10 Best Mileage Bike’s :: ಅತಿ ಹೆಚ್ಚು ಮೈಲೇಜ್ ನೀಡುವ 10 ಬೈಕ್!! ಸ್ಮಾರ್ಟ್ ರೈಡ್, ಯಾವುದು ಹೆಚ್ಚು ಬಾಳಿಕೆ?
Smart Rides, Big Savings – The Best Mileage Bikes of 2026!!
ಇತ್ತೀಚಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ ಬೈಕ್‌ಗಳ ಬಗ್ಗೆ ಮಾಹಿತಿ,ಹೊಸ ವರ್ಷದಲ್ಲಿ ಬೈಕ್ ಖರೀದಿಸಲು ಬಯಸುವವರಿಗೆ ಮತ್ತು ಮೈಲೇಜ್ ಬಗ್ಗೆ.
ಪ್ರಮುಖ ಬೈಕ್‌ಗಳ ವಿವರಗಳು ಇಲ್ಲಿವೆ:-
Important bikes details:-
• ಬಜಾಜ್ ಪ್ಲಾಟಿನ 100 (Bajaj Platina 100) – ಇದನ್ನು ಮೈಲೇಜ್‌ನ ರಾಜ ಎಂದು ಕರೆಯುತ್ತಾರೆ. ಇದು 102 ಸಿಸಿ ಇಂಜಿನ್ ಹೊಂದಿದ್ದು, ಸುಮಾರು 75 ರಿಂದ 80 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಆನ್-ರೋಡ್ ಬೆಲೆ ಸರಿಸುಮಾರು ₹87,000 ದಿಂದ ₹90,000 ಗಳವರೆಗೆ ಇರುತ್ತದೆ.
• ಟಿವಿಎಸ್ ಸ್ಪೋರ್ಟ್ (TVS Sport) – ಇದು 109.7 ಸಿಸಿ ಇಂಜಿನ್ ಸಾಮರ್ಥ್ಯವನ್ನು ಹೊಂದಿದ್ದು, 70 ರಿಂದ 75 ಕಿ.ಮೀ ಮೈಲೇಜ್ ಕೊಡುತ್ತದೆ. ಕಡಿಮೆ ತೂಕವನ್ನು ಹೊಂದಿದ್ದು, ಕೇವಲ ಮೈಲೇಜ್ ಬಯಸುವವರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ.
ಇದರ ಬೆಲೆ ₹75,000 ದಿಂದ ₹80,000 ಗಳ ಒಳಗಡೆ ಇರುತ್ತದೆ.
* ಹೀರೋ ಹೆಚ್‌ಎಫ್ ಡಿಲಕ್ಸ್ (Hero HF Deluxe) – ಅತಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಇದು ಒಂದಾಗಿದೆ. ಇದು 97.2 ಸಿಸಿ ಇಂಜಿನ್ ಅನ್ನು ಹೊಂದಿದೆ. 65 ರಿಂದ 70 ಕಿ.ಮೀ ಮೈಲೇಜ್ ನೀಡಲಿದ್ದು, ಇದರ ಬೆಲೆ ಕೇವಲ ₹65,000 ದಿಂದ ಪ್ರಾರಂಭವಾಗುತ್ತದೆ.
ಇದರಲ್ಲಿ ಈಗ ಆಟೋಮ್ಯಾಟಿಕ್ ಸ್ವಿಚ್ ಆಫ್ ಟೆಕ್ನಾಲಜಿಯನ್ನು ಸಹ ನೀಡಲಾಗಿದೆ.
• ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ (TVS Star City Plus) – ಮೈಲೇಜ್ ಜೊತೆಗೆ ಎಲ್‌ಇಡಿ ಹೆಡ್‌ಲೈಟ್‌ನಂತಹ ಪ್ರೀಮಿಯಂ ಲುಕ್ ಬಯಸುವವರಿಗೆ ಇದು ಹೇಳಿಮಾಡಿಸಿದಂತಿದೆ. ಇದು ಸರಿಸುಮಾರು 70-75 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಆನ್-ರೋಡ್ ಬೆಲೆ ಅಂದಾಜು ₹86,000 ಇದೆ.
* ಬಜಾಜ್ ಸಿಟಿ 110 (Bajaj CT 110)- ಇದು ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಸೂಕ್ತವಾದ ಬೈಕ್ ಆಗಿದೆ. 115 ಸಿಸಿ ಇಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್ ಬಾಕ್ಸ್ ಇದರ ವಿಶೇಷತೆಯಾಗಿದೆ. ಇದು 70 ಕಿ.ಮೀ ಮೈಲೇಜ್ ನೀಡುತ್ತದೆ ಮತ್ತು ಇದರ ಬೆಲೆ ₹85,000 ದಿಂದ ₹89,000 ಗಳವರೆಗೆ ಇರುತ್ತದೆ.
• ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ (Hero Splendor+ XTEC) – ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಮತ್ತು ಕಾಲ್/ಎಸ್‌ಎಂಎಸ್ ಅಲರ್ಟ್‌ನಂತಹ ಆಧುನಿಕ ಫೀಚರ್‌ಗಳನ್ನು ಇದು ಒಳಗೊಂಡಿದೆ.
