Bara Parihara :: ಕರ್ನಾಟಕದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ!! ಮತ್ತೆ 29 ತಾಲೂಕುಗಳು ಬರಪೀಡಿತ ಘೋಷಣೆ, ಒಟ್ಟು ಸಂಖ್ಯೆ 206ಕ್ಕೆ ಏರಿಕೆ!
Karnataka Drought Update – 29 More Taluks Declared Drought-Hit, Total Reaches 206:-
ಕರ್ನಾಟಕದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ – ಮತ್ತೆ 29 ತಾಲೂಕುಗಳು ಬರಪೀಡಿತ ಘೋಷಣೆ, ಒಟ್ಟು ಸಂಖ್ಯೆ 206ಕ್ಕೆ ಏರಿಕೆ
ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಕಠಿಣ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ನಾಲ್ಕನೇ ಹಂತದಲ್ಲಿ ಹೊಸದಾಗಿ 29 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿದೆ.
ಇದರೊಂದಿಗೆ ರಾಜ್ಯದ ಒಟ್ಟು ಬರಪೀಡಿತ ತಾಲೂಕುಗಳ ಸಂಖ್ಯೆ 206ಕ್ಕೆ ಏರಿಕೆಯಾಗಿದ್ದು, ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ವರ್ಷದ ಮುಂಗಾರು ಮಳೆಯ ವೈಫಲ್ಯದಿಂದಾಗಿ ಅನ್ನದಾತರ ಜೀವನ ಅತಂತ್ರವಾಗಿದೆ. ಶಾಸಕರ ಎಚ್ಚರಿಕೆ ಮತ್ತು ಸಚಿವರ ಸಭೆಗಳ ನಂತರ,

ರೈತ ಮಳೆ ಇಲ್ಲದೆ ಕಂಗಲಾಗಿರುವುದು
ಕಂದಾಯ ಹಾಗೂ ಕೃಷಿ ಇಲಾಖೆಗಳು ಮರು ಸಮೀಕ್ಷೆ ನಡೆಸುವ ಮೂಲಕ ಈ ಹೊಸ ನಿರ್ಧಾರವನ್ನು ಪ್ರಕಟಿಸಿವೆ.
ಈ ಮೂಲಕ ಹೊಸದಾಗಿ ಸೇರ್ಪಡೆಯಾದ ತಾಲೂಕುಗಳು, ಸರ್ಕಾರದ ಪರಿಹಾರ ಕ್ರಮಗಳು ಮತ್ತು ರೈತರು ಮಾಡಬೇಕಾದ ಸಿದ್ಧತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.
ಹೊಸದಾಗಿ ಸೇರ್ಪಡೆಯಾದ 29 ತಾಲೂಕುಗಳು :-
Newly added 29 Taluks :-
ಈ ಬಾರಿ ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲದೆ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳು ಕೂಡ ಬರಪೀಡಿತ ಪಟ್ಟಿಗೆ ಸೇರಿರುವುದು ವಿಶೇಷ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ.
ಪ್ರಮುಖ ತಾಲೂಕುಗಳು:
ಬೀದರ್ ಮತ್ತು ಬೆಳಗಾವಿ – ಬೀದರ್ ಜಿಲ್ಲೆಯ ಔರಾದ್ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ್, ರಾಮದುರ್ಗ, ಸೌದತ್ತಿ ಮತ್ತು ಕಾಗವಾಡ.
ವಿಜಯಪುರ ಮತ್ತು ಧಾರವಾಡ – ವಿಜಯಪುರ, ಇಂಡಿ, ಚಡಚಣ ಹಾಗೂ ಧಾರವಾಡ (ಗ್ರಾಮೀಣ/ನಗರ), ಕಲಘಟಗಿ, ಕುಂದಗೋಳ ಮತ್ತು ಹುಬ್ಬಳ್ಳಿ.
