Flood Relief Fund:: 15 ದಿನಗಳಲ್ಲಿ ಬೆಳೆಹಾನಿ ಹಾಗೂ ಮನೆ ಹಾನಿ ಪರಿಹಾರ! ಆಧಾರ್ ಅಪ್ಡೇಟ್ ಗೆ ಕೊನೆಯ ದಿನಾಂಕ!
ರಾಜ್ಯದಲ್ಲಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮುಂಗಾರು ಮುಗಿಯುವ ಸಮಯದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಆದಂತಹ ಮಳೆಯಿಂದಾಗಿ ರಾಜ್ಯದಲ್ಲಿ ನೆರೆಹಾವಳಿ ಉಂಟಾಗಿತ್ತು. ಅಕ್ಟೋಬರ್ ತಿಂಗಳಲ್ಲಿ 16 ಸೆಂ. ಮೀ ಮಳೆಯಾಗಿದ್ದರಿಂದ ರಾಜ್ಯದ 56,993 ಹೆಕ್ಟೇರ್ ಪ್ರದೇಶದಲ್ಲಿ ನೆರೆ ಹಾವಳಿ ಉಂಟಾಗಿ ಅಷ್ಟು ಜಮೀನಿನಲ್ಲಿ ಬೆಳೆದ ಬೆಳೆ ಹಾನಿಗೊಳಗಾಗಿತ್ತು.
15 ದಿನಗಳಲ್ಲಿ ಪರಿಹಾರ ಜಮೆ!
ಅದಕ್ಕಾಗಿ ರಾಜ್ಯ ಸಕಾ೯ರವು ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆಹಾನಿ ಪರಿಹಾರ ನೀಡಲು ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಿಂದ ಜಂಟೀ ಸಮೀಕ್ಷೆ ನಡೆದಸುತ್ತಿದ್ದು, ಇನ್ನೆರಡು- ಮೂರು ದಿನಗಳಲ್ಲಿ ಸಮೀಕ್ಷೆ ಪೂಣ೯ಗೊಳ್ಳಲಿದೆ. ಸಮೀಕ್ಷೆ ಪೂಣ೯ಗೊಂಡ 15 ದಿನಗೊಳಗಾಗಿ ಬೆಳೆಹಾನಿಗೊಳಗಾದ ರೈತರಿಗೆ ಪರಿಹಾರ ಹಣವನ್ನು ಜಮೆ ಮಾಡಲಾಗುವುದು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಮಾಧ್ಯಮಗಳಿಗೆ ತಿಳಿಸಿದ್ದಾರೆ.
2158 ಮನೆಗಳು ನಾಶ!
ಹೆಚ್ಚಿನ ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ಮನೆಗಳು ಕೂಡ ಹಾನಿಗೊಳಗಾಗಿದ್ದು, ಒಟ್ಟು 84 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ ಹಾಗೂ 2074 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಪೂಣ೯ ಹಾನಿಗೊಳಗಾಗಿರುವ ಮನೆಗಳಿಗೆ 1.20 ಲಕ್ಷ ರೂ ಪರಿಹಾರವನ್ನು ಮನೆ ಕಟ್ಟಿಸಿಕೊಳ್ಳಲು ಹಾಗೂ ಭಾಗಶಃ ಹಾನಿಗೊಳಗಾಗಿರುವ ಮನೆಗಳಿಗೆ 50000/- ಗಳ ಪರಿಹಾರ ನೀಡಲು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
59000 ಹೆಕ್ಟೇರ್ ಜಮೀನು ನಾಶ!
