
30 by 40 Krushi Honda cost :: 30 * 40 ಅಡಿ ಉದ್ದದ ಕೃಷಿ ಹೊಂಡ ನಿರ್ಮಿಸಲು ಎಷ್ಟು ಖರ್ಚಾಗುತ್ತದೆ?
ನೀರಿನ ಬ್ಯಾಂಕ್ – ನಿಮ್ಮ ಜಮೀನಿನಲ್ಲೇ ಇರಲಿ ಒಂದು ಕೃಷಿ ಹೊಂಡ !!
Water Bank – Let there be a farm pond in your land!!
ದೊಡ್ಡಬಳ್ಳಾಪುರ ತಾಲೂಕಿನ ಬೆಲೆಮಂಗಲ ಹೋಬಳಿಯಲ್ಲಿ ಗುತ್ತಿಗೆಗೆ ಪಡೆದ ಒಂದೂವರೆ ಎಕರೆ ಜಾಗದಲ್ಲಿ ಈ ಕೃಷಿ ಹೊಂಡವನ್ನು ಮಾಡಿದ್ದಾರೆ.
ಮುಖ್ಯವಾಗಿ, ನೀರು ಕಡಿಮೆ ಇದ್ದಾಗ ಅಥವಾ ತಕ್ಷಣಕ್ಕೆ ಬೇಕಾದಾಗ ಅಡಿಕೆ ಸಸಿಗಳಿಗೆ ನೀರು ಕೊಡಲು ಈ ಹೊಂಡವನ್ನು ಮಾಡಿದ್ದಾರೆ.
ಗಾತ್ರ ಮತ್ತು ಆಳ :-
Dimensions and Depth:-
* ಮೇಲ್ಭಾಗದ ಅಳತೆ – ನೀರು ನಿಲ್ಲುವ ಜಾಗ 30 ಅಡಿ ಅಗಲ ಮತ್ತು 40 ಅಡಿ ಉದ್ದ ಇದೆ. ಹೊರಗಿನ ಅಳತೆ ಸರಿಸುಮಾರು 35×50 ಅಡಿ ಆಗುತ್ತದೆ.
• ಆಳ – ಸರಿಸುಮಾರು 5.5 ರಿಂದ 6 ಅಡಿ ಆಳ ಇದೆ. ಸುರಕ್ಷತೆಗಾಗಿ ಈ ಆಳವನ್ನು ಇಟ್ಟಿದ್ದಾರೆ (ಈಜಲು ಬರದವರು ಬಿದ್ದರೂ ತೊಂದರೆ ಆಗದ ಹಾಗೆ ನೋಡಿಕೊಂಡಿದ್ದಾರೆ).
* ಹೊಂಡದ ನಾಲ್ಕು ಕಡೆಗಳಿಂದ ಮಧ್ಯಕ್ಕೆ ಇಳಿಜಾರಾಗಿ (Slope) ಇದೆ.


ಹೊಂಡದ ಹಂತ ಹಂತವಾಗಿ ಮಾಡಿದುದ್ದು.
ನೀರು ಸಂಗ್ರಹಿಸುವ ಸಾಮರ್ಥ್ಯ :-
Storage Capacity:-
• ಈ ಹೊಂಡದಲ್ಲಿ ಸರಿಸುಮಾರು 90,000 ದಿಂದ 1,00,000 ಲೀಟರ್‌ವರೆಗೆ ನೀರು ತುಂಬಿಸಬಹುದು.
* ಇದು ಸರಿಸುಮಾರು 50,000 ಅಡಿಕೆ ಸಸಿಗಳಿಗೆ ಒಂದು ವಾರದವರೆಗೆ ನೀರು ಕೊಡಬಹುದು. ಒಂದೂವರೆ ಎಕರೆ ಜಾಗಕ್ಕೆ ಸ್ಪ್ರಿಂಕ್ಲರ್ ಮೂಲಕ ಒಂದು ಸಲ ನೀರು ಹಾಕಲು ಇದು ಸಹಾಯ ಮಾಡುತ್ತದೆ.
ಬಳಸಿದ ವಸ್ತುಗಳು :-
Materials Used:-
• ಟಾರ್ಪಾಲಿನ್:- 500 ಮೈಕ್ರಾನ್ ಕ್ವಾಲಿಟಿ ಇರುವ ಪೇಪರ್ ಬಳಸಿದ್ದಾರೆ. ಅವರು 55×45 ಅಡಿ ಅಳತೆಯ ಪೇಪರ್ ಅನ್ನು ಉಪಯೋಗಿಸಿದ್ದಾರೆ.
* ಮೋಟರ್ – ಹೊಂಡದಿಂದ ನೀರು ಮೇಲೆತ್ತಲು 1 HP ಸಬ್‌ಮರ್ಸಿಬಲ್ ಮೋಟರ್ ಹಾಕಿದ್ದಾರೆ.
• ಆಟೋಮೇಷನ್ – ನೀರು ಹಾಕಲು ಆಟೋಮ್ಯಾಟಿಕ್ ಟೈಮರ್ ಹಾಕಿದ್ದಾರೆ, ಇದರಿಂದ ಸಮಯ ಉಳಿತಾಯ ಆಗುತ್ತದೆ.
* ಸುತ್ತುವರಿಕೆ – ಪ್ರಾಣಿಗಳು ಬಿದ್ದು ಪೇಪರ್ ಹಾಳು ಮಾಡದಂತೆ ಸುತ್ತಲೂ ಶೇಡ್ ನೆಟ್ ಫೆನ್ಸಿಂಗ್ ಮಾಡಿದ್ದಾರೆ ಮತ್ತು ಸುರಕ್ಷತೆಗಾಗಿ ಸೌರಶಕ್ತಿ ಚಾಲಿತ ಸಿಸಿಟಿವಿ ಕ್ಯಾಮೆರಾ ಹಾಕಿದ್ದಾರೆ.
ಖರ್ಚಿನ ಅಂದಾಜು :-
Cost Estimation:-
ಕೃಷಿ ಹೊಂಡ ಕಟ್ಟಲು ಆದ ಖರ್ಚಿನ ಅಂದಾಜು:
• ಟಾರ್ಪಾಲಿನ್ ಪೇಪರ್ – ಒಂದು ಚದರ ಅಡಿಗೆ ₹10 ರಂತೆ ಸರಿಸುಮಾರು ₹25,000.
* ಜೆಸಿಬಿ ಕೆಲಸ – ಸರಿಸುಮಾರು 3 ಗಂಟೆಗಳ ಕೆಲಸಕ್ಕೆ ₹4,000.
• ಕೂಲಿ ಕೆಲಸದವರು – ಹೊಂಡ ಸರಿ ಮಾಡಲು ಮತ್ತು ಪೇಪರ್ ಹಾಕಲು ಎರಡು ಸಲ ಕೆಲಸಕ್ಕೆ ತಲಾ ₹5,000 ರಂತೆ ಒಟ್ಟು ₹10,000 – ₹15,000.
* ಒಟ್ಟು ಖರ್ಚು – ಸರಿಸುಮಾರು ₹50,000 ದಲ್ಲಿ ಈ ಒಂದು ಲಕ್ಷ ಲೀಟರ್ ನೀರು ಹಿಡಿಯುವ ಕೃಷಿ ಹೊಂಡ ರೆಡಿ ಆಗಿದೆ.
ಮುಖ್ಯ ಸಲಹೆಗಳು :-
Important Tips:-
* ಹೊಂಡ ತೋಡುವಾಗ ಕಲ್ಲು ಅಥವಾ ಗಟ್ಟಿ ಮಣ್ಣಿನ ಚೂರುಗಳು ಇಲ್ಲದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಪೇಪರ್ ಹರಿಯಬಹುದು.
• ಪೇಪರ್ ಹಾಕುವಾಗ ಅಂಚುಗಳಲ್ಲಿ ಮೂರು ಪದರ ಮಡಚಿ ಮಣ್ಣಿನಿಂದ ಮುಚ್ಚಬೇಕು, ಇದರಿಂದ ಮುಂದೆ ಹೊಂಡವನ್ನು ಸ್ವಲ್ಪ ದೊಡ್ಡದು ಮಾಡಲು ಅನುಕೂಲ ಆಗುತ್ತದೆ.
* ನೆಲದಿಂದ ಸರಿಸುಮಾರು 1.5 ರಿಂದ 2 ಅಡಿ ಎತ್ತರದವರೆಗೆ ಏರಿ ಕಟ್ಟಿದರೆ ಒಳ್ಳೆಯದು.
ಸ್ವಲ್ಪ ಜಾಗ, ಭರಪೂರ ನೀರು:-
Small space, plenty of water:-
ಕೃಷಿ ಹೊಂಡ ಮಳೆ ನೀರನ್ನು ಸಂಗ್ರಹಿಸಿಡಲು ಸಹಕಾರಿ, ಇದು ಮಳೆ ನೀರು ಕೊಯ್ಲು. ಬರಗಾಲದಲ್ಲಿ, ಇದು ಬೆಳೆಗಳಿಗೆ ಜೀವ ರಕ್ಷಕ ನೀರಾವರಿ. ರೈತರು ಮಳೆಯನ್ನೇ ನಂಬಿಕೊಳ್ಳದೆ ತುರ್ತು ಸಂದರ್ಭದಲ್ಲಿ ಬೆಳೆಗಳಿಗೆ ನೀರುಣಿಸಬಹುದು.
ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಕಡಿಮೆ ನೀರಿನ ಪ್ರದೇಶಗಳಲ್ಲಿ, ಹನಿ ನೀರಾವರಿ ಅಥವಾ ಸ್ಪ್ರಿಂಕ್ಲರ್ ಪದ್ಧತಿಯಿಂದ ಹೆಚ್ಚಿನ ಭೂಮಿಗೆ ನೀರು ಒದಗಿಸಬಹುದು. ರೈತರು ಮೀನು ಸಾಕಣೆಯಿಂದ ಆದಾಯ ಗಳಿಸಬಹುದು.
ಕಡಿಮೆ ಖರ್ಚಿನಲ್ಲಿ ನಿರ್ಮಿಸಬಹುದಾದ ಈ ಹೊಂಡಗಳು ರೈತರ ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತವೆ.
Farm ponds are a very good way to collect rainwater by holding runoff for later use. When there is a drought, they can save crops by providing irrigation,
Which lets farmers water their plants when needed instead of only depending on rain.This also helps to refill and raise the level of water underground.
In areas where water is limited, farmers can water more land using drip or sprinkler systems because of these ponds. Also, farmers can earn extra money by raising fish in these ponds.
In the end, these affordable structures improve the financial stability of the farming community.
Thank you.
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
https://amzn.to/3PCyXxq
We are useing this washing machine since many year, best washing machine for daily use dress.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

