Canara Bank Free Training :: ಕುರಿ ಸಾಕಾಣಿಕೆಗೆ 25 ಲಕ್ಷ ಸಬ್ಸಿಡಿ!! ಕೆನರಾ ಬ್ಯಾಂಕ್‌ನಿಂದ ಊಟ, ವಸತಿ ಸಹಿತ ಉಚಿತ ತರಬೇತಿ, ಅರ್ಜಿ ಸಲ್ಲಿಸುವ ವಿಧಾನ!!!
ಸ್ವಾ ಉದ್ಯೋಗ ಮಾಡುವವರಿಗೆ ಕೆನರಾ ಬ್ಯಾಂಕ್ ನಿಂದ ಭರ್ಜರಿ ಆಫರ್!!::ಕುರಿ ಸಾಕಾಣಿಕೆಗೆ 25 ಲಕ್ಷ ಸಬ್ಸಿಡಿ! ಕೆನರಾ ಬ್ಯಾಂಕ್‌ನಿಂದ ಊಟ, ವಸತಿ ಸಹಿತ ಉಚಿತ ತರಬೇತಿ ಕೂಡಲೇ ಅರ್ಜಿ ಸಲ್ಲಿಸಿ!!!
Self-employment in sheep rearing is one of the most sustainable and profitable livelihood options, especially for rural families.
It requires relatively low initial investment in this perspective Canara bank providing “13 days Free Councilling” for sheep rearing and disease management in sheep health.
ಇಂದಿನ ಕಾಲಘಟ್ಟದಲ್ಲಿ ಉದ್ಯೋಗ ಎನ್ನುವುದರ ಅವಶ್ಯಕತೆ ತುಂಬಾ ಇದೆ, ಹಾಗಾಗಿ ಇಂದಿನ ಯುವ ಜನತೆ ಕೇವಲ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಸ್ವಯಂ ಉದ್ಯೋಗಗಳಲ್ಲಿಯೂ ತಮ್ಮದೇ ಆದ ಯಶಸ್ಸನ್ನು ಸಾಧಿಸುತ್ತಿದ್ದಾರೆ.
ಅಂತಹ ಕೆಲವು ಸ್ವಯಂ ಉದ್ಯೋಗಗಳ ಪೈಕಿ ಕುರಿ ಸಾಕಾಣಿಕೆ ಒಂದು ಅತ್ಯುತ್ತಮ ಸ್ವಯಂ ಉದ್ಯೋಗ, ಏಕೆಂದರೆ ಇಲ್ಲಿ ಹೂಡಿಕೆ ಮಾಡುವಂತ ಮೊತ್ತ ಕಡಿಮೆ ಇದ್ದರೂ, ಗಳಿಸುವ ಲಾಭ ಅಧಿಕವಾಗಿರುತ್ತದೆ.
ಆದರೆ ಈ ಕೆಲಸವನ್ನು ಸುಲಭವಾಗಿ ನಿರ್ವಹಿಸಬೇಕೆಂದರೆ ಕುರಿ ಸಾಕಾಣಿಕೆಯನ್ನು ಸ್ವಯಂ ಉದ್ಯೋಗವಾಗಿ ಪಡೆದುಕೊಳ್ಳುವವರಿಗೆ ಅಗತ್ಯ ತರಬೇತಿ ಅವಶ್ಯಕ.
ಏಕೆಂದರೆ ಈ ಒಂದು ಸ್ವಯಂ ಉದ್ಯೋಗದಲ್ಲಿ ಕುರಿಗಳಿಗೆ ಯಾವ ರೀತಿಯ ಆಹಾರ ನೀಡಬೇಕು ಎಂಬುದರಿಂದ ಹಿಡಿದು ಕುರಿಗಳ ಆರೋಗ್ಯದವರೆಗೂ ಕುರಿಗಳ ಪ್ರತಿಯೊಂದು ಅವಶ್ಯಕತೆಯನ್ನು ಸೂಕ್ಷ್ಮವಾಗಿ ಗಮನಿಸುವ ವ್ಯವಧಾನ ಅತ್ಯಗತ್ಯ.
