Earn 9 thousand per month :: ಜನಿಯುನಾಗಿ ಮನೆಯಲ್ಲೇ ಕುಳಿತು ತಿಂಗಳಿಗೆ 9000 ಸಾವಿರ ದುಡಿಯಿರಿ!!

"Agriculture is our CULTURE"

Earn 9 thousand per month :: ಜನಿಯುನಾಗಿ ಮನೆಯಲ್ಲೇ ಕುಳಿತು ತಿಂಗಳಿಗೆ 9000 ಸಾವಿರ ದುಡಿಯಿರಿ!!

Stop Wasting Time, Start Earning – Paper Bag Business Guide.

ಮನೆಯಲ್ಲೇ ಇದ್ದು ಕಡಿಮೆ ಖರ್ಚಿನಲ್ಲಿ, ಅಂದರೆ ಸುಮಾರು 20 ರಿಂದ 25 ರೂಪಾಯಿಗಳಷ್ಟು ಬಂಡವಾಳವನ್ನು ಹಾಕಿ, ನ್ಯೂಸ್ ಪೇಪರ್ ಬ್ಯಾಗ್‌ಗಳನ್ನು ಹೇಗೆ ತಯಾರಿಸುವುದು ಮತ್ತು

ಅದರ ಮೂಲಕ ತಿಂಗಳಿಗೆ ಸರಿಸುಮಾರು 9,000 ರೂಪಾಯಿಗಳವರೆಗೆ ಹೇಗೆ ಸಂಪಾದನೆ ಮಾಡಬಹುದು ಎಂಬುದರ ಬಗ್ಗೆ ::

ಬಂಡವಾಳ ಮತ್ತು ಬೇಕಾಗುವ ಸಾಮಗ್ರಿಗಳು:-

Raw Materials and Production:-

• ಹಳೆಯ ನ್ಯೂಸ್ ಪೇಪರ್ (ವೃತ್ತ ಪತ್ರಿಕೆ) ಒಂದು ಕೆಜಿ ಹಳೆಯ ನ್ಯೂಸ್ ಪೇಪರ್‌ಗಳ ಬೆಲೆ ಸುಮಾರು 12 ರೂಪಾಯಿಂದ 15 ರೂಪಾಯಿಗಳವರೆಗೆ ಇರುತ್ತದೆ.

* ಗಮ್ (ಅಂಟು) ಒಂದು ಸಣ್ಣ ಬಾಟಲಿಯ ಗಮ್ ಬೆಲೆ 5 ರಿಂದ 10 ರೂಪಾಯಿಗಳವರೆಗೆ ಆಗುತ್ತದೆ.

• ಆದ್ದರಿಂದ, ಒಂದು ಕೆಜಿ ನ್ಯೂಸ್ ಪೇಪರ್ ಬ್ಯಾಗ್ ತಯಾರಿಸಲು ಕೇವಲ 20 ರೂಪಾಯಿಗಳಷ್ಟು ಬಂಡವಾಳ ಹೂಡಿಕೆ ಇದ್ದರೆ ಸಾಕು.

ತಯಾರಿಸುವ ವಿಧಾನ:-

Step-by-Step Manufacturing:-

* ಒಂದು ಕೆಜಿ ನ್ಯೂಸ್ ಪೇಪರ್‌ನಲ್ಲಿ ಸುಮಾರು 20 ವೃತ್ತಪತ್ರಿಕೆಗಳು ಇರುತ್ತವೆ. ಒಂದು ಪತ್ರಿಕೆಯಿಂದ ಸರಿಸುಮಾರು 3 ಬ್ಯಾಗ್‌ಗಳಂತೆ, ಒಟ್ಟಾರೆಯಾಗಿ 60 ಬ್ಯಾಗ್‌ಗಳನ್ನು ತಯಾರಿಸಲು ಸಾಧ್ಯವಾಗುತ್ತದೆ 

• ನ್ಯೂಸ್ ಪೇಪರ್ ಅನ್ನು ಹೇಗೆ ಮಡಚಬೇಕು ಮತ್ತು ಅಂಟನ್ನು ಯಾವ ರೀತಿ ಹಾಕಬೇಕು ಎನ್ನುವುದನ್ನು ವೀಡಿಯೊದಲ್ಲಿ ಪ್ರಾಯೋಗಿಕವಾಗಿ ವಿವರವಾಗಿ ತೋರಿಸಲಾಗಿದೆ 

ಲಾಭದ ಲೆಕ್ಕಾಚಾರ:-

Profitability and Earnings:-

• ನೀವು ತಯಾರಿಸಿದ 60 ಬ್ಯಾಗ್‌ಗಳನ್ನು 45 ರೂಪಾಯಿಂದ 50 ರೂಪಾಯಿಗಳಿಗೆ ಮಾರಾಟ ಮಾಡಬಹುದು 

* ಒಂದು ಕೆಜಿಗೆ ಸರಿಸುಮಾರು 25 ರಿಂದ 30 ರೂಪಾಯಿಗಳಷ್ಟು ಲಾಭ ದೊರೆಯುತ್ತದೆ.

