Still how many days Rainfall :: ಇನ್ನೂ ಎಷ್ಟು ದಿನ ಮಳೆ ಬರುತ್ತದೆ? ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ಮಳೆಯ ಸಾಧ್ಯತೆ ಇದೆ?

"Agriculture is our CULTURE"

Click Here Join WhatsApp Group

 

 

Still how many days Rainfall :: ಇನ್ನೂ ಎಷ್ಟು ದಿನ ಮಳೆ ಬರುತ್ತದೆ? ಯಾವ ಯಾವ ಜಿಲ್ಲೆಗಳಲ್ಲಿ ಎಷ್ಟು ಪ್ರಮಾಣದ ಮಳೆಯ ಸಾಧ್ಯತೆ ಇದೆ?

ಬಿಸಿಲ ಬೇಗೆಗೆ ಬ್ರೇಕ್ – ರಾಜ್ಯದ 12 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ!

Rain Alert – High Alert for 12 Districts as Unseasonal Rains Lash Karnataka!

ಕರ್ನಾಟಕ ರಾಜ್ಯದ ಇಂದಿನ ಹವಾಮಾನದ ಬಗ್ಗೆ ವರದಿ ಹಾಗೂ ಏಪ್ರಿಲ್ 2ರ ವರೆಗಿನ ನಿರೀಕ್ಷಿತ ಮಳೆಯ ಮುನ್ಸೂಚನೆಯ ಮಾಹಿತಿ ::

ಮಳೆ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಗಳು:-

Weather Forecast and Rain Alert:-

• ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕ ರಾಜ್ಯದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, ಏಪ್ರಿಲ್ 5ರ ವರೆಗೆ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ. 

* ಅದರಲ್ಲೂ ವಿಶೇಷವಾಗಿ ಏಪ್ರಿಲ್ 2ರ ವರೆಗೆ ಮಳೆಯ ತೀವ್ರತೆ ಹೆಚ್ಚಿರಲಿದ್ದು, ಭಾರತೀಯ ಹವಾಮಾನ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಿಗೆ ಹವಾಮಾನದ ಎಚ್ಚರಿಕೆಯನ್ನು ನೀಡಿದೆ.

ಆರೆಂಜ್ ಅಲರ್ಟ್ (ಭಾರೀ ಮಳೆ) – ಬೆಳಗಾವಿ, ಧಾರವಾಡ, ಹಾವೇರಿ, ವಿಜಯನಗರ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಈ ಜಿಲ್ಲೆಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸೂಚಿಸಲಾಗಿದೆ.

* ಯೆಲ್ಲೋ ಅಲರ್ಟ್ – ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ದಕ್ಷಿಣ ಒಳನಾಡು ಮತ್ತು ಮಲೆನಾಡು ಪ್ರದೇಶಗಳು- ಮೈಸೂರು, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು ಮಿಂಚುಗಳ ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಈ ಪ್ರದೇಶಗಳಲ್ಲಿ ಗುಡುಗು ಮತ್ತು ಸಿಡಿಲಿನಿಂದ ರಕ್ಷಣೆ ಪಡೆಯಲು ಸೂಚಿಸಲಾಗಿದೆ.

• ಕರಾವಳಿ ಪ್ರದೇಶಗಳು ಮತ್ತು ಬೆಂಗಳೂರು – ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. 

* ಇದರ ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಾತಾವರಣವು ತಂಪಾಗಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ.

ರೈತರಿಗಾಗಿ ಪ್ರಮುಖ ಸೂಚನೆಗಳು:-

Note to farmers:-

ಬೆಳೆಗಳ ರಕ್ಷಣೆ – ಅಕಾಲಿಕವಾಗಿ ಸುರಿಯುತ್ತಿರುವ ಈ ಮಳೆಯಿಂದಾಗಿ ಕೈಗೆ ಬಂದಿರುವ ದ್ರಾಕ್ಷಿ ಮತ್ತು ಅರಿಶಿಣದ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆಗಳಿರುವುದರಿಂದ, ರೈತರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.

