
How water Arecanut need :: ಉತ್ತಮ ಇಳುವರಿ ಪಡೆಯಲು, ಅಡಿಕೆ ಗಿಡಕ್ಕೆ ಎಷ್ಟು ನೀರು ಬಿಡಬೇಕು?
Arecanut is a high value,long term plantation crop that plays a majir role in rural livelihood also it is one of the traditional crop variety in India especially in coastal reagions like karnataka,
Importantly this crop planting is not the easy task farmers should aware of nutrition management,soil type importantly watering to the plants.
Here is the detailed analysis of watering,what amount of water should provide to arecanut plants and what is the correct method of watering.
ಕರ್ನಾಟಕದ ಜಿಲ್ಲೆಗಳಾದ ದಾವಣಗೆರೆ ಶಿವಮೊಗ್ಗ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ಪ್ರಮುಖವಾಗಿ ಹಾಗೂ ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ.
ಅಲ್ಲದೆ ಈ ಜಿಲ್ಲೆಗಳನ್ನು ಹೊರತುಪಡಿಸಿ,ಇತ್ತೀಚಿನ ದಿನಗಳಲ್ಲಿ ಒಳನಾಡು ಜಿಲ್ಲೆಗಳಾದ ಚಿತ್ರದುರ್ಗ,ತುಮಕೂರು ಹಾಗೂ ಇತರೆ ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಳನ್ನು ಬೆಳೆಯಲು ರೈತರು ಉತ್ಸುಕರಾಗಿದ್ದಾರೆ.
ಹೆಚ್ಚಿನ ಸಮಯದಲ್ಲಿ ರೈತರಲ್ಲಿ ಉತ್ಸಾಹ ಒಂದೇ ಇದ್ದರೆ ಬೆಳೆಯಲ್ಲಿ ಲಾಭ ತೆಗೆಯಲು ಸಾಧ್ಯವಾಗುವುದಿಲ್ಲ. ಲಾಭ ಬೇಕಾದಾಗ ರೈತರ ಉತ್ಸಾಹದ ಜೊತೆಗೆ ಆ ಬೆಳೆಯ ಸಂಪೂರ್ಣ ಮಾಹಿತಿ ಅವಶ್ಯಕತೆ ಕೂಡ ಇರುತ್ತದೆ.
ಏಕೆಂದರೆ ಕೆಲವೊಮ್ಮೆ ರೈತರು ಉತ್ಸಾಹದ ಭರದಲ್ಲಿ ಬೆಲೆಯ ಬಗ್ಗೆ ಅಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬೆಳೆ ಬೆಳೆಯಲು ಪ್ರಾರಂಭಿಸಿದಾಗ,
ಖಂಡಿತವಾಗಿಯೂ ಇದು ನಷ್ಟದ ಹಾದಿಗೆ ರೈತರನ್ನು ಎಳೆದೊಯುತ್ತದೆ. ಹಾಗಾಗಿ ರೈತರು ಯಾವುದೇ ಬೆಳೆ ಬೆಳೆಯುವಾಗಲೂ ಆ ಬೆಳೆಯ “ಸಂಪೂರ್ಣ ವ್ಯವಸ್ಥೆ”ಯನ್ನು ತಿಳಿದು ಬೆಳೆದರೆ,ಲಾಭ ಖಂಡಿತ.
ರೈತರು ಅಡಿಕೆ ಬೆಳೆಯನ್ನು ವಾಣಿಜ್ಯ ಕೃಷಿಯಾಗಿ ಆರಂಭಿಸಿದರೆ, ರೈತರು ಮೊದಲು ಗಮನದಲ್ಲಿಡಬೇಕಾದ ಕೆಲವು ಅಂಶಗಳೆಂದರೆ,
• “ನೀರಿನ ನಿರ್ವಹಣೆ“,
* ಪೋಷಕಾಂಶಗಳ ನಿರ್ವಹಣೆ
• “ಗೊಬ್ಬರದ ನಿರ್ವಹಣೆ“,
* ಅಡಿಕೆ ಬೆಳೆಯ ಜೊತೆಗೆ ಮತ್ತೊಂದು ಯಾವುದಾದರೂ ಬೆಳೆಯನ್ನು ಬೆಳೆಯಬಹುದೇ?ಎನ್ನುವ ಮಾಹಿತಿ,
• “ಅಂತರ್ಜಲ ವೃದ್ಧಿ“ಗೊಳಿಸುವ ಬಗ್ಗೆ,
* ಅಡಿಕೆ ಗಿಡದ ಬೇರಿನ ಬಗ್ಗೆ,
• ಅಡಿಕೆ ಸಸ್ಯಗಳನ್ನು “ನೆಡುವ ಅಂತರ”ದ ಬಗ್ಗೆ,
* ಮುಖ್ಯವಾಗಿ “ಮಣ್ಣಿನ ಫಲವತ್ತತೆ”ಯನ್ನು ಹೆಚ್ಚಿಸುವ ಕುರಿತು.
