
Minimum Balance Bank Balance :: ನಗದು ವ್ಯವಹಾರ ಇನ್ನಷ್ಟು ದುಬಾರಿ!!ಹಣ ಜಮಾ ಮಾಡುವ ಮಿತಿ!!
Major Financial Rule Changes from April 1st!!
ಏಪ್ರಿಲ್ 1 ರಿಂದ ಜಾರಿಗೆ ಬರುವ ಹೊಸ ಹಣಕಾಸು ನಿಯಮಗಳು ಮತ್ತು ನಗದು ಹಣದ ವ್ಯವಹಾರದ ಮೇಲಿನ ಮಿತಿಗಳ ಬಗ್ಗೆ ಮಾಹಿತಿ::
ಹೊಸ ಹಣಕಾಸು ನಿಯಮಗಳು ಮತ್ತು ನಗದು ವ್ಯವಹಾರದ ಮಿತಿಗಳು:-
New Financial Rules & Cash Transaction Limits:-
ಕಪ್ಪು ಹಣವನ್ನು ತಡೆಯಲು ಮತ್ತು ಎಲ್ಲವೂ ಸ್ಪಷ್ಟವಾಗಿರಲು ಕೇಂದ್ರ ಸರ್ಕಾರವು ಆದಾಯ ತೆರಿಗೆ ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
1. ನಗದು ಹಣ ಜಮಾ ಮಾಡುವ ಮಿತಿ / Limits on Cash Deposits :-
• ಪ್ಯಾನ್ ಕಾರ್ಡ್ ಇದ್ದರೆ ಉಳಿತಾಯ ಖಾತೆಗೆ ಒಂದು ವರ್ಷಕ್ಕೆ ₹10 ಲಕ್ಷದವರೆಗೆ ನಗದು ಹಣವನ್ನು ಜಮಾ ಮಾಡಬಹುದು.
* ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಕೇವಲ ₹5 ಲಕ್ಷದವರೆಗೆ ಮಾತ್ರ ಜಮಾ ಮಾಡಬಹುದು.
• ಚಾಲ್ತಿ ಖಾತೆ (Current Account) ಒಂದು ವರ್ಷಕ್ಕೆ ₹50 ಲಕ್ಷದವರೆಗೆ ನಗದು ಹಣವನ್ನು ಜಮಾ ಮಾಡಬಹುದು.
• ಇದರಿಂದಾಗುವ ಪರಿಣಾಮ – ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣವನ್ನು ಜಮಾ ಮಾಡಿದರೆ ಆದಾಯ ತೆರಿಗೆ ಇಲಾಖೆಯವರಿಗೆ ಮಾಹಿತಿ ಸಿಗುತ್ತದೆ.
ಸರಿಯಾದ ವಿವರಣೆ ನೀಡದಿದ್ದರೆ 84% ದಂಡ ಮತ್ತು ತೆರಿಗೆ ವಿಧಿಸುವ ಸಾಧ್ಯತೆ ಇರುತ್ತದೆ.
2. ನಗದು ಹಣ ಹಿಂಪಡೆಯುವಿಕೆ ಮತ್ತು TDS /Cash Withdrawal & TDS:-
* ಐಟಿ ರಿಟರ್ನ್ಸ್ ಸಲ್ಲಿಸದವರಿಗೆ – ಒಂದು ವರ್ಷಕ್ಕೆ ₹20 ಲಕ್ಷಕ್ಕಿಂತ ಹೆಚ್ಚು ನಗದು ಹಣವನ್ನು ಹಿಂಪಡೆದರೆ 2% TDS ಕಡಿತವಾಗುತ್ತದೆ.
• ಗರಿಷ್ಠ ಮಿತಿ – ಒಂದು ವರ್ಷಕ್ಕೆ ₹1 ಕೋಟಿಗಿಂತ ಹೆಚ್ಚು ನಗದು ಹಣವನ್ನು ಹಿಂಪಡೆದರೆ 5% TDS ಅನ್ವಯವಾಗುತ್ತದೆ.
3. ನಗದು ವ್ಯವಹಾರದ ಮೇಲಿನ ದಂಡ /Penalties on Cash Transactions:-
* ವ್ಯಾಪಾರ ಮಾಡುವವರಿಗೆ -ಒಬ್ಬ ವ್ಯಕ್ತಿಯಿಂದ ಒಂದು ದಿನದಲ್ಲಿ ₹2 ಲಕ್ಷಕ್ಕಿಂತ ಹೆಚ್ಚು ನಗದು ಹಣವನ್ನು ಪಡೆಯುವಂತಿಲ್ಲ (ಸೆಕ್ಷನ್ 269ST). ಒಂದು ವೇಳೆ ಪಡೆದರೆ, ಪಡೆದ ಹಣಕ್ಕೆ ಸಮನಾದ (100%) ದಂಡವನ್ನು ಹಾಕಲಾಗುತ್ತದೆ.
• ಆಸ್ತಿಯನ್ನು ಕೊಳ್ಳುವಾಗ ಅಥವಾ ಮಾರುವಾಗ ₹20,000ಕ್ಕಿಂತ ಹೆಚ್ಚು ನಗದು ಹಣವನ್ನು ನೀಡುವಂತಿಲ್ಲ ಅಥವಾ ಪಡೆಯುವಂತಿಲ್ಲ.
* ಸಾಲವನ್ನು ಪಡೆಯುವಾಗ ಅಥವಾ ಮರುಪಾವತಿ ಮಾಡುವಾಗ ₹20,000 ಮೀರಿದರೆ 100% ದಂಡವನ್ನು ವಿಧಿಸಲಾಗುತ್ತದೆ.
