
Top 4 Schemes in Post office :: ಪೋಸ್ಟ್ ಆಫೀಸಿನಲ್ಲಿ ನಾಲ್ಕು ಪ್ರಮುಖ ಯೋಜನೆಗಳು!! ಹೂಡಿಕೆ ಮತ್ತು ಬಡ್ಡಿದರ!!
Secure Your Future – Top 4 Post Office Schemes!!
ಪೋಸ್ಟ್ ಆಫೀಸ್‌ನ ನಾಲ್ಕು ಪ್ರಮುಖ ಉಳಿತಾಯ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ::
ಸುಕನ್ಯಾ ಸಮೃದ್ಧಿ ಯೋಜನೆ (SSY):-
Sukanya Samrudhi Yojana (SSY):-
* ಇದು ಹೆಣ್ಣು ಮಕ್ಕಳಿಗಾಗಿಯೇ ಇರುವಂತಹ ಒಂದು ವಿಶೇಷವಾದ ಯೋಜನೆ.
• ಬಡ್ಡಿ ದರ – ಶೇ. 8.20 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ.
* ಹೂಡಿಕೆ – ವರ್ಷಕ್ಕೆ ಕನಿಷ್ಠ 250 ರೂಪಾಯಿಯಿಂದ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದಾಗಿದೆ.
• ಪ್ರಯೋಜನ – ಇದು ಸಂಪೂರ್ಣವಾಗಿ ತೆರಿಗೆ ರಹಿತ (Tax-Free) ಯೋಜನೆಯಾಗಿದೆ. 15 ವರ್ಷಗಳವರೆಗೆ ಹಣವನ್ನು ಪಾವತಿಸಬೇಕು, ಮಗುವಿಗೆ 21 ವರ್ಷಗಳು ತುಂಬಿದಾಗ ಮೆಚುರಿಟಿ ಮೊತ್ತವು ಸಿಗುತ್ತದೆ.
ಸಾರ್ವಜನಿಕ ಭವಿಷ್ಯ ನಿಧಿ (PPF):-
Public Provident Fund (PPF):-
* ಗಂಡು ಮಕ್ಕಳು ಸೇರಿದಂತೆ ಯಾರಾದರೂ ಮಾಡಬಹುದಾದಂತಹ ದೀರ್ಘಕಾಲದ ಉಳಿತಾಯ ಯೋಜನೆ ಇದಾಗಿದೆ.
• ಬಡ್ಡಿ ದರ –ಶೇ. 7.10 ರಷ್ಟು ಬಡ್ಡಿ ಇರುತ್ತದೆ.
* ಹೂಡಿಕೆ – ವರ್ಷಕ್ಕೆ ಕನಿಷ್ಠ 500 ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು.
• ಪ್ರಯೋಜನ –ಇದು ಕೂಡ ತೆರಿಗೆ ಮುಕ್ತವಾಗಿದ್ದು, 15 ವರ್ಷಗಳ ಅವಧಿಯನ್ನು ಹೊಂದಿರುತ್ತದೆ. ಅಗತ್ಯವಿದ್ದಲ್ಲಿ ಈ ಅವಧಿಯನ್ನು 20 ಅಥವಾ 25 ವರ್ಷಗಳವರೆಗೆ ವಿಸ್ತರಿಸಲು ಅವಕಾಶವಿರುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS):-
Senior Citizen Savings Scheme (SCSS):-
* ಉದ್ದೇಶ – 60 ವರ್ಷ ವಯಸ್ಸನ್ನು ಮೀರಿದ ಹಿರಿಯ ನಾಗರಿಕರಿಗಾಗಿ ಇರುವಂತಹ ಯೋಜನೆ ಇದಾಗಿದೆ.
• ಬಡ್ಡಿ ದರ –ಶೇ. 8.20 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.
* ಹೂಡಿಕೆ – ಕನಿಷ್ಠ 1,000 ರೂಪಾಯಿಯಿಂದ ಗರಿಷ್ಠ 30 ಲಕ್ಷ ರೂಪಾಯಿವರೆಗೆ ಒಂದೇ ಬಾರಿಗೆ (Lumpsum) ಹೂಡಿಕೆ ಮಾಡಬಹುದು.
