Dairy faming loss or profit :: ಹೈನುಗಾರಿಕೆ ಮಾಡುವುದು ನಷ್ಟವು ಅಥವಾ ಲಾಭವು!! 25 ನೇ ವಯಸ್ಸಿನ ಹುಡುಗನ ಯಶೋಗಾಥೆ!!

"Agriculture is our CULTURE"

Click Here Join WhatsApp Group

Dairy faming loss or profit :: ಹೈನುಗಾರಿಕೆ ಮಾಡುವುದು ನಷ್ಟವು ಅಥವಾ ಲಾಭವು!! 25 ನೇ ವಯಸ್ಸಿನ ಹುಡುಗನ ಯಶೋಗಾಥೆ!!

Dairy farming is the practice of rearing animals like cow and buffalo for milk production. It is an important part of agriculture and place key role in rural economy.

India is one of the largest producer of milk in the world. It supports small and marginal farmers by ensuring daily income

But importantly dairy farming requires proper management and feeding and health care of the animals for better production.

ಭಾರತೀಯ ಇತಿಹಾಸದಲ್ಲಿ ಬಹಳ ಹಿಂದಿನ ಕಾಲದಿಂದಲೂ ಕೃಷಿಯ ಅವಿಭಾಜ್ಯ ಅಂಗವಾದ ಹೈನುಗಾರಿಕೆಗೆ ತನ್ನದೇ ಆದ ಪ್ರಾಶಸ್ಯ್ತ ಇರುವುದನ್ನು ಕಾಣಬಹುದು,

“ದ್ವಾಪರ ಯುಗದ ಕೃಷ್ಣನ ಕಾಲಘಟ್ಟದಿಂದಲೂ ಕಲಿಯುಗದ ಇಂದಿನವರೆಗೂ ಹಾಲು ಹಾಗೂ ಹಾಲಿನ ಉತ್ಪನ್ನಗಳು ಭಾರತೀಯ ಆಹಾರ ಪದ್ಧತಿ”ಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. 

ಅಲ್ಲದೆ, “ಹೈನುಗಾರಿಕೆ ಭಾರತೀಯ ಗ್ರಾಮೀಣ ಆರ್ಥಿಕತೆಗೆ ಬೆನ್ನೆಲುಬಾಗಿದೆ” ಎಂದರೆ ತಪ್ಪಾಗಲಾರದು. ಏಕೆಂದರೆ ಇದು ರೈತರಿಗೆ “ನಿರಂತರ ಆದಾಯ”ವನ್ನು ಒದಗಿಸುವ “ಪ್ರಮುಖ ಉದ್ಯಮ”ವಾಗಿದೆ.

ಹೈನುಗಾರಿಕೆ ಕೃಷಿಯು ಸುಲಭವೇ?

is dairy farming is easy? 

ಈ ಪ್ರಶ್ನೆಗೆ ಹಲವರು ಹಲವಾರು ರೀತಿಯಲ್ಲಿ ಉತ್ತರಿಸುತ್ತಾರೆ, ಯಶಸ್ವಿಯಾದವರು ಸುಲಭ ಎಂದು ಹೇಳಿದರೆ, ನಷ್ಟಕ್ಕೆ ಒಳಗಾದವರು ಈ ಕೃಷಿ ತುಂಬಾ ಕಠಿಣ ಎಂದು ವಿಮರ್ಶಿಸುತ್ತಾರೆ.

ಆದರೆ ರೈತರು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, “ಯಾವುದೇ ಉದ್ಯಮವಿರಲಿ ಅದಕ್ಕೆ ಅಗತ್ಯವಾದ ಮಾಹಿತಿಯ ಜೊತೆಗೆ

ಆ ಉದ್ಯಮಕ್ಕೆ ಅವಶ್ಯಕವಾಗಿರುವ ಸಂಪನ್ಮೂಲಗಳನ್ನು ಸರಿಯಾಗಿ ನೀಡಿ ನಿಭಾಯಿಸಿದರೆ ಲಾಭ”ವನ್ನು ಗಳಿಸಬಹುದು.

ಹಾಗೆಯೇ ಹೈನುಗಾರಿಕೆಯಲ್ಲಿಯೂ ಸಹ, “ತಳಿಯ ಹಸುಗಳು ಅಥವಾ ಎಮ್ಮೆಗಳು, ಆ ತಳಿಗಳಿಗೆ ಅಗತ್ಯವಾದ

ಆಹಾರ ಹಾಗೂ ಆರೋಗ್ಯದ ಹಾರೈಕೆ”ಯನ್ನು ಮಾಡಿದರೆ ಖಂಡಿತವಾಗಿಯೂ ಹೈನುಗಾರಿಕೆಯಲ್ಲಿ ಯಶಸ್ವಿಯಾಗಬಹುದು.

