ನೆಡುವ ಹೊಸ ವಿಧಾನ!! ಒಂದು ಎಕ್ಕರೆಯಲ್ಲಿ ಹೆಚ್ಚು ಸಸಿಗಳು ಹೆಚ್ಚು ಇಳುವರಿ!!

ಅಡಿಕೆ ಸಸಿ ನೆಡುವಲ್ಲಿ ಹೊಸ ವಿಧಾನ:: ಹೆಚ್ಚು ಇಳುವರಿ ಪಡೆಯುವಲ್ಲಿ ರೈತರಿಗೆ ದೊರೆಯಲಿದೆ ಖಚಿತ ಸಮಾಧಾನ!!

Arecanut is a important commercial Craft in India, it is mainly cultivated in sites like Karnataka, kerala, Assam and West Bengal. Among these Karnataka is the largest producer ofArecanut.  

 Arecanut cultivation provides regular income for farmers. apart from the traditional chewing purpose Arecanut also used in ayurvedic medicine,dyes and industrial products hence price of Arecanut is growing gradually from day to day.

ಅಡಿಕೆ ಬೆಳೆಯು ಕರ್ನಾಟಕ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ಯಾಗಿದೆ. ಈ ಅಡಿಕೆ ಬೆಳೆಯನ್ನು ಬೆಳೆಯುವ ವಿಧಾನವು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಬೆಳೆ ವಿಧಾನವನ್ನು ಕಂಡುಕೊಂಡಿದ್ದಾರೆ.

ಕೆಲವು ಭಾಗಗಳಲ್ಲಿ ಸಾಂಪ್ರದಾಯಿಕ ವಿಧಾನಗಳು ವ್ಯಾಪಕವಾಗಿ ತಿಳಿದಿದ್ದರು, ಈ ವಿಧಾನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರದೇ ಇದ್ದಾಗ ರೈತರು ಹೊಸ ಹೊಸ ಅನ್ವೇಷಣೆಗಳತ್ತ ಗಮನಹರಿಸುತ್ತಾರೆ.

ಅಂತಹುದೇ ಒಂದು ವೈಜ್ಞಾನಿಕ ಅನ್ವೇಷಣೆ ಎಂದರೆ ತ್ರಿಕೋನಾಕಾರದಲ್ಲಿ ಅಡಿಕೆ ಸಸ್ಯಗಳನ್ನು ನೆಟ್ಟು ಅದರಲ್ಲಿ ಹೆಚ್ಚಿನ ಇಳುವರಿಯನ್ನು ಪಡೆದು ಅಡಿಕೆ ಬೆಳೆಯು ಒಂದು ವಾಣಿಜ್ಯ ಬೆಳೆ ಎಂಬುದನ್ನು ಮನದಟ್ಟು ಮಾಡುವ ಉಪಾಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

 ಈ ತ್ರಿಕೋನಾಕಾರದ ಅಡಿಕೆ ಸಸ್ಯ ನೆಡುವಿಕೆಯನ್ನು ರೈತರು ತಮ್ಮ ಚಿಕ್ಕ ಜಮೀನಿನಲ್ಲಿ ಮಾಡಬಹುದು, ಅಂದರೆ ರೈತರು ಕೇವಲ ” ಒಂದು ಅಥವಾ ಎರಡು ಎಕರೆಯಿಂದ ಪರಿಣಾಮಕಾರಿಯಾಗಿ ಪ್ರಾರಂಭಿಸಬಹುದು. 

 ಅಡಿಕೆ ಸಸಿಗಳನ್ನು ನೆಡುವುದು ಹೇಗೆ?

How to plant arecanut in new method? 

