"Agriculture is our CULTURE"

How to Apply Fertilizer :: ರಸಗೊಬ್ಬರ ಬಿಡುವ ಸುಲಭ ಮತ್ತು ಸರಳ ಮಾರ್ಗ!! ಶೇಕಡ 90ರಷ್ಟು ಫಲಕಾರಿ ನೇರವಾಗಿ ಗಿಡಗಳಿಗೆ ಗೊಬ್ಬರ !!

ಹನಿ ನೀರಾವರಿ ಮೂಲಕ ರಸಗೊಬ್ಬರ ಬಿಡುವ ಸುಲಭ ಮತ್ತು ಸರಳ ಮಾರ್ಗ:: ನಿಮ್ಮಲ್ಲಿ ಹನಿ ನೀರಾವರಿ ಪದ್ಧತಿ ಇದೆಯೇ? ಆದರೆ ಹನಿ ನೀರಾವರಿ ಮೂಲಕ ಹೇಗೆ ರಸಗೊಬ್ಬರ ಬಿಡುವುದು ಎಂದು ತಿಳಿಯುತ್ತಿಲ್ಲವೇ? ಇಲ್ಲಿದೆ ಸರಳ ಮತ್ತು ಸುಲಭ ಮಾಹಿತಿ!!

Fertilizer through drip irrigation, also known as fertigation, it is a modern and efficient method of supplying plant nutrients directly to the roots along with irrigation water.

In this system, water-soluble fertilizers are mixed in the irrigation water and delivered drop by drop through a network of pipes, valves, and emitters. This ensures that nutrients reach the plants in the right quantity, at the right time, and at the right place.

ರಸಗೊಬ್ಬರ ಎಂಬುವುದು ಸಸ್ಯಗಳಿಗೆ ಪೋಷಕಾಂಶಗಳನ್ನು ನೀಡುವ ಔಷಧಿ ಮಾತ್ರವಲ್ಲದೆ, ಸಸ್ಯಗಳ ಉಸಿರನ್ನು ಹಸಿರಾಗಿರಿಸುವ ಸಂಜೀವಿನಿ ಎಂದು ಹೇಳಬಹುದು. ಹಾಗಾಗಿ ಸಸ್ಯಗಳಿಗೆ ರಸಗೊಬ್ಬರ ನೀಡುವುದು ಅತ್ಯಗತ್ಯ ಮತ್ತು ಅನಿವಾರ್ಯ.

ಸಾಮಾನ್ಯವಾಗಿ ಗ್ರಾಮೀಣ ಭಾಗದ ರೈತರು ತಮ್ಮ ಬೆಳೆಗಳಿಗೆ ಸಾಂಪ್ರದಾಯಿಕವಾಗಿ ರಸ ಗೊಬ್ಬರವನ್ನು ನೀಡುವ ಪರಿಕಲ್ಪನೆಯನ್ನು ಹೊಂದಿರುತ್ತಾರೆ. ಈ ಪದ್ಧತಿ ತಪ್ಪು ಎಂದು ಹೇಳಲಾಗುವುದಿಲ್ಲ ಆದರೂ ತಂತ್ರಜ್ಞಾನ ಮುಂದುವರೆದಂತೆ ಕೃಷಿ ವೈಜ್ಞಾನಿಕ ಕ್ಷೇತ್ರದಲ್ಲಿ ಆಗುವ ಕ್ರಾಂತಿಕಾರಿ ಕೆಲವು ಬದಲಾವಣೆಗಳನ್ನು ರೈತರು ತಮ್ಮ ಕೃಷಿ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದು ಹೇಳಬಹುದು.

ಅಂತಹದೊಂದು ಕ್ರಾಂತಿಕಾರಿ ಅನ್ವೇಷಣೆ ಎಂದರೆ ಹನಿ ನೀರಾವರಿ ಮೂಲಕ ರಸಗೊಬ್ಬರವನ್ನು ನೀಡುವ ಒಂದು ಹೊಸ ಅನ್ವೇಷಣೆ.

ಸಸ್ಯಗಳ ಬೆಳವಣಿಗೆಯಲ್ಲಿ ರಸಗೊಬ್ಬರದ ಪಾತ್ರ?
Fertilizer role in plants growth?

ಯಾವುದೇ ಸಸ್ಯಗಳು ಸಮೃದ್ಧಿಯಾಗಿ ಬೆಳವಣಿಗೆಯನ್ನು ಹೊಂದಬೇಕಾದರೆ ಅವುಗಳಿಗೆ 17 ಪೋಷಕಾಂಶಗಳ ಅಗತ್ಯವಿರುತ್ತದೆ.
ಈ 17 ಪೋಷಕಾಂಶಗಳ ಪೈಕಿ ಪ್ರಮುಖವಾಗಿ NPK ಬಹಳ ಮುಖ್ಯವಾಗಿರುತ್ತದೆ.

