
ವಿಜ್ಞಾನಿಗಳ ಪ್ರಕಾರ :: ಅಡಿಕೆ ತೋಟದಲ್ಲಿ ಕಳೆನಾಶಕಗಳನ್ನು ಬಳಕೆ ಬೇಕಾ?
ಅಡಿಕೆ ಬೆಳೆಯುವ ರೈತರಿಗೆ ಮುಖ್ಯವಾಗಿ ಈ ಪ್ರಶ್ನೆ ಕಾಡುತ್ತದೆ ಅದೇನೆಂದರೆ ಕಳೆನಾಶಕಗಳನ್ನು ಬಳಸಬೇಕೇ ಅಥವಾ ಬೇಡವೇ ಎಂಬುದು? ಆದ್ದರಿಂದ ನಾವು ಈಗ ಕಳೆನಾಶಕಗಳನ್ನು ಬಳಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
ಕಳೆ ಎಂದರೇನು ಹಾಗೂ ಇದು ಯಾಕೆ ಹುಟ್ಟುತ್ತದೆ?
ಕಳೆ ಎಂದರೆ ಜಮೀನಿನಲ್ಲಿ ನಾವು ಬೆಳೆದ ಬೆಳೆಯ ಜೊತೆಗೆ ಹುಟ್ಟುವ ನಿರುಪಯುಕ್ತ ಬೆಳೆ. ಇದು ಹೆಚ್ಚು ಫಲವತ್ತಾದ ಹಾಗೂ ಪೋಷಕಾಂಶಗಳನ್ನು ಹೊಂದಿದ ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ವಿವಿಧ ಜಾತಿಯ ಮಣ್ಣಿನ ಹಾಗೂ ಅದರಲ್ಲಿರುವ ಪೋಷಕಾಂಶಗಳ ಆಧಾರದ ಮೇಲೆ ವಿವಿಧ ಜಾತಿಯ ಕಳೆಗಳು ಬೆಳೆಯುತ್ತವೆ.
ಅಡಿಕೆಯನ್ನು ನಾಟಿ ಮಾಡಿದಾಗಿನಿಂದ ಹಿಡಿದು ಕೊಯ್ಲು ಮಾಡುವವರೆಗೂ ನಾನಾ ವಿಧಗಳಲ್ಲಿ ಹಾಗೂ ನಾನಾ ಹಂತಗಳಲ್ಲಿ ಕಳೆಗಳ ಕಾಟ ಇದ್ದೇ ಇರುತ್ತದೆ.
ಹಾಗಾದರೆ ಕಳೆಗಳಿಂದ ಆಗುವ ದುಷ್ಪರಿಣಾಮಗಳೇನು?
* ಜಮೀನಿನಲ್ಲಿ ಕಳೆಗಳು ಹೆಚ್ಚಾಗಿರುವುದರಿಂದ ಅಡಿಕೆ ಮರ ಹಾಗೂ ಕಳೆಗಳ ಮಧ್ಯೆ ಪೋಷಕಾಂಶ ಹಾಗೂ ನೀರಿಗೆ ಸ್ಪರ್ಧೆ ಹೆಚ್ಚಾಗುತ್ತದೆ. ಇದರಿಂದ ಅಡಿಕೆ ಮರಗಳ ಬೆಳವಣಿಗೆಗೆ ಪೆಟ್ಟು ಬೀಳಬಹುದು.
* ಕಳೆಗಳು ಹೆಚ್ಚಾಗಿದ್ದಲ್ಲಿ ಅಡಿಕೆ ತೋಟದಲ್ಲಿ ಬೇರೆ ರೀತಿಯ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ . ಉದಾಹರಣೆಗೆ ಕೊಯ್ಲಿನ ಸಮಯದಲ್ಲಿ (Harvesting) ಮಾಡಿದ ಸಂದರ್ಭದಲ್ಲಿ ಅಡಿಕೆ ಕಾಯಿಗಳನ್ನು ಆಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೂ
ಹನಿ ನೀರಾವರಿ ಪದ್ಧತಿ ಮಾಡಿದಾಗ ಡ್ರಿಪ್ ಲೈನ್(drip line) ಗಳನ್ನು ಸುತ್ತಲು ಸಾಧ್ಯವಾಗುವುದಿಲ್ಲ. ಅಲ್ಲದೆ ಹನಿ ನೀರಾವರಿ ಪದ್ಧತಿ ಮಾಡಿದಾಗ ಕಳೆಗಳಿಂದಾಗಿ ಅಡಿಕೆ ಮರಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಹೋಗಿದೆ ಎಂಬುದು ಗೊತ್ತಾಗುವುದಿಲ್ಲ.