* ಅಡಿಕೆ ಸಸಿಗಳನ್ನು ನೆಡುವ ಪ್ರಾರಂಭದಲ್ಲಿ “6 ಅಡಿಯಿಂದ 6 ಅಡಿ ಜೋಡಿ ಸಾಲು ನೆಡಬೇಕು”, ನಂತರ 12 ಅಡಿ ಅಂತರದಲ್ಲಿ ಮತ್ತೆ ಜೋಡಿ ಸಾಲುಗಳನ್ನು ನೆಡಬೇಕು

ಆದರೆ ಈ ಸಮಯದಲ್ಲಿ zig-zag ರೂಪದಲ್ಲಿ ಅಥವಾ “ತ್ರಿಕೋನ ಆಕಾರ”ದಲ್ಲಿ ಮತ್ತೊಂದು ಜೋಡಿ ಸಾಲುಗಳನ್ನಾಗಿ ನೆಡಬೇಕು ,

ತ್ರಿಕೋನಾಕಾರದಲ್ಲಿ ಅಡಿಕೆ ಸಸಿಗಳನ್ನು ನೆಡುವುದರಿಂದ ಆಗುವ ಅನುಕೂಲಗಳೇನು?

What is the uses of planting arecanut plants in triangle manner?

* ಹೀಗೆ ನೆಡುವುದರಿಂದ “ಗಿಡಗಳ ಮಧ್ಯೆ ಹೆಚ್ಚು ಜಾಗ ಸಿಗುತ್ತದೆ ಮತ್ತು ಸಸಿಗಳಿಗೆ ಗಾಳಿ ಬೆಳಕು ಉತ್ತಮವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ”.

• ಇದರಿಂದಾಗಿ “ಉಪಕರಣಗಳನ್ನು ಅಥವಾ ಜೆಸಿಬಿ ಎಂತಹ ದೊಡ್ಡ ವಾಹನಗಳನ್ನು ಸಹ ಒಳಗಡೆ ತರಲು ಸಾಧ್ಯವಾಗುತ್ತದೆ”.

* ಟ್ರ್ಯಾಲಿಯೂ ಸಹ ಒಳ ತರಲು ಮತ್ತು ಅಡಿಕೆ ಸಸಿಗಳಿಗೆ ಔಷಧಿ ಸಿಂಪಡಿಸಲು”, “ಕೊಯ್ಲು ಮಾಡಲು ಸುಲಭ”ವಾಗುತ್ತದೆ. 

• ಸಾಮಾನ್ಯವಾಗಿ “9- 9 ಕುಂಟೆಗೆ 13 ಸಸಿಗಳನ್ನು ನೆಡುವರು”, ಆದರೆ ” ತ್ರಿಕೋನಾಕಾರದ ವಿಧಾನದಿಂದ ಒಂದು ಕುಂಟೆಗೆ 19 ಸಸಿಗಳನ್ನು ನೆಡಬಹುದು”. ಅಲ್ಲಿಗೆ ರೈತರಿಗೆ “ಆರು ಸಸಿಗಳು ಹೆಚ್ಚು ದೊರೆಯುತ್ತವೆ”. 

* ಅದೇ ರೀತಿ ಒಂದು ಎಕರೆಯಲ್ಲಿ “40 ಕುಂಟೆ ಅಂದರೆ 6×40= 240 ಸಸಿಗಳು ನೆಡಬಹುದು”.

• ಈ ವಿಧಾನವನ್ನು ಬಳಸುವುದರಿಂದ “ಸಣ್ಣ ರೈತರು ಅಂದರೆ, 1 ಎಕರೆ ಅಥವಾ 2 ಎಕರೆ ಹೊಂದಿರುವಂತಹ ರೈತರು ಕೂಡ ಹೆಚ್ಚು ಇಳುವರಿ ಪಡೆಯಬಹುದು ಮತ್ತು 1 ಎಕರೆಗೆ 7 ರಿಂದ 9 ಕ್ವಿಂಟಲ್ ಇಳುವರಿ ಪಡೆಯಬಹುದು”.

* ಈ ವಿಧಾನದಿಂದ “ಕೇವಲ 5 ವರ್ಷದಲ್ಲೇ ಇಳುವರಿ” ಬರಲು ಪ್ರಾರಂಭವಾಗುತ್ತದೆ.

 ಹಾಗಾದರೆ ಈ ವಿಧಾನದಲ್ಲಿ ನಿರ್ವಹಣೆ ಹೇಗೆ ? 

which fertilizer should given to arecanut plants? 