ಈ ಎಲ್ಲಾ ಪ್ರಮುಖ ಮಾಹಿತಿಗಳ ಬಗ್ಗೆ ರೈತರಲ್ಲಿ ತಿಳುವಳಿಕೆ ಇದ್ದರೆ ಆ ರೈತ ಅಡಿಕೆ ಬೆಳೆಯಲ್ಲಿ ಉತ್ತಮ ಇಳುವರಿಯ ಜೊತೆಗೆ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಮುಖ್ಯವಾಗಿ ನೀರು ಎನ್ನುವುದು ಸಕಲ ಜೀವರಾಶಿಗಳಿಗೂ ಅತ್ಯವಶ್ಯಕವಾಗಿ ಬೇಕಾಗಿರುವಂಥದ್ದು, ಇದಕ್ಕೆ ಅಡಿಕೆ ಬೆಳೆಯು ಸಹ ಹೊರತಾಗಿಲ್ಲ.
ಆದರೆ ನೀರಿನ ನಿರ್ವಹಣೆಯ ಕುರಿತು ರೈತರಲ್ಲಿ ಕೆಲವು ಗೊಂದಲಗಳಿರುತ್ತವೆ. ಆ ಗೊಂದಲಗಳಿಗೆ ಇಲ್ಲಿದೆ ಸೂಕ್ತ ಮಾಹಿತಿ.
ಹಾಗಾದರೆ, ಅಡಿಕೆ ಬೆಳೆಯಲ್ಲಿ ನೀರಿನ ನಿರ್ವಹಣೆ ಹೇಗಿರಬೇಕು?
How will be water management in arecanut cropping?
ನೀರಿನ ನಿರ್ವಹಣೆ ಮಾಡುವಾಗ ರೈತರು ಪ್ರಮುಖವಾಗಿ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೆಂದರೆ,
* ಮಣ್ಣಿನ ಗುಣ ಯಾವುದು?
Type of soil?
ಮಣ್ಣಿನ ಗುಣಗಳಲ್ಲಿ ಬೇರೆ ಬೇರೆ ರೀತಿಯ ಮಣ್ಣುಗಳನ್ನು ಕಾಣುತ್ತೇವೆ ಮುಖ್ಯವಾಗಿ “ಮರಳು ಮಿಶ್ರಿತ ಮಣ್ಣು, ಕೆಂಪು ಮಿಶ್ರಿತ ಮಣ್ಣು ಹಾಗೂ ಕಪ್ಪು ಮಣ್ಣು”, ಈ ಮೂರು ಮಣ್ಣುಗಳಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತದೆ.
ಆದರೆ ಇಲ್ಲಿ ರೈತರು ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ,ಈ ಮೂರು ಮಣ್ಣುಗಳಲ್ಲಿಯೂ ನೀರಿನ ಪೂರೈಕೆ “ಮಣ್ಣಿನಿಂದ ಮಣ್ಣಿಗೆ ವ್ಯತ್ಯಾಸವಾಗುತ್ತಾ ಹೋಗುತ್ತದೆ”.
ಏಕೆಂದರೆ,”ಮರಳು ಮಿಶ್ರಿತ ಮಣ್ಣು ಹಾಗೂ ಕೆಂಪು ಮಿಶ್ರಿತ ಮಣ್ಣಿನಲ್ಲಿ ನೀರನ್ನು ಹೀರಿಕೊಳ್ಳುವ ಶಕ್ತಿ ಹೆಚ್ಚಿರುವುದರಿಂದ,ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಬೇಕಾಗುತ್ತದೆ, ಆದರೆ ಕಪ್ಪು ಮಣ್ಣಿನಲ್ಲಿ ಹಾಗಾಗುವುದಿಲ್ಲ.ಕಪ್ಪು ಮಣ್ಣಿನಲ್ಲಿ ಅತಿಯಾದ ತೇವಾಂಶದ ಲಭ್ಯತೆ ಇರುವುದರಿಂದ,
ಕಡಿಮೆ ಪ್ರಮಾಣದ ನೀರಿನ ಪೂರೈಕೆ ಸಾಕಾಗುತ್ತದೆ”. ಹಾಗಾಗಿ ರೈತರು ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ನೀರಿನ ಪೂರಕ್ಕೆ ಮಾಡಬೇಕಾಗುತ್ತದೆ.
* ಹವಾಮಾನ
Weather
ರೈತರು ಗಿಡಗಳಿಗೆ ವಿವಿಧ ಋತುಗಳಲ್ಲಿ, ವಿವಿಧ ಪ್ರಮಾಣದ ನೀರನ್ನು ಪೂರೈಕೆ ಮಾಡಬೇಕಾಗುತ್ತದೆ. ಉದಾಹರಣೆಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ “ಕಡಿಮೆ ಪ್ರಮಾಣದ ನೀರನ್ನು ಒದಗಿಸಿದರೆ ಸಾಕು“,
ಆದರೆ ಬೇಸಿಗೆಕಾಲದಲ್ಲಿ ಗಿಡಗಳು “ಹೆಚ್ಚಿನ ನೀರನ್ನು ಕೇಳುತ್ತವೆ, ಆಗ ರೈತರು ಗಿಡಗಳಿಗೆ ಹೆಚ್ಚಿನ ನೀರನ್ನು ಪೂರೈಕೆ ಮಾಡಬೇಕಾಗುತ್ತದೆ”.
* ಅಡಿಕೆ ಗಿಡಗಳ ವಯಸ್ಸಿಗೆ ಅನುಗುಣವಾಗಿ ನೀರಿನ ಪೂರೈಕೆ
water supply according to plant age
“ಸಣ್ಣ ವಯಸ್ಸಿನ ಅಡಿಕೆ ಗಿಡಗಳಿಗೆ ಕಡಿಮೆ ಪ್ರಮಾಣದ ನೀರಿನ ಪೂರೈಕೆ ಸಾಕಾಗುತ್ತದೆ.ಆದರೆ ದೊಡ್ಡ ವಯಸ್ಸಿನ ಗಿಡಗಳಲ್ಲಿ ಬೇರಿನ ರಚನೆ ಆಳವಾಗಿದ್ದು ಹಾಗೂ ವಿಶಾಲವಾಗಿದ್ದು ಹೆಚ್ಚಿನ ನೀರಿನ ಅಗತ್ಯತೆ ಇರುತ್ತದೆ”.
ಹಾಗಾಗಿ ರೈತರು ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀರಿನ ಪೂರೈಕೆಯನ್ನು ರೂಢಿ ಮಾಡಿಕೊಳ್ಳಬೇಕಾಗುತ್ತದೆ.
ಯಾವ್ಯಾವ ಪದ್ಧತಿಯಲ್ಲಿ ಅಡಿಕೆ ಬೆಳೆಗೆ ನೀರಿನ ಪೂರೈಕೆ ಮಾಡಬಹುದು?
in which methods water can supply to arecanut?
1) ಹಾಯಿಸುವ ಪದ್ಧತಿ(Channel irrigation):- ಈ ಪದ್ಧತಿಯಲ್ಲಿ ನೀರಿನ ಲಭ್ಯತೆ ಯಥೇಚ್ಛವಾಗಿದ್ದು,ರೈತರು ನೀರನ್ನು ಗಿಡಗಳಿಗೆ “ಹಾಯಿಸುವ” ಮೂಲಕ ನೀರಿನ ಪೂರೈಕೆ ಮಾಡುತ್ತಾರೆ.