• ಒಂದು ವೇಳೆ ದಿನಕ್ಕೆ 10 ಕೆಜಿ ಬ್ಯಾಗ್‌ಗಳನ್ನು ತಯಾರಿಸಿದರೆ, ನಿಮಗೆ 300 ರೂಪಾಯಿಗಳಷ್ಟು ಲಾಭ ಸಿಗುತ್ತದೆ. ಅಂದರೆ ತಿಂಗಳಿಗೆ ಸುಮಾರು 9,000 ರೂಪಾಯಿಗಳನ್ನು ಗಳಿಸಬಹುದು 

ಮಾರಾಟ ಮಾಡುವ ಬಗ್ಗೆ ಕೆಲವು ಸಲಹೆಗಳು:-

Marketing and Sales Strategy:-

ಚಿಲ್ಲರೆ ಅಂಗಡಿಗಳು – ಸಣ್ಣಪುಟ್ಟ ಕಿರಾಣಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸುವ ಬದಲು, ಈ ನ್ಯೂಸ್ ಪೇಪರ್ ಬ್ಯಾಗ್‌ಗಳನ್ನು ಬಳಸಲು ನೀಡಬಹುದು 

* ಫಾಸ್ಟ್ ಫುಡ್ ಸೆಂಟರ್‌ಗಳು – ಫಾಸ್ಟ್ ಫುಡ್‌ಗಳನ್ನು ಪಾರ್ಸೆಲ್ ಮಾಡಲು ಇಂತಹ ಪೇಪರ್ ಬ್ಯಾಗ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಆದ್ದರಿಂದ ಇಲ್ಲಿ ನೀವು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು 

ಹಣ್ಣಿನ ಅಂಗಡಿಗಳು – ಹಣ್ಣುಗಳನ್ನು ಗ್ರಾಹಕರಿಗೆ ಹಾಕಿಕೊಡಲು ಈ ಬ್ಯಾಗ್‌ಗಳು ತುಂಬಾ ಉಪಯುಕ್ತವಾಗುತ್ತವೆ 

ಕಡಿಮೆ ಬಂಡವಾಳ, ಹೆಚ್ಚು ಲಾಭ:-

Zero Tension, Low Investment:-

ಈ ಕೆಲಸವು ಮುಖ್ಯವಾಗಿ ಮನೆಯಲ್ಲಿರುವ ಹೆಂಗಸರು, ಓದುತ್ತಿರುವ ಮಕ್ಕಳು, ಅಥವಾ ಫ್ರೀ ಟೈಮ್ ಇರುವವರಿಗೆ ಬಹಳ ಸಹಾಯವಾಗುತ್ತದೆ. ಬರೀ 20 ರೂಪಾಯಿಗಳನ್ನು ಹಾಕಿ ನ್ಯೂಸ್ ಪೇಪರ್ ಬ್ಯಾಗ್ ಮಾಡುವುದನ್ನು ಕಲಿಯಬಹುದು.

ಇದರಿಂದ ದೊಡ್ಡ ಮಿಷನ್ ಏನೂ ಇಲ್ಲದೆ, ಮನೆಯಲ್ಲೇ ಕುಳಿತು ತಿಂಗಳಿಗೆ 9,000 ರೂಪಾಯಿ ತನಕ ದುಡಿಯಬಹುದು. ಸಣ್ಣ ಅಂಗಡಿಗಳು, ಹಣ್ಣಿನ ಅಂಗಡಿ, ಮತ್ತು ಹೋಟೆಲ್‍ಗಳಿಗೆ ಈ ಬ್ಯಾಗ್‌ಗಳನ್ನು ಮಾರುವುದರಿಂದ ಸ್ವಂತವಾಗಿ ದುಡಿಯಲು ಒಂದು ದಾರಿ ಸಿಗುತ್ತದೆ.

ಜೊತೆಗೆ, ಪ್ಲಾಸ್ಟಿಕ್ ಕವರ್‌ಗಳ ಬಳಕೆಯನ್ನು ಕಡಿಮೆ ಮಾಡಿ ಪರಿಸರವನ್ನು ಕಾಪಾಡಲು ಇದು ಜನರಿಗೆ ಸಹಾಯ ಮಾಡುತ್ತದೆ. ಕಡಿಮೆ ಖರ್ಚಿನಲ್ಲಿ ಒಳ್ಳೆಯ ರೀತಿಯಲ್ಲಿ ಹಣ ಸಂಪಾದಿಸಲು ಇದು ಒಂದು ಒಳ್ಳೆ ದಾರಿ.

ಈಗ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿರುವುದರಿಂದ, ಪರಿಸರಕ್ಕೆ ಹಾನಿ ಮಾಡದ ಪೇಪರ್ ಬ್ಯಾಗ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.

ಹಾಗಾಗಿ ಬಿಡುವಿನ ವೇಳೆಯಲ್ಲಿ ಮಹಿಳೆಯರು ಅಥವಾ ವಿದ್ಯಾರ್ಥಿಗಳು ಇದನ್ನು ಒಂದು ಸಣ್ಣ ಉದ್ಯಮವಾಗಿ ಪ್ರಾರಂಭಿಸಬಹುದಾಗಿದೆ.

Homemakers, students, or anyone with free time can benefit from this. Learn to make newspaper bags for just 20 rupees and earn up to 9,000 rupees monthly at home, without big machinery.

Sell to shops, stalls, and hotels to become self-employed, reduce plastic use, and earn well with low investment.

Thank you

<<< Arecanut Market : Daily Arecanut Market ( Click Here ) >>>

<  For job updates and employment related information and carrier paths please follow below Facebook Group and WhatsApp Group  >

1) ” Facebook Group ” – Click Here

2) ” WhatsApp Group ” – Click Here

Forever helpful and useful updates

 vkgrowmore.com 💚

– VK
Knowledge Lead’s & Live’s Life

"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.