
Banana Cultivation Best Method :: ಬಾಳೆ ಗಿಡ ಗೊನೆ ಬಿಡುವ ಸಮಯದಲ್ಲಿ, ಹೇಗೆ ನಿರ್ವಹಣೆ ಮಾಡುವುದು?
ಉತ್ತಮ ಬಾಳೆ ಇಳುವರಿಗಾಗಿ ಸರಳ ಸೂತ್ರಗಳು: ಗೊಬ್ಬರ ಮತ್ತು ನೀರಿನ ನಿರ್ವಹಣೆ ಹೀಗಿರಲಿ!!
Simple Steps for Better Banana Yield: Master Your Fertilizer and Water Management!!
ಕಾರ್ತಿಕ್ ಚಿತ್ರದುರ್ಗ ಅವರು ಬಾಳೆ ಗಿಡಗಳು ಗೊನೆ ಹೊಡೆಯುವ ಸಮಯದಲ್ಲಿ ರೈತರು ವಹಿಸಬೇಕಾದಂತಹ ಪ್ರಮುಖ ಆರೈಕೆ ಕ್ರಮಗಳ ಬಗ್ಗೆ
ಗೊಬ್ಬರದ ಸಮರ್ಪಕ ಪೂರೈಕೆ:-
Fullfilling the need of fertilizers :-
• ಗೊನೆ ಹೊಡೆಯುವ ನಿರ್ಣಾಯಕ ಹಂತದಲ್ಲಿ ಯಾವುದೇ ಕಾರಣಕ್ಕೂ ಗೊಬ್ಬರದ ವಿಷಯದಲ್ಲಿ ರೈತರು ರಾಜಿ ಮಾಡಿಕೊಳ್ಳಬಾರದು, ಗೊಬ್ಬರದ ಪ್ರಮಾಣವನ್ನು ಕಡಿಮೆ ಮಾಡಬಾರದು.
* ಒಂದು 200 ಲೀಟರ್ ಸಾಮರ್ಥ್ಯದ ನೀರಿನ ಡ್ರಮ್‌ನಲ್ಲಿ ಸುಮಾರು 20 ರಿಂದ 25ಕೆಜಿ ಗೊಬ್ಬರವನ್ನು (10:26:26, DAP, ಪೊಟ್ಯಾಶ್ ಅಥವಾ CAN) ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ದ್ರಾವಣವನ್ನು ಪ್ರತಿ ಬಾಳೆ ಗಿಡದ ಬುಡಕ್ಕೆ ಒಂದು ಲೀಟರ್‌ನಂತೆ ಹಾಕಬೇಕು.
• ಈ ರೀತಿಯಾಗಿ ಗೊಬ್ಬರವನ್ನು ನಿರ್ವಹಣೆ ಮಾಡುವುದರಿಂದ ಬಾಳೆಕಾಯಿಗಳ ಗಾತ್ರ, ತೂಕ ಮತ್ತು ಫಿನಿಶಿಂಗ್ ಉತ್ತಮವಾಗಿ ಬರುತ್ತದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕು, ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ನೀರಿನ ಸೂಕ್ತ ನಿರ್ವಹಣೆ:-
Proper management of water:-
* ಬೇಸಿಗೆಯ ಸಮಯದಲ್ಲಿ ತೇವಾಂಶವು ಅತ್ಯಂತ ಅವಶ್ಯಕವಾಗಿರುತ್ತದೆ. ಆದ್ದರಿಂದ ಬಾಳೆ ತೋಟದ ಮಣ್ಣು ಒಣಗದಂತೆ ನೋಡಿಕೊಳ್ಳಬೇಕು.
• ಒಂದು ವೇಳೆ ನಾವು ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರನ್ನು ನೀಡದಿದ್ದರೆ, ನಾವು ನೀಡಿದ