Call record Trap :: ನಿಮ್ಮ ಫೋನ್ ಕರೆಗಳನ್ನು ನಿಮಗೆ ಗೊತ್ತಿಲ್ಲದ ಹಾಗೆ ಬೇರೆಯವರು ಕೇಳಿಸಿಕೊಳ್ಳುತ್ತಿದ್ದಾರೆ!! ಅದನ್ನು ಚೆಕ್ ಮಾಡಿಕೊಳ್ಳುವ ವಿಧಾನ!!
ನಿಮ್ಮ ಫೋನ್ ಸೇಫ್ ಇದೆಯಾ? ಈಗಲೇ ಚೆಕ್ ಮಾಡಿ!
Is your phone safe? Check now!
ನಿಮ್ಮ ಫೋನ್‌ಗೆ ಬರುವ ಕರೆಗಳನ್ನು (Calls) ಬೇರೆಯವರು ನಿಮಗೆ ತಿಳಿಯದಂತೆ ಕೇಳಿಸಿಕೊಳ್ಳುವ ‘ಕಾಲ್ ಫಾರ್ವರ್ಡಿಂಗ್ ಸ್ಕ್ಯಾಮ್’ (Call Forwarding Scam) ಬಗ್ಗೆ
ಕಾಲ್ ಫಾರ್ವರ್ಡಿಂಗ್ ಪರಿಶೀಲಿಸುವುದು ಹೇಗೆ?
How to check call forwarding?
• ನಿಮ್ಮ ಫೋನ್‌ನ ಡಯಲ್ ಪ್ಯಾಡ್‌ನಲ್ಲಿ *#62# ಎಂದು ಟೈಪ್ ಮಾಡಿ ಡಯಲ್ ಮಾಡಿ.
* ಒಂದು ವೇಳೆ ‘Voice – Not Forwarded‘ ಎಂದು ಬಂದರೆ ನಿಮ್ಮ ಫೋನ್ ಸುರಕ್ಷಿತವಾಗಿದೆ ಎಂದರ್ಥ.
• ಒಂದು ವೇಳೆ ಯಾವುದಾದರೂ ಅಪರಿಚಿತ ನಂಬರ್ ಕಾಣಿಸಿದರೆ, ನಿಮ್ಮ ಕರೆಗಳು ಆ ನಂಬರ್‌ಗೆ ಫಾರ್ವರ್ಡ್ ಆಗುತ್ತಿವೆ ಎಂದು ತಿಳಿಯಬೇಕು.
ಕಾಲ್ ಫಾರ್ವರ್ಡಿಂಗ್ ರದ್ದುಗೊಳಿಸುವುದು (Deactivate) ಹೇಗೆ?
How to deactivate call forwarding?
1. ನಿಮ್ಮ ಫೋನ್‌ನಿಂದ ##002# ಡಯಲ್ ಮಾಡಿ. ಇದರಿಂದ ಎಲ್ಲಾ ಸಕ್ರಿಯ ಕಾಲ್ ಫಾರ್ವರ್ಡಿಂಗ್‌ಗಳು ತಕ್ಷಣ ರದ್ದಾಗುತ್ತವೆ.
2. ಸೆಟ್ಟಿಂಗ್ಸ್ ಮೂಲಕ- ಫೋನ್‌ನ ‘Settings‘ ಗೆ ಹೋಗಿ ‘Call Forwarding‘ ಎಂದು ಸರ್ಚ್ ಮಾಡಿ.
• ಅಲ್ಲಿ ಯಾವುದಾದರೂ ಅಪರಿಚಿತ ನಂಬರ್ ಸೇರ್ಪಡೆಯಾಗಿದ್ದರೆ ಅದನ್ನು ಆಫ್ (Disable) ಮಾಡಿ.
3. ನಂಬರ್ ಬದಲಾಯಿಸುವುದು – ಒಂದು ವೇಳೆ ಸೆಟ್ಟಿಂಗ್ಸ್‌ನಲ್ಲಿ ಆಫ್ ಮಾಡಲು ಸಾಧ್ಯವಾಗದಿದ್ದರೆ (ಕೆಲವು ಫೋನ್‌ಗಳಲ್ಲಿ ಆಪರೇಟಿಂಗ್ ಸಿಸ್ಟಮ್ ಬೆಂಬಲಿಸುವುದಿಲ್ಲ), ಆ ಅಪರಿಚಿತ ನಂಬರ್ ಇರುವ ಜಾಗದಲ್ಲಿ ನಿಮ್ಮದೇ ಆದ ಮತ್ತೊಂದು ಪರ್ಯಾಯ ನಂಬರ್ ನೀಡಿ ಸೇವ್ ಮಾಡಿ. ಇದರಿಂದ ಸ್ಕ್ಯಾಮರ್‌ಗಳಿಗೆ ಕರೆ ಹೋಗುವುದು ತಪ್ಪುತ್ತದೆ.
