Coconut Framing :: ತೆಂಗಿನ ಕೃಷಿಯಲ್ಲಿ ಹೇಗೆ ವರ್ಷಕ್ಕೆ 5 ರಿಂದ 6 ಲಕ್ಷ ಆದಾಯ!!! ವೈಜ್ಞಾನಿಕ ತೆಂಗಿನ ಕೃಷಿ!!
Coconut plantation is one of the most important commercial plantation in India specially in coastal region of South India is one of the leading among country.
coconut is not only known for its commercial value but also it is most important part of indian cuisine.
Anyway farmers here also failing because of lack of guidance, how to grow and how to maximize profits in the coconut plantation.
here is the detailed explanation regarding problem facing by farmers.
ತೆಂಗಿನ ಮರವನ್ನು ನಮ್ಮ ಭಾರತದಲ್ಲಿ ಕಲ್ಪವೃಕ್ಷ ಎಂದು ಕರೆಯುತ್ತಾರೆ. ಕಾರಣ ತೆಂಗಿನ ಮರದಲ್ಲಿರುವ ಬೇರಿನಿಂದ ಕಾಯಿಯವರೆಗೂ ಪ್ರತಿಯೊಂದು ಅಂಶವು ಉಪಯುಕ್ತ ವಾಗುವಂತಹವೇ, ಹಾಗಾಗಿ ತೆಂಗಿನ ಕೃಷಿ ರೈತರಿಗೆ ಒಂದಲ್ಲ ಒಂದು ರೀತಿಯಲ್ಲಿ ಲಾಭ ತಂದು ಕೊಡುವಂತಹ ಕೃಷಿ.
ಆದರೆ ಈ ಕೃಷಿಯಲ್ಲಿ ರೈತರು ಯಶಸ್ವಿಯಾಗಬೇಕಾದಲ್ಲಿ, ತಾವು ಬೆಳೆಯುವ “ತಳಿ” ಯಾವುದು?
ಹಾಗೂ ತೆಂಗಿನ ಸಸಿ ಜೊತೆಗೆ ಮತ್ತಾವುದಾದರೂ “ಅಂತರ ಬೆಳೆ” ಯನ್ನು ಬೆಳೆಯಬಹುದೇ ಅಥವಾ “ಮಿಶ್ರಬೆಳೆ” ಬೆಳೆದರೆ ಸಾಕೆ ಮಿಶ್ರ ಬೆಳೆ ಮತ್ತು ಅಂತರ ಬೆಳೆಯುವುದರಿಂದ ಆಗುವ ಪ್ರಯೋಜನಗಳೇನು ಎನ್ನುವುದರ ಕುರಿತು ಬಹಳಷ್ಟು ರೈತರಿಗೆ ಮಾಹಿತಿ ಕೊರತೆ ಇರುತ್ತದೆ,
ಅಂತಹ ರೈತರು ಇನ್ನೂ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ, ಏಕೆಂದರೆ ಯಾವ ತಳಿ ಬೆಳೆದರೆ ಸೂಕ್ತ ಹಾಗೂ ಇತರ ಎಲ್ಲ ಮಾಹಿತಿಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ರೈತರಿಗೆ ಲಾಭ ತಂದು ಕೊಡುವ ತೆಂಗಿನ ತಳಿಗಳು ಯಾವ್ಯಾವು?
Which plant varieties can use in coconut plantation?
• ಬಹುತೇಕವಾಗಿ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಬೆಳೆಯುವುದು “ವೆಸ್ಟ್ ಕೋಸ್ಟಲ್” ತಳಿ. ಈ ತೆಂಗಿನ ತಳಿಯಲ್ಲಿ ಸರಿಸುಮಾರು 80 ರಿಂದ 90 ತೆಂಗಿನ ಕಾಯಿಗಳನ್ನು ಕಾಣಬಹುದು. ಇದನ್ನು ಹೆಚ್ಚಾಗಿ ವಾಣಿಜ್ಯ ಬೆಳೆಯನ್ನಾಗಿ ಬೆಳೆಯುವುದಿಲ್ಲ.