ಕಡಿಮೆ ಸಮಯದಲ್ಲಿಯೇ ಹೈನುಗಾರಿಕೆಯಲ್ಲಿ ಯಶಸ್ವಿಯಾದವರು ಯಾರಾದರೂ ಇರುವರೇ? 

Can anybody is there who got succsuccess in dairy farming in very short period? 

 ಹೌದು ಸಾಕಷ್ಟು ಜನ ಇರುವರು, ಆದರೆ ರಾಮನಗರದ “ಮಂಜುನಾಥ್” ಎನ್ನುವವರು ತಮ್ಮ “25ನೇ ವಯಸ್ಸಿಗೆ 26 ಹಸುಗಳನ್ನು ಸಾಕುವುದರ ಜೊತೆಗೆ ಹೈನುಗಾರಿಕೆಯಲ್ಲಿ ಯಶಸ್ವಿ” ಆಗಿದ್ದಾರೆ.

• ಮಂಜುನಾಥ್ ಅವರು ತಮ್ಮ “23ನೇ ವಯಸ್ಸಿನಲ್ಲಿ ಕೇವಲ ಒಂದು ಹಸುವಿನೊಂದಿಗೆ ಶುರು ಮಾಡಿದ ಹೈನುಗಾರಿಕಾ ಪಯಣ, ಇಂದು ಸುಮಾರು 26 ಹಸು”ಗಳಿಗೆ ಬಂದು ನಿಂತಿದೆ.

* ವಿಶೇಷವೇನೆಂದರೆ, ಮಂಜುನಾಥ್ ಅವರಿಗೆ “ಯಾವುದೇ ಜಮೀನು ಇಲ್ಲ”ವಾದ್ದರಿಂದ, ಹೈನುಗಾರಿಕೆಯನ್ನೇ ಪ್ರಮುಖ ಕೃಷಿಯಾಗಿ ಅವಲಂಬಿಸಿದ್ದಾರೆ.

• ಈ 26 ಹಸುಗಳು “ದಿನಕ್ಕೆ 300 ಲೀಟರ್ ಹಾಲನ್ನು ನೀಡುವುದರ ಮೂಲಕ ತಿಂಗಳಿಗೆ ಮೂರು ಲಕ್ಷ ರೂಪಾಯಿಗಳ ಆದಾಯ”ವನ್ನು ಯುವರೈತನ ಕೈಗೆ ಇಡುತ್ತಿವೆ. 

* ಈ ರೈತನು “ಹಸುಗಳ ನಿರ್ವಹಣೆಗೆಂದು ತಿಂಗಳಿಗೆ ಶೇಕಡ 50ರಷ್ಟು ಮೀಸಲಿಟ್ಟರೆ” ಉಳಿದ “ಶೇಕಡ 50ರಷ್ಟು ಆದಾಯ ಲಾಭ”ವಾಗುತ್ತದೆ. ಅಂದರೆ ಬರೋಬ್ಬರಿ “ಪ್ರತಿ ತಿಂಗಳಿಗೆ ಒಂದುವರೆ ಲಕ್ಷದಷ್ಟು ಲಾಭ”. 

 “ಹೈನುಗಾರಿಕೆ ಕೃಷಿಯಲ್ಲಿ ಪ್ರತಿ ತಿಂಗಳಿಗೆ ಲಕ್ಷಕ್ಕಿಂತ ಅಧಿಕ ಲಾಭ ಪಡೆಯುವುದು ಎಂದರೆ ಸುಲಭದ ಮಾತಲ್ಲ, ಏಕೆಂದರೆ ಯಾವುದೇ ಕೆಲಸವಿರಲಿ ಆಸಕ್ತಿ ಹಾಗೂ ಶ್ರಮದ ಜೊತೆಗೆ ಮನೋಸ್ಥೈರ್ಯ ಮತ್ತು ಧೈರ್ಯವಿದ್ದರೆ

ಯಶಸ್ವಿಯಾಗುವುದು ಕಷ್ಟವೇನಲ್ಲ” ಎನ್ನುವುದು ಯಶಸ್ವಿ ಯುವ ರೈತ ಮಂಜುನಾಥ್ ಅವರ ಸಲಹೆ.

ಹಾಗಾದರೆ ಹೈನುಗಾರಿಕೆ ಕೃಷಿಯಲ್ಲಿ ಅನುಸರಿಸಬೇಕಾದ ಅಂಶಗಳು ಯಾವ್ಯಾವು?

Then, Which are the facts farmers should follow in Dairy farming? 