ಸಸ್ಯಗಳಿಗೆ ರಸ ಗೊಬ್ಬರಗಳ ಅವಶ್ಯಕತೆ ಅನುಗುಣವಾಗಿ ರಸಗೊಬ್ಬರಗಳನ್ನು ಮೂರು ರೀತಿಯಾಗಿ ವಿಂಗಡಿಸಲಾಗಿದೆ:-
Fertilizers classified as three type as per plants necessity

1) ಮಹಾ ಪೋಷಕಾಂಶಗಳು (Macro Elements)
ಮಹಾ ಪೋಷಕಾಂಶಗಳು ಎನ್ನುವುದು ಸಸ್ಯಗಳ ಸಾಮಾನ್ಯ ಬೆಳವಣಿಗೆ, ಅಭಿವೃದ್ಧಿ ಹಾಗೂ ಉತ್ತಮ ಉತ್ಪಾದನೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಪೋಷಕಾಂಶಗಳು.

ಈ ಅಂಶಗಳು ಸಸ್ಯದ ರಚನೆ, ಜೈವಿಕ ಕ್ರಿಯೆಗಳು ಹಾಗೂ ಇಳುವರಿ ಹೆಚ್ಚಿಸಲು ಬಹುಮುಖ್ಯ ಪಾತ್ರ ವಹಿಸುತ್ತವೆ.
NPKಯನ್ನು ಮಹಾಪೋಷಕಾಂಶ ಎಂದು ಕರೆಯುತ್ತಾರೆ.
NPK ಎಂದರೆ,
* N- ನೈಟ್ರೊಜನ್ – (NITROGEN)
* P- ಪಸ್ಫರಸ್ – (PROSPEROUS)
* K- (POTASSIUM).

ಈ ಅಂಶಗಳು ಸಸ್ಯದ ರಚನೆ, ಜೈವಿಕ ಕ್ರಿಯೆಗಳು ಹಾಗೂ ಇಳುವರಿ ಹೆಚ್ಚಿಸಲು ಬಹುಮುಖ್ಯ ಪಾತ್ರ ವಹಿಸುತ್ತವೆ. ಡ್ರಿಪ್ ನೀರಾವರಿ ಮೂಲಕ ಗೊಬ್ಬರ ನೀಡುವಾಗ (ಫರ್ಟಿಗೇಶನ್) ಈ ಮಹಾ ಪೋಷಕಾಂಶಗಳನ್ನು ನೀರಿನಲ್ಲಿ ಕರಗುವ ಗೊಬ್ಬರಗಳಾಗಿ ಸಸ್ಯಗಳಿಗೆ ಪೂರೈಸಲಾಗುತ್ತದೆ.

2) ದ್ವಿತೀಯ ಮಹಾ ಪೋಷಕ ಅಂಶಗಳು:-
SECONDARY Elements:-

ಕ್ಯಾಲ್ಸಿಯಂ (Ca): ಕೋಶ ಗೋಡೆಯ ಬಲವರ್ಧನೆ ಹಾಗೂ ಬೇರು–ಕಾಂಡಗಳ ಬೆಳವಣಿಗೆ.
ಮ್ಯಾಗ್ನೀಷಿಯಂ (Mg): ಕ್ಲೋರೊಫಿಲ್‌ನ ಮುಖ್ಯ ಅಂಶ, ಪ್ರಕಾಶ ಸಂಶ್ಲೇಷಣೆಗೆ ಅಗತ್ಯ.
ಗಂಧಕ (S): ಪ್ರೋಟೀನ್ ನಿರ್ಮಾಣ ಮತ್ತು ಎಂಜೈಮ್ ಕ್ರಿಯೆಗಳಿಗೆ ಅವಶ್ಯಕ.