* ಇನ್ನು ಪೂರ್ವ ಕರಾವಳಿ ಪ್ರದೇಶದಲ್ಲಿ ಬೆಳೆಯುವುದು “ಈಸ್ಟ್ ಕೋಸ್ಟಲ್” ತಳಿ ಅದರಲ್ಲೂ “ತಿಪಟೂರು ಟಾಲ್” ಎನ್ನುವ ತಳಿ ತುಂಬಾ ಪ್ರಖ್ಯಾತವಾಗಿದೆ. ಅಲ್ಲದೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಜಿಲ್ಲೆಗೆ ಒಂದರಂತೆ ವಿವಿಧ ತಳಿಗಳನ್ನು ಕಾಣಬಹುದು.
• ಈ ತಳಿಗಳಲ್ಲಿ ಪ್ರಮುಖವಾಗಿ ಎರಡು ವಿಧಗಳನ್ನು ನೋಡುವುದಾದರೆ, ಮೊದಲನೆಯದು “ನಾಟಿ ತಳಿ“, ಇನ್ನೊಂದು “ಹೈಬ್ರಿಡ್ ತಳಿ”.
ನಾಟಿ ತಳಿ ಎಂದರೇನು ಇದು ಯಾರಿಗೆ ಸೂಕ್ತ?
What is indigenous variety?
ನಾಟಿ ತಳಿ ಎಂದರೆ ಯಾವುದೇ ಬೇರೆ ತಳಿಯ ಸಸ್ಯಗಳ ಗುಣಲಕ್ಷಣಗಳೊಂದಿಗೆ ಮಿಶ್ರಣಗೊಳ್ಳದೆ, ತನ್ನದೇ ವೈವಿಧ್ಯತೆಯನ್ನು ಉಳಿಸಿಕೊಂಡಿರುವ ಸಸ್ಯ ಎಂದು ಹೇಳಬಹುದು.
ಈ ನಾಟಿದಳು ಯಾರಿಗೆ ಸೂಕ್ತವೆಂದರೆ ಸಾಮಾನ್ಯವಾಗಿ ತೆಂಗಿನ ತೋಟವನ್ನು ನಿರ್ವಹಿಸಲು ಸಮಯ ಕಡಿಮೆ ಇರುವ ರೈತರು ಅಥವಾ ನಿರ್ವಹಿಸಲು ಕಷ್ಟವಾಗುವಂತಹ ರೈತರಿಗೆ ಇದು ಸೂಕ್ತ.
ಏಕೆಂದರೆ ಇದು ಅಗತ್ಯ ಪ್ರಮಾಣದ ನಿರ್ವಹಿಸುವಿಕೆಯನ್ನು ಕೇಳುವುದಿಲ್ಲ, ಜೊತೆಗೆ ಇದರಲ್ಲಿನ ಇಳುವರಿ 150 ಕಾಯಿಗಳವರೆಗೂ ಇರುತ್ತದೆ, ಇದರಿಂದ ರೈತರು ಜಾಸ್ತಿ ಕಷ್ಟ ಪಡದೆ ತಕ್ಕಮಟ್ಟಿಗೆ ಲಾಭವನ್ನು ಮಾಡಬಹುದು.
ತೆಂಗಿನ ಸಸಿಗಳನ್ನು ನೆಡುವುದು ಹೇಗೆ?
How to plant coconut?
• ಸಾಮಾನ್ಯವಾಗಿ ನಾಟಿ ಸಸಿಗಳನ್ನು ನೆಡೆಯುವಾಗ ಅಂತರ 30 ರಿಂದ 30 ಇರಬೇಕು
* ಹೈಬ್ರಿಡ್ ಸಸಿಗಳಾದರೆ 27 ರಿಂದ 27 ಸಾಕು.
• ಸಸಿ ನೆಡುವಾಗ 2 ಅಡಿ ಅಗಲ 2 ಅಡಿ ಉದ್ದ ಹಾಗೂ 2 ಅಡಿ ಆಳ ಇರಬೇಕು.
* ಈ ಒಂದು ಅಡಿ ಆಳದಲ್ಲಿ ಮೊದಲಿಗೆ “ಮರಳ“ನ್ನು ಹಾಕಿ ನಂತರ “ಎರೆಹುಳು ಗೊಬ್ಬರ“ವನ್ನು ಹಾಕಿ,15 ದಿನಗಳ ನಂತರ ಹಸಿರೆಲೆ ಗೊಬ್ಬರವನ್ನು ಹಾಕಿ ಸಸಿನೆಡಬೇಕು.
