
April 1st New Rules in Banking :: ಯುಪಿಐ ಮತ್ತು ಡಿಜಿಟಲ್ ಪಾವತಿಗಳಲ್ಲಿ 8 ನೂತನ ಸುರಕ್ಷತಾ ನಿಯಮಗಳು!!!
ಏಪ್ರಿಲ್ 1 ರಿಂದ ಫೋನ್ ಪೇ, ಗೂಗಲ್ ಪೇ ರೂಲ್ಸ್ ಚೇಂಜ್, RBI ತಂದ ಹೊಸ ನಿಯಮ ಏನು?
PhonePe, Google Pay rules to change from April 1st; what is the new rule brought by the RBI?
ಏಪ್ರಿಲ್ 1ರ ಅಲರ್ಟ್ – 2026ರಲ್ಲಿ ಜಾರಿಯಾಗಲಿರುವ ಪ್ರಮುಖ ಆರ್ಥಿಕ ಬದಲಾವಣೆಗಳು!!
April 1st Alert – Major Financial Changes in 2026
ಏಪ್ರಿಲ್ 1, 2026 ರಿಂದ ಅನುಷ್ಠಾನಗೊಳ್ಳಲಿರುವ ಆರ್‌ಬಿಐ (RBI)ನ ನೂತನ ಡಿಜಿಟಲ್ ಪಾವತಿ ನಿಯಮಾಗಳು ಹಾಗೂ ಇತರ ಹಣಕಾಸಿನ ಬದಲಾವಣೆಗಳ ಕುರಿತು!!
ಯುಪಿಐ ಮತ್ತು ಡಿಜಿಟಲ್ ಪಾವತಿಗಳಲ್ಲಿ 8 ನೂತನ ಸುರಕ್ಷತಾ ನಿಯಮಗಳು:-
8 New RBI Security Rules for UPI and Digital Payments:-
* ಡೈನಾಮಿಕ್ ಟೂ-ಫ್ಯಾಕ್ಟರ್ ಅಥೆಂಟಿಕೇಶನ್/Dynamic Two-Factor Authentication – ಇನ್ಮುಂದೆ ಕೇವಲ ಓಟಿಪಿ (OTP) ಮಾತ್ರ ಸಮರ್ಪಕವಾಗುವುದಿಲ್ಲ. ಓಟಿಪಿಯೊಂದಿಗೆ ಬೆರಳಚ್ಚು ಅಥವಾ ಗುಪ್ತಪದ ಕಡ್ಡಾಯವಾಗಿರತಕ್ಕದ್ದು.
ಸಿಸ್ಟಮ್ ನಿಮ್ಮ ಭೌಗೋಳಿಕ ಸ್ಥಾನವನ್ನು ಸಹ ಟ್ರ್ಯಾಕ್ ಮಾಡುತ್ತದೆ.
• ಸ್ಕ್ರೀನ್ ರೆಕಾರ್ಡಿಂಗ್ ಮತ್ತು ಸ್ಕ್ರೀನ್ ಶಾಟ್ ನಿಷೇಧ / Screen Recording and Screenshot Ban – ಬ್ಯಾಂಕಿಂಗ್ ಆಪ್‌ಗಳ ಒಳಗೆ ಸ್ಕ್ರೀನ್ ರೆಕಾರ್ಡ್ ಮಾಡಲು ಅಥವಾ ಸ್ಕ್ರೀನ್ ಶಾಟ್ ಪಡೆಯುವುದನ್ನು ನಿರ್ಬಂಧಿಸಲಾಗುತ್ತದೆ.
* ರಾತ್ರಿ ಸಮಯದ ವಹಿವಾಟು ಲಾಕ್ /Night Time Transaction Lock – ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ರೀತಿಯ ವಹಿವಾಟು ನಡೆಯದಂತೆ ಸ್ವಯಂ ಆಗಿ ಲಾಕ್ ಮಾಡಿಕೊಳ್ಳಬಹುದು.
• ಮಾಲ್ವೇರ್ ಎಚ್ಚರಿಕೆ /Malware Warning System – ನಿಮ್ಮ ಫೋನಿನಲ್ಲಿ ಯಾವುದಾದರೂ ಅಪಾಯಕಾರಿಯಾದ ಅಥವಾ ವಂಚನೆಯ ಆಪ್‌ಗಳಿದ್ದರೆ ಬ್ಯಾಂಕಿಂಗ್ ಆಪ್ ತಕ್ಷಣ ಎಚ್ಚರಿಸುತ್ತದೆ ಮತ್ತು ಆ ಆಪ್ ಅನ್ನು ಡಿಲೀಟ್ ಮಾಡುವವರೆಗೂ ಹಣ ಪಾವತಿಸಲು ಅನುಮತಿಸುವುದಿಲ್ಲ.