ಹಾಗಾಗಿ ಈ ವ್ಯವಧಾನಗಳನ್ನು ನಿರಂತರ ಮತ್ತು ಕ್ರಮಬದ್ಧ ತರಬೇತಿಯಿಂದ ಕಲಿತಾಗ ಈ ಸ್ವಯಂ ಉದ್ಯೋಗ ಸುಲಭವಾಗುತ್ತದೆ ಮತ್ತು ಈ ಕೆಲಸವನ್ನು ನಿರ್ವಹಿಸಬಹುದು.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆನರಾ ಬ್ಯಾಂಕ್ ಸ್ವಯಂ ಉದ್ಯೋಗದಲ್ಲಿ ಕುರಿ ಸಾಕಾಣಿಕೆ ಆಯ್ಕೆ ಮಾಡಿಕೊಳ್ಳುವ ರೈತರಿಗೆ “ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI)” ವತಿಯಿಂದ
ಕುರಿ ಸಾಕಾಣಿಕೆಯಲ್ಲಿ ಕಡಿಮೆ ಬಂಡವಾಳದಲ್ಲಿ ಅಧಿಕ ಲಾಭ ಪಡೆಯುವುದು ಹೇಗೆ ಮತ್ತು ಕುರಿ ಸಾಕಾಣಿಕೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಯಾವುವು ಎಂಬುದರ ಕುರಿತು ಮಾಹಿತಿ ನೀಡುವ ತರಬೇತಿಯನ್ನು ನಿಯೋಜಿಸಿದೆ.
ಈ ತರಬೇತಿಗೆ ಯಾರು ಅರ್ಹರು?
Who eligible for thus training?
ತರಬೇತಿ ಪಡೆಯಲಿಚ್ಚಿಸುವವರ “ವಯಸ್ಸು 18 ರಿಂದ 35 ವರ್ಷ”ದ ಒಳಗಿರಬೇಕು.
ಕರ್ನಾಟಕದ “ಖಾಯಂ ನಿವಾಸಿ”ಯಾಗಿರಬೇಕು (ರಾಜ್ಯದ ಯಾವುದೇ ಜಿಲ್ಲೆಯವರು ಭಾಗವಹಿಸಬಹುದು).
“ಕನ್ನಡ” ಓದಲು ಮತ್ತು ಬರೆಯಲು ಬರಬೇಕು.
ವಿಶೇಷ ಸೂಚನೆ: “ಗ್ರಾಮೀಣ ಭಾಗದ ಬಿಪಿಎಲ್ (BPL) ಕಾರ್ಡ್ ಹೊಂದಿರುವವರಿಗೆ ಮೊದಲ ಆದ್ಯತೆ” ನೀಡಲಾಗುತ್ತದೆ.
ಈ ತರಬೇತಿಯ ಮುಖ್ಯ ಉದ್ದೇಶ:
specific object of training for sheep rearing:
ಕುರಿ ಸಾಕಾಣಿಕೆ ತರಬೇತಿಯ ಮುಖ್ಯ ಉದ್ದೇಶವೆಂದರೆ ರೈತರಿಗೆ ಅಗತ್ಯ ಮಾಹಿತಿಯನ್ನು ನೀಡುವುದು.
ಕಡಿಮೆ ಬಂಡವಾಳದಿಂದ ಹೆಚ್ಚಿನ ಲಾಭಗಳಿಸುವ ಬಗ್ಗೆ ಮಾಹಿತಿ ಒದಗಿಸುವುದು.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಸಿಗುವ ಸಾಲ, ಸೌಲಭ್ಯ ಹಾಗೂ ಸಬ್ಸಿಡಿಗಳ ಬಗ್ಗೆ ಮಾಹಿತಿ ನೀಡುವುದು.
ಈ ತರಬೇತಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದು ಹೇಗೆ?
How to register applicant name for training?