3) ಸೂಕ್ಷ್ಮ ಪೋಷಕಾಂಶಗಳು (Micro Nutrients)
ಸೂಕ್ಷ್ಮ ಪೋಷಕಾಂಶಗಳು ಎಂದರೆ ಸಸ್ಯಗಳಿಗೆ ಅಲ್ಪ ಪ್ರಮಾಣದಲ್ಲಿ ಅಗತ್ಯವಿರುವ, ಆದರೆ ಬೆಳವಣಿಗೆ, ಫಲಧಾರಣೆ ಮತ್ತು ಗುಣಮಟ್ಟಕ್ಕೆ ಅತ್ಯಂತ ಅವಶ್ಯಕವಾದ ಪೋಷಕಾಂಶಗಳು.
ಅಂತಹ ಪೋಷಕಾಂಶಗಳೆಂದರೆ,
ಕಬ್ಬಿಣ (Iron – Fe)
ಜಿಂಕ್ (Zinc – Zn)
ಮ್ಯಾಂಗನೀಸ್ (Manganese – Mn)
ತಾಮ್ರ (Copper – Cu)
ಬೋರಾನ್ (Boron – B)
ಮೋಲಿಬ್ಡಿನಮ್ (Molybdenum – Mo)
ಕ್ಲೋರಿನ್ (Chlorine – Cl)

ಇವುಗಳಲ್ಲಿ ಮಹಾಪೋಷಕಾಂಶಗಳನ್ನು “ಅತಿ ಮುಖ್ಯ ಪೋಷಕಾಂಶ”ಗಳೆಂದು ಕರೆಯಲಾಗುತ್ತದೆ.ಏಕೆಂದರೆ ಈ ಮಹಾ ಪೋಷಕಾಂಶಗಳು ಅಗತ್ಯ ಪ್ರಮಾಣದಲ್ಲಿ ಸಸ್ಯಗಳಿಗೆ ದೊರಕಿದಾಗ ಮಾತ್ರ ಉತ್ತಮ ಬೆಳೆ ಮತ್ತು ಇಳುವರಿ ಸಿಗುವುದು ಹಾಗೂ ಉತ್ತಮ ಇಳುವರಿಂದ ರೈತರು ಲಾಭವನ್ನು ಪಡೆಯುವುದು.ಹಾಗಾಗಿ ರೈತರಿಗೆ ಲಾಭ ಬೇಕಾದರೆ ಮಹಾಪೋಷಕಾಂಶಗಳ ಪೂರೈಕೆ ಅತ್ಯಂತ ಅವಶ್ಯಕವಾಗಿರುತ್ತದೆ.

ಈ ಮಹಾ ಪೋಷಕಾಂಶಗಳಾದ NPKಯ ಪಾತ್ರ:-
role of NPK fertilizer:-

ಮೊದಲಿಗೆ ಬೆಳೆಗಳ ಬೆಳವಣಿಗೆಯಲ್ಲಿ ಸಾರಜನಕವು ಭೂಮಿಯ ಮೇಲ್ಭಾಗದ ಸಸ್ಯದ ಸಮೃದ್ಧಿ ಬೆಳವಣಿಗೆಯ ಸಹಕಾರಿಯಾದರೆ, ಪಾಸ್ಪರಸ್ ಭೂಮಿಯ ಒಳಭಾಗದ ಬೇರಿನ ಬೆಳವಣಿಗೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುತ್ತದೆ. ನಂತರ ಪೊಟ್ಯಾಷ್ ಬೆಳೆಯ ಇಳುವರಿ ಉತ್ತಮವಾಗಿ ಬರಲು ಸಹಾಯಮಾಡುತ್ತದೆ.

ಹಾಗಾಗಿ ಈ ಮಹಾ ಪೋಷಕಾಂಶಗಳು ಸಸ್ಯದ ಬೆಳವಣಿಗೆ ಮತ್ತು ಇಳುವರಿಗೆ ಅತಿ ಅವಶ್ಯಕತೆ ಎಂದು ಹೇಳಬಹುದು.

ಈಗ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಳಸುವ ರಸ ಗೊಬ್ಬರಗಳು:-
Trending fertilizers in Market:-

ಸಲ್ಫೇಟ್ ರಸಗೊಬ್ಬರ
ನೈಟ್ರೇಟ್ ರಸಗೊಬ್ಬರ
ಚೀಲೇಟೆಡ್ ರಸಗೊಬ್ಬರ
ಪಸ್ಪೆಟ್ ರಸಗೊಬ್ಬರ
ನ್ಯಾನೋ ರಸಗೊಬ್ಬರ

ಈ ಐದು ರಸ ಗೊಬ್ಬರಗಳು ರೈತರಿಂದ ಅತಿ ಹೆಚ್ಚಾಗಿ ಬಳಸಲ್ಪಡುತ್ತಿವೆ. ಅದರಲ್ಲೂ ನೈಟ್ರೇಟ್ ರಸಗೊಬ್ಬರ ಯಥೇಚ್ಛವಾಗಿ ಬಳಸಲಾಗುತ್ತಿದೆ.