ಹೈನುಗಾರಿಕೆಯಲ್ಲಿ ರೈತರು, “ಕೇವಲ ಹಸುಗಳನ್ನು ಸಾಕಿದರೆ ಸಾಕಷ್ಟು ಲಾಭ ಬರುತ್ತದೆ ಎನ್ನುವ ಮನಸ್ಥಿತಿಯಿಂದ ಹೊರಬರಬೇಕು”. ಏಕೆಂದರೆ ಲಾಭ ಬರಬೇಕಾದರೆ ಯಾವ ಹಸು ಸಾಕಬೇಕು? ಅದರ ಆರೈಕೆ ಹೇಗಿರಬೇಕು?

ಆಹಾರ ಯಾವ ರೀತಿಯಾಗಿರಬೇಕು? ಎನ್ನುವ ಮೂಲಭೂತ ಕೆಲವು ಅಂಶಗಳನ್ನು ತಿಳಿಯಲೇ ಬೇಕಾಗುತ್ತದೆ.

* ಪಶುಗಳ ಆಯ್ಕೆ(Cattle selection) :-

1ಉತ್ತಮ ಹಾಲಿನ ಉತ್ಪಾದನೆಗಾಗಿ ಉತ್ತಮ ಜಾತಿಯ ಪಶು”ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಗತ್ಯ.

        • ಹಸುಗಳಲ್ಲಾದರೆ:- ಜರ್ಸಿ,ಗಿರ್ ಹೋಲ್ಟ್ಸೈನ್ ಫ್ರೀಸಿಯನ್. 

       * ಎಮ್ಮೆಗಳಲ್ಲಾದರೆ:- ಮುರ್ರಾ, ಸುರ್ತಿ.

ಈ ಪಶುಗಳು ಉತ್ತಮ ಜಾತಿಯ ಪಶುಗಳಾಗಿದ್ದು “ಹೆಚ್ಚಿನ ಹಾಲು” ಕೊಡುವುದಲ್ಲದೆ ಆರೋಗ್ಯಕರವಾಗಿರುತ್ತವೆ.

* ಆಹಾರ ಮತ್ತು ಪೋಷಣೆ ನಿರ್ವಹಣೆ(Food and nutrients management):-

ಪಶುಗಳಿಗೆ “ಸಮತೋಲನ ಆಹಾರ” ನೀಡಬೇಕಾಗುತ್ತದೆ. 

      * ಹಸಿರು ಮೇವು.

ಉದಾಹರಣೆಗೆ:- ಜೋಳ, ನಪಿಯರ್.

     * ಒಣಮೇವು. 

ಉದಾಹರಣೆಗೆ:- ಹುಲ್ಲು

     • ಸಂಯುಕ್ತ ಆಹಾರ( ಕಾನ್ಸೆಂಟ್ರೇಟ್)

     * ಶುದ್ಧ ನೀರು. 

“ಸರಿಯಾದ ಪ್ರಮಾಣದ ಆಹಾರ ಮತ್ತು ಪೋಷಕಾಂಶಗಳ ನಿರ್ವಹಣೆ”ಯಿಂದ ಹಾಲಿನ ಗುಣಮಟ್ಟವನ್ನು ಹೆಚ್ಚಿಸಬಹುದು.

* ಆರೋಗ್ಯ ಮತ್ತು ಆರೈಕೆ ( Health management) :-

ಪಶುಗಳಲ್ಲಿ ಆರೋಗ್ಯ ನಿರ್ವಹಣೆ” ತುಂಬಾ ಅಗತ್ಯವಾಗಿರುತ್ತದೆ. ಏಕೆಂದರೆ ಈ ಪಶುಗಳು “ಸುಲಭವಾಗಿ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಕಾಲಕಾಲಕ್ಕೆ ಲಸಿಕೆ ನೀಡಬೇಕು, ಅಲ್ಲದೆ ಹುಳುಗಳ ನಿವಾರಣೆ ಮಾಡಬೇಕು”. 

 * ಹಸುಗಳಿಗೆ “ಕಾಲು ಬಾಯಿ ರೋಗ” ಬರದಂತೆ ಹಾಗೂ ಇತರೆ ಸೂಕ್ಷ್ಮಾಣುಗಳ ಸೋಂಕು ತಗಲದಂತೆ ಜಾಗೃತಿ ವಹಿಸಬೇಕು. 

ಹೀಗಾಗಿ ಹೈನುಗಾರಿಕೆ ಮಾಡುವ ರೈತರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕ್ರಮಬದ್ಧವಾಗಿ ಹೈನುಗಾರಿಕೆ ಕೃಷಿ ಮಾಡಿದರೆ ಲಾಭವನ್ನು ಸುಲಭವಾಗಿ ತೆಗೆದುಕೊಳ್ಳಬಹುದು.

ಹೈನುಗಾರಿಕೆ ಕೃಷಿಯ ಮಹತ್ವವೇನು?

What is the importance of dairy farming?

