"Agriculture is our CULTURE"

New Rules for Fertilizer Purchase:: 2026ನೇ ಸಾಲಿನಲ್ಲಿ ರಸಗೊಬ್ಬರ ಕೊಂಡುಕೊಳ್ಳಲು ರೈತರಿಗೆ ಹೊಸ ರೂಲ್ಸ್!! ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ಗೊಬ್ಬರ!!

Central and State Government’s New Rules for Fertilizer Purchase 2026; FID and FRUITS ID Mandatory for All Farmers!!

2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದ ರೈತರು ರಸಗೊಬ್ಬರವನ್ನು ಪಡೆಯಲು ಅನುಸರಿಸಬೇಕಾದ ಹೊಸ ನಿಯಮಗಳ ಬಗ್ಗೆ ಮಾಹಿತಿ.

ಈ ವಿವರಗಳು ಕೃಷಿ ಇಲಾಖೆ ಹಾಗೂ ರಾಜ್ಯ ಸರ್ಕಾರವು ಹೊರಡಿಸಿರುವ ಇತ್ತೀಚಿನ ಮಾರ್ಗಸೂಚಿಗಳು ::

ಹೊಸ ನಿಯಮಗಳ ಉದ್ದೇಶಗಳು:-

Objective of New Rules:-

* ಈ ಹೊಸ ನಿಯಮಗಳನ್ನು ಜಾರಿಗೆ ತರುವ ಮುಖ್ಯ ಉದ್ದೇಶವೆಂದರೆ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು,

ರಸಗೊಬ್ಬರ ಮಾಫಿಯಾ ಮತ್ತು ಕಾಳಸಂತೆಯಲ್ಲಿ ನಡೆಯುವ ಮಾರಾಟವನ್ನು ತಡೆಗಟ್ಟುವುದು, ಹಾಗೂ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ದೊರೆಯುವ ಗೊಬ್ಬರವು ಅರ್ಹ ರೈತರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವುದು.

ಕಡ್ಡಾಯವಾಗಿ ಬೇಕಾದ ದಾಖಲೆಗಳು:-

Mandatory Documents:-

* ರೈತರು ರಸಗೊಬ್ಬರವನ್ನು ಖರೀದಿಸುವಾಗ ಕೇವಲ ಆಧಾರ್ ಕಾರ್ಡ್‌ನ್ನು ಮಾತ್ರ ನೀಡಿದರೆ ಸಾಕಾಗುವುದಿಲ್ಲ. ಇದರ ಜೊತೆಗೆ ಕೆಳಗೆ ತಿಳಿಸಿರುವ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು:

FID (Farmer Identification) ಸಂಖ್ಯೆ – ಇದು ಪ್ರತಿಯೊಬ್ಬ ರೈತನಿಗೂ ನೀಡಲಾಗುವ ಒಂದು ವಿಶಿಷ್ಟವಾದ ಗುರುತಿನ ಸಂಖ್ಯೆಯಾಗಿದೆ.

* FRUITS ಐಡಿ – ರೈತರು ‘ಫ್ರೂಟ್ಸ್‘ (Farmer Registration and Unified Beneficiary Information System) ಪೋರ್ಟಲ್‌ನಲ್ಲಿ ನೊಂದಾಯಿಸಿದ ಮಾಹಿತಿಯ ಐಡಿಯಾಗಿದೆ.

ಆಧಾರ್ ಕಾರ್ಡ್ – ಇದು FID ಸಂಖ್ಯೆಯೊಂದಿಗೆ ಜೋಡಣೆಯಾಗಿರಬೇಕು.

ಭೂಮಿಯ ಆಧಾರದ ಮೇಲೆ ವಿತರಣಾ ವ್ಯವಸ್ಥೆ:-

Land-Based Distribution System:-

* ಕೆ-ಕಿಸಾನ್ (K-Kisan) ತಂತ್ರಾಂಶ – ರಸಗೊಬ್ಬರ ವಿತರಣೆಗಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾದ ತಂತ್ರಾಂಶ ಇದಾಗಿದೆ. ಈ ತಂತ್ರಾಂಶದ ಮೂಲಕವೇ ಗೊಬ್ಬರ ವಿತರಣೆ ಪ್ರಕ್ರಿಯೆ ನಡೆಯುತ್ತದೆ.

ಗೊಬ್ಬರದ ಪ್ರಮಾಣದ ನಿಗದಿ – ರೈತರ ಹೆಸರಿನಲ್ಲಿರುವ ಜಮೀನಿನ ವಿಸ್ತೀರ್ಣ ಎಷ್ಟಿದೆ ಮತ್ತು ಅವರು ಯಾವ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂಬುದನ್ನು ಆಧರಿಸಿ ಗೊಬ್ಬರವನ್ನು ವಿತರಿಸಲಾಗುತ್ತದೆ.

ಉದಾಹರಣೆಗೆ: ಒಂದು ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರವನ್ನು ಮಾತ್ರ ನೀಡುವ ಮಿತಿಯನ್ನು ವಿಧಿಸಲಾಗಿದೆ.

ಪಿಒಎಸ್ (POS) ಯಂತ್ರದ ಬಳಕೆ – ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಪಿಒಎಸ್ (Point of Sale) ಯಂತ್ರದ ಮೂಲಕವೇ ಗೊಬ್ಬರವನ್ನು ವಿತರಿಸಬೇಕು.