 * ಒಂದು ಕ್ವಿಂಟಲ್ DFE

• 1 ಕ್ವಿಂಟಲ್ ಪೊಟ್ಯಾಷ್.

* ಒಂದು ಕ್ವಿಂಟಲ್ ಮಿನಿ ಶಕ್ತಿ ಕ್ಯಾಲ್ಸಿಯಂ (ಡೊಲೊಮೈಟ್ ಪ್ಲಸ್ ಮೆಗ್ನಸಿಯಂ).

• ಅರ್ಧ ಕ್ವಿಂಟಲ್ ಯೂರಿಯಾ. 

* 2% ಹ್ಯೂಮಿಕ್ ಆಸಿಡ್ (ಪೌಡರ್ ರೂಪದಲ್ಲಿರುತ್ತದೆ). 

ಇವಿಷ್ಟು ಗೊಬ್ಬರವನ್ನು ಮಿಶ್ರಣ ಮಾಡಿ, ಪ್ರತೀ 2 ತಿಂಗಳಿಗೆ ಪ್ರತಿ ಅಡಿಕೆ ಗಿಡಗಳಿಗೂ 50 ಗ್ರಾಮಿನಷ್ಟು ನೀಡಬೇಕು. 

ಈ ಗೊಬ್ಬರದ ಮಿಶ್ರಣದಿಂದ ಆಗುವ ಅನುಕೂಲ ವೇನು?

What is the benefit from this fertilizer mixture? 

ಇದರಿಂದ ಆಗುವ ಅನುಕೂಲವೆಂದರೆ ಸಸಿಯ ಬೆಳವಣಿಗೆಗೆ ತಕ್ಕಂತೆ ತಾಜ ಗೊಬ್ಬರವನ್ನು ನೀಡುತ್ತಾ ಹೋದರೆ ಉತ್ತಮ ಇಳುವರಿ ಪಡೆಯಲು ಸಹಾಯಕವಾಗುತ್ತದೆ .

ಇದನ್ನು ಸ್ವತಃ ನಾವೇ ಮಾಡಬಹುದು ಮತ್ತು ಲೇಬರ್ ಗಳ ವೆಚ್ಚವು ಸಹ ಉಳಿಯುತ್ತದೆ.

* ಸಸ್ಯಗಳ ಮಧ್ಯೆ ಸಾಕಷ್ಟು ಅಂತರವಿರುವುದರಿಂದ ಈ ಅಡಿಕೆಯ ಬೆಳೆಯ ಜೊತೆಗೆ ಅನುಕೂಲಕ್ಕೆ ತಕ್ಕಂತೆ ಮೆಣಸು, ಬಾಳೆ, ಕಾಫಿ ಹೇಗೆ ಬೇರೆ ಬೆಳೆಗಳನ್ನು ಸಹ ಹಾಕಬಹುದು.

ಕಳೆ: ಅನುಕೂಲಕ್ಕೆ ತಕ್ಕಂತೆ ಕಲ್ಟಿವೇಟರ್, ಮರ್ಜ್ ಇತ್ಯಾದಿ ಮಾಡಬಹುದು.

 ಅಡಿಕೆ ಸಸ್ಯಗಳ ಗಣ್ಣುಗಳಿಗೆ ಸುಣ್ಣವನ್ನು ಲೇಪಿಸುವುದು ಏಕೆ? 

why farmers paint like solution on arecanut plants? 

