
Arecanut scientific analysis :: ವೈಜ್ಞಾನಿಕವಾಗಿ ನಿಮ್ಮ ಅಡಿಕೆ ಗಿಡ ಚೆನ್ನಾಗಿದೆ ಎಂದು ಕಂಡು ಹಿಡಿಯುವುದು ಹೇಗೆ?ತಿಳಿಯಲೇಬೇಕಾದ ಅಚ್ಚರಿಯ ವಿಷಯಗಳು!
ಅಡಿಕೆ ಮರದ ಗಣ್ಣುಗಳ ಗುಟ್ಟು – ರೈತರು ತಿಳಿಯಲೇಬೇಕಾದ ಅಚ್ಚರಿಯ ವಿಷಯಗಳು!
The Secret of Areca Nut Nodes – Scientific Way to Boost Your Yield!
ಅನುಭವಿ ರೈತರಾದ ಶ್ರೀ ಮಂಜುನಾಥ್ ಹೆಗಡೆ ಅವರು ಅಡಿಕೆ ಮರದ ಗಣ್ಣುಗಳ ಲೆಕ್ಕ, ಬೆಳೆ ನಿರ್ವಹಣೆ ಮತ್ತು ಬೇಸಾಯದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅದರ ಮಾಹಿತಿ ::
ಅಡಿಕೆ ಮರದ ಗಣ್ಣುಗಳ ಲೆಕ್ಕಾಚಾರ:-
Calculation of Areca Nut Nodes:-
• ಗಣ್ಣುಗಳ ಮುಖ್ಯತೆ – ಅಡಿಕೆ ಮರದ ಕಾಂಡದ ಮೇಲಿನ ಗುರುತುಗಳನ್ನು ‘ಗಣ್ಣು’ (Nodes) ಎನ್ನುತ್ತಾರೆ. ಅಡಿಕೆ ಮರವು ತನ್ನ 13ನೇ ಗಣ್ಣಿಗೆ ಮೊದಲ ಫಸಲನ್ನು (ಹೊಂಬಾಳೆ) ನೀಡಲು ಶುರುಮಾಡುತ್ತದೆ.
* ಬೆಳಕಿನ ಪರಿಣಾಮ – ಮರಕ್ಕೆ ಸರಿಯಾಗಿ ಸೂರ್ಯನ ಬೆಳಕು ಸಿಕ್ಕರೆ 13ನೇ ಗಣ್ಣಿಗೆ ಇಳುವರಿ ಬರುತ್ತದೆ. ದಟ್ಟವಾದ ತೋಟಗಳಲ್ಲಿ ಬೆಳಕಿನ ಅಭಾವದಿಂದಾಗಿ ಇದು 18ನೇ ಗಣ್ಣಿನವರೆಗೆ ತಡವಾಗಬಹುದು.
• ಸೋಗೆಗಳ ಲೆಕ್ಕ – ಒಂದು ಆರೋಗ್ಯವಂತ ಅಡಿಕೆ ಮರದಲ್ಲಿ ಕನಿಷ್ಠ 9 ರಿಂದ 11 ಸೋಗೆಗಳು (Fronds) ಇರಬೇಕು. ಕೆಲವು ಮರಗಳಲ್ಲಿ 15ರವರೆಗೆ ಇರುತ್ತವೆ.
ಇಳುವರಿ ಮತ್ತು ಎತ್ತರ:-
Yield and Height:-
* ಹೆಚ್ಚು ಇಳುವರಿ ಬರುವ ಸಮಯ – ಅಡಿಕೆ ಮರವು 25 ಅಡಿಯಿಂದ 45-50 ಅಡಿ ಎತ್ತರವಿರುವಾಗ ಒಳ್ಳೆಯ ಇಳುವರಿಯನ್ನು ಕೊಡುತ್ತದೆ. 65 ಅಡಿಗಿಂತ ಎತ್ತರ ಬೆಳೆದರೆ ನಿರ್ವಹಣೆ ಕಷ್ಟವಾಗುತ್ತದೆ ಮತ್ತು ಲಾಭ ಕಡಿಮೆಯಾಗುತ್ತದೆ.