ಎಫ್‌ಐಡಿ (FID) ಪಡೆಯುವ ವಿಧಾನ:-

Process to get FID:-

ಇನ್ನೂ ಎಫ್‌ಐಡಿ (FID) ಹೊಂದಿರದ ರೈತರು ಈ ಕೆಳಗಿನ ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಗ್ರಾಮ ಒನ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಬೇಕು:

1.ಪಹಣಿ (RTC)

2.ಆಧಾರ್ ಕಾರ್ಡ್

3.ಬ್ಯಾಂಕ್ ಪಾಸ್ ಪುಸ್ತಕ

ಕಾನೂನು ಕ್ರಮಗಳು ಮತ್ತು ಎಚ್ಚರಿಕೆಗಳು:-

Legal Action & Warning:-

ಅಕ್ರಮ ದಾಸ್ತಾನು – ರೈತರಲ್ಲದ ವ್ಯಕ್ತಿಗಳು ರಸಗೊಬ್ಬರವನ್ನು ಸಂಗ್ರಹಿಸಿಟ್ಟರೆ ಅಥವಾ ಕೃತಕ ಅಭಾವವನ್ನು ಸೃಷ್ಟಿಸಿದರೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

* ಜೈಲು ಶಿಕ್ಷೆ – ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ‘ರಸಗೊಬ್ಬರ ನಿಯಂತ್ರಣ ಆದೇಶ 1985′ ಮತ್ತು ‘ಅಗತ್ಯ ವಸ್ತುಗಳ ಕಾಯ್ದೆ 1955‘ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಮಾರಾಟಗಾರರಿಗೆ ಸೂಚನೆ – ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರವನ್ನು ಮಾರಾಟ ಮಾಡುವುದು ಅಥವಾ ಗೊಬ್ಬರದ ಜೊತೆಗೆ ಬೇರೆ ಬೇರೆ ಕೃಷಿ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ರೈತರ ಮೇಲೆ ಒತ್ತಡ ಹೇರುವುದು ಅಪರಾಧವಾಗುತ್ತದೆ.

ಪಾರದರ್ಶಕ ವಿತರಣೆ – ಮಧ್ಯವರ್ತಿಗಳ ಹಾವಳಿಗೆ ಮುಕ್ತಿ:-

Transparent Distribution – End of Middlemen Era:-

ರಸಗೊಬ್ಬರ ಹಂಚುವಾಗ ಎಫ್‌ಐಡಿ (FID) ಮತ್ತು ಫ್ರೂಟ್ಸ್ ಐಡಿ (FRUITS ID) ಕಡ್ಡಾಯ ಮಾಡಿದರೆ, ನಿಜವಾದ ರೈತರಿಗೆ ಮಾತ್ರ ಸಬ್ಸಿಡಿ ರೇಟ್‌ನಲ್ಲಿ ಗೊಬ್ಬರ ಸಿಗುತ್ತದೆ. ಇದರಿಂದ ಮಧ್ಯದಲ್ಲಿ ಬರುವವರ ಕಾಟ ತಪ್ಪುತ್ತದೆ.

ಸುಳ್ಳು ದಾಖಲೆ ಬಳಸಿ ಗೊಬ್ಬರವನ್ನು ಕದ್ದು ಮಾರಾಟ ಮಾಡುವ ದಂಧೆಗೆ ಕಡಿವಾಣ ಬೀಳುತ್ತದೆ. ಕೃಷಿ ಕೆಲಸಕ್ಕೆ ಅಲ್ಲದೆ ಬೇರೆ ಉದ್ದೇಶಕ್ಕೆ ಅಥವಾ ಕಾರ್ಖಾನೆಗಳಿಗೆ ಗೊಬ್ಬರ ಹೋಗುವುದು ತಪ್ಪುತ್ತದೆ.

ಮುಂಗಾರು ಟೈಮಲ್ಲಿ ಗೊಬ್ಬರದ ಅಭಾವ ಉಂಟಾಗುವುದು ಕಡಿಮೆಯಾಗುತ್ತದೆ. ಜಮೀನಿನ ವಿಸ್ತೀರ್ತಿಗೆ ತಕ್ಕಷ್ಟು ಗೊಬ್ಬರ ಹಂಚುವುದರಿಂದ ರೈತರು ಜಾಸ್ತಿ ಗೊಬ್ಬರ ಕೊಂಡು ದುಡ್ಡು ಹಾಳು ಮಾಡುವುದು ತಪ್ಪುತ್ತದೆ ಮತ್ತು ಭೂಮಿ ಆರೋಗ್ಯವಾಗಿ ಇರುತ್ತದೆ.

ಮುಖ್ಯವಾಗಿ ಪಿಓಎಸ್ (POS) ಮಿಷನ್ ಬಳಸುವುದರಿಂದ ಸರ್ಕಾರ ನಿಗದಿ ಮಾಡಿದ ರೇಟ್‌ನಲ್ಲೇ ಗೊಬ್ಬರ ಸಿಗುತ್ತದೆ. ರೈತರು ಜಾಸ್ತಿ ದುಡ್ಡು ಕೊಟ್ಟು ಮೋಸ ಹೋಗುವುದು ತಪ್ಪುತ್ತದೆ.

Mandatory FID and FRUITS ID for fertilizer distribution ensures only genuine farmers receive subsidized fertilizers, eliminating middlemen and black market sales via forged documents.

This prevents subsidized fertilizer diversion, reducing artificial Kharif season scarcity. Distribution based on land size discourages over-purchasing,

Saving farmers money and protecting soil health. Compulsory POS machine use ensures sales at government-fixed rates, protecting farmers from overcharging.

Thank you.

Best Product in Amazon Online shopping based on our Live usage:: 

ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.

Click below link to purchase it

https://amzn.to/3PCyXxq

We are using this washing machine since many year, best washing machine for daily use dress.

Thank you

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"