Gruhalaxmi Scheme:: ಗೃಹಲಕ್ಷ್ಮೀ 15 ನೇ ಕಂತಿನ ಹಣ ಬಂದಿಲ್ವಾ? ಹೀಗೆ ಮಾಡಿ ಹಣ ಬರುತ್ತೆ! 16 ನೇ ಕಂತಿನ ಹಣ ಯಾವಾಗ ಜಮೆ! ಲಕ್ಷ್ಷೀ ಹೆಬ್ಬಾಳ್ಕರ್ ಹೇಳಿಕೆ!
ಡಿಸೆಂಬರ್ 12ನೇ ತಾರೀಖಿನಿಂದ ಗೃಹಲಕ್ಷ್ಮೀ ಯೋಜನೆಯಡಿಯ 15ನೇ ಕಂತಿನ ಹಣವು ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜಮೆಯಾಗುತ್ತಿದೆ ಆದರೂ ಕೂಡ ಇನ್ನು ಹಲವು ಜನರು 14 ಮತ್ತು 15ನೇ ಕಂತಿನ ಹಣ ಬಂದಿಲ್ಲವೆಂದು ಹೇಳುತ್ತಿದ್ದಾರೆ ಸದ್ಯಕ್ಕೆ ಸರ್ಕಾರವು
15ನೇ ಕಂತಿನ ಹಣವನ್ನು ಎಲ್ಲರಿಗೂ ಜಮೆ ಮಾಡುತ್ತಿದ್ದು ಯಾರಿಗೆಲ್ಲ ಹದಿನೈದನೇ ಕಂತಿನ ಹಣ ಜಮೆಯಾಗಿಲ್ಲವೋ ಡಿಸೆಂಬರ್ ತಿಂಗಳ ಅಂತ್ಯದವರೆಗೆ ಕಾದು ನೋಡಿ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಫಲಾನುಭವಿಗಳಿಗೂ ಹಣ ಜಮೆಯಾಗಲಿದೆ
14 & 15 ನೇ ಕಂತು ಬಂದೇ ಇಲ್ಲ! ಏನು ಮಾಡೋದು?
ಆದರೆ ಯಾರಿಗೆಲ್ಲಾ ಇದುವರೆಗೂ 14 ಮತ್ತು 15ನೇ ಕಂತಿನ ಹಣ ಆಗಿಲ್ಲ ಎನ್ನುವುದಾದರೆ ಅಂತಹವರು ಇ-ಕೆವೈಸಿಯನ್ನು ಮಾಡಿಸಿದ್ದೀರೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ ಹಾಗೂ ನಿಮ್ಮ ರೇಷನ್ ಕಾರ್ಡ್ ಏನಾದರೂ ಇತ್ತೀಚಿಗೆ ನಡೆದ ರದ್ದು ಪ್ರಕ್ರಿಯೆಯಲ್ಲಿ ರದ್ದಾಗಿದೆಯೇ ಎಂದು ಚೆಕ್ ಮಾಡಿಕೊಂಡು
ಅದನ್ನು ಸರಿಪಡಿಸಿಕೊಳ್ಳಿ. ಇದ್ಯಾವುದೂ ಅಲ್ಲದೆ ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದಲೂ ಕೂಡ ಹಣ ಬಂದಿರಲಿಕ್ಕಿಲ್ಲ ಆದ್ದರಿಂದ ನೀವು ಒಮ್ಮೆ ಸಿ ಡಿ ಪಿ ಓ ಕಚೇರಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಿರಿ
16 ನೇ ಕಂತಿನ ಹಣ ಯಾವಾಗ ಬರುತ್ತೆ?
ಈಗಾಗಲೇ 15ನೇ ಕಂತಿನ ಹಣ ಪಡೆದಿರುವ ಮಹಿಳೆಯರು 16ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂದು ಕೇಳುತ್ತಿದ್ದಾರೆ ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳುವ ಪ್ರಕಾರ ಪ್ರಸ್ತುತ 15ನೇ ಕಂತಿನ ಹಣವನ್ನು ಪ್ರತಿಯೊಬ್ಬ ಫಲಾನುಭವಿಗಳಿಗೂ ತಲುಪಿಸಬೇಕಾಗಿದ್ದು
15ನೇ ಕಂತಿನ ಹಣವನ್ನು ಸಂಪೂರ್ಣವಾಗಿ ಎಲ್ಲರಿಗೂ ಜಮೆಯಾಗಬೇಕು ಅದಾದ ನಂತರ 2025 ರ ಜನವರಿ ತಿಂಗಳಲ್ಲಿ 16ನೇ ಕಂತಿನ ಹಣವನ್ನು ಹಾಕುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ಸದ್ಯಕ್ಕೆ ಗೃಹಲಕ್ಷ್ಮಿಯ ಫಲಾನುಭವಿಗಳಿಗೆ 16ನೇ ಕಂತಿನ ಹಣ ಸಿಗುವುದಿಲ್ಲ ಅದು ಜನವರಿ ತಿಂಗಳ ಎರಡನೇ ವಾರ ಅಥವಾ ಮೂರನೇ ವಾರದಲ್ಲಿ ಬರಬಹುದು.
15 ನೇ ಕಂತಿನ ಹಣ ಬಂದಿರುವ ಬಗ್ಗೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ರಾಜ್ಯ ಸರ್ಕಾರದ ಡೈರೆಕ್ಟ್ ಬೆನಿಫಿಟ್ ಟ್ರಾನ್ಸರ್ (DBT) ಆಪ್ ಬಳಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವ ಬಗ್ಗೆ ಪರಿಶೀಲಿಸಬಹುದು.
Step 1: ಡಿಬಿಟಿ ಕರ್ನಾಟಕ (DBT Karnataka) ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುಬೇಕು. ಅದಕ್ಕಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://play.google.com/store/apps/details?id=com.dbtkarnataka
Step 2: ನಿಮ್ಮ ಆಧಾರ ಕಾರ್ಡ್ ನಂಬರ್ ಹಾಗೂ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ

Step 3: ನಂತರ ಬಂದಿರುವ ಓಟಿಪಿಯನ್ನು ಎಂಟರ್ ಮಾಡಿ ವೆರಿಫೈ (Verify) ಬಟನ್ ಮೇಲೆ ಕ್ಲಿಕ್ ಮಾಡಿ

Step 4: ನಂತರ 4 ಸಂಖ್ಯೆಗಳ ಎಮ್-ಪಿನ್(M-PIN) ಕ್ರಿಯೇಟ್ ಮಾಡಿಕೊಳ್ಳಿ ನಂತರ ನಿಮ್ಮ ವಿವರಗಳಿರುವ ಪೇಜ್ ಓಪನ್ ಆಗುತ್ತದೆ ಅಲ್ಲಿ ಮೊಬೈಲ್ ನಂಬರ್ ಹಾಕಿ ಓಕೆ ಮೇಲೆ ಕ್ಲಿಕ್ ಮಾಡಿ

Step 5:ನಂತರ ಓಪನ್ ಆಗುವ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ (Payment Status) ಎಂಬ ಆಯ್ಕೆ ಇದೆ ಅದರ ಮೇಲೆ ಕ್ಲಿಕ್ ಮಾಡಿ

Step 6: ನಂತರ ನೀವು ಯಾವ ಯಾವ ಸ್ಟೀಮ್ ಗಳಲ್ಲಿ ಸರ್ಕಾರದಿಂದ ಅನುದಾನ ಪಡುತ್ತಿರುವಿರಿ ಆ ಎಲ್ಲಾ ಸ್ಕಿಮ್ ಗಳ ಮಾಹಿತಿ ತೋರಿಸುತ್ತದೆ. ಅಲ್ಲಿ ಗೃಹ ಲಕ್ಷ್ಮೀ ಯೋಜನೆ (Gruhalaxmi scheme) ಆಯ್ಕೆಯಿದ್ದು, ಅದರ ಮೇಲೆ ಕ್ಲಿಕ್ ಮಾಡಿ

ಆಗ ನಿಮಗೆ ನೀವು ಎಷ್ಟು ಕಂತುಗಳ ಹಣ ಪಡೆದಿದ್ದೀರಿ ಯಾವಾಗ ಜಮೆಯಾಗಿದೆ ಎಂಬ ಎಲ್ಲಾ ಮಾಹಿತಿ ಸಿಗುತ್ತದೆ.

ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