• ಉತ್ತಮ ಫಸಲಿನ ಅಳತೆ – ವೈಜ್ಞಾನಿಕವಾಗಿ ಒಂದು ಮರದಿಂದ ವರ್ಷಕ್ಕೆ ಕನಿಷ್ಠ 3 ಕೆಜಿ ಒಣ ಅಡಿಕೆ ಸಿಕ್ಕರೆ ಅದು ಉತ್ತಮ ಬೇಸಾಯ ಎನಿಸುತ್ತದೆ. ಕೆಲವು ತಳಿಗಳಲ್ಲಿ ಒಂದು ಮರದಿಂದ 7 ಕೆಜಿವರೆಗೂ ಇಳುವರಿ ಪಡೆಯಬಹುದು.
ರೋಗ ನಿರ್ವಹಣೆ ಮತ್ತು ಎಚ್ಚರಿಕೆ:-
Disease Management and Precautions:-
• ರೋಗದ ಗುರುತು – ಕಾಂಡದ ಮೇಲೆ ಸರಿ ಇಲ್ಲದ ಗುರುತುಗಳು ಅಥವಾ ಗಣ್ಣುಗಳ ನಡುವಿನ ಅಂತರ ಹತ್ತಿರವಿದ್ದರೆ ಅದು ರೋಗದ ಸೂಚನೆ ಆಗಿರಬಹುದು.
ಸುಳಿ ಕೊಳೆಯುವ ರೋಗ ಬಂದರೆ ಮರದ ಬೆಳವಣಿಗೆ ನಿಂತು ಸೋಗೆಗಳು ಚಿಕ್ಕದಾಗುತ್ತವೆ. ಅಂತಹ ಮರಗಳನ್ನು ತೋಟದಿಂದ ತೆಗೆಯುವುದು ಒಳ್ಳೆಯದು.
• ಪೋಷಕಾಂಶಗಳು – ಮಣ್ಣಿನಲ್ಲಿ ಪೊಟ್ಯಾಶ್, ನೈಟ್ರೋಜನ್ ಅಥವಾ ಮೆಗ್ನೀಸಿಯಮ್ ಕಡಿಮೆ ಆದರೆ ಮರಗಳು ದುರ್ಬಲವಾಗುತ್ತವೆ.
ಪರಿಸರ ಮತ್ತು ಉಷ್ಣಾಂಶ :-
Environment and Temperature:-
* ತಾಪಮಾನ – ಅಡಿಕೆಗೆ 28 ರಿಂದ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ಸೂಕ್ತ. 35 ಡಿಗ್ರಿ ಮೀರಿ ಬಿಸಿಲು ಜಾಸ್ತಿಯಾದರೆ ಮತ್ತು ಮಳೆ ಕಡಿಮೆ ಆದರೆ ಮರಗಳಿಗೆ ತೊಂದರೆಯಾಗುತ್ತದೆ.
• ನೈಸರ್ಗಿಕ ಗೊಬ್ಬರ – ಅಡಿಕೆ ಮರದಿಂದ ಉದುರುವ ಸೋಗೆಗಳೇ ಅದಕ್ಕೆ ಒಳ್ಳೆಯ ಮುಚ್ಚಿಗೆ (Mulching) ಮತ್ತು ಗೊಬ್ಬರವಾಗುತ್ತವೆ. ಬೇರೆ ಗೊಬ್ಬರದ ಅವಶ್ಯಕತೆ ಇಲ್ಲದೆ ತನ್ನ ಆಹಾರವನ್ನು ತಾನೇ ಮಾಡಿಕೊಳ್ಳುವ ಶಕ್ತಿ ಅಡಿಕೆ ಮರಕ್ಕಿದೆ.
ಕೃಷಿಯ ಬಗ್ಗೆ ಜೀವನದ ಪಾಠ:-
Philosophical Approach to Farming:-
• ಆಸ್ತಿ ಮತ್ತು ಆಸಕ್ತಿ – ಕೃಷಿಯಲ್ಲಿ ಬರಿ ‘ಆಸ್ತಿ‘ (Property) ಇದ್ದರೆ ಸಾಲದು, ಅದರ ಮೇಲೆ ‘ಆಸಕ್ತಿ’ (Dedication/Interest) ಇರಬೇಕು.
• ಗಿಡಗಳೊಂದಿಗೆ ಮಾತುಕತೆ- ಗಿಡಗಳಿಗೂ ಜೀವವಿದ್ದು, ಅವುಗಳ ಜೊತೆ ಪ್ರೀತಿಯಿಂದ ಇರಬೇಕು. ಕೃಷಿಯನ್ನು ಒಂದು ‘ತಪಸ್ಸು‘ ಎಂದು ತಿಳಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ಮಂಜುನಾಥ್ ಅವರು ಹೇಳಿದ್ದಾರೆ.
ಅನುಭವಿ ಕೃಷಿಕರಿಂದ ಉಪಯುಕ್ತ ಮಾಹಿತಿ:-
Life-Changing Insights from a Veteran Farmer:-
ಅಡಿಕೆ ಕೃಷಿಯಲ್ಲಿ, ವೈಜ್ಞಾನಿಕ ಲೆಕ್ಕಾಚಾರ ಮತ್ತು ಮಣ್ಣಿನ ಗುಣಧರ್ಮ ಅರಿತುಕೊಳ್ಳುವುದು ರೈತರಿಗೆ ಆರ್ಥಿಕ ಲಾಭ ತರಲು ಸಹಕಾರಿ. ಮರದ ಗಣ್ಣುಗಳನ್ನು ಎಣಿಸುವ ಮೂಲಕ ಸಸಿಗಳು ಸರಿಯಾದ ಫಸಲು ನೀಡುತ್ತಿವೆಯೇ ಎಂದು ತಿಳಿಯಬಹುದು.
ಮರದ ಎತ್ತರ ಮತ್ತು ಇಳುವರಿ ತಿಳಿದುಕೊಳ್ಳುವುದರಿಂದ, ನಿರ್ವಹಣಾ ವೆಚ್ಚ ತಗ್ಗಿಸಬಹುದು. ಸೋಗೆಗಳ ಸಂಖ್ಯೆ ಗಮನಿಸುವುದರಿಂದ ರೋಗಬಾಧೆ ಗುರುತಿಸಿ ತೋಟಕ್ಕೆ ಹರಡದಂತೆ ನೋಡಿಕೊಳ್ಳಬಹುದು.
ರಾಸಾಯನಿಕ ಗೊಬ್ಬರಗಳ ಬದಲು, ನೈಸರ್ಗಿಕ ಮುಚ್ಚಿಗೆ ಮತ್ತು ಸ್ಥಳೀಯ ಹವಾಮಾನಕ್ಕೆ ತಕ್ಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ರೈತರ ಖರ್ಚು ಕಡಿಮೆ ಮಾಡಿ, ಆದಾಯ ಖಾತರಿಪಡಿಸುತ್ತದೆ.
Understanding scientific calculations and soil properties helps arecanut farmers improve economic returns.
Counting nodes determines if saplings yield correctly or if growth is delayed by environmental factors like insufficient sunlight.
Knowing the relationship between tree height and yield allows efficient management, reducing labor and maintenance costs from tall trees. Monitoring fronds identifies pest or disease outbreaks early.
Shifting from chemical fertilizers to natural mulching and climate-adaptive farming lowers production costs, ensuring sustainable long-term income.
Thank you.
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
We are using this washing machine since many year, best washing machine for daily use dress.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

