
Record Market of Tamarind :: ದಾಖಲೆ ಬೆಳೆದ ಹುಣಸೆ ಮತ್ತು ಹುಣಸೆ ಬೀಜದ ಬೆಲೆ!! ಹುಣಸೆಯಿಂದ ಲಕ್ಷ ಲಕ್ಷ ಆದಾಯ!!
Tamarind Revolution – Record Prices in Market and Lakhs of Income from Tamarind Seed Business!
ರೈತರ ಪಾಲಿನ ಬಂಗಾರ ಈ ಹುಣಸೆ – ಎಪಿಎಂಸಿಯಲ್ಲಿ ಭರ್ಜರಿ ವ್ಯಾಪಾರ ಮತ್ತು ಹುಣಸೆ ಬೀಜದ ಔಷಧೀಯ ರಹಸ್ಯ!
Tamarind, the Gold of Farmers – Massive Trade in APMC and the Medicinal Secrets of Tamarind Seeds!
ಹುಣಸೆ ಬೆಳೆಯ ಮಹತ್ವ ಮತ್ತು ಮಾರುಕಟ್ಟೆಯ ಮಾಹಿತಿಯ ಬಗ್ಗೆ::
ತುಮಕೂರು ಮಾರುಕಟ್ಟೆ ಮತ್ತು ವಹಿವಾಟು:-
Tumakuru Market and Turnover:-
• ವ್ಯಾಪಾರದ ಮುಖ್ಯ ಸ್ಥಳ – ತುಮಕೂರು ಎಪಿಎಂಸಿ (APMC) ಮಾರುಕಟ್ಟೆಯು ಹುಣಸೆ ವ್ಯಾಪಾರದ ಪ್ರಮುಖ ಸ್ಥಳವಾಗಿದ್ದು, ಪ್ರತಿ ಸೋಮವಾರ ಮತ್ತು ಗುರುವಾರದಂದು ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ.
* ಸರಕುಗಳ ಆಗಮನ – ಮಧುಗಿರಿ, ಕುಣಿಗಲ್, ತಿಪಟೂರು ಮುಂತಾದ ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಮಾತ್ರವಲ್ಲದೆ, ನೆರೆಯ ಜಿಲ್ಲೆಗಳಿಂದಲೂ ಪ್ರತಿದಿನ ಸುಮಾರು 25 ರಿಂದ 30 ಟನ್ ಹುಣಸೆ ಹಣ್ಣು ಮಾರುಕಟ್ಟೆಗೆ ಬರುತ್ತದೆ.
• ರಫ್ತು ಮಾಡುವಿಕೆ – ಇಲ್ಲಿನ ಹುಣಸೆ ಹಣ್ಣನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದಂತಹ ನೆರೆಯ ರಾಜ್ಯಗಳಿಗೂ ರಫ್ತು ಮಾಡಲಾಗುತ್ತದೆ.
ಬೆಲೆ ಮತ್ತು ಆರ್ಥಿಕ ಪರಿಸ್ಥಿತಿ:-
Price and Econom:-
* ಗರಿಷ್ಠ ಬೆಲೆ – ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್ ಒಂದಕ್ಕೆ 44,000 ರೂಪಾಯಿಗಳವರೆಗೆ ಮಾರಾಟವಾಗಿ ಅತ್ಯಧಿಕ ಬೆಲೆ ದಾಖಲಿಸಿದೆ. ಗುಣಮಟ್ಟಕ್ಕೆ ತಕ್ಕಂತೆ ಕೆ.ಜಿ ಒಂದಕ್ಕೆ 120 ರಿಂದ 210 ರೂಪಾಯಿಗಳವರೆಗೆ ಬೆಲೆ ಸಿಗುತ್ತದೆ.