* ಸುರಕ್ಷತಾ ಕ್ರಮಗಳು – ಆಲಿಕಲ್ಲು ಮಳೆ ಮತ್ತು ಸಿಡಿಲು ಬಡಿಯುವ ಸಾಧ್ಯತೆಗಳಿರುವುದರಿಂದ, ರೈತರು ಹೊಲಗಳಲ್ಲಿ ಕೆಲಸ ಮಾಡುವಾಗ ಮರಗಳ ಕೆಳಗೆ ಅಥವಾ ಟ್ರಾನ್ಸ್‌ಫಾರ್ಮರ್ ಹಾಗೂ ವಿದ್ಯುತ್ ಕಂಬಗಳ ಬಳಿ ಆಶ್ರಯ ಪಡೆಯಬಾರದು.

ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವುದು ಸೂಕ್ತ.

ಪರಿಹಾರದ ಮಾಹಿತಿ- ಈ ಹಿಂದೆ ಸರ್ಕಾರವು ಬೆಳೆ ಹಾನಿಗೊಳಗಾದ ರೈತರಿಗೆ ಖುಷ್ಕಿ ಜಮೀನಿಗೆ ₹25,500 ಮತ್ತು ನೀರಾವರಿ ಜಮೀನಿಗೆ ₹31,500 ಪರಿಹಾರವನ್ನು ನೀಡಿತ್ತು. 

* ರೈತರು ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಳೆ ಹಾನಿಯಾದಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು.

ಕೋಲಾರ, ಬಂಗಾರಪೇಟೆ ಮತ್ತು ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಈಗಾಗಲೇ ಮಳೆಯು ಪ್ರಾರಂಭವಾಗಿದ್ದು, ಆ ಭಾಗದ ಜನರು ಮತ್ತು ರೈತರು ಹವಾಮಾನ ಇಲಾಖೆಯ ಮುಂದಿನ ಸೂಚನೆಗಳನ್ನು ಮತ್ತು ಅಪ್ಡೇಟ್ಸ್ ಗಮನದಲ್ಲಿಟ್ಟುಕೊಳ್ಳಲು ವಿನಂತಿಸಲಾಗಿದೆ.

ಕರ್ನಾಟಕ ಮಳೆ ಅಲರ್ಟ್:-

Karnataka Rain Alert:-

ಮಳೆ ರೈತರಿಗೆ ಆತಂಕ ತಂದಿದೆ. ದ್ರಾಕ್ಷಿ, ಅರಿಶಿಣ ಬೆಳೆ ಕೊಳೆಯುವ ಭೀತಿ ಇದೆ. ಒಣಗಿಸಲು ಹಾಕಿರುವ ಅರಿಶಿಣ ಮಳೆಗೆ ನೆನೆದರೆ ನಷ್ಟವಾಗುವುದು. ಏಪ್ರಿಲ್‌ನಲ್ಲಿ ಆಲಿಕಲ್ಲು ಮಳೆಯಿಂದ ಮಾವು, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಬಹುದು.

ಸಿಡಿಲು ಬಡಿಯುವ ಸಾಧ್ಯತೆಯಿಂದ ರೈತರು ಜೀವದ ಹಂಗಿನಲ್ಲಿ ಕೆಲಸ ಮಾಡಬೇಕು.

ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನತೆಗೆ ಮಳೆಯಿಂದ ವಾತಾವರಣ ತಂಪಾಗಿ ನೆಮ್ಮದಿ ಸಿಕ್ಕಿದೆ. ಆದರೆ, ಗುಡುಗು, ಬಿರುಗಾಳಿಯಿಂದ ವಿದ್ಯುತ್ ಕಂಬಗಳು, ಮರಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗಬಹುದು.

ಸಂಜೆ, ರಾತ್ರಿ ವೇಳೆ ಮಳೆಯಿಂದ ಕಚೇರಿಯಿಂದ ಮನೆಗೆ ಮರಳುವವರಿಗೆ, ಮಕ್ಕಳಿಗೆ ತೊಂದರೆಯಾಗಬಹುದು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಭೀತಿ ಇದ್ದು, ಸಂಚರಿಸುವಾಗ, ವಿದ್ಯುತ್ ಕಂಬಗಳ ಬಳಿ ಎಚ್ಚರಿಕೆ ಅಗತ್ಯ.

Rain has caused anxiety for farmers fearing rot in crops like grapes and turmeric, with soaked turmeric leading to losses. Hailstorms may damage mangoes. Farmers risk their lives working during lightning.

For the public, rain cools the heat but thunderstorms may disrupt traffic with falling poles/trees. Evening/night rain could trouble commuters and students.

Flooding in low areas requires travel caution and avoiding electric poles.

Thank you

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.