• ಬಾಡಿಗೆ ಮತ್ತು ಡಿಪಾಸಿಟ್ – ಮನೆ ಅಥವಾ ಕಚೇರಿಯ ಬಾಡಿಗೆಗೆ ಸಂಬಂಧಿಸಿದಂತೆ ₹20,000ಕ್ಕಿಂತ ಹೆಚ್ಚು ಹಣವನ್ನು ಸೆಕ್ಯೂರಿಟಿ ಡಿಪಾಸಿಟ್ ಅಥವಾ ಮುಂಗಡವಾಗಿ ನಗದು ರೂಪದಲ್ಲಿ ಪಡೆಯುವಂತಿಲ್ಲ.
4. ಶಿಕ್ಷಣ ಮತ್ತು ಇತರ ಭತ್ಯೆಗಳ ಏರಿಕೆ /Increase in Allowances:-
* ಮಕ್ಕಳ ಶಿಕ್ಷಣ ಭತ್ಯೆ (Children Education Allowance) ಕಡಿತದ ಮಿತಿಯನ್ನು ತಿಂಗಳಿಗೆ ₹100 ರಿಂದ ₹1,000ಕ್ಕೆ ಹೆಚ್ಚಿಸಲಾಗಿದೆ.
• ಹಾಸ್ಟೆಲ್ ಭತ್ಯೆ (Hostel Allowance) ತಿಂಗಳಿಗೆ ₹300 ರಿಂದ ₹3,000ಕ್ಕೆ ಏರಿಕೆ ಮಾಡಲಾಗಿದೆ.
5. ಊಟದ ಕೂಪನ್ ಮತ್ತು ತೆರಿಗೆ ವಿನಾಯಿತಿ /Meal Coupons & Tax Exemption:-
* ಕೆಲಸ ಮಾಡುವವರಿಗೆ ನೀಡುವ ಸೋಡೆಕ್ಸೋ (Sodexo) ಅಂತಹ ಊಟದ ಕೂಪನ್‌ಗಳ ಮಿತಿಯನ್ನು ಹೆಚ್ಚಿಸಲಾಗಿದೆ.
• ಈ ಮೊದಲು ಇದ್ದ ₹50 ರ ಮಿತಿಯನ್ನು ಈಗ ದಿನಕ್ಕೆ ₹200 ಕ್ಕೆ (ದಿನಕ್ಕೆ 2 ಕೂಪನ್‌ನಂತೆ ₹400) ಹೆಚ್ಚಿಸಲಾಗಿದೆ. ಇದು ತೆರಿಗೆಯಿಂದ ವಿನಾಯಿತಿ ಹೊಂದಿರುತ್ತದೆ.
ಜನಸಾಮಾನ್ಯರಿಗೆ ಗುಡ್ ನ್ಯೂಸ್:-
Good News for Commoners:-
ನಗದು ವ್ಯವಹಾರಕ್ಕೆ ಮಿತಿ ಇರುವುದರಿಂದ, ದೊಡ್ಡ ಮೊತ್ತದ ಹಣ ಬಳಸುವವರಿಗೆ ಕಷ್ಟವಾಗುತ್ತದೆ. ಆಸ್ತಿ ಖರೀದಿ ಅಥವಾ ಸಾಲದ ವ್ಯವಹಾರದಲ್ಲಿ ₹20,000 ಮೀರಿದರೆ ದಂಡ ಕಟ್ಟಬೇಕು.
ಇದರಿಂದ ಬ್ಯಾಂಕಿಂಗ್ ಅಥವಾ ಡಿಜಿಟಲ್ ಪಾವತಿ ಅನಿವಾರ್ಯವಾಗುತ್ತದೆ. ಆದರೆ, ಶಿಕ್ಷಣ ಭತ್ಯೆ ಮತ್ತು ಊಟದ ಕೂಪನ್‌ಗಳ ಮಿತಿ ಹೆಚ್ಚಿಸಿರುವುದರಿಂದ ನೌಕರರಿಗೆ ತೆರಿಗೆ ವಿನಾಯಿತಿ ಸಿಗುತ್ತದೆ.
ಇದು ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಿ ಪಾರದರ್ಶಕತೆ ಹೆಚ್ಚಿಸುತ್ತದೆ. ಬ್ಯಾಂಕ್ ಮೂಲಕ ವ್ಯವಹಾರ ನಡೆದರೆ ಕಪ್ಪು ಹಣದ ಹರಿವು ಕಡಿಮೆಯಾಗಿ, ತೆರಿಗೆ ವಂಚನೆ ತಡೆಯಲು ಸಹಕಾರಿಯಾಗುತ್ತದೆ.
ಬ್ಯಾಂಕಿಂಗ್ ವ್ಯವಹಾರ ಹೆಚ್ಚಾದಂತೆ ಸಾಲ ಸೌಲಭ್ಯಗಳು ಸುಲಭವಾಗಿ ಸಿಗುತ್ತವೆ. ಇದು ಭ್ರಷ್ಟಾಚಾರ ತಡೆದು ದೇಶದ ಆರ್ಥಿಕ ಶಕ್ತಿ ಬಲಪಡಿಸಲು ಸಹಕಾರಿಯಾಗಲಿದೆ.
Cash transaction limits will affect those using large sums. Property/loan transactions exceeding ₹20,000 incur penalties, necessitating banking or digital payments.
Increased education allowance/meal coupon limits offer tax exemptions to salaried employees.
This promotes a digital economy and transparency. Bank transactions reduce black money and tax evasion.
Increased banking activity eases loan access due to financial documentation, curbing corruption and strengthening the economy.
ಧನ್ಯವಾದಗಳು
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