* ಹುಣಸೆ ಬೀಜದ ಬೆಲೆ – ಹುಣಸೆ ಬೀಜವು ಕೆ.ಜಿ ಒಂದಕ್ಕೆ ಸುಮಾರು 25 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ಇದನ್ನು ಬಣ್ಣ ಮತ್ತು ಉದಬತ್ತಿ ತಯಾರಿಸುವ ಕೈಗಾರಿಕೆಗಳಲ್ಲಿ ಉಪಯೋಗಿಸುತ್ತಾರೆ.
• ರೈತರ ಜೀವನ – ಅಡಿಕೆ ಮತ್ತು ತೆಂಗಿನ ತೋಟಗಳು ಹೇರಳವಾಗಿರುವ ತುಮಕೂರಿನಲ್ಲಿ ಹುಣಸೆ ಬೆಳೆಯು ಈಗ ರೈತರಿಗೆ “ಬಡವರ ಬಂಗಾರ“ದಂತೆ ಆರ್ಥಿಕ ಭದ್ರತೆಯನ್ನು ನೀಡುತ್ತಿದೆ.
ಹುಣಸೆ ಬೆಳೆಯ ಪ್ರಾಮುಖ್ಯತೆ ಮತ್ತು ಉಪಯೋಗಗಳು:-
Significance and Uses of Tamarind:-
• ಆರೋಗ್ಯಕ್ಕೆ ಅನುಕೂಲಗಳು – ಹುಣಸೆ ಹಣ್ಣಿನ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಅಂಶವಿದ್ದು, ಇದರ ಪುಡಿಯನ್ನು ಕ್ರಮವಾಗಿ ಉಪಯೋಗಿಸುವುದರಿಂದ ಮಂಡಿ ನೋವಿನಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ಅಲ್ಲದೆ, ಈ ಪುಡಿಯನ್ನು ಸೂಪ್ ಮತ್ತು ಬೋಂಡಾಗಳ ತಯಾರಿಕೆಯಲ್ಲಿ ಬಳಸುತ್ತಾರೆ.
* ಔಷಧೀಯ ಮತ್ತು ಕೈಗಾರಿಕಾ ಬಳಕೆ – ಹುಣಸೆ ಹಣ್ಣಿನ ಬೀಜಗಳನ್ನು ಫಾರ್ಮಸ್ಯೂಟಿಕಲ್ ಕಂಪನಿಗಳು ಬೇರೆ ಬೇರೆ ಔಷಧಿಗಳನ್ನು ಉತ್ಪಾದಿಸಲು ಉಪಯೋಗಿಸುತ್ತಾರೆ.
ಹುಣಸೆ ಬೀಜದ ಪುಡಿಯು ಜಾಮ್‌ಗಳು ಗಟ್ಟಿಯಾಗುವಂತೆ ಮಾಡಲು ಸಹಾಯ ಮಾಡುತ್ತದೆ.
• ಪರಿಸರ ರಕ್ಷಣೆ – ಮನುಷ್ಯನ ದೇಹದಲ್ಲಿ ಸೇರಿಕೊಳ್ಳುವ ಮೈಕ್ರೋ ಪ್ಲಾಸ್ಟಿಕ್ ಕಣಗಳನ್ನು ಹೊರಗೆ ಹಾಕುವಂತಹ ಶಕ್ತಿ ಹುಣಸೆ ಹಣ್ಣಿಗಿದೆ.
ವಿಜ್ಞಾನಿಗಳು ನದಿ ಹಾಗು ಕೆರೆಗಳಲ್ಲಿನ ನ್ಯಾನೋ ಪ್ಲಾಸ್ಟಿಕ್ ಕಲುಷಿತವನ್ನು ಸ್ವಚ್ಛಗೊಳಿಸಲುಬೆಂಡೆಕಾಯಿ ಮತ್ತು ಹುಣಸೆ ಹಣ್ಣುಗಳನ್ನು ಬಳಸುವ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.
