Job Card List 2026 :: ಜಾಬ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ ?ಜಿಲ್ಲಾವಾರು ಪಟ್ಟಿ ಬಿಡುಗಡೆಗೊಂಡಿದೆ!!
ಉದ್ಯೋಗ ಖಾತ್ರಿ ಯೋಜನೆಯ ಮಹತ್ವದ ಮಾಹಿತಿ:: ಜಾಬ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ?? ಈಗಲೇ ಪರಿಶೀಲಿಸಿಕೊಳ್ಳಿ!!
The Mahatma Gandhi National Rural Employment Guarantee Act (MGNREGA) is a flagship social welfare scheme launched by the Government of India in 2005. The primary objective of this scheme is to enhance livelihood security in rural areas by providing at least 100 days of guaranteed wage employment in a financial year to every rural household whose adult members are willing to do unskilled manual work.
“ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGAಯು 2005″ರಲ್ಲಿ ಪರಿಣಾಮಕಾರಿಯಾಗಿ ದೇಶದಾದ್ಯಂತ ಜಾರಿಗೆ ಬಂದಿತು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಭಾರತ ಸರ್ಕಾರವು 2005ರಲ್ಲಿ ಪ್ರಾರಂಭಿಸಿದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಯಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶವು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುವುದು ಆಗಿದ್ದು, ಕೆಲಸ ಮಾಡಲು ಸಿದ್ಧವಿರುವ ಪ್ರತಿ ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರಿಗೆ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 100 ದಿನಗಳ ವೇತನ ಸಹಿತ ಉದ್ಯೋಗವನ್ನು ಖಾತರಿಪಡಿಸುವುದು ಆಗಿದೆ.
ಈ ಯೋಜನೆ ಪಾರದರ್ಶಕತೆ, ಸಾಮಾಜಿಕ ಒಳಗೊಳ್ಳಿಕೆ ಮತ್ತು “ಮಹಿಳಾ ಸಬಲೀಕರಣ”ಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಕನಿಷ್ಠ “ಒಂದು-ಮೂರನೇ ಭಾಗ”ದ ಫಲಾನುಭವಿಗಳು ಮಹಿಳೆಯರಾಗಿರಬೇಕು ಎಂಬ ನಿಯಮವಿದೆ. ಕಾರ್ಮಿಕರ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗೆ ಜಮಾ ಮಾಡುವ ಮೂಲಕ ಹಣಕಾಸು ಒಳಗೊಳ್ಳಿಕೆಯನ್ನು ಉತ್ತೇಜಿಸಲಾಗುತ್ತದೆ. MGNREGA ಯೋಜನೆಯು ಗ್ರಾಮೀಣ ಅಭಿವೃದ್ಧಿ, ಬಡತನ ನಿರ್ಮೂಲನೆ ಮತ್ತು ಶಾಶ್ವತ ಜೀವನೋಪಾಯ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವ, ವಿಶ್ವದ ಅತಿ ದೊಡ್ಡ ಉದ್ಯೋಗ ಖಾತರಿ ಯೋಜನೆಗಳಲ್ಲಿ ಒಂದಾಗಿದೆ.
ಜಾಬ್ ಕಾರ್ಡ್ ಎಂದರೇನು?
What is job card?
Job Card ಎಂದರೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಅಡಿಯಲ್ಲಿ ಅರ್ಹ ಗ್ರಾಮೀಣ ಕುಟುಂಬಗಳಿಗೆ ನೀಡಲಾಗುವ ಅಧಿಕೃತ ದಾಖಲೆ (ದಾಖಲೆ ಪತ್ರ) ಆಗಿದೆ.
ಜಾಬ್ ಕಾರ್ಡ್ ನಲ್ಲಿ ಏನೆಲ್ಲಾ ಇರುತ್ತದೆ?
What we can see in job card?
ಈ ಜಾಬ್ ಕಾರ್ಡ್‌ನಲ್ಲಿ
- ಕುಟುಂಬದ ವಯಸ್ಕ ಸದಸ್ಯರ ಹೆಸರುಗಳು,
- ವಿಳಾಸ, ಫೋಟೋ,
- ಕೆಲಸ ಮಾಡಿದ ದಿನಗಳು,
- ಪಡೆದ ವೇತನದ ವಿವರಗಳು.
ಮೊದಲಾದ ಮಹತ್ವದ ಮಾಹಿತಿಗಳು ಒಳಗೊಂಡಿರುತ್ತವೆ. ಜಾಬ್ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ MGNREGA ಯೋಜನೆಯಡಿ ಕೆಲಸ ಕೇಳುವ ಮತ್ತು ಕೆಲಸ ಪಡೆಯುವ ಹಕ್ಕು ಇರುತ್ತದೆ.
Job Cardನ ಮುಖ್ಯ ಉದ್ದೇಶಗಳು ಏನು?
What is the main objective of job card?
- ಗ್ರಾಮೀಣ ಕುಟುಂಬಗಳಿಗೆ “ಉದ್ಯೋಗ ಪಡೆಯುವ ಹಕ್ಕ”ನ್ನು “ಖಚಿತಪಡಿಸುವುದು”.
- ಕೆಲಸ ಮತ್ತು ವೇತನದ ವಿವರಗಳಲ್ಲಿ “ಪಾರದರ್ಶಕತೆ” ಕಾಯ್ದುಕೊಳ್ಳುವುದು.
- “ಮಧ್ಯವರ್ತಿತನ” ಮತ್ತು ಭ್ರಷ್ಟಾಚಾರವನ್ನು ತಡೆಯುವುದು.
- ಕಾರ್ಮಿಕರಿಗೆ “ನೇರವಾಗಿ ವೇತನ” ದೊರಕುವಂತೆ ಮಾಡುವುದು.
ಜಾಬ್ ಕಾರ್ಡ್ ನ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರೀಶೀಲಸುವುದು ಹೇಗೆ?
How to check your name in job card list?
Step 1:- ಮೊದಲು ಕೆಳಗೆ ನೀಡಿರುವ “ಅಧಿಕೃತ ವೆಬ್ ಸೈಟ್” ಗೆ ಭೇಟಿ ನೀಡಿ.
https://nregastrep.nic.in/netnrega/homestciti.aspx?state_code=15&state_name=KARNATAKA&lflag=eng&labels=labels
click above link to enter official website.