ನಂತರ ಮೂರು ವರ್ಷಗಳ ಕಾಲ ಈ ಸಸಿಗೆ ಅಗತ್ಯ ಪ್ರಮಾಣದ ನೀರು ಮತ್ತು ಗೊಬ್ಬರವನ್ನು ನೀಡುವ ಮೂಲಕ ಫಲವತ್ತತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು.
ಹಾಗಾದರೆ ಹೈಬ್ರಿಡ್ ವೆರೈಟಿ ಎಂದರೇನು? ಅವುಗಳಲ್ಲಿನ ತಳಿಗಳು ಯಾವ್ಯಾವು?
what is hybrid variety?
ಗಿಡ್ಡ ತಳಿಗಳು(dwarf varieties) :- ವ್ಯಾಪಾರ ಮತ್ತು ವಾಣಿಜ್ಯದ ದೃಷ್ಟಿಯಿಂದ ಭಾರತದಲ್ಲಿ ಪ್ರಸಿದ್ಧವಾಗಿರುವಂತಹ ಗಿಡ್ಡ ತಳಿಗಳೆಂದರೆ,
* ಮಲೇಶಿಯನ್ ಗ್ರೀನ್ ತಳಿ
• ಮಲೇಶಿಯನ್ ಎಲ್ಲೋ ತಳಿ
* ಮಲೇಶಿಯನ್ ಆರೆಂಜ್ ತಳಿ
ಈ ಎಲ್ಲ ತಳಿಗಳು ಕೇವಲ ಎಳನೀರು ಉದ್ದೇಶಕ್ಕಾಗಿ ಬೆಳೆಯಬಹುದು, ಏಕೆಂದರೆ ಇವುಗಳನ್ನು ಕೊಬ್ಬರಿಯಾಗಿ ಮಾಡಲು ಉತ್ತಮ ಗುಣಮಟ್ಟ ಇರುವುದಿಲ್ಲ.
ಆದರೆ ಈ ತಳಿಗಳು ವಾಣಿಜ್ಯವಾಗಿ ರೈತರಿಗೆ ಬಹಳಷ್ಟು ಲಾಭವನ್ನು ತಂದು ಕೊಡುವ ತಳಿಗಳಾಗಿವೆ ಕನಿಷ್ಠ ವರ್ಷಕ್ಕೆ ನಾಲ್ಕರಿಂದ ಐದು ಲಕ್ಷದವರೆಗೂ ಲಾಭವನ್ನು ನಿರೀಕ್ಷಿಸಬಹುದು.
ಈ ಹೈಬ್ರಿಡ್ ತಳಿಗಳನ್ನು ನಿರ್ವಹಿಸುವುದು ಹೇಗೆ?
How to manage hybrid varieties?
* ಈ ಹೈಬ್ರಿಡ್ ತಳಿಗಳು ಯಾವುದೇ ಇರಲಿ ಅದಕ್ಕೆ ನಿರ್ವಹಣೆ ಅತ್ಯಗತ್ಯವಾಗಿರುತ್ತದೆ, ಇಲ್ಲಿ ರೈತರು ಪ್ರತಿನಿತ್ಯ ಗಿಡಗಳಿಗೆ ಏನು ಬೇಕು ಏನು ಬೇಡ ಎಂಬುದನ್ನು ಗಮನಿಸುತ್ತಿರಬೇಕು.
• ಮುಖ್ಯವಾಗಿ “ನೀರು ಮತ್ತು ಸೂಕ್ಷ್ಮ ಪೋಷಕಾಂಶಗಳ ನಿರ್ವಹಣೆ” ಅತ್ಯಗತ್ಯವಾಗಿರುತ್ತದೆ.
* ಕಾಲ ಕಾಲಕ್ಕೆ “ರೋಗಬಾದಕ“ಗಳನ್ನು ನಿರ್ವಹಿಸಲು “ಗೊಬ್ಬರ“ಗಳನ್ನು ನೀಡುತ್ತಿರಬೇಕು.
