High Court Order on Prohibited :: ಈ ಪದಗಳನ್ನು ಜನಸಾಮಾನ್ಯರು ಬಳಸಿದರೆ, ನ್ಯಾಯಾಂಗ ಬಂಧನ!!

"Agriculture is our CULTURE"

Click Here Join WhatsApp Group

High Court Order on Prohibited :: ಈ ಪದಗಳನ್ನು ಜನಸಾಮಾನ್ಯರು ಬಳಸಿದರೆ, ನ್ಯಾಯಾಂಗ ಬಂಧನ!!

ಬಳಸಲು ನಿಷೇಧಿಸಲಾದ ಪದದ ಕುರಿತು ಉಚ್ಚ ನ್ಯಾಯಾಲಯದ ಆದೇಶ:-

High Court Order on Prohibited Terminology:-

* ಕನಾ೯ಟಕ ಉಚ್ಚ ನ್ಯಾಯಾಲಯವು ಇತ್ತೀಚೆಗೆ ಒಂದು ಮಹತ್ವದ ತೀರ್ಪಿನಲ್ಲಿ ‘ಜಾಡಮಾಲಿ’ (Sweeper) ಎಂಬ ಪದವನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.

ಈ ಪದವನ್ನು ಸಾರ್ವಜನಿಕರು ಮತ್ತು ಸರ್ಕಾರಿ ಇಲಾಖೆಗಳು ಇನ್ನು ಮುಂದೆ ಬಳಸಬಾರದೆಂದು ನಿರ್ದೇಶಿಸಿದೆ. 

* ಯಾವುದೇ ಒಂದು ನಿರ್ದಿಷ್ಟ ಸಮುದಾಯವನ್ನಾಗಲೀ ಅಥವಾ ವೃತ್ತಿಯನ್ನಾಗಲೀ ಕೀಳಾಗಿ ಕಾಣುವಂತಹ ಪದಗಳ ಬಳಕೆಯನ್ನು ತಡೆಯುವುದು ಈ ಆದೇಶದ ಪ್ರಮುಖ ಉದ್ದೇಶವಾಗಿದೆ.

ಪರ್ಯಾಯ ಗೌರವಯುತ ಪದಗಳು :-

Alternative Respectful Titles:-

• ‘ಜಾಡಮಾಲಿ‘ ಎಂಬ ಪದದ ಬದಲಾಗಿ ನ್ಯಾಯಾಲಯವು ಈ ಕೆಳಗಿನ ಗೌರವಯುತ ಪದಗಳನ್ನು ಬಳಸಲು ಶಿಫಾರಸ್ಸು ಮಾಡಿದೆ:

* ಸ್ವಚ್ಛತಾ ಸಹಾಯಕ (Sanitation Assistant)

• ಸ್ವಚ್ಛತಾ ನೌಕರ (Sanitation Worker)

ಆದೇಶದ ಹಿನ್ನೆಲೆ :-

Background of the Order:-

* ತುಮಕೂರು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಬಾಬು ಮತ್ತು ಇತರ ವ್ಯಕ್ತಿಗಳು ತಮ್ಮ ಸೇವೆಯನ್ನು ಕಾಯಂಗೊಳಿಸುವಂತೆ ಕೋರಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. 

• ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರಿದ್ದ ಪೀಠವು ಈ ಮಹತ್ವಪೂರ್ಣ ತೀರ್ಮಾನವನ್ನು ಹೊರಡಿಸಿದೆ. 

* ವಿಚಾರಣೆಯ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು ಸಹ ಈ ಪದವನ್ನು ಬದಲಾಯಿಸುವ ಪ್ರಸ್ತಾಪಕ್ಕೆ ಸಮ್ಮತಿಯನ್ನು ಸೂಚಿಸಿದ್ದರು.

ಸ್ವಚ್ಛತಾ ನೌಕರರ ಸೇವೆಯ ಮಹತ್ವ :-

Significance of Sanitation Workers’ Service:-

* ಸ್ವಚ್ಛತಾ ನೌಕರರು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಯು ಅತ್ಯಂತ ಮೌಲ್ಯಯುತವಾದುದು. ಅವರು ಒಂದು ದಿನ ಕೆಲಸ ಮಾಡದಿದ್ದರೂ ನಗರಗಳೆಲ್ಲಾ ಅಸ್ತವ್ಯಸ್ತವಾಗುತ್ತವೆ.

ಅಂತಹ ಗೌರವಾನ್ವಿತ ವೃತ್ತಿಯನ್ನು ಮಾಡುವ ವ್ಯಕ್ತಿಗಳನ್ನು ಸಂಬೋಧಿಸುವ ಪದವು ಸಹ ಗೌರವಯುತವಾಗಿರಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

ಸಾರ್ವಜನಿಕರಿಗೆ ಎಚ್ಚರಿಕೆ:-

Caution for General Public:-

• ಸಾಮಾನ್ಯವಾಗಿ ಜನರು ಆಡುಮಾತಿನಲ್ಲಿ ಇಂತಹ ಪದಗಳನ್ನು ಬಳಸಿಬಿಡುತ್ತಾರೆ, ಆದರೆ ಅಂತಹ ಬಳಕೆಯು ಕಾನೂನು ಕ್ರಮಕ್ಕೆ ಅಥವಾ ಕೋರ್ಟ್ ಕಚೇರಿಗಳಿಗೆ ಅಲೆದಾಡುವಂತೆ ಮಾಡಬಹುದು. 