• ನವೆಂಬರ್ ಮತ್ತು ಡಿಸೆಂಬರ್ ಅಂತರದಲ್ಲಿ ಅಧಿಕ ಚಳಿಯಿಂದ ಮತ್ತು ಆಗ್ನೇಯ ದಿಕ್ಕಿನಿಂದ ಬೀಳುವ ಸೂರ್ಯನ ಬೆಳಕು ಬೆಳಕಿನಿಂದ ಉಷ್ಣತೆಯಿಂದ ಅಡಿಕೆ ಸಸ್ಯದ ಗಣ್ಣುಗಳು ಕೆಂಪಾಗುವಂತೆ ಮಾಡಿ,

ಸೀಳಿವುಕೆಯನ್ನು ಉಂಟು ಮಾಡುತ್ತದೆ ಇದರಿಂದ ಅಡಿಕೆ ಸಸ್ಯಗಳು ಮುರಿದು ಬೀಳುವ ಸಾಧ್ಯತೆಯಿರುವುದರಿಂದ, ಈ ಪರಿಣಾಮವನ್ನು ತಡೆಗಟ್ಟಲು ರೈತರು ಅಡಿಕೆ ಸಸ್ಯದ ಗಣ್ಣುಗಳಿಗೆ ಸುಣ್ಣವನ್ನು ಲೇಪಿಸುತ್ತಾರೆ ಸಸ್ಯಗಳಲ್ಲಿರುವ ಉಷ್ಣವನ್ನು ಕಡಿಮೆ ಮಾಡಿ ತಂಪಾಗಿರಿಸುತ್ತದೆ. 

* ಸುಣ್ಣ ಕ್ಕೆ ಬದಲಾಗಿ ರೈತರು ಬೇರೆ ಬೇರೆ ಸಸ್ಯಗಳನ್ನು ಗಡಿಯಂಚಿನಲ್ಲಿ ಬೆಳೆಯಬಹುದು ಆದರೆ ಇದರಿಂದಾಗುವ ಅನಾನುಕೂಲ ವೆಂದರೆ ಸಸ್ಯಗಳನ್ನು ಬೆಳೆದಾಗ ಅಡಿಕೆ ಸಸ್ಯಾ ಹಾಗೂ ಇತರೆ ಸಸ್ಯಗಳ ನಡುವೆ ಪೋಷಕಾಂಶಗಳಿಗಾಗಿ ಸ್ಪರ್ಧೆ ಉಂಟಾಗುವ ಸಾಧ್ಯತೆ ಇರುತ್ತದೆ. 

ತ್ರಿಕೋನಾಕಾರದಲ್ಲಿ ಸಸ್ಯಗಳನ್ನು ನೆಡುವ ವಿಧಾನವು ವೈಜ್ಞಾನಿಕ ದೃಷ್ಟಿಕೋನದಿಂದ ಒಂದು ಹೊಸ ಅನ್ವೇಷಣೆಯಾಗಿದ್ದು ಒಂದು ಎಕರೆ ಭೂಮಿಯಲ್ಲಿ ಒಂದುವರೆ ಎಕರೆಯಷ್ಟು ಇಳುವರಿಯನ್ನು ಪಡೆಯುವುದು ರೈತರಿಗೆ ಲಾಭದಾಯಕ ವಿಷಯವೇ ಸರಿ,

ಹಾಗಾಗಿ ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಈ ವಿಧಾನವನ್ನು ಅಳವಡಿಸಿಕೊಂಡರೆ ಖಂಡಿತವಾಗಿಯೂ ಸಾಕಷ್ಟು ಲಾಭವನ್ನು ಪಡೆಯುವುದರ ಜೊತೆಗೆ ವೈಜ್ಞಾನಿಕವಾಗಿ ಅಡಿಕೆ ಬೆಳೆದ ಸಂತೃಪ್ತಿಯು ರೈತರಿಗಿರುತ್ತದೆ. 

Arecanut cropping is not yesterday or day before yesterday’s cropping pattern but it is a traditional method of planting plants to get high yield but anyway now a days productivity is decreasing due to the many factors like land fragmentation, poor water management and poor nutrition management. 

Therefore, triangle method of planting of Arecanut is a scientific method of planting which gives, high yield in a small land also mentioned fertilizer can increase the productivity with proper nutrition management.

So triangle method helps to a good air and light for the better photosynthesis process. when photosynthesis is good, automatically productivity will increase. in this perspective, triangle method of planting is very beneficial to farmers to increase their productivity and profit

Thank you

ಧನ್ಯವಾದಗಳು

<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  VK

ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.