5 Lakh Loan :: ಯು.ಪಿ.ಐ ನಿಂದ ಮತ್ತೊಂದು ಹೊಸ ಸೌಲಭ್ಯ!! ಈಗ ಒಂದೇ ಕ್ಲಿಕ್ ನಲ್ಲಿ 5 ಲಕ್ಷದವರೆಗೆ ಸಿಗುತ್ತೆ ಸಾಲ!!
ಭಾರತೀಯ ರಿಸರ್ವ್ ಬ್ಯಾಂಕ್ (RBI) UPI ಸೇವೆಯಲ್ಲಿ ಒಂದು ಮಹತ್ತರ ಮೈಲಿಗಲ್ಲನ್ನು ಸಾಧಿಸಲು ಮುಂದಾಗಿದ್ದು, ಡಿಸೆಂಬರ್ 06 2024 ರಂದು ನಡೆದ ತನ್ನ ಹಣಕಾಸು ನೀತಿ ಸಭೆಯಲ್ಲಿ (MPC) ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ನಲ್ಲಿ ಕ್ರೆಡಿಟ್ ಲೈನ್/ ಸಾಲವನ್ನು ನೀಡಲು ಸಣ್ಣ ಹಣಕಾಸು ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ.
ಸುಲಭವಾಗಿ 5 ಲಕ್ಷದವರೆಗೆ ಸಾಲ ಪಡೆಯಬಹುದು!
ಈ UPI ಕ್ರೆಡಿಟ್ ಲೈನ್ ಎಂಬುದನ್ನು 2023 ರ ಸೆಪ್ಟೆಂಬರ್ ನಲ್ಲಿಯೇ ಪ್ರಾರಂಭಿಸಲಾಗಿದೆ. ಪ್ರಾರಂಭದಲ್ಲಿ ಶೆಡ್ಯೂಲ್ ವಾಣಿಜ್ಯ ಬ್ಯಾಂಕುಗಳು ಇದನ್ನು ನಿವ೯ಹಿಸುತ್ತಿದ್ದವು ಇದೀಗ ಸಣ್ಣ ಹಣಕಾಸು ಬ್ಯಾಂಕ್‌ಗಳಿಗೂ ಕೂಡ 25000/- ದಿಂದ 500,000 ರೂ. ಗಳವರೆಗೆ UPI ಮೇಲೆ ಕ್ರೆಡಿಟ್ ಲೈನ್ ಅನ್ನು ಮಂಜೂರು ಮಾಡಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು RBI ಹೇಳಿದೆ.
ಕಡಿಮೆ ಬಡ್ಡಿದರ, ಸುಲಭ ಮರುಪಾವತಿ!
ಈ ಯುಪಿಐ ಕ್ರೆಡಿಟ್ ಲೈನ್ ಮೂಲಕ 25000/- ದಿಂದ 5 ಲಕ್ಷಗಳವರೆಗೆ ನೀವು ಸಾಲವನ್ನು ಪಡೆಯಬಹುದು. ಇದಕ್ಕೆ ವಾಷಿ೯ಕ 16% ಬಡ್ಡಿದರ ಹಾಕಲಾಗುತ್ತದೆ. ಅಂದರೆ ಮಾಸಿಕ 1.4% ಆಗುತ್ತದೆ. ಇದು ಖಾಸಗಿ ಆ್ಯಪ್ ಗಳಲ್ಲಿ ಸಿಗುವ ಸಾಲದ ಬಡ್ಡಿದರಕ್ಕಿಂತ ತುಂಬಾ ಕಡಿಮೆಯಾಗಿದ್ದು, ಜನರು ತುತು೯ ಅವಶ್ಯಕತೆಗಾಗಿ ನಕಲಿ ಆ್ಯಪ್ ಮೂಲಕ ಸಾಲ ಮಾಡಿ ತೊಂದರೆಗೆ ಸಿಲುಕಬಾರದು. ಯುಪಿಐ ಮೂಲಕ ಸುಲಭವಾಗಿ ಸಾಲ ಪಡೆದು ಸುಲಭಲಾಗಿ ಮರುಪಾವತಿಸಬಹುದು.
ವಹಿವಾಟು ನಡೆಸಲು ಮಾತ್ರ ಬಳಕೆ!
ನೀವು ಯುಪಿಐ ಮೂಲಕ ಪಡೆಯುವ ಈ ಸಾಲ ನಿಮ್ಮ ಖಾತೆಗೆ ಜಮೆಯಾಗುವುದಿಲ್ಲ. ಬದಲಾಗಿ ಇದು ಯುಪಿಐ ನಲ್ಲಿಯೇ ಇರುತ್ತದೆ. ನೀವು ಇದನ್ನು ನಿಮಗೆ ಎಲ್ಲಾದರೂ ವಹಿವಾಟು ಮಾಡುವಾಗ ಬಳಸಿಕೊಳ್ಳಬಹುದು
ಏನಿದು ಯುಪಿಐ ಕ್ರೇಡಿಟ್ ಲೈನ್(UPI Creit Line) ?