1) ನೈಟ್ರೇಟ್ ರಸಗೊಬ್ಬರ:- ಈ ರಸಗೊಬ್ಬರವು ಸಾರಜನಕ ಯುದ್ಧ ರಸಗೊಬ್ಬರ ವಾಗಿದ್ದು ಇದರಲ್ಲಿ ಸಾರಜನಕವು NO3 ರೀತಿಯಲ್ಲಿ ಇರುತ್ತದೆ, ಹಾಗಾಗಿ ಈ ಗೊಬ್ಬರವು ನೆಲಕ್ಕೆ ಬಿದ್ದಾಗ, NO3 ಆವಿಯಾಗುತ್ತದೆ.

ಇದರಿಂದಾಗಿ ಸಸ್ಯಕ್ಕೆ ಬೇಕಾದ ಪೋಷಕಾಂಶವು ಮಣ್ಣಿನಲ್ಲಿ ಉಳಿಯಲು ಸಹಾಯವಾಗುತ್ತದೆ.
ಹಾಗಾಗಿ ರೈತರು ನೈಟ್ರೇಟ್ ರಸಂ ಗೊಬ್ಬರಗಳನ್ನು ಬಳಕೆ ಮಾಡುವುದು ಉತ್ತಮ ಇದರಿಂದಾಗಿ ಸಸ್ಯಕ್ಕೆ ಬೇಕಾದ ನಿಗದಿತ ಪೋಷಕಾಂಶವು ಸಸ್ಯಕ್ಕೆ ದೊರೆಯುತ್ತದೆ.

ನೈಟ್ರೇಟ್ ಗೊಬ್ಬರಗಳು ಡ್ರಿಪ್ ಫರ್ಟಿಗೇಶನ್‌ನಲ್ಲಿ ವೇಗವಾಗಿ ಪರಿಣಾಮ ನೀಡುವ ನೈಟ್ರೋಜನ್ ಮೂಲವಾಗಿದ್ದು, ಸಮತೋಲನವಾಗಿ ಬಳಸಿದರೆ ಬೆಳೆಗಳ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತವೆ.

2) ಪಾಸ್ಪೆಟ್ ರಸಗೊಬ್ಬರ:- ಈ ರಸಗೊಬ್ಬರವು ಬೇರಿನ ಬೆಳವಣಿಗೆ ಸಹಾಯಕವಾಗಿದೆ.ಪಾಸ್ಪೆಟ್ ರಸಗೊಬ್ಬರವು ನಿಧಾನವಾಗಿ ಬಿಡುಗಡೆಯಾಗುವ ರಸಗೊಬ್ಬರವಾಗಿದ್ದು ಈ ರಸ ಗೊಬ್ಬರಗಳನ್ನು ಭೂಮಿಯ ಮೂಲಕ ಕೊಡುವುದು ಉತ್ತಮ.

3) ಸಲ್ಫೇಟ್ ರಸಗೊಬ್ಬರ:- ಇದು ರೈತರಿಗೆ ಕಡಿಮೆ ದರದಲ್ಲಿ ಸಿಗುವ ರಸಗೊಬ್ಬರ ವಾಗಿದ್ದು ಈ ರಸ ಗೊಬ್ಬರವನ್ನು ಖರೀದಿಸಿದಾಗ ಇದರೊಂದಿಗೆ ಇನ್ನೊಂದು ಎಲಿಮೆಂಟ್ ಕೂಡ ದೊರೆಯುತ್ತದೆ ಉದಾಹರಣೆಗೆ ಅಮೋನಿಯಂ ಸಲ್ಫೇಟ್ ರಸಗೊಬ್ಬರ.

ಈ ರಸ ಗೊಬ್ಬರದಲ್ಲಿ ಸಲ್ಫೇಟ್ನೊಟ್ಟಿಗೆ ಅಮೋನಿಯಂ ಪೋಷಕಾಂಶವು ಸಹ ಸಸ್ಯಕ್ಕೆ ದೊರೆಯುವುದರಿಂದ ಇದು ಸಹ ಉಪಯುಕ್ತ ರಸಗೊಬ್ಬರವಾಗಿದೆ.

4) ಚೀಲೇಟೆಡ್ ರಸಗೊಬ್ಬರ:- ಈ ರಸಗೊಬ್ಬರವು ಯಾವುದರೊಂದಿಗೂ ಪ್ರತಿಕ್ರಿಯಿಸುವುದಿಲ್ಲ ಅಥವಾ ರಿಯಾಕ್ಷನ್ ಆಗುವುದಿಲ್ಲ, ಆದ್ದರಿಂದ ರಾಸಾಯನಿಕ ಹಾನಿ ಕಡಿಮೆಯಾಗಿರುತ್ತದೆ. ಆದರೆ ಈ ಚಿಲೇಟೆಡ್ ರಸಗೊಬ್ಬರವು ಸಸ್ಯಕ್ಕೆ ಅತಿ ವೇಗವಾಗಿ ಪೋಷಕಾಂಶಗಳನ್ನು ಒದಗಿಸುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಈ ರಸಗೊಬ್ಬರದ ಬೆಲೆ ತುಸು ದುಬಾರಿಯಾಗಿದೆ.