65 ರಿಂದ 70 ಕಿ.ಮೀ ಮೈಲೇಜ್ ನೀಡಲಿದ್ದು, ಇದರ ಬೆಲೆ ಸುಮಾರು ₹97,000 ದಿಂದ ₹1 ಲಕ್ಷದವರೆಗೆ ಇದೆ.
ಹೋಂಡಾ ಶೈನ್ 100 (Honda Shine 100) –
ಹೋಂಡಾ ಇಂಜಿನ್ ತನ್ನ ಸ್ಮೂತ್‌ನೆಸ್‌ಗೆ ಹೆಸರುವಾಸಿಯಾಗಿದೆ. 98 ಸಿಸಿ ಇಂಜಿನ್ ಹೊಂದಿದ್ದು, 65-70 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಆನ್-ರೋಡ್ ಬೆಲೆ ಅಂದಾಜು ₹83,000 ಇದೆ.
• ಹೋಂಡಾ ಎಸ್‌ಪಿ 125 (Honda SP 125) – ಸ್ವಲ್ಪ ಹೆಚ್ಚು ಪವರ್ ಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. 124 ಸಿಸಿ ಇಂಜಿನ್ ಹೊಂದಿದ್ದರೂ ಸಹ 63 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಬೆಲೆ ಸರಿಸುಮಾರು ₹1,08,000 ಗಳವರೆಗೆ ಇರುತ್ತದೆ.
* ಟಿವಿಎಸ್ ರೇಡಿಯನ್ (TVS Radeon) – ಇದು ಮೆಟಲ್ ಬಾಡಿ ಮತ್ತು ಗಟ್ಟಿಮುಟ್ಟಾದ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಇದು 62 ಕಿ.ಮೀ ಮೈಲೇಜ್ ನೀಡಲಿದ್ದು, ಇದರ ಬೆಲೆ ₹84,500 ಎಂದು ಅಂದಾಜಿಸಲಾಗಿದೆ.
• ಬಜಾಜ್ ಪ್ಲಾಟಿನ 110 (Bajaj Platina 110)- ಇದರಲ್ಲಿ ಎಬಿಎಸ್ (ABS) ಬ್ರೇಕಿಂಗ್ ಸಿಸ್ಟಮ್ ಇದ್ದು, ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದು 70 ರಿಂದ 75 ಕಿ.ಮೀ ಮೈಲೇಜ್ ನೀಡುತ್ತದೆ.
ಹೆಚ್ಚು ಮೈಲೇಜ್, ಕಡಿಮೆ ಖರ್ಚು:-
Maximum Miles, Minimum Cost:-
ಈ ಎಲ್ಲಾ ಬೆಲೆಗಳು ಜಿಲ್ಲೆಯಿಂದ ಜಿಲ್ಲೆಗೆ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಾಗಬಹುದು. ನಿಮ್ಮ ಬಜೆಟ್ ಮತ್ತು ಫೀಚರ್‌ಗಳ ಅಗತ್ಯಕ್ಕೆ ಅನುಗುಣವಾಗಿ ನೀವು ಸೂಕ್ತವಾದ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ವಿಶೇಷವಾಗಿ ಮಧ್ಯಮ ವರ್ಗದವರಿಗೆ ಇದು ಸಹಕಾರಿ.
ಪೆಟ್ರೋಲ್ ಬೆಲೆ ಏರಿಕೆಯಲ್ಲಿ, ಹೆಚ್ಚು ಮೈಲೇಜ್ ನೀಡುವ ಬೈಕ್‌ಗಳ ಮಾಹಿತಿ ಜನರ ಓಡಾಟದ ಖರ್ಚು ಕಡಿಮೆಮಾಡಲು ಸಾಧ್ಯವಾಗುತ್ತದೆ. ಮೈಲೇಜ್ ಮಾತ್ರವಲ್ಲದೆ, ಬೈಕಿನ ಇಂಜಿನ್ ಸಾಮರ್ಥ್ಯ,
ಬೆಲೆ ಮತ್ತು ಆಧುನಿಕ ತಾಂತ್ರಿಕತೆಗಳ ವಿವರ ಇರುವುದರಿಂದ ಗ್ರಾಹಕರು ಬಜೆಟ್‌ಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಬಹುದು. ಹಳ್ಳಿಗಳ ರಸ್ತೆಗಳಿಗೆ ಯಾವ ಬೈಕ್ ಉತ್ತಮ ಅಥವಾ ನಗರ ಪ್ರದೇಶದ ಟ್ರಾಫಿಕ್‌ನಲ್ಲಿ ಆಫೀಸ್‌ಗೆ ಹೋಗಲು ಯಾವುದು ಸೂಕ್ತ ಎಂಬ ಸ್ಪಷ್ಟತೆ ಇರುತ್ತದೆ.
ಸಾಮಾನ್ಯ ಜನರು ದುಡಿದ ಹಣ ವ್ಯರ್ಥ ಮಾಡದೆ, ಬಾಳಿಕೆ ಬರುವ ವಾಹನ ಆಯ್ಕೆ ಮಾಡಲು ಈ ಮಾಹಿತಿ ಸಹಾಯಕ.
Bike Selection
This information is especially helpful for the middle class. With rising petrol prices, high-mileage bike details help people reduce commuting costs. Engine capacity, pricing, and features enable budget-based decisions.
It clarifies the best bike for village roads or city commutes, helping people avoid wasting money and choose a durable vehicle.
ಧನ್ಯವಾದಗಳು
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