ಸಾವ೯ಜನಿಕರು ತಮ್ಮ ಖಚು೯-ವೆಚ್ಚಕ್ಕಾಗಿ ಕೇವಲ ತಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಮಾತ್ರ ನೆಚ್ಚಿಕೊಂಡಿರುತ್ತಾರೆ. ಇದನ್ನು ಹೊರತುಪಡಿಸಿ ಕೆಲವರು ಕ್ರೆಡಿಟ್ ಕಾಡ್೯ ಬಳಸುತ್ತಾರೆ. ಅಥವಾ ಥಡ್೯ ಪಾಟಿ೯ ಅಪ್ಲಿಕೇಶನ್ ಗಳ ಮೂಲಕ ತುತು೯ ಸಾಲ ಪಡೆಯುತ್ತಾರೆ. ಅತಿ ಹೆಚ್ಚು ಬಡ್ಡಿ ಹಾಕುವುದರಿಂದ ಸಾಕಷ್ಟು ಜನ ತೊಂದರೆಗೆ ಸಿಲುಕಿದ್ದಾರೆ. ಇದಕ್ಕೆಲ್ಲಾ ಪರಿಹಾರದಂತೆ ಆರ್ಬಿಐ ಈ ಯುಪಿಐ ಕ್ರೆಡಿಟ್ ಲೈನ್ ಜಾರಿಗೆ ತಂದಿದ್ದು, ಯುಪಿಐ ಬಳಕೆದಾರರು ನಿಗದಿತ ಮಿತಿಯವರೆಗೆ ಹಣವನ್ನು ಸಾಲ ಪಡೆದು ಬಳಸಬಹುದು ಮತ್ತು ನಂತರ ಅದನ್ನು ಮರುಪಾವತಿ ಮಾಡಬಹುದು.
ಈ ಸೌಲಭ್ಯವನ್ನು ಸಾಮಾನ್ಯವಾಗಿ ಎಲ್ಲಾ ಬ್ಯಾಂಕ್‌ಗಳು ಅಥವಾ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಒದಗಿಸುತ್ತವೆ ಮತ್ತು Google Pay, PhonePe ಅಥವಾ Paytm ನಂತಹ UPI ಅಪ್ಲಿಕೇಶನ್‌ಗಳಲ್ಲಿಯೂ ಬಳಸಬಹುದಾಗಿದೆ.
ಯುಪಿಐ ಕ್ರೆಡಿಟ್ ಲೈನ್(UPI credit line) ನ ಪ್ರಮುಖ ಲಕ್ಷಣಗಳು:
1. ಕ್ರೆಡಿಟ್‌ಗೆ ತ್ವರಿತ ಪ್ರವೇಶ: ಒಮ್ಮೆ ಅನುಮೋದನೆ ಪಡೆದರೆ, UPI ಮೂಲಕ ತಕ್ಷಣದ ಬಳಕೆಗೆ ಕ್ರೆಡಿಟ್ ಲೈನ್ ಲಭ್ಯವಿದೆ.
2. ಯಾವುದೇ ಆಧಾರ ಬೇಕಾಗಿಲ್ಲ: ಹೆಚ್ಚಿನ UPI ಕ್ರೆಡಿಟ್ ಲೈನ್‌ಗಳು ಅಸುರಕ್ಷಿತ ಸಾಲಗಳಾಗಿವೆ, ಅಂದರೆ ಯಾವುದೇ ಮೇಲಾಧಾರ ಅಗತ್ಯವಿಲ್ಲ.
3. ಸಣ್ಣ ಟಿಕೆಟ್ ಸಾಲಗಳು: ಇದು ಸಣ್ಣ-ಮೌಲ್ಯದ
ಸಾಲಗಳನ್ನು ಕೂಡ ಕೊಡುತ್ತದೆ, ಇದರಿಂದ ದೈನಂದಿನ ಖರೀದಿಗಳನ್ನು ಕೂಡ ಮಾಡಬಹುದು
4. ಮರುಪಾವತಿಯ ನಮ್ಯತೆ: ಬಳಕೆದಾರರು ಪಡೆದ ಸಾಲದ ಮೊತ್ತವನ್ನು ಒಂದೇ ಬಾರಿಗೆ ಅಥವಾ EMI ಗಳ ಮೂಲಕ ನಿಯಮಗಳಿಗೆ ಅನುಗುಣವಾಗಿ ಮರುಪಾವತಿ ಮಾಡಬಹುದು.
5. ಕಡಿಮೆ ಬಡ್ಡಿ ಅಥವಾ ಬಡ್ಡಿ-ಮುಕ್ತ ಅವಧಿ: ಕೆಲವು ಪೂರೈಕೆದಾರರು ಸೀಮಿತ ಅವಧಿಗೆ ಬಡ್ಡಿ-ಮುಕ್ತ ಕ್ರೆಡಿಟ್ ಅನ್ನು ನೀಡುತ್ತಾರೆ.