ಈ ಕಳೆಗಳ ಪ್ರಮಾಣವು ನಾವು ಕೃಷಿಯಲ್ಲಿ ಯಾವ ಪದ್ದತಿಯನ್ನು ಅಳವಡಿಸಿಕೊಂಡಿರುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಅಂದರೆ ನಾವು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ್ದಲ್ಲಿ ಅಥವಾ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿದ್ದಲ್ಲಿ
ಈ ಕಳೆಗಳ ಪ್ರಮಾಣ ಹೆಚ್ಚಾಗಿರುತ್ತದೆ ಏಕೆಂದರೆ ನೀರು ಜಮೀನಿನ ಎಲ್ಲಾ ಕಡೆಯೂ ತಲುಪುವುದರಿಂದ ಎಲ್ಲಾ ಕಡೆಯೂ ಕಳೆಗಳು ಬೆಳೆಯುತ್ತವೆ.
ಹಾಗಾದರೆ ಕಳೆಯನ್ನು ತಡೆಯುವ ವಿಧಾನಗಳು ಯಾವುವು?
* ಮುಖ್ಯವಾಗಿ ಕಳೆ ಬೆಳೆಯದಂತೆ ತಡೆಯಲು ಅಡಿಕೆ ಮರಗಳ ಮಧ್ಯೆ ಇತರ ಯಾವುದಾದರೂ ಉಪಯುಕ್ತ ಬೆಳೆಯನ್ನು ಬೆಳೆಯಬೇಕು. ಅದರಲ್ಲೂ ಮುಖ್ಯವಾಗಿ ದ್ವಿದಳ ಧಾನ್ಯಗಳನ್ನು ಬೆಳೆಯಬಹುದು ಉದಾಹರಣೆಗೆ ಸೆಣಬು, ಡಯಾಂಚಾ,
ಅಲಸಂದಿ, ಅವರೆ, ವೆಲ್ವೆಟ್ ಬೀನ್ಸ್, ಬೆಳೆದರೆ ಕಳೆಗಳ ಹಾವಳಿ ಕಡಿಮೆಯಾಗುತ್ತದೆ. ನಂತರ ಈ ದ್ವಿದಳ ಧಾನ್ಯಗಳ ಬೆಳೆಗಳನ್ನು ಮಗುಚುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
ಇದರ ಬದಲಾಗಿ ರೈತರು ಕೂಲಿ ಕಾರ್ಮಿಕರ ಅಲಭ್ಯತೆ ಹಾಗೂ ಅಡಿಕೆ ತೋಟಗಳ ನಿರ್ವಹಣೆ ಕಷ್ಟವಾಗಿರುವುದರಿಂದ ಚಿಕ್ಕ ವಯಸ್ಸಿನ ಮರಗಳಿಂದ ಹಿಡಿದು 15-20 ವರ್ಷಗಳ ಮರಗಳಿರುವ ಜಮೀನಿನಲ್ಲೂ ಸಹ ಕಳೆ ಹೆಚ್ಚಾದರೆ ಕಳೆನಾಶಕಗಳನ್ನು ಬಳಸುತ್ತಿದ್ದಾರೆ.
ಹಾಗಾದರೆ ಕಳೆನಾಶಕಗಳಿಂದ ಅಡಿಕೆ ಮರಗಳಿಗೆ ಉಂಟಾಗುವ ಪರಿಣಾಮಗಳೇನು?
* ಚಿಕ್ಕ ಅಡಿಕೆ ಮರಗಳಿರುವ ತೋಟದಲ್ಲಿ ಕಳೆನಾಶಕವಾಗಿ ಗ್ಲೈಫೋಸೈಟ್(glyphosate) ಅಥವಾ ಗ್ಲೈಫೋಸೈಟ್ ಅಮೋನಿಯಂ ಸಾಲ್ಟ್ (glyphosate ammonium salt) ಗಳನ್ನು ಬಳಸುತ್ತಾರೆ. ಇವು ಅಂತವ್ಯಾ೯ಪಿ ಕಳೆನಾಶಕಗಳಾಗಿದ್ದು,
ಈ ಕಳೆನಾಶಕಗಳನ್ನು ಕಳೆಗಳ ಮೇಲೆ ಹಾಕಿದಾಗ ಕಳೆಗಳು ಸುಟ್ಟು ಹೋಗುತ್ತವೆ. ಪ್ರತಿ ಬಾರಿ ಕಳೆನಾಶಕ ಬಳಸುವುದರಿಂದ ಅದು ಚಿಕ್ಕ ಅಡಿಕೆ ಮರಗಳ ಎಲೆಗಳ ಮೇಲೆ ಬಿದ್ದರೆ ಅಡಿಕೆ ಮರಗಳು ಸಾಯುತ್ತವೆ ಅಥವಾ ಹಳದಿ ಬಣ್ಣಕ್ಕೆ ತಿರುಗಿ ಸುಟ್ಟ ರೀತಿ ಕಾಣುತ್ತವೆ.