• ಪ್ರಯೋಜನ – ಹೂಡಿಕೆ ಮಾಡಿದಂತಹ ಹಣಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಹಣವನ್ನು ಪಡೆಯಬಹುದು. ಇದು 5 ವರ್ಷಗಳ ಯೋಜನೆಯಾಗಿದ್ದು, ನಂತರದಲ್ಲಿ 3 ವರ್ಷಗಳವರೆಗೆ ವಿಸ್ತರಿಸುವುದಕ್ಕೆ ಅವಕಾಶವಿರುತ್ತದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (MIS):-
Post Office Monthly Income Scheme (MIS):-
• ಉದ್ದೇಶ – ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ತಿಂಗಳು ಒಂದು ನಿಶ್ಚಿತವಾದ ಆದಾಯವನ್ನು ಪಡೆಯಲು ಬಯಸುವವರಿಗಾಗಿ ಈ ಯೋಜನೆಯು ಇದೆ.
• ಬಡ್ಡಿ ದರ – ಶೇ. 7.40 ರಷ್ಟು ಬಡ್ಡಿ ಇರುತ್ತದೆ.
* ಹೂಡಿಕೆ – ಒಬ್ಬರ ಹೆಸರಿನಲ್ಲಿ 9 ಲಕ್ಷ ರೂಪಾಯಿವರೆಗೆ ಹಾಗೂ ಜಂಟಿ ಖಾತೆಯಲ್ಲಿ (Joint Account) 15 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು.
• ಪ್ರಯೋಜನ – 5 ವರ್ಷಗಳ ಅವಧಿಯ ಈ ಯೋಜನೆಯಲ್ಲಿ ಪ್ರತಿ ತಿಂಗಳು ಬಡ್ಡಿ ಹಣವನ್ನು ಪಡೆಯಬಹುದಾಗಿದೆ. ಆದರೆ ಇದು ತೆರಿಗೆ ಮುಕ್ತವಾಗಿರುವುದಿಲ್ಲ (Taxable).
ವಿಶೇಷ ಸೂಚನೆ – ಪೋಸ್ಟ್ ಆಫೀಸ್ ಯೋಜನೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದಾಗಿ ಇವು ಮಾರುಕಟ್ಟೆಯ ಏರಿಳಿತಗಳಿಂದ ಮುಕ್ತವಾಗಿದ್ದು, ಹೂಡಿಕೆಗೆ ಸಂಪೂರ್ಣವಾದ ಸುರಕ್ಷತೆಯನ್ನು ಒದಗಿಸುತ್ತವೆ.
Smart Savings:-
ಜಾಣ ಉಳಿತಾಯ:-
ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಆರ್ಥಿಕ ಭದ್ರತೆ ಮತ್ತು ಉತ್ತಮ ಭವಿಷ್ಯಕ್ಕೆ ಸಹಕಾರಿ. ಕೇಂದ್ರ ಸರ್ಕಾರದ ಅಡಿಯಲ್ಲಿದ್ದು, ಹೂಡಿಕೆದಾರರಿಗೆ ಹಣಕ್ಕೆ ಅಪಾಯವಿಲ್ಲದೆ ನಿಶ್ಚಿತ ಲಾಭ ಸಿಗುತ್ತದೆ.
ಸುಕನ್ಯಾ ಸಮೃದ್ಧಿ, ಪಿಪಿಎಫ್ ಹೆಣ್ಣುಮಕ್ಕಳ ಶಿಕ್ಷಣ, ಮದುವೆಗೆ ಹಾಗೂ ಗಂಡುಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗುತ್ತವೆ. ಹಿರಿಯ ನಾಗರಿಕ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ ನಿವೃತ್ತಿಯ ನಂತರ ಜೀವನ ನಡೆಸಲು ಸಹಾಯ ಮಾಡುತ್ತವೆ.
ತೆರಿಗೆ ವಿನಾಯಿತಿ ಇರುವುದರಿಂದ ಮಧ್ಯಮ ವರ್ಗದವರಿಗೆ ಹಣ ಉಳಿಸಲು ಈ ಯೋಜನೆಗಳು ಬಹಳ ಪ್ರಯೋಜನಕಾರಿ.
Post Office savings schemes ensure financial security and a better future. Backed by the Central Government, they guarantee returns with no principal risk.
Schemes like Sukanya Samriddhi and PPF aid daughters’ education/marriage and sons’ higher studies. The Senior Citizen Savings Scheme and Monthly Income Scheme support post-retirement livelihood.
Tax exemptions make these schemes ideal for middle-class savings.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