ಮಳೆಯಿಂದಾಗಿ 9000 ಹೆಕ್ಟೇರ್ ಕೃಷಿ ಜಮೀನು ಹಾಳಾಗಿದೆ. ಹಾಗೂ 50 ಸಾವಿರ ಹೆಕ್ಟೇರ್ ತೋಟಗಾರಿಕಾ ಜಮೀನು ಹಾಳಾಗಿದೆ. ಆದ್ದರಿಂದ 1 ವಾರದೊಳಗೆ ಜಂಟೀ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಗಳ ಸಭೆ ನಡೆಸಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಪರಿಹಾರ ಜಮೆಯಾಗಿರುವ ಬಗ್ಗೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
Step 1: ಅದಕ್ಕಾಗಿ ನೀವು ಮೊದಲಿಗೆ ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service89/PaymentDetailsReport.aspx
Step 2: ನಂತರ ಅಲ್ಲಿ ಕೇಳಲಾದ ವರ್ಷ, ಋತು, ಕ್ಯಾಲಾಮಿಟಿ ವಿಧ(calamity type) , ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಎಲ್ಲವನ್ನು ಹಾಕಿ

PIC 1: Enter the required details
Step 3: ನಂತರ ಗೆಟ್ ರಿರ್ಪೋಟ್( Get report) ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಬರಪರಿಹಾರ ಪಡೆದುಕೊಂಡ ನಿಮ್ಮ ಊರಿನ ರೈತರ ಲಿಸ್ಟ್ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ

PIC 2: List of farmers details
ಆಧಾರ್ ಅಪ್ಡೇಟ್ ಕಡ್ಡಾಯ!
ಆಧಾರ್ ಕಾಡ್೯ ಭಾರತದಲ್ಲಿ ಪ್ರತಿಯೊಬ್ಬರಿಗೂ ಇರಬೇಕಾದ ಮುಖ್ಯ ದಾಖಲೆಯಾಗಿದ್ದು, ಸಕಾ೯ರದ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾಡ್೯ ಕಡ್ಡಾಯ. ಆಧಾರ್ ನಲ್ಲಿನ ವಿವರಗಳು ಸರಿಯಾಗಿರುವುದು ಅಪ್ಡೇಟ್ ಆಗಿರುವುದು ಕೂಡಾ ಅಷ್ಟೇ ಮುಖ್ಯ.
ಆದ್ದರಿಂದ ಆಧಾರ್ ಕಾಡ್೯ ಮಾಡಿಸಿ ಅಥವಾ ಅದರಲ್ಲಿ ಯಾವುದಾದರೂ ತಿದ್ದುಪಡಿ ಮಾಡಿಸಿ 10 ವಷ೯ಗಳಾಗಿದ್ದಲ್ಲಿ ಕೂಡಲೇ ಉಚಿತವಾಗಿ ನಿಮ್ಮ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಿ.
ಆಧಾರ್ ಅಪ್ಡೇಟ್ ಗೆ 14 ಜೂನ್ 2025 ಕೊನೆಯ ದಿನಾಂಕ!
ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಲು ಈ ಮೊದಲು 31 ಡಿಸೆಂಬರ್ 2024 ಕೊನೆಯ ದಿನಾಂಕ ಎನ್ನಲಾಗಿತ್ತು. ಆದರೆ ಕೇಂದ್ರ ಸಕಾ೯ರ ಸಾವ೯ಜನಿಕರಿಗೆ ಇನ್ನಷ್ಟು ಕಾಲಾವಕಾಶ ನೀಡಿದ್ದು,
14 ಜೂನ್ 2025 ಕ್ಕೆ ಕೊನೆಯ ದಿನಾಂಕ ಎಂದು ತಿಳಿಸಿದೆ. 14 ಜೂನ್ 2025 ರೊಳಗೆ ನಿಮ್ಮ ಆಧಾರ್ ಕಾಡ್೯ ನ್ನು ಉಚಿತವಾಗಿ ಆಧಾರ್ ಸೆಂಟರ್, ಸಿಎಸ್ಸಿ ಸೆಂಟರ್ ಅಥವಾ ಮೊಬೈಲ್ ನಲ್ಲಿ ಯುಎಡಿಐಎ ವೆಬ್ಸೈಟ್ ಗೆ ಹೋಗಿ ಅಪ್ಡೇಟ್ ಮಾಡಿಸಿಕೊಳ್ಳಿ
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
V.K
ಪರಿಸರ ಪರಿಸರದೊಂದಿಗೆ ಆರ್ಥಿಕತೆ