ಈ ಪದ್ಧತಿಯ ಒಂದು ಅನಾನುಕೂಲ ವೆಂದರೆ ಒಂದು ವೇಳೆ “ಮಣ್ಣಿನ ಗುಣ ಧರ್ಮದಲ್ಲಿ ನೀರನ್ನು ಬಸಿದುಕೊಳ್ಳುವ ಶಕ್ತಿ ಕಡಿಮೆ ಇದ್ದರೆ,ಇದರಿಂದ ಅಡಿಕೆ ಗಿಡದ ಬೇರುಗಳು ಕೊಳೆಯುವ ಪರಿಸ್ಥಿತಿ ಉಂಟಾಗಬಹುದು”.
ಆದ್ದರಿಂದ ಅಡಿಕೆ ಬೆಳೆಗೆ ಇದು ಒಂದು ರೀತಿಯಲ್ಲಿ ಸೂಕ್ತವಲ್ಲದ ನೀರಾವರಿ ಪದ್ಧತಿಯಾಗಿದೆ.
2) ತುಂತುರು ನೀರಾವರಿ(Sprinkler irrigation):- ಸಾಮಾನ್ಯವಾಗಿ ಈ ಪದ್ಧತಿಯನ್ನು ಬಹಳಷ್ಟು ಜನ ರೈತರು ಅನುಸರಿಸುತ್ತಿದ್ದಾರೆ, ಈ ನೀರಾವರಿಯಿಂದ ಒಂದಷ್ಟು ಅನುಕೂಲಗಳು ಸಹ ಇವೆ ಅವುಗಳೆಂದರೆ,
• “ಭೂಮಿ ಎತ್ತರ ಮತ್ತು ತಗ್ಗಿನಿಂದ ಕೂಡಿದಾಗ” ಈ ನೀರಾವರಿ ಪದ್ಧತಿ ಸಹಾಯಕಾರಿಯಾಗಿರುತ್ತದೆ.
* ತುಂತುರು ನೀರಾವರಿ ಪದ್ಧತಿಯಿಂದ “ಆಂತರಿಕ ಉಷ್ಣಾಂಶ“ವನ್ನು ಕಡಿಮೆಗೊಳಿಸಬಹುದು.
ಆದರೆ ಇದರಿಂದಾಗುವ ಅನಾನುಕೂಲ ವೆಂದರೆ,
• ತುಂತುರು ನೀರಾವರಿ ಪದ್ಧತಿ ಹನಿ ನೀರಾವರಿಗಿಂತ “ಹೆಚ್ಚಿನ ನೀರಿನ ಅಗತ್ಯತೆಯನ್ನು ಬೇಡುತ್ತದೆ“, ಇದರಿಂದಾಗಿ ನೀರಿನ ಲಭ್ಯತೆ ಕಡಿಮೆಯಾಗಬಹುದು.
* “ಮಣ್ಣಿನ ಸವಕಳಿ“ಯ ಆತಂಕವಿರುತ್ತದೆ.
3) ಹನಿ ನೀರಾವರಿ(drip irrigation):-
“ಶೇಕಡ 90ರಷ್ಟು ಅಡಿಕೆ ಬೆಳೆಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿರುವುದನ್ನು” ಕಾಣಬಹುದು, ಹನಿ ನೀರಾವರಿ ಪದ್ಧತಿಯಲ್ಲಿ “ನೀರನ್ನು ನೇರವಾಗಿ ಬೇರುಗಳಿಗೆ ನೀಡುವುದರಿಂದ ನೀರಿನ ಬಳಕೆಯು ಕಡಿಮೆ ಇರುತ್ತದೆ“.ಹಾಗೆ “ಅನಗತ್ಯ ನೀರಿನ ಖರ್ಚನ್ನು ಕಡಿಮೆ ಮಾಡಬಹುದು“, ಹಾಗಾಗಿ ಹನಿ ನೀರಾವರಿ ಪದ್ಧತಿ ಒಂದು ಉತ್ತಮ ನೀರಾವರಿ ಪದ್ಧತಿ ಎಂದು ಹೇಳಬಹುದು.
ಹನಿ ನೀರಾವರಿ ಪದ್ಧತಿಯು ಅಡಿಕೆಯ ಇಳುವರಿ ಯನ್ನು ತೆಗೆಯುವಲ್ಲಿ ಉತ್ತಮ ಪದ್ಧತಿಯಾಗಿದ್ದು, ಈ ನೀರಾವರಿ ಪದ್ಧತಿಯಲ್ಲಿ “ಮರಳು ಮಿಶ್ರಿತ ಮಣ್ಣಿಗೆ ಐದರಿಂದ ಆರು ದಿನ“ಗಳಿಗೊಮ್ಮೆ ನೀರು ಉಣಿಸಿದರೆ ಸಾಕು.
ಆದರೆ ಅದೇ ರೀತಿಯಾಗಿ “ಕಪ್ಪು ಮಣ್ಣಿದ್ದರೆ 12 ದಿನ“ಗಳಿಗೊಮ್ಮೆ ನೀರುಣಿಸಿದರೆ ಸಾಕಷ್ಟಾಗುತ್ತದೆ.
• ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಬೇಕಾದಾಗ ಡ್ರಿಪ್ಪರನ್ನು ಯಾವ ಭಾಗದಲ್ಲಿ ಇರಿಸುತ್ತೇವೆ ಎಂದು ರೈತರು ಗಮನಿಸುವುದು ಅತ್ಯವಶ್ಯಕವಾಗಿರುತ್ತದೆ.
*ಸಣ್ಣ ಸಸಿಗಳಾಗಿದ್ದರೆ “ಬುಡದ ಸಮೀಪ” ಡ್ರಿಪ್ಪರನ್ನು ಅಳವಡಿಸಬೇಕು.
• “ಒಂದು ವರ್ಷದಿಂದ ಐದು ವರ್ಷದೊಳಗಿನ ಸಸಿ ಆದರೆ ಅರ್ಧ ಅಡಿ” ಅಂತರದಲ್ಲಿ ಡ್ರಿಪ್ಪರನ್ನು ಅಳವಡಿಸಬೇಕು.
* ಇನ್ನು “10 ವರ್ಷಕ್ಕಿಂತ ಮೇಲ್ಪಟ್ಟ ಸಸ್ಯಗಳಿಗೆ ಒಂದುವರೆ ಅಡಿ” ಯಷ್ಟು ದೂರದಲ್ಲಿ ಡ್ರಿಪ್ಪರ್ ಗಳನ್ನು ಅಳವಡಿಸಬೇಕು.
ಹಾಗಾಗಿ ರೈತರು ಪ್ರಮುಖವಾಗಿ ನೀರಾವರಿ ಪದ್ಧತಿಯಲ್ಲಿ ವ್ಯವಸ್ಥಿತವಾಗಿ ನೀರು ನೀಡುವುದನ್ನು ರೂಡಿಸಿಕೊಳ್ಳಬೇಕು, ಹೆಚ್ಚು ನೀಡಿದಾಗ ಹೆಚ್ಚು ನೀರನ್ನು ಕೊಟ್ಟಾಗ “ಗಿಡಗಳಿಗೆ ಶೀತ” ಉಂಟಾಗಿ ಅರಳುಗಳು ಉದುರಲು ಆರಂಭಿಸುತ್ತವೆ,
ಇದರಿಂದ ಸಹಜವಾಗಿಯೇ “ಅಡಿಕೆಯ ಇಳುವರಿ ಕುಂಠಿತ“ವಾಗುತ್ತದೆ. ಹಾಗಾಗಿ ಉತ್ತಮ ನೀರಿನ ನಿರ್ವಹಣೆ ಉತ್ತಮ ಇಳುವರಿಗೆ ದಾರಿ ಎಂದು ಹೇಳಬಹುದು.
Therefore “water management” is the crucial part in cropping system, hence,farmers should aware of watering method and also measure of water to give different “aged” plants also farmers should know “soil type
Weather condition with irrigation methods which helps farmers to increase their profit in arecanut plantation.
Thank you.
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
https://amzn.to/3PCyXxq
We are useing this washing machine since many year, best washing machine for daily use dress.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