* ಇನ್-ಆಪ್ ಓಟಿಪಿ ಸಿಸ್ಟಮ್ / In-App OTP System – ಓಟಿಪಿಗಳು ಇನ್ಮುಂದೆ ಸಾಮಾನ್ಯವಾಗಿ ಬರುವ ಸಂದೇಶಗಳ ಮೂಲಕ ಬರುವುದಿಲ್ಲ, ಬದಲಾಗಿ ಬ್ಯಾಂಕಿಂಗ್ ಆಪ್‌ನ ಒಳಗಡೆಯೇ ಉತ್ಪತ್ತಿಯಾಗುತ್ತವೆ.
• ವರ್ತನೆ ಆಧಾರಿತ ಭದ್ರತೆ / Behavior-Based Security Questions – ನಿಮ್ಮ ದಿನನಿತ್ಯದ ವಹಿವಾಟಿನ ಮಿತಿಗಿಂತ ಹೆಚ್ಚಿನ ಮೊತ್ತವನ್ನು ವರ್ಗಾವಣೆ ಮಾಡಲು ಪ್ರಯತ್ನಿಸಿದರೆ, ಸಿಸ್ಟಮ್ ಕೆಲವು ವೈಯಕ್ತಿಕ ಭದ್ರತಾ ಪ್ರಶ್ನೆಗಳನ್ನು ಕೇಳುತ್ತದೆ.
* ವರ್ತನೆಯ ಬಯೋಮೆಟ್ರಿಕ್ಸ್/ Behavioral Biometrics – ನೀವು ಫೋನ್ ಹಿಡಿಯುವ ರೀತಿ ಮತ್ತು ಟೈಪ್ ಮಾಡುವ ವೇಗವನ್ನು ಅಪ್ಲಿಕೇಶನ್ ಗಮನಿಸುತ್ತದೆ. ಇದರಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಪಾವತಿಯನ್ನು ತಡೆಯಲಾಗುತ್ತದೆ.
• ಆಧಾರ್ ಮತ್ತು ಫೇಸ್ ಸ್ಕ್ಯಾನ್ ಕಡ್ಡಾಯ/ Mandatory Aadhaar and Face Scan – ದೊಡ್ಡ ಮೊತ್ತದ (ಉದಾಹರಣೆಗೆ 5-10 ಲಕ್ಷ ರೂ.) ವರ್ಗಾವಣೆಗೆ ಆಧಾರ್ ಲಿಂಕ್ ಮತ್ತು ಮುಖದ ಸ್ಕ್ಯಾನ್ ಅಥವಾ ಬೆರಳಚ್ಚು ಕಡ್ಡಾಯವಾಗಿರುತ್ತದೆ.
ಇತರ ಪ್ರಮುಖ ಹಣಕಾಸು ಬದಲಾವಣೆಗಳು:-
Major Economic and Administrative Change:-
• ಆದಾಯ ತೆರಿಗೆ / Income Tax Reform – 1961ರ ಕಾಯ್ದೆಯ ಬದಲು ‘ಆದಾಯ ತೆರಿಗೆ ಕಾಯ್ದೆ 2025‘ ಜಾರಿಗೆ ಬರಲಿದೆ. ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ವರ್ಷಕ್ಕೆ 12 ಲಕ್ಷ ರೂಪಾಯಿಗಳವರೆಗೆ ಆದಾಯ ಇರುವವರಿಗೆ ಯಾವುದೇ ತೆರಿಗೆ ಇರುವುದಿಲ್ಲ.
* ಪ್ಯಾನ್ ಕಾರ್ಡ್/ New PAN Card Requirements – ಪ್ಯಾನ್ ಕಾರ್ಡ್ ಪಡೆಯಲು ಇನ್ಮುಂದೆ ಕೇವಲ ಆಧಾರ್ ಮಾತ್ರ ಸಾಕಾಗುವುದಿಲ್ಲ, ಜನ್ಮ ದಿನಾಂಕದ ದೃಢೀಕರಣಕ್ಕಾಗಿ 10ನೇ ತರಗತಿಯ ಅಂಕಪಟ್ಟಿ ಅಥವಾ ಪಾಸ್‌ಪೋರ್ಟ್ ಕಡ್ಡಾಯವಾಗಿ ಬೇಕಾಗುತ್ತದೆ.
• ಬೆಲೆ ಏರಿಕೆ / Price Hikes – ಎಲ್‌ಪಿಜಿ ಸಿಲಿಂಡರ್, ಸಿಎನ್‌ಜಿ ಮತ್ತು ವಿಮಾನ ಇಂಧನದ ದರಗಳಲ್ಲಿ ಹೆಚ್ಚಳವಾಗುವ ಸಂಭವವಿದೆ.