6. ವ್ಯಾಪಕ ಬಳಕೆ: ಆನ್‌ಲೈನ್ ಶಾಪಿಂಗ್, ಬಿಲ್ ಪಾವತಿಗಳು ಅಥವಾ ವ್ಯಾಪಾರಿ ಮಳಿಗೆಗಳಲ್ಲಿ ಆಫ್‌ಲೈನ್ ವಹಿವಾಟುಗಳಿಗೆ ಬಳಸಬಹುದು.
UPI ಕ್ರೆಡಿಟ್ ಲೈನ್(Credit Line) ಅನ್ನು ಹೇಗೆ ಬಳಸುವುದು:
1. ಕ್ರೆಡಿಟ್ ಲೈನ್‌ಗಾಗಿ ಅರ್ಜಿ ಸಲ್ಲಿಸಿ: ನಿಮ್ಮ ಬ್ಯಾಂಕ್ ಅಥವಾ UPI ಆ್ಯಪ್ ಈ ಸೌಲಭ್ಯವನ್ನು ನೀಡುತ್ತಿದೆಯೇ ಎಂಬುದನ್ನು ಪರಿಶೀಲಿಸಿ.
2.ಅನುಮೋದನೆ: ಪರಿಶೀಲನೆಯ ನಂತರ, ಪೂರ್ವ-ಅನುಮೋದಿತ ಕ್ರೆಡಿಟ್ ಮಿತಿಯನ್ನು ನಿಗದಿಪಡಿಸಲಾಗಿದೆ.
3. UPI ಗೆ ಲಿಂಕ್: ಕ್ರೆಡಿಟ್ ಲೈನ್ ಅನ್ನು ನಿಮ್ಮ UPI ID ಗೆ ಲಿಂಕ್ ಮಾಡಲಾಗಿದೆ.
4. ವಹಿವಾಟು: UPI ವಹಿವಾಟುಗಳ ಸಮಯದಲ್ಲಿ ಕ್ರೆಡಿಟ್ ಲೈನ್ ಅನ್ನು ನಿಮ್ಮ ಪಾವತಿ ವಿಧಾನವಾಗಿ ಆಯ್ಕೆಮಾಡಿ.
ಜನಪ್ರಿಯ ಪೂರೈಕೆದಾರರು:
* ಬ್ಯಾಂಕ್‌ಗಳು: ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇತ್ಯಾದಿ, ಯುಪಿಐ-ಲಿಂಕ್ಡ್ ಕ್ರೆಡಿಟ್ ಲೈನ್‌ಗಳನ್ನು ನೀಡುತ್ತವೆ.
* Fintechs: Paytm ಪೋಸ್ಟ್‌ಪೇಯ್ಡ್, LazyPay, Simpl,phonepay, googlepay ಇತ್ಯಾದಿ, UPI ಯೊಂದಿಗೆ ಸಂಯೋಜಿಸಲ್ಪಟ್ಟ ಒಂದೇ ರೀತಿಯ ಸೇವೆಗಳನ್ನು ಒದಗಿಸುತ್ತದೆ.
UPI ಕ್ರೆಡಿಟ್ ಲೈನ್(credit line) ಸೌಲಭ್ಯ ಪಡೆಯುವುದು ಹೇಗೆ?
*Google Play store ನಿಂದ UPI ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕು
* ನೋಂದಣಿ ಮಾಡಿಕೊಳ್ಳಬೇಕು
*ಕ್ರೆಡಿಟ್ ಲೈನ್ ಅನ್ನು ಆಯ್ಕೆಯಾಗಿ ಆಯ್ಕೆಮಾಡಬೇಕು
*ಡ್ರಾಪ್ ಡೌನ್(Dropdown) ನಿಂದ ನಿಮ್ಮ ವಿತರಿಸುವ ಬ್ಯಾಂಕ್ ಹೆಸರನ್ನು ಆಯ್ಕೆಮಾಡಬೇಕು.
*ನಿಮ್ಮ ವಿತರಿಸುವ ಬ್ಯಾಂಕ್‌ನೊಂದಿಗೆ ಮೊಬೈಲ್ ಸಂಖ್ಯೆಯ ನವೀಕರಣದ ಆಧಾರದ ಮೇಲೆ, ಮುಖವಾಡದ ಲಭ್ಯವಿರುವ ಕ್ರೆಡಿಟ್ ಲೈನ್(credit line) ಪರದೆಯ ಮೇಲೆ ಕಾಣಿಸುತ್ತದೆ.
*ನೀವು ಲಿಂಕ್ ಮಾಡಲು ಮತ್ತು ದೃಢೀಕರಿಸಲು ಬಯಸುವ ಕ್ರೆಡಿಟ್ ಲೈನ್ ಖಾತೆಯನ್ನು ಆಯ್ಕೆಮಾಡಿ.
*UPI ಪಿನ್ ರಚಿಸಿಕೊಂಡು ಬಳಕೆ ಮಾಡಬಹುದು.
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp Group – ಜೈನ್ ಆಗಿ/join whatsapp
3) ” ಟ್ವಿಟರ್ / Twitter – ಸೇರು/join Twitter
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