ಮಲೆನಾಡು ಭಾಗ – ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿಕಾರಿಪುರ, ಶಿವಮೊಗ್ಗ, ಸೊರಬ ಹಾಗೂ ತೀರ್ಥಹಳ್ಳಿ; ಚಿಕ್ಕಮಂಗಳೂರಿನ ಚಿಕ್ಕಮಂಗಳೂರು ಮತ್ತು ಕಳಸ, ಕೊಡಗಿನ ಮಡಿಕೇರಿ ಹಾಗೂ ಕುಶಾಲನಗರ.
ಕರಾವಳಿ ಭಾಗ – ದಕ್ಷಿಣ ಕನ್ನಡದ ಬೆಳ್ತಂಗಡಿ, ಬಂಟ್ವಾಳ ಹಾಗೂ ಉಳ್ಳಾಲ; ಉಡುಪಿಯ ಉಡುಪಿ ಮತ್ತು ಬೈಂದೂರು; ಉತ್ತರ ಕನ್ನಡದ ಅಂಕೋಲಾ, ಭಟ್ಕಳ, ಹಳಿಯಾಳ ಹಾಗೂ ಶಿರಸಿ.
ಮಲೆನಾಡು ಮತ್ತು ಕರಾವಳಿಯಲ್ಲೂ ಬರ:-
Malenadu and coastal region drought:-
ಸಾಮಾನ್ಯವಾಗಿ ಬಯಲುಸೀಮೆ ಹಾಗೂ ಉತ್ತರ ಕರ್ನಾಟಕದಲ್ಲಿ ಕಂಡುಬರುವ ಬರಗಾಲವು, ಈ ಬಾರಿ ದಟ್ಟ ಅರಣ್ಯ ಮತ್ತು ನಿರಂತರ ಮಳೆಯಿಂದ ಕೂಡಿದ್ದ ಮಲೆನಾಡು ಹಾಗೂ ಕರಾವಳಿಯಲ್ಲೂ ಆವರಿಸಿದೆ.
ವಾಡಿಕೆಗಿಂತ ಶೇಕಡಾ 30 ರಿಂದ 50ರಷ್ಟು ಮಳೆ ಕೊರತೆ ಉಂಟಾಗಿದ್ದು, ಅಡಿಕೆ, ಕಾಫಿ, ಕರಿಮೆಣಸು ಮತ್ತು ಭತ್ತ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಪರಿಹಾರಗಳು:-
Government assured solutions and facilities :-
ಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳ ರೈತರಿಗೆ ಮತ್ತು ಸಾರ್ವಜನಿಕರಿಗೆ ಈ ಕೆಳಗಿನ ಸೌಲಭ್ಯಗಳು ದೊರೆಯಲಿವೇ :-
ಇನ್‌ಪುಟ್ ಸಬ್ಸಿಡಿ (Input Subsidy) – ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ನಿಯಮಗಳ ಪ್ರಕಾರ, ಮಳೆಯಾಶ್ರಿತ ಮತ್ತು ನೀರಾವರಿ ಬೆಳೆಗಳಿಗೆ ಹೆಕ್ಟರ್ ಲೆಕ್ಕದಲ್ಲಿ ನೇರ ನಗದು ವರ್ಗಾವಣೆ (DBT) ಮೂಲಕ ಪರಿಹಾರ ಸಿಗಲಿದೆ.
ಕುಡಿಯುವ ನೀರಿನ ಪೂರೈಕೆ(Supply of drinking water) – ನೀರಿನ ತೀವ್ರ ಅಭಾವವಿರುವ ಗ್ರಾಮಗಳಿಗೆ ಸರ್ಕಾರಿ ಮತ್ತು ಖಾಸಗಿ ಟ್ಯಾಂಕರ್‌ಗಳ ಮೂಲಕ ಉಚಿತ ಕುಡಿಯುವ ನೀರನ್ನು ಒದಗಿಸಲಾಗುತ್ತದೆ.