* ಎಟಿಎಂ ನಿಯಮ / ATM Usage Limits – ಎಟಿಎಂನಿಂದ ಹಣ ಪಡೆಯುವ ಉಚಿತ ಮಿತಿಯನ್ನು ಮೀರಿದರೆ ಶುಲ್ಕವನ್ನು ವಿಧಿಸಲಾಗುತ್ತದೆ. ಖಾತೆಯಲ್ಲಿ ಹಣವಿಲ್ಲದೆ ವಹಿವಾಟು ವಿಫಲವಾದಲ್ಲಿ ದಂಡವನ್ನು ಪಾವತಿಸಬೇಕಾಗುತ್ತದೆ.
• ರೈಲ್ವೆ ಟಿಕೆಟ್ ರದ್ದತಿ/ Strict Railway Cancellation Rules – ರೈಲು ಹೊರಡುವ 8 ಗಂಟೆಗಳ ಮುಂಚೆ ಟಿಕೆಟ್ ರದ್ದು ಮಾಡಿದರೆ ಯಾವುದೇ ಹಣ ಹಿಂದಿರುಗುವುದಿಲ್ಲ. 8 ರಿಂದ 24 ಗಂಟೆಗಳ ಮೊದಲು ರದ್ದು ಮಾಡಿದರೆ ಶೇ. 50ರಷ್ಟು ಮಾತ್ರ ಹಣ ದೊರೆಯುತ್ತದೆ.
ಸೈಬರ್ ದಾಳಿಗಳನ್ನು ತಪ್ಪಿಸಲು ಮತ್ತು ಜನರ ಹಣವನ್ನು ಕಾಪಾಡಲು ಈ ಹೊಸ ರೂಲ್ಸ್ ತುಂಬಾ ಉಪಯುಕ್ತವಾಗಲಿವೆ. ಮುಖ್ಯವಾಗಿ, ‘ಡೈನಾಮಿಕ್ ಟೂ-ಫ್ಯಾಕ್ಟರ್ ಆಥೆಂಟಿಕೇಶನ್‘ ಮತ್ತು ‘ಇನ್-ಆಪ್ ಓಟಿಪಿ‘
ಸೌಲಭ್ಯದಿಂದ ಸಿಮ್ ಕಾರ್ಡ್ ಕ್ಲೋನಿಂಗ್ ಅಥವಾ ಓಟಿಪಿ ಕದಿಯುವ ಮೋಸಗಳಿಗೆ ಕೊನೆ ಬೀಳುತ್ತದೆ.ಸ್ಕ್ರೀನ್ ರೆಕಾರ್ಡಿಂಗ್ ಮತ್ತು ಸ್ಕ್ರೀನ್ ಶಾಟ್ ತಡೆಯುವುದರಿಂದ,
ವಂಚಕರು ಸ್ಕ್ರೀನ್ ಶೇರಿಂಗ್ ಆಪ್‌ಗಳ ಮೂಲಕ ನಿಮ್ಮ ಪಾಸ್‌ವರ್ಡ್ ಅಥವಾ ಓಟಿಪಿ ಕದಿಯುವುದನ್ನು ತಡೆಯಬಹುದು.
ರಾತ್ರಿ ವಹಿವಾಟುಗಳನ್ನು ಲಾಕ್ ಮಾಡುವ ಆಯ್ಕೆಯಿಂದ ನೀವು ಮಲಗಿರುವಾಗ ಆಗುವ ಗೊತ್ತಿಲ್ಲದ ಟ್ರಾನ್ಸ್‌ಫರ್‌ಗಳನ್ನು ತಡೆಯುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ, ಬ್ಯಾಂಕ್‌ನ ತೊಂದರೆಯಿಂದ ಗ್ರಾಹಕರು ಹಣ ಕಳೆದುಕೊಂಡರೆ,
ಆ ಹಣವನ್ನು ಬ್ಯಾಂಕ್‌ಗಳೇ ವಾಪಸ್ ನೀಡಬೇಕು ಎನ್ನುವ ರೂಲ್ಸ್ ಜನರಿಗೆ ಹೆಚ್ಚಿನ ರಕ್ಷಣೆ ನೀಡುತ್ತದೆ. ಇದರಿಂದ ಡಿಜಿಟಲ್ ಪೇಮೆಂಟ್ ಮಾಡುವಾಗ ಜನರ ನಂಬಿಕೆ ಹೆಚ್ಚಾಗುವುದಲ್ಲದೆ, ಪ್ರತಿಯೊಂದು ಟ್ರಾನ್ಸಾಕ್ಷನ್ ಕೂಡ ಸೇಫ್ ಆಗಿರುತ್ತದೆ.
New rules effectively prevent cyberattacks and protect money. Features like Dynamic Two-Factor Authentication and In-App OTP stop SIM cloning or OTP theft scams.
Blocking screen recording/screenshots prevents password/OTP theft via screen-sharing. Nighttime transaction locks prevent unauthorized transfers.
Banks must refund customers for losses from banking system failures, increasing trust in safe digital payments.
ಧನ್ಯವಾದಗಳು
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