ಹೈಬ್ರಿಡ್ ತಳಿಗಳನ್ನು ನಿರ್ವಹಿಸುವಾಗ ಒಂದು ವೇಳೆ ಪೋಷಕಾಂಶ ಅಥವಾ ನೀರಿನ ಕೊರತೆಯಾದರೆ ಆ ಗಿಡದ ಇಳುವರಿ ಕಡಿಮೆಯಾಗುವುದರ ಜೊತೆಗೆ ಗುಣಮಟ್ಟವು ಕುಸಿಯುತ್ತದೆ.
ಹಾಗಾಗಿ ರೈತರು ತಳಿಗಳನ್ನು ಬೆಳೆಯುವಾಗ ಯಾವುದೇ ರೀತಿಯ ನಿರ್ಲಕ್ಷ ಮಾಡದೆ, ಈ ತಳಿಗಳಿಗೆ “ಅಗತ್ಯ ನೀರಿನ ನಿರ್ವಹಣೆ ಮತ್ತು ಪೋಷಕಾಂಶಗಳ ನಿರ್ವಹಣೆ” ಮಾಡಿದಲ್ಲಿ ಸಾಕಷ್ಟು ಲಾಭವನ್ನು ರೈತರು ಮಾಡಬಹುದು.
ತೆಂಗಿನ ಬೆಳೆ ಬೆಳೆಯುವಾಗ ರೈತರು ಯಾವುದಾದರೂ ಅಂತರ ಬೆಳೆಯನ್ನು ಬೆಳೆಯಬಹುದೇ?
can farmers grow inter crop with coconut?
ಸಾಮಾನ್ಯವಾಗಿ ತೆಂಗಿನ ಬೆಳೆಯಲ್ಲಿ ಮೂರು ವರ್ಷದ ತನಕ “ನೆರಳು ಕಡಿಮೆ” ಇರುವುದರಿಂದ ಯಾವುದೇ ಅಂತರ ಬೆಳೆಯನ್ನು ಬೆಳೆಯಲು ಸೂಕ್ತವಾದ ಸಮಯವಲ್ಲ. ಹಾಗಾಗಿ ರೈತರು ಅಂತರ ಬೆಳೆಯನ್ನು ಬೆಳೆಯುವ ಯೋಜನೆಯಲ್ಲಿದ್ದರೆ, ಮೂರು ವರ್ಷದ ನಂತರ ಬೆಳೆಯಬಹುದು.
ರೈತರು ಅಂತರ ಬೆಳೆಯಲ್ಲಿ ಬೆಳೆಯಬಹುದಾದ ಬೆಳೆಗಳೆಂದರೆ,
• ಬೆಣ್ಣೆ ಹಣ್ಣು (Butter fruit ash)
* ಜಾಯಿಕಾಯಿ
• ಕೋ ಕೋ
* ಮೆಣಸು
ಈ ಬೆಳೆಗಳು ನೆರಳಿನಲ್ಲಿ ಬೆಳೆಯುವ ಬೆಳೆಗಳಾಗಿದ್ದು, ರೈತರಿಗೆ ಸಾಕಷ್ಟು ಲಾಭವನ್ನು ತಂದು ಕೊಡುವಂತಹ ಬೆಳೆಗಳಾಗಿವೆ. ಹಾಗಾಗಿ ರೈತರು ತಮ್ಮ ತೆಂಗಿನ ಬೆಳೆಯೊಟ್ಟಿಗೆ ಈ ಬೆಳೆಗಳನ್ನು ಅಂತರ ಬೆಳೆಯನ್ನಾಗಿ ಬೆಳೆದರೆ ತಮ್ಮ ಆದಾಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.
ಮೇಲೆ ತಿಳಿಸಿರುವ ವಿಧಾನಗಳಂತೆ ಯಾವುದೇ ರೀತಿ ನಿರ್ವಹಿಸಲು ಕಷ್ಟವಾಗುವ ರೈತರು ಸುಲಭವಾಗಿ ಆದಾಯ ಗಳಿಸಲು ನಾಟಿ ತಳಿಗಳ ಮೊರೆ ಹೋಗಬಹುದು. ಆದರೆ ತೆಂಗಿನ ಬೆಳೆಯನ್ನು ವ್ಯಾಪಾರಕ್ಕಾಗಿ ಮಾಡುವ ರೈತರು,
ಖಂಡಿತವಾಗಿಯೂ ಹೈಬ್ರಿಡ್ ತಳಿಗಳನ್ನು ಬೆಳೆಯುತ್ತಾ ಜೊತೆಗೆ ಅಂತರ ಬೆಳೆಗಳನ್ನು ಬೆಳೆಸುತ್ತಾ ಸಾಕಷ್ಟು ಲಾಭಗಳನ್ನು ಗಳಿಸಬಹುದು.