• ದೊಡ್ಡ ಅಡಿಕೆ ಮರಗಳಿರುವ ತೋಟದಲ್ಲಿ ಪ್ರತಿ ಬಾರಿ ಕಳೆನಾಶಕ ಬಳಸುವುದರಿಂದ ಅದು ಮಣ್ಣಿನ ಗುಣಲಕ್ಷಣ ಹಾಗೂ ಫಲವತ್ತತೆ ಮೇಲೆ ಗಾಢ ಪರಿಣಾಮ ಬೀರುತ್ತದೆ.
* ಆದ್ದರಿಂದ ಸಾಮಾನ್ಯವಾಗಿ ಕಳೆನಾಶಕಗಳನ್ನು ಹೊಡೆಯುವುದು ತಪ್ಪಲ್ಲ ಆದರೆ ಪ್ರತಿ ಬಾರಿ ಅಂದರೆ ಮೂರು ತಿಂಗಳಿಗೊಮ್ಮೆ ಕಳೆ ಬಂತು ಎಂದು ಕಳೆನಾಶಕಗಳನ್ನು ಬಳಸಿದರೆ ಅದು ಮಣ್ಣಿನ ಭೌತಿಕ ಗುಣಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ.
* ಅಲ್ಲದೆ ಕಳೆನಾಶಕಗಳಿಂದ ಮಣ್ಣಿನ ಜೈವಿಕ ಗುಣಲಕ್ಷಣಗಳ ಮೇಲು ಪರಿಣಾಮ ಬೀರಿ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂತತಿ ಕಡಿಮೆಯಾಗುತ್ತಾ ಹೋಗುತ್ತದೆ.
ಹೀಗೆ ಆಗುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಅಡಿಕೆ ಮರಗಳಿಗೆ ಸಿಗುವ ಪ್ರಮಾಣವೂ ಕಡಿಮೆಯಾಗುತ್ತಾ ಹೋಗುತ್ತದೆ.
ಹೀಗೆ ಕಳೆನಾಶಕಗಳನ್ನು ಬಳಸುವುದರಿಂದ ಮಣ್ಣಿನ ಜೈವಿಕ ಭೌತಿಕ ಹಾಗೂ ರಾಸಾಯನಿಕ ಗುಣಲಕ್ಷಣಗಳ ಮೇಲೆ ಪ್ರಭಾವ ಬೀರಿ ಮಣ್ಣಿನ ಸತ್ವ ಕಡಿಮೆಯಾಗುತ್ತದೆ.
ಉದಾಹರಣೆಗೆ ಹೆಚ್ಚಾಗಿ ಕಳೆನಾಶಕ ಬಳಸುವ ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ನೀರಿನೊಂದಿಗೆ ಮಣ್ಣು ಸಹ ಕೊಚ್ಚಿಕೊಂಡು ಹೋಗುವ ಲಕ್ಷಣ ಕಂಡುಬರುತ್ತದೆ.
ಆದರೆ ರೈತರು ತುಂಬಾ ಅನಿವಾರ್ಯವಾಗಿದ್ದಲ್ಲಿ ಮಾತ್ರ ಕಳೆನಾಶಕಗಳನ್ನು ಬಳಸಿ ಇಲ್ಲವಾದಲ್ಲಿ ಕಳೆನಾಶಕಗಳನ್ನು ಹೆಚ್ಚಾಗಿ ಬಳಸಬೇಡಿ. ಬದಲಾಗಿ ಕಳನಾಶಕಗಳನ್ನು ಮೇಲೆ ಹೇಳಿದ ಬೇರೆ ವಿಧಾನಗಳಿಂದ ತಡೆಯಲು ಪ್ರಯತ್ನಿಸಿ.
ಧನ್ಯವಾದಗಳು
Thank you.
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
https://amzn.to/3PCyXxq
We are useing this washing machine since many year, best washing machine for daily use dress.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