* ಹೈನುಗಾರಿಕೆ ಕೃಷಿ ಮಾಡುವುದರಿಂದ ರೈತರು ತಮ್ಮ ಆದಾಯ ಸ್ಥಿತಿಯನ್ನು ಸದೃಢಗೊಳಿಸಿಕೊಳ್ಳಬಹುದು. 

• ಹೈನುಗಾರಿಕೆ ಕೃಷಿಯಿಂದ ಗ್ರಾಮೀಣ ಭಾಗದ ಆರ್ಥಿಕತೆ ಭದ್ರವಾಗಿರುತ್ತದೆ. 

* ಹೈನುಗಾರಿಕೆ ಉತ್ಪನ್ನಗಳಾದ ಹಾಲು ಮೊಸರು ತುಪ್ಪ, ಮನುಷ್ಯರು ಆಹಾರದಲ್ಲಿ ಅಳವಡಿಸಿಕೊಂಡಾಗ ಅಗತ್ಯ ಪೋಷಕಾಂಶಗಳು ದೊರೆಯುವುದರಿಂದ ಆರೋಗ್ಯ ಸಮತೋಲನದಿಂದ ಕೂಡಿರುತ್ತದೆ.

• ಪಶುಸಾಕಾಣಿಕೆಯಿಂದ ಪಶುಗಳ ತಳಿಯನ್ನು ರಕ್ಷಿಸಿದಂತಾಗುತ್ತದೆ. 

* ಮಹಿಳೆಯರು ಸ್ವಾವಲಂಬಿಗಳಾಗಲು ಸಹಾಯಕವಾಗಿರುತ್ತದೆ. 

ಹೀಗಾಗಿ ಈ ಹೈನುಗಾರಿಕೆ ಕೃಷಿಯು ತುಂಬಾ ಉಪಯುಕ್ತವಾಗಿದ್ದು ಈ ಕೃಷಿಯಲ್ಲಿ ನಷ್ಟಕ್ಕಿಂತ ಲಾಭಗಳಿಸುವುದು ತುಂಬ ಸರಳ ಹಾಗೂ ಪರಿಣಾಮಕಾರಿಯಾಗಿರುತ್ತದೆ,

ಇಲ್ಲಿ ಹಸುಗಳ “ಆರೋಗ್ಯ ಹಾಗೂ ಆಹಾರ”ದ ಕಡೆಗೆ ಸರಿಯಾದ ಗಮನವನ್ನು ನೀಡಿದರೆ ಹಾಲಿನ ಉತ್ಪನ್ನ ಹೆಚ್ಚಾಗುತ್ತದೆ.ಇನ್ನೊಂದು ಪ್ರಮುಖ ಅಂಶವೆಂದರೆ ಉದಾಹರಣೆಗೆ

ನಾವು ಕೃಷಿಯನ್ನು ತೆಗೆದುಕೊಂಡರೆ ಭಾರತದಲ್ಲಿ ಈ ಕೃಷಿ ಪದ್ಧತಿಯು ಪ್ರಮುಖವಾಗಿ ಮಳೆಯನ್ನು ಅವಲಂಬಿಸಿದೆ ಹಾಗಾಗಿಯೇ ಭಾರತದ ಕೃಷಿ ಪದ್ಧತಿಯನ್ನು

ಮಳೆಯೊಂದಿಗೆ ಆಡುವ ಜೂಜಾಟ”ವೆಂದು ಹೇಳುತ್ತಾರೆ,ಅಲ್ಲದೆ “ಕೆಲವು ಕೃಷಿಗಳು ಒಂದಷ್ಟು ಋತುವಿಗೆ ಮಾತ್ರ ಸೀಮಿತ”ವಾಗಿರುತ್ತವೆ. 

ಆದರೆ “ಹೈನುಗಾರಿಕೆ ಎನ್ನುವುದು ಯಾವುದೇ ಋತುವಿಗೆ ಸೀಮಿತವಾಗದೆ ರೈತರಿಗೆ ಪ್ರತಿನಿತ್ಯ ಆದಾಯ ನೀಡುವ ಉದ್ಯಮವಾಗಿದೆ”. ಇದರಿಂದ ರೈತರ 1ಆರ್ಥಿಕ ಪರಿಸ್ಥಿತಿ ಉತ್ತಮ”ವಾಗುವುದಲ್ಲದೆ “ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆ ಸದೃಢವಾಗುತ್ತದೆ”. 

Hence, dairy farming is vital and profitable agriculture activity that ensure daily income of farmers. Proper care and nutrition management animals are important for high production of milk.

And also dairy farming contributes a lot to the countries economy and food security, here farmers should focuss on adaptation of modern technology and government support to improve productivity and profit.

Thank you

ಧನ್ಯವಾದಗಳು

<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  VK

ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.