Step 2:- ಇಲ್ಲಿ ಅರ್ಜಿದಾರರು ತಮ್ಮ “ಜಿಲ್ಲೆ”ಯನ್ನು ಆಯ್ಕೆ ಮಾಡಿಕೊಳ್ಳಬೇಕು.

Step 3:- ಇಲ್ಲಿ ಅರ್ಜಿದಾರರು ತಮ್ಮ “ತಾಲೂಕ”ನ್ನು ಆಯ್ಕೆ ಮಾಡಿಕೊಳ್ಳಬೇಕು.

Step 4:- ಇಲ್ಲಿ ಅರ್ಜಿದಾರರು ತಮ್ಮ ತಮ್ಮ “ಗ್ರಾಮ ಪಂಚಾಯಿತಿ”ಯನ್ನು ಆಯ್ಕೆ ಮಾಡಿಕೊಳ್ಳಬೇಕು.

Step 5:- ನಂತರ ಅರ್ಜಿದಾರರು Job card ವಿಭಾಗದಲ್ಲಿ “job card / employment register” ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

Step 6:- ಕ್ಲಿಕ್ ಮಾಡಿದ ನಂತರ ಆಯ್ಕೆ ಮಾಡಿದ “ಪಂಚಾಯತಿ” ವ್ಯಾಪ್ತಿಯಲ್ಲಿ ಬರುವ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ ಅಲ್ಲಿ ಅರ್ಜಿದಾರರು ತಮ್ಮ ಹೆಸರು ಜಾಬ್ ಕಾರ್ಡ್ ನಂಬರ್ ಹಾಗೂ ಆ ಕಾರ್ಡಿನ ಸ್ಥಿತಿಯನ್ನು ತಿಳಿಯಬಹುದು.
ಈ ರೀತಿಯಾಗಿ ಕ್ರಮಬದ್ಧವಾಗಿ ಹಂತ ಹಂತವಾಗಿ ಜಾಬ್ ಕಾರ್ಡಿನಲ್ಲಿ ಅರ್ಜಿದಾರರು ತಮ್ಮ ಹೆಸರನ್ನು ಪರಿಶೀಲಿಸಬಹುದು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಒಂದು “ಮಹತ್ವದ ಯೋಜನೆ”ಯಾಗಿದ್ದು, ಈ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ 100 ದಿನದ ಕೆಲಸದ ಖಾತ್ರಿ ಇರುತ್ತದೆ. ವರ್ಷಕ್ಕೆ ಕನಿಷ್ಠ ನೂರು ದಿನಗಳ ಕೆಲಸ ದೊರಕುವುದರಿಂದ ಗ್ರಾಮೀಣ ಪ್ರದೇಶದ ಬಡವರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು. ಹಾಗೂ ಗ್ರಾಮೀಣ ಪ್ರದೇಶಗಳ ಅತಿ ದೊಡ್ಡ ಸಮಸ್ಯೆ ಯಾದ “ವೇತನದ ಅಸಮಾನತೆಯನ್ನು ತೊಲಗಿಸಬಹುದು”.
ಅಲ್ಲದೆ “ಕನಿಷ್ಠ ನೂರು ದಿನಗಳ ಕೆಲಸ” ದೊರೆಯುವುದರಿಂದ ನಿರ್ದಿಷ್ಟ ಋತುಗಳಲ್ಲಿ “ವಲಸೆ ಹೋಗುವುದನ್ನು ತಪ್ಪಿಸಬಹುದು”, ಹಾಗೂ ಕೆಲಸ ಮಾಡುವ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆಯ ಮೂಲಕ ಕಾರ್ಮಿಕರು ಎಷ್ಟು ದಿನ ದುಡಿದಿದ್ದಾರೆ ಒಂದು ವರ್ಷದಲ್ಲಿ ಎನ್ನುವ ನಿಖರ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ ತೀರ ಇತ್ತೀಚಿಗೆ “ಬಯೋಮೆಟ್ರಿಕ್ ಹಾಗೂ ಜಿಪಿಎಸ್ ಫೋಟೋ ಅಪ್ಲೋಡ್” ಮಾಡುವ ಮೂಲಕ ಕಾರ್ಮಿಕರ ನೈಜ ಹಾಗೂ ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ಸಹಾಯಕವಾಗಿದೆ.
ಈ ನಿಟ್ಟಿನಲ್ಲಿ MGNREGA ಯೋಜನೆಯು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಅನುಕೂಲಕರವಾಗಿದ್ದು ಈ ಅನುಕೂಲತೆಯನ್ನು ಮತ್ತಷ್ಟು ಪಾರದರ್ಶಕವಾಗಿರಿಸಲು ಜಾಬ್ ಕಾರ್ಡ್ನ ಅವಶ್ಯಕತೆ ಖಂಡಿತ ಇದೆ ಹಾಗಾಗಿ ಈ ಯೋಜನೆಯ ಫಲಾನುಭವಿಗಳು ಜಾಬ್ ಕಾರ್ಡನ್ನು ಹೊಂದಲೇಬೇಕು.
Therefore, MGNREGA is an important rural employment guarantee scheme in India. It provides a legal guarantee of 100 days of wage employment each year.

The scheme helps reduce poverty in rural areas. It prevents seasonal and distress migration to cities. Rural workers receive steady income support through this program. Job Cards are issued to track workers and days of employment. Job Cards ensure transparency and accountability in wage payments. Biometric and GPS-based photo systems verify genuine workers. The scheme reduces wage inequality in rural regions. Overall, MGNREGA “strengthens livelihood”s and rural development.
Thank you.
ಧನ್ಯವಾದಗಳು
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– VK
ಪರಿಸರ ಪರಿಸರದೊಂದಿಗೆ ಆರ್ಥಿ0ಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