ಗೋಶಾಲೆ ಹಾಗೂ ಮೇವು ಬ್ಯಾಂಕ್ – ಜಾನುವಾರುಗಳಿಗೆ ಹಸಿರು ಮತ್ತು ಒಣ ಮೇವಿನ ಕೊರತೆಯಾಗದಂತೆ ಸಬ್ಸಿಡಿ ದರದಲ್ಲಿ ಮೇವು ವಿತರಿಸಲಾಗುವುದು ಮತ್ತು ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆಗಳನ್ನು ತೆರೆಯಲಾಗುವುದು.
ಉದ್ಯೋಗ ಖಾತ್ರಿ (Employment )- ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಹೊರಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
ರೈತರು ಗಮನಿಸಬೇಕಾದ ಪ್ರಮುಖ ಅಂಶಗಳು:-
Important points to be noted by farmers :-
ಸರ್ಕಾರದಿಂದ ಘೋಷಿಸಲಾದ ಪರಿಹಾರ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲು ರೈತರು ಈ ಕೆಳಗಿನ ಕ್ರಮಗಳನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು:
ಜಮೀನಿನ ಪಹಣಿ ಮತ್ತು ವಿವರಗಳು ಫ್ರೂಟ್ಸ್ ಐಡಿ (FRUITS ID) ಯಲ್ಲಿ ಸರಿಯಾಗಿ ಲಿಂಕ್ ಆಗಿರುವುದನ್ನು ಪರಿಶೀಲಿಸಿ.
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ (Aadhaar Card) ಸೀಡಿಂಗ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
ಬೆಳೆ ಹಾನಿಯ ನಿಖರ ದಾಖಲೆಗಳಿಗಾಗಿ ಗ್ರಾಮ ಆಡಳಿತ ಅಧಿಕಾರಿ ಅಥವಾ ಕೃಷಿ ಅಧಿಕಾರಿಯನ್ನು ಭೇಟಿ ಮಾಡಿ ಬೆಳೆ ಸಮೀಕ್ಷೆಯನ್ನು ಪರಿಶೀಲಿಸಿ.
ರೈತರಿಗೆ ಬರ ಪರಿಹಾರದ ಲಾಭಗಳು :-
Relief Benefits for Farmers:-
ಈ ಬರ ಪರಿಹಾರ ರೈತರಿಗೆ ಸಹಕಾರಿ. ಮಳೆಯಿಲ್ಲದೆ ಬೆಳೆ ನಷ್ಟವಾದಾಗ, ನೇರ ಸಬ್ಸಿಡಿ ಹಣದಿಂದ ಮುಂದಿನ ಕೃಷಿ ವೆಚ್ಚ ಮತ್ತು ಸಾಲ ನಿರ್ವಹಣೆ ಸುಲಭವಾಗುತ್ತದೆ.
ಕುಡಿಯುವ ನೀರಿಗಾಗಿ ಟ್ಯಾಂಕರ್ ಮೂಲಕ ಉಚಿತ ನೀರು ಒದಗಿಸುವುದು ಹಾಗೂ ಸಬ್ಸಿಡಿ ದರದಲ್ಲಿ ಮೇವು ಮತ್ತು ಗೋಶಾಲೆಗಳ ವ್ಯವಸ್ಥೆ ಮಾಡುವುದು ಮುಖ್ಯ.
ಅಲ್ಲದೆ, ಉದ್ಯೋಗ ಖಾತ್ರಿ ಯೋಜನೆಯ ದಿನಗಳನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಕೂಲಿ ಕಾರ್ಮಿಕರ ವಲಸೆ ತಡೆಯಬಹುದು.
Drought relief helps farmers. When crops fail from lack of rain, direct subsidies to bank accounts ease farming expenses and loan management.
Providing free water tankers, subsidized fodder, and cattle sheds is crucial. Additionally, increasing MGNREGS workdays helps prevent rural laborer migration.
Thank you.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply