"Agriculture is our CULTURE"

RTE Application 2026 :: RTE ಗೆ ಅರ್ಜಿ ಸಲ್ಲಿಸುವ ವಿಧಾನ!! ಆರ್‌ಟಿಇ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಮತ್ತು ಕಾಲಮಿತಿ!!

ಆರ್‌ಟಿಇ ಅರ್ಜಿ ಸಲ್ಲಿಕೆಯ ವೇಳಾಪಟ್ಟಿ ಮತ್ತು ಕಾಲಮಿತಿ!!
RTE Application Schedule and Enrollment Timeline!!

ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯಿದೆ (RTE – Right to Education) ಅಡಿಯಲ್ಲಿ ಉಚಿತ ಶಿಕ್ಷಣವನ್ನು ಪಡೆಯಲು ಅರ್ಜಿ ಸಲ್ಲಿಸುವ ವಿಧಾನವೇನು ಮತ್ತು ಅದಕ್ಕೆ ಬೇಕಾದ ಅರ್ಹತೆಗಳೇನು ಎಂಬ ಬಗ್ಗೆ::

ಮುಖ್ಯವಾದ ದಿನಾಂಕಗಳು:-

Important Dates:-

* ಅರ್ಜಿ ಸಲ್ಲಿಕೆ ಪ್ರಾರಂಭವಾಗುವ ದಿನಾಂಕ – ಏಪ್ರಿಲ್ 21, 2026.

• ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ- ಮೇ 17, 2026.

ಬೇಕಾಗುವ ದಾಖಲೆಗಳು:-

Required Documents:-

ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ತಿಳಿಸಿರುವ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತವೆ:

• ಮಗುವಿನ ಆಧಾರ್ ಗುರುತಿನ ಚೀಟಿ.

* ತಂದೆ ಅಥವಾ ತಾಯಿಯ ಆಧಾರ್ ಗುರುತಿನ ಚೀಟಿ.

• ಮಗುವಿನ ಜನ್ಮ ದೃಢೀಕರಣ ಪತ್ರ (Birth Certificate).

* ಮಗುವಿನ ಹೆಸರಿನಲ್ಲಿರುವ ಜಾತಿ ಮತ್ತು ಆದಾಯವನ್ನು ತೋರಿಸುವ ಪ್ರಮಾಣ ಪತ್ರ.

• ಇತ್ತೀಚಿನದಾದ ಪಾಸ್‌ಪೋರ್ಟ್ ಗಾತ್ರದ ಮಗುವಿನ ಭಾವಚಿತ್ರ.

ವಯೋಮಿತಿ :-

Age Limit:-

* ಎಲ್ಕೆಜಿ (LKG) ತರಗತಿಗೆ ಪ್ರವೇಶ ಪಡೆಯಲು – ಮಗುವಿಗೆ ಕನಿಷ್ಠ 4 ವರ್ಷದಿಂದ ಗರಿಷ್ಠ 6 ವರ್ಷದ ಒಳಗಿರಬೇಕು.

• 1ನೇ ತರಗತಿಗೆ ಪ್ರವೇಶ ಪಡೆಯಲು – ಮಗುವಿಗೆ ಕನಿಷ್ಠ 6 ವರ್ಷದಿಂದ ಗರಿಷ್ಠ 8 ವರ್ಷದ ಒಳಗಿರಬೇಕು.

ಅರ್ಜಿ ಸಲ್ಲಿಸುವ ಪ್ರಕ್ರಿಯೆ:-

How to Apply:-

1. ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ (School Education Karnataka). https://sdcedn.karnataka.gov.in/rteadmission/RTE/page1.aspx

select RTE 2026 application Process

2. ಅಲ್ಲಿ “RTE 2026 Admission Process” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

3. ನಿಮ್ಮ ಮಗುವಿನ ಆಧಾರ್ ಸಂಖ್ಯೆಯನ್ನು ನಮೂದಿಸಿ, ನಂತರ ನಿಮ್ಮ ಮೊಬೈಲ್ ಫೋನ್‌ಗೆ ಬರುವ OTP ಸಂಖ್ಯೆಯ ಮೂಲಕ ಖಚಿತಪಡಿಸಿಕೊಳ್ಳಿ.

Select RTE 2026 Application Process

ಮಗುವಿನ ಆಧಾರ್ 

4. ಆಧಾರ್ ಕಾರ್ಡ್‌ನಲ್ಲಿರುವ ಎಲ್ಲಾ ವಿವರಗಳು ತಾನಾಗಿಯೇ ಭರ್ತಿಯಾಗುತ್ತವೆ. ನಂತರ ನಿಮ್ಮ ಗ್ರಾಮವನ್ನು ಅಥವಾ ವಾರ್ಡ್ ಅನ್ನು ಸರಿಯಾಗಿ ಆಯ್ಕೆ ಮಾಡಿ.

5. ನೀವು ವಿಶೇಷ ಅಗತ್ಯವುಳ್ಳ ಮಕ್ಕಳಾಗಿದ್ದಲ್ಲಿ (CWSN – Children With Special Needs) ಆ ಬಗ್ಗೆ ವಿವರಗಳನ್ನು ನಮೂದಿಸಿ ಅರ್ಜಿಯನ್ನು ಮುಂದುವರಿಸಿ.

Application Submission Proceed

Validated and proceed 

ಮುಖ್ಯವಾದ ನಿಯಮಗಳು ಮತ್ತು ಅರ್ಹತೆಗೆ ಸಂಬಂಧಿಸಿದ ಸಮಸ್ಯೆಗಳು:-

Key Rules & Eligibility Issues:-

ಸರ್ಕಾರಿ ಶಾಲೆಗಳ ಲಭ್ಯತೆ – ನಿಮ್ಮ ವಾಸಸ್ಥಳದಿಂದ 3 ಕಿಲೋಮೀಟರ್ ವ್ಯಾಪ್ತಿಯೊಳಗೆ ಸರ್ಕಾರಿ ಶಾಲೆಗಳು ಲಭ್ಯವಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳಿಗೆ RTE ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಒಂದು ವೇಳೆ ವೆಬ್‌ಸೈಟ್‌ನಲ್ಲಿ “Government schools are available” ಎಂಬ ಸಂದೇಶವು ತೋರಿಸಿದರೆ, ನೀವು ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.

Validate & Proceed

 

Government schools are available

ವಿಳಾಸದ ಹೊಂದಾಣಿಕೆಯಾಗದಿರುವುದು (Address Mismatch) – ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಮತ್ತು ನೀವು ಆಯ್ಕೆ ಮಾಡುವ ಗ್ರಾಮದ ವಿಳಾಸವು ಒಂದೇ ಆಗಿರಬೇಕು. ಒಂದು ವೇಳೆ ವಿಳಾಸವು ಬೇರೆಯಾಗಿದ್ದಲ್ಲಿ “Address Mismatch” ಎಂಬ ದೋಷವು ಕಂಡುಬರುತ್ತದೆ.

Final Step

Address Mismatch

ಖಾಸಗಿ ಶಾಲೆಗಳ ಪಟ್ಟಿ – ನಿಮ್ಮ ಪ್ರದೇಶದಲ್ಲಿ ಯಾವ ಖಾಸಗಿ ಶಾಲೆಗಳು RTE ಅಡಿಯಲ್ಲಿ ಬರುತ್ತವೆಯೋ ಎಂಬುದನ್ನು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮೊದಲು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.

* ಹೆಚ್ಚಿನ ಮಾಹಿತಿಗಾಗಿ ಅಥವಾ ಸರ್ವರ್‌ನ ತೊಂದರೆಗಳಿದ್ದಲ್ಲಿ ಹತ್ತಿರದ ಬಿ.ಇ.ಒ (BEO – Block Education Officer) ಕಚೇರಿಯನ್ನು ಸಂಪರ್ಕಿಸುವುದು ಸೂಕ್ತ.

ಶೈಕ್ಷಣಿಕ ಕ್ರಾಂತಿ:-

Educational Revolution:-

ಶಿಕ್ಷಣ ಹಕ್ಕು ಕಾಯಿದೆ(RTE), ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಹಾಯ ಮಾಡುತ್ತದೆ. ಆಯ್ಕೆಯಾದ ಮಕ್ಕಳಿಗೆ ಎಲ್.ಕೆ.ಜಿ ಅಥವಾ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಖಾಸಗಿ ಶಾಲೆಯಲ್ಲಿ ಉಚಿತ ಶಿಕ್ಷಣ ಸಿಗುತ್ತದೆ.

ಇದರಿಂದ ಬಡ ಪೋಷಕರ ಹಣದ ಚಿಂತೆ ಕಡಿಮೆಯಾಗುತ್ತದೆ. ಬಡತನದಿಂದಾಗಿ ಬುದ್ಧಿವಂತ ಮಕ್ಕಳು ಖಾಸಗಿ ಶಾಲೆಗೆ ಹೋಗಲು ಸಾಧ್ಯವಾಗದೇ ಇರಬಾರದು ಎನ್ನುವ ಕಾರಣಕ್ಕೆ ಸರ್ಕಾರವೇ ಶುಲ್ಕ ಕಟ್ಟುತ್ತದೆ.

ಅನುದಾನವಿಲ್ಲದ ಖಾಸಗಿ ಶಾಲೆಗಳಲ್ಲಿ 25% ಸೀಟುಗಳನ್ನು ಇಂತಹ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ. ಇದರಿಂದ ಮಕ್ಕಳು ತಾರತಮ್ಯವಿಲ್ಲದೆ ಬೆರೆತು ಕಲಿಯಬಹುದು ಮತ್ತು ಎಲ್ಲರಿಗೂ ಸಮಾನ ಅವಕಾಶ ಸಿಗುತ್ತವೆ.

ಈ ಕಾಯಿದೆ ಬಡ ಕುಟುಂಬದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಹಾಯ ಮಾಡುತ್ತದೆ.

The RTE Act enables disadvantaged children to access quality education by providing free, compulsory education from entry-level to 8th Standard.

Private schools must reserve 25% of seats for these children, removing financial barriers to reputed private institutions. Tuition fees are reimbursed by the government,

Relieving parents of financial burden and promoting social integration. Access to quality resources empowers these students, fostering equality and enabling a secure future.

Thank you

<<< Arecanut Market : Daily Arecanut Market ( Click Here ) >>>

<  For job updates and employment related information and carrier paths please follow below Facebook Group and WhatsApp Group  >

1) ” Facebook Group ” – Click Here

2) ” WhatsApp Group ” – Click Here

Forever helpful and useful updates

 vkgrowmore.com 💚

– VK
Knowledge Lead’s & Live’s Life


"Agriculture is our CULTURE"