ಆದರೆ ಯಾವುದೇ ಬೆಳೆ ಇರಲಿ ಪ್ರಮುಖವಾಗಿ ಆ ಬೆಳೆಗೆ ಬೇಕಾಗಿರುವುದು ನೀರು ಮತ್ತು ಪೋಷಕಾಂಶಗಳ ನಿರ್ವಹಣೆ. ನೀರು ಮತ್ತು ಪೋಷಕಾಂಶಗಳ ನಿರ್ವಹಣೆ ಉತ್ತಮವಾಗಿದ್ದರೆ ಫಲವತ್ತತೆಯಿಂದ ಇಳುವರಿ ಕೂಡ ಉತ್ತಮವಾಗುತ್ತದೆ.
ಜೊತೆಗೆ ಕೀಟ ಮತ್ತು ರೋಗ ಬಾಧೆಗಳಿಂದ ಈ ಸಸ್ಯಗಳನ್ನು ಕಾಪಾಡಿಕೊಳ್ಳಬೇಕು.
ಇತ್ತೀಚಿಗೆ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರುವುದು ಆತಂಕಕ್ಕೆ ರೈತರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ಕಾರಣದಿಂದಾಗಿ ಅಡಿಕೆ ಬೆಳೆಯ ಬೆಲೆ ಒಂದು ಹಂತದಲ್ಲಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ಆದರೆ ಈ ಅಡಿಕೆ ರೀತಿಯಲ್ಲಿಯೇ ತೆಂಗಿನ ಬೆಳೆಯೂ ಬೀಳುತ್ತದೆ ಎಂದು ರೈತರು ಗಾಬರಿಯಾಗುವ ಅವಶ್ಯಕತೆ ಇಲ್ಲ.
ಏಕೆಂದರೆ ಅಡಿಕೆಯನ್ನು ತಂಬಾಕು ಮತ್ತು ಇತರೆ ವಸ್ತುಗಳಲ್ಲಿ ಬಳಸಲಾಗುತ್ತಿದ್ದು ಇದನ್ನು ಬಹಿಷ್ಕರಿಸುವಂತೆ ಹಲವು ಜನ ಪ್ರತಿಭಟಿಸುತ್ತಾರೆ.
ಆದರೆ ತೆಂಗು ಹಾಗಲ್ಲ ತೆಂಗಿನಕಾಯಿಯ ಮಹತ್ವ ಬಹಳಷ್ಟಿದೆ ಹಾಗಾಗಿ ಇದನ್ನು “ಕಲ್ಪವೃಕ್ಷ” ಎಂದು ಸಹ ಕರೆಯುತ್ತಾರೆ ಇದರ ಆರೋಗ್ಯ ದೃಷ್ಟಿಯಿಂದಲೂ ಬಹಳಷ್ಟು ಉಪಯೋಗವಿದ್ದು,
ಮಾರುಕಟ್ಟೆಯಲ್ಲಿ ಇದರ ಬೆಲೆ ಕಡಿಮೆಯಾಗಲು ಸಾಧ್ಯವಿಲ್ಲ ಹಾಗಾಗಿ ರೈತರು ತೆಂಗನ್ನು ಆತಂಕವಿಲ್ಲದೆ ಬೆಳೆಯಬಹುದು.
Therefore, Coconut planting is not a easy task for farmers due to misinformation they got from various sources.
but managing the nutrients and water in proper manner farmers can maximize the income in coconut planting. also inter cropping is one of the best for farmers to grow more in small land.
In summarizing, coconut planting is the one crop that never fell down to negative. hence farmers can easily grow coconut plants with many varieties available in market, hybrid varieties are best for profit making.
so farmers can grow inter crops also in their field it ensures the extra income with coconut income.
Thank you.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp Group – ಜೈನ್ ಆಗಿ/join whatsapp
3) ” ಟ್ವಿಟರ್ / Twitter – ಸೇರು/join Twitter
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V. K
ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