ಈ ತರಬೇತಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ನಮೂನೆ ಇರುವುದಿಲ್ಲ. ಬದಲಾಗಿ ಆಸಕ್ತರು ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳ ಬಹುದು,
8970476050,
9591514154,
9686248369,
8970446644,
9505894247
ಈ ಮೇಲೆ ಕಾಣುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ, ತಮ್ಮ ವೈಯಕ್ತಿಕ ವಿವರಗಳನ್ನು ನೀಡಿ “ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI)” ನೀಡುವ ತರಬೇತಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಹಾಗಾದರೆ, ಕುರಿ ಸಾಕಣಿಕೆಯ ಬಗ್ಗೆ ಮಾಹಿತಿ ನೀಡುವ ತರಬೇತಿ ಯಾವಾಗ ಶುರು ಆಗುತ್ತದೆ ಮತ್ತು ತರಬೇತಿ ನಡೆಯುವ ಸ್ಥಳ, ವಿಳಾಸ ಏನು?
When training will start and Where the training will conduct?
ತರಬೇತಿಯು 2026ರ ಜನವರಿ 19 ರಿಂದ ಪ್ರಾರಂಭವಾಗಿ ಒಟ್ಟು 13 ದಿನಗಳ ಕಾಲ ನಡೆಯಲಿದೆ.
ಸ್ಥಳ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರ, ಸೊಣ್ಣಹಳ್ಳಿಪುರ, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಈ ತರಬೇತಿಯು ವಿಶೇಷವಾಗಿ ಯಾವ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ?
on which topics information will provide by this training?
ರಾಷ್ಟ್ರೀಯ ಜಾನುವಾರು ಮಿಷನ್ (NLM): ಈ ಯೋಜನೆಯಡಿ ಕುರಿ ಸಾಕಾಣಿಕೆ ಆರಂಭಿಸಲು ಬರೋಬ್ಬರಿ ₹25 ಲಕ್ಷದವರೆಗೆ ಶೇ. 50% ರಷ್ಟು ಸಬ್ಸಿಡಿ ಸಿಗುತ್ತದೆ! ಎನ್ನುವ ವಿಷಯದಲ್ಲಿ ಈ ಸೌಲಭ್ಯವನ್ನು ಪಡೆಯುವುದು ಹೇಗೆ ಎಂದು ತಿಳಿಸಲಾಗುತ್ತದೆ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: “20 ಕುರಿ + 1 ಮೇಕೆ ಘಟಕಕ್ಕೆ ಒಟ್ಟು ₹1.75 ಲಕ್ಷ ವೆಚ್ಚದಲ್ಲಿ, ಸರ್ಕಾರದಿಂದ ₹43,750 ಸಹಾಯಧನ ಮತ್ತು ಕಡಿಮೆ ಬಡ್ಡಿದರದಲ್ಲಿ ₹87,500 ಸಾಲ ಸೌಲಭ್ಯವಿದೆ”.
ಈ ಸೌಲಭ್ಯದ ಮಹತ್ವ ಮತ್ತು ಅವಶ್ಯಕತೆಯನ್ನು ತರಬೇತಿಯಲ್ಲಿ ತಿಳಿಸಿಕೊಡಲಾಗುತ್ತದೆ.
ನರೇಗಾ ಯೋಜನೆ (NREGA): ಗ್ರಾಮ ಪಂಚಾಯ್ತಿಯಲ್ಲಿ ಅರ್ಜಿ ಸಲ್ಲಿಸಿ, ಕುರಿಗಳಿಗೆ ಶೆಡ್ (ದನದ ಹಟ್ಟಿ) ನಿರ್ಮಿಸಲು ₹68,000/- ವರೆಗೆ ಆರ್ಥಿಕ ನೆರವು ಪಡೆಯಬಹುದು.
ಎನ್ನುವುದರ ಕುರಿತು ವಿಸ್ತಾರವಾದ ಮಾಹಿತಿಯನ್ನು ಹಂಚಿಕೊಡಲಾಗುವುದು.