ರೈತರ ಪಾಲಿನ ಬಡವರ ಬಂಗಾರ:-
The Gold of the Poor for Farmers:-
ಹುಣಸೆ ಬೆಳೆಯು ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಡುವ “ಬಡವರ ಬಂಗಾರ” ಇದ್ದ ಹಾಗೆ. ಮುಖ್ಯವಾಗಿ ತುಮಕೂರು ಮತ್ತು ಬಯಲುಸೀಮೆ ಭಾಗದ
ರೈತರಿಗೆ ಅಡಿಕೆ ಅಥವಾ ತೆಂಗಿನ ಜೊತೆಗೆ ಇದು ಒಂದು ಒಳ್ಳೆಯ ಸೈಡ್ ಬಿಸಿನೆಸ್. ಹುಣಸೆ ಮರಗಳು ಕಡಿಮೆ ನೀರಿನಲ್ಲೂ ಬೆಳೆಯುವುದರಿಂದ, ಮಳೆ ಕಡಿಮೆ ಇದ್ದಾಗಲೂ ರೈತರಿಗೆ ಒಂದು ಆದಾಯ ಸಿಗುವ ಹಾಗೆ ಮಾಡುತ್ತದೆ.
ಬರೀ ಹುಣಸೆ ಹಣ್ಣು ಅಷ್ಟೇ ಅಲ್ಲ, ಮೊದಲು ಉಪಯೋಗಕ್ಕೆ ಬರುವುದಿಲ್ಲ ಎಂದು ಬಿಸಾಡುತ್ತಿದ್ದ ಹುಣಸೆ ಬೀಜಗಳಿಗೂ ಈಗ ಪೇಂಟ್, ಔಷಧಿ ಮತ್ತು ಉದಬತ್ತಿ ಫ್ಯಾಕ್ಟರಿಗಳಲ್ಲಿ ತುಂಬಾ ಬೇಡಿಕೆ ಇರುವುದರಿಂದ ರೈತರಿಗೆ ಜಾಸ್ತಿ ಲಾಭ ಸಿಗುತ್ತಿದೆ.
ಎಪಿಎಂಸಿ (APMC) ಮಾರ್ಕೆಟ್ ಗಳಲ್ಲಿ ನೇರವಾಗಿ ಹರಾಜು ಮಾಡುವುದರಿಂದ ಮಧ್ಯದಲ್ಲಿ ಬರುವವರ ಕಾಟ ತಪ್ಪಿ, ರೈತರು ಬೆಳೆದ ಒಳ್ಳೆಯ ಹುಣಸೆ ಹಣ್ಣಿಗೆ ಒಂದು ಕ್ವಿಂಟಲ್ ಗೆ ₹40,000 ಕ್ಕಿಂತ ಹೆಚ್ಚು ಬೆಲೆ ಸಿಗುವ ಸಾಧ್ಯತೆ ಇದೆ.
ಇದರ ಜೊತೆಗೆ, ಹುಣಸೆಯಿಂದ ಪುಡಿ ಅಥವಾ ಸೂಪ್ ಮಾಡುವ ಮಿಕ್ಸ್ ಗಳನ್ನಾಗಿ ಮಾಡಿ ಮಾರಾಟ ಮಾಡುವುದರಿಂದ ರೈತರು ತಾವೇ ಸ್ವಂತ ಉದ್ಯೋಗ ಶುರು ಮಾಡಬಹುದು.
Tamarind cultivation, “the gold of the poor,” gives high returns on low investment. It is a great secondary income for farmers in drylands
Like Tumakuru, supplementing areca nut or coconut crops. Drought-resistant tamarind trees ensure income even with little rainfall.
Tamarind seeds, once waste, are now in demand in the paint, pharmaceutical, and agarbatti industries, increasing profits. APMC market auctions eliminate intermediaries,
Enabling farmers to get record prices of over ₹40,000 per quintal for good produce. Farmers can also become self-employed entrepreneurs via value-added products like tamarind powder or soup mixes.
Thank you.
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
We are using this washing machine since many year, best washing machine for daily use dress.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