ಗಮನಿಸಿ – ನಮಗೆ ತಿಳಿಯದಂತೆ ಅಥವಾ ಯಾವುದೋ ಲಿಂಕ್ ಕ್ಲಿಕ್ ಮಾಡಿದಾಗ ಅಥವಾ ಓಟಿಪಿ ನೀಡಿದಾಗ ಇಂತಹ ಕಾಲ್ ಫಾರ್ವರ್ಡಿಂಗ್ ಸಕ್ರಿಯವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒಮ್ಮೆಯಾದರೂ ನಿಮ್ಮ ಫೋನ್‌ನಲ್ಲಿ ಇದನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಫೋನ್ ಸೇಫ್ಟಿ ಟಿಪ್ಸ್ :-
Phone Safety Tips:-
ಈಗೆಲ್ಲಾ ಡಿಜಿಟಲ್ ಮೋಸಗಳು ಜಾಸ್ತಿಯಾಗ್ತಾ ಇವೆ. ಈ ಮಾಹಿತಿ ಜನರಿಗೆ ತಮ್ಮ ಸ್ವಂತ ವಿಷಯಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತೆ. ನಮಗೆ ಗೊತ್ತಿಲ್ದೆ ನಮ್ಮ ಫೋನ್ ಕಾಲ್ಸ್ ಬೇರೆಯವರು ಕೇಳಿಸಿಕೊಂಡ್ರೆ,
ಅದು ನಮ್ಮ ರಕ್ಷಣೆ ವಿಷಯದಲ್ಲಿ ದೊಡ್ಡ ತೊಂದರೆಯಾಗಬಹುದು. ಕೆಲವು ಸುಲಭವಾದ ಕೋಡ್‌ಗಳನ್ನು ಬಳಸಿ, ಜನರು ತಮ್ಮ ಫೋನ್ ಸುರಕ್ಷಿತವಾಗಿದೆಯೇ ಅಂತ ತಾವೇ ಪರೀಕ್ಷೆ ಮಾಡಿಕೊಳ್ಳಬಹುದು.
ಇದರಿಂದ ತಾಂತ್ರಿಕ ಪರಿಜ್ಞಾನ ಇಲ್ಲದೆಯೂ ಯಾರೂ ಮೋಸ ಹೋಗದ ಹಾಗೆ ಎಚ್ಚರಿಕೆಯಿಂದ ಇರಬಹುದು.
ಇದಲ್ಲದೆ, ಹಣದ ವ್ಯವಹಾರ ಮಾಡುವಾಗ ಬರುವ OTP (One Time Password) ಕಾಲ್ಸ್‌ನಿಂದ ಕೂಡ ಹ್ಯಾಕರ್ಸ್ ಮಾಹಿತಿ ಕದಿಯುವ ಅವಕಾಶ ಇರುತ್ತೆ. ಇಂತಹ ಮೋಸಗಳನ್ನು ತಪ್ಪಿಸಲು ಕಾಲ್ ಫಾರ್ವರ್ಡಿಂಗ್ ಕ್ಯಾನ್ಸಲ್ ಮಾಡುವುದು ಮುಖ್ಯ.
ಈ ರೀತಿ ಮಾಡುವುದರಿಂದ ಜನರು ಸುಲಭವಾಗಿ ಮತ್ತು ಉಚಿತವಾಗಿ ತಮ್ಮ ಮೊಬೈಲ್‌ನಲ್ಲಿಯೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಅವರ ಸ್ವಂತ ಮಾಹಿತಿ ಮತ್ತು ಹಣ ಎರಡು ಸುರಕ್ಷಿತವಾಗಿ ಇರುತ್ತೆ.
Digital scams are increasing, so knowing how to protect personal information is crucial. Unauthorized phone call access threatens safety and privacy.
Simple codes enable users to check phone security, empowering even non-experts to avoid deception.
Hackers steal data during financial OTP calls, so it is important to cancel call forwarding. These simple mobile safeguards help protect both personal data and finances.
ಧನ್ಯವಾದಗಳು
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