ಇತರೆ ಯೋಜನೆಗಳಾದ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿಯ ರೈತರಿಗೆ ಶೇ.50% ಸಬ್ಸಿಡಿ ಹಾಗೂ ಸಹಕಾರ ಸಂಘಗಳ ಮೂಲಕವೂ ಸಾಲ ಸೌಲಭ್ಯಗಳು ಲಭ್ಯವಿದೆ.
ಅಲ್ಲದೆ ಕೇಂದ್ರ ಸರ್ಕಾರದಿಂದ ಸಿಗುವ ಇನ್ನೂ ಹತ್ತು ಹಲವು ಸೌಲಭ್ಯಗಳ ಕುರಿತು 13 ದಿವಸ ನಡೆಯುವ ಉಚಿತ ತರಬೇತಿಯಲ್ಲಿ ಮಾಹಿತಿ ನೀಡಲಾಗುತ್ತದೆ.
ಮೇಲೆ ನಮೂದಿಸಿದಂತೆ ಕುರಿ ಸಾಕಾಣಿಕೆ ಒಂದು ಅತ್ಯುತ್ತಮ ಲಾಭದಾಯಕ ಸ್ವಯಂ ಉದ್ಯೋಗ ವಾಗಿದ್ದು
ಈ ಉದ್ಯೋಗದಲ್ಲಿ ಲಾಭದಷ್ಟೇ ಸವಾಲು ಸಹ ಇದೆ ಉದಾಹರಣೆಗೆ ಕುರಿಗಳಿಗೆ ಬಾಧಿಸುವ ರೋಗಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲವಾದರೆ ಅವುಗಳನ್ನು ನಿರ್ವಹಿಸುವುದು ತುಂಬಾ ಕಷ್ಟಕರವಾಗುತ್ತದೆ ಮತ್ತು ಇದು ನಷ್ಟಕ್ಕೆ ಎಡೆ ಮಾಡಿಕೊಡುತ್ತದೆ.
ಹಾಗಾಗಿ ನಷ್ಟ ಕಡಿಮೆ ಮಾಡಿ, ಲಾಭ ಹೆಚ್ಚು ಮಾಡಬೇಕೆಂದರೆ “ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (CBRSETI)’ ನೀಡುವ 13 ದಿನದ ಉಚಿತ ತರಬೇತಿ”ಯಲ್ಲಿ ಪಾಲ್ಗೊಂಡು
ಸಂಪೂರ್ಣ ತರಬೇತಿಯನ್ನು ಪೂರ್ಣಗೊಳಿಸಿದಾಗ, ಸುಲಭವಾಗಿ “ಕಡಿಮೆ ಬಂಡವಾಳದಲ್ಲಿ ಅತಿ ಹೆಚ್ಚು ಲಾಭ” ಮಾಡುವುದು ಹೇಗೆ ಎಂಬುದರ ಕುರಿತು ಮಾರ್ಗ ಸೂಚಿ ದೊರೆಯುತ್ತದೆ.
ತರಬೇತಿಗೆ ಬರುವಾಗ ತರಬೇಕಾದ ದಾಖಲೆಗಳು ಯಾವುವು?
Which documentsare bring with applicants?
ಆಧಾರ್ ಕಾರ್ಡ್ (Aadhar Card)
ರೇಷನ್ ಕಾರ್ಡ್ (Ration Card)
ಬ್ಯಾಂಕ್ ಪಾಸ್ ಬುಕ್ (Bank Passbook)
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ (Passport Size Photo)

Therefore Sheep rearing in India is very important for rural people because it gives a regular income from wool, meat, skin, and manure.
It needs less money to start and gives good profit, so it is helpful for small farmers. Sheep farming is suitable even in dry and semi-dry areas.

Today, the demand for mutton and wool is increasing. With better breeding, good care, and government support, sheep farming is becoming a successful and sustainable way of self-employment for many farmers.
In this context everyone can get the offer tat 13 days of free training which is useful for sheep rearing provided by “Canara Bank Rural Self Employment Training Institute” .

Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