5) ನ್ಯಾನೋ ರಸಗೊಬ್ಬರ:- ಈ ನ್ಯಾನೋರಸಗೊಬ್ಬರವು ನ್ಯಾನೋ ಅಂದರೆ ಅತಿ ಚಿಕ್ಕ ಕಣಗಳಿಂದ ಕೂಡಿದ್ದು, ಈ ರಸಗೊಬ್ಬರವನ್ನು ಸ್ಪ್ರೇ ಮಾಡಿದ ಕೆಲವೇ ಗಂಟೆಗಳಲ್ಲಿ, ಸಸ್ಯದ ಎಲ್ಲಾ ಭಾಗಗಳಿಗೂ ತಲುಪಿ ತನ್ನ ಕೆಲಸವನ್ನು ಶುರು ಮಾಡುತ್ತದೆ ಹಾಗಾಗಿ ಈ ರಸಗೊಬ್ಬರವು ಅತ್ಯಂತ ಪರಿಣಾಮಕಾರಿ ರಸಗೊಬ್ಬರವೆಂದನಿಸಿದೆ. ಆದರೆ ಈ ರಸಗೊಬ್ಬರವು ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ.

ಈ ರಸಗೊಬ್ಬರಗಳನ್ನು ನೀರಿನಲ್ಲಿ ಮಿಶ್ರಣ ಮಾಡಿ ಮಾಡಿ ಹನಿ ನೀರಾವರಿ ಮೂಲಕ ಸಸ್ಯಗಳಿಗೆ ಹಾಯಿಸಿದಾಗ ಸುಲಭವಾಗಿ ಸಸ್ಯಗಳಿಗೆ ರಾಸಾಯನಿಕ ಗೊಬ್ಬರ ಕೊಟ್ಟಂತಾಗುತ್ತದೆ ಹಾಗೂ ರಸಗೊಬ್ಬರದ ಅನಗತ್ಯ ವೇಸ್ಟೇಜ್ ಅನ್ನು ನಿಯಂತ್ರಿಸಬಹುದು.

ಅಲ್ಲದೆ ಈ ರಸಗೊಬ್ಬರಗಳು ನೀರಿನಲ್ಲಿ ಸುಲಭವಾಗಿ ಮಿಶ್ರಣ ವಾಗುವುದರಿಂದ ಈ ರಸಗೊಬ್ಬರಗಳು ಸಸ್ಯಗಳನ್ನು ತಲುಪಲು ಹೆಚ್ಚು ಕಷ್ಟವಾಗುವುದಿಲ್ಲ.

ಡ್ರಿಪ್ ನೀರಾವರಿ ಮೂಲಕ ಗೊಬ್ಬರ ನೀಡುವ ಫರ್ಟಿಗೇಶನ್ ಪದ್ಧತಿಯಲ್ಲಿ ನೈಟ್ರೇಟ್ ಗೊಬ್ಬರಗಳು ಅತ್ಯಂತ ಪರಿಣಾಮಕಾರಿಯಾದ ನೈಟ್ರೋಜನ್ ಮೂಲವಾಗಿವೆ.

ನೈಟ್ರೇಟ್ ರೂಪದಲ್ಲಿರುವ ನೈಟ್ರೋಜನ್ ಸಸ್ಯಗಳಿಗೆ ತಕ್ಷಣ ಲಭ್ಯವಾಗುವುದರಿಂದ ಬೇಗ ಬೆಳವಣಿಗೆ, ಹಸಿರು ಎಲೆಗಳ ಅಭಿವೃದ್ಧಿ ಮತ್ತು ಉತ್ತಮ ಇಳುವರಿಗೆ ಸಹಕಾರಿಯಾಗುತ್ತದೆ.

Fertilizer need to use

Fertilizer need to use

Overall, fertigation helps farmers save water, reduce labor costs, improve crop yield and quality, and promote sustainable agriculture. When practiced with proper fertilizer selection and correct scheduling,

fertigation becomes a highly effective tool for achieving profitable and environmentally friendly farming.

Thank you.

ಧನ್ಯವಾದಗಳು

<<< ಅಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"