* ಆದ್ದರಿಂದ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ಇನ್ನು ಮುಂದೆ ‘ಸ್ವಚ್ಛತಾ ನೌಕರ‘ ಎಂಬ ಪದವನ್ನೇ ಬಳಸಬೇಕು ಎಂದು ತಿಳಿಸಲಾಗಿದೆ.

ವೃತ್ತಿ ಗೌರವಕ್ಕೆ ಹೈಕೋರ್ಟ್ ಮನ್ನಣೆ:-

High Court Recognizes Occupational Dignity:-

ಸಮಾಜದಲ್ಲಿ ಎಲ್ಲ ಕೆಲಸಗಳಿಗೂ ಅದರದ್ದೇ ಆದ ಬೆಲೆ ಇದೆ. ‘ಜಾಡಮಾಲಿ‘ ಅನ್ನೋ ಪದ ಹಿಂದಿನಿಂದ ಒಂದು ಜಾತಿಯ ಜನರನ್ನು ಕೀಳಾಗಿ ಕಾಣುವ ಹಾಗೆ ಅಥವಾ ಅವರ ಕೆಲಸವನ್ನು ಕೀಳಾಗಿ ತೋರಿಸುವ ಸಂಕೇತವಾಗಿತ್ತು.

ಆದರೆ ಹೈಕೋರ್ಟ್ ಕೊಟ್ಟ ಈ ತೀರ್ಪು, ಸ್ವಚ್ಛ ಮಾಡುವ ಕೆಲಸದವರು ಬರೀ ಕಸ ಗುಡಿಸೋವರಲ್ಲ, ಅವರು ಸಮಾಜದ ಆರೋಗ್ಯ ಕಾಪಾಡುವ ‘ಸ್ವಚ್ಛತಾ ರಾಯಭಾರಿಗಳು‘ ಅಂತ ಗೌರವ ಕೊಡುತ್ತದೆ.

ನಮ್ಮ ಸಂವಿಧಾನದ 21ನೇ ವಿಧಿಯ ಪ್ರಕಾರ ಪ್ರತಿಯೊಬ್ಬರಿಗೂ ‘ಗೌರವವಾಗಿ ಬದುಕುವ ಹಕ್ಕು‘ (Right to Dignity) ಇದೆ ಅನ್ನೋದನ್ನ ಇದು ಎತ್ತಿ ತೋರಿಸುತ್ತದೆ.

ಈ ತೀರ್ಪಿನಿಂದ ಸ್ವಚ್ಛ ಮಾಡುವ ಕೆಲಸದವರಿಗೆ ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಅವರನ್ನು ‘ಸ್ವಚ್ಛತಾ ಸಹಾಯಕ‘ ಅಥವಾ ‘ಸ್ವಚ್ಛತಾ ನೌಕರ‘ ಅಂತ ಕರೆದರೆ,

ಅವರು ಸಮಾಜದಲ್ಲಿ ಮುಖ್ಯವಾದ ಗೌರವಸ್ಥ ನೌಕರರು ಅಂತ ಅನಿಸುತ್ತದೆ. ಇದರಿಂದ ಜನರಿಗೆ ಕೆಲಸದ ಗೌರವದ (Dignity of Labour) ಬಗ್ಗೆ ತಿಳಿಯುತ್ತದೆ.

ಕೆಲವರಿಗೆ ಗೊತ್ತಿಲ್ಲದೆ ಇಂತಹ ಪದಗಳನ್ನು ಬಳಸೋದ್ರಿಂದ ಆಗುವ ತೊಂದರೆ ತಪ್ಪುತ್ತದೆ. ಕೊನೆಗೆ, ಇದು ಸಮಾಜದಲ್ಲಿ ಯಾರು ದೊಡ್ಡವರು, ಯಾರು ಚಿಕ್ಕವರು ಅನ್ನೋ ಮನೋಭಾವ ತೆಗೆದುಹಾಕಿ, ಎಲ್ಲರೂ ಒಂದೇ ಅನ್ನೋ ಭಾವನೆ ಮೂಡಿಸುತ್ತದೆ.

Every job has value. “Jadamali” was used to demean certain workers, but this High Court judgment recognizes sanitation workers as ‘Ambassadors of Cleanliness

Who protect public health. This reinforces the Right to Dignity under Article 21.

This ruling helps sanitation workers develop self-respect by being called ‘Sanitation Assistants‘ or ‘Sanitation Workers,’ making them feel respected.

It educates the public about the Dignity of Labour, preventing legal issues from unintentional slurs.

Ultimately, this removes ‘high‘ or ‘low‘ status, fostering equality.

Thank you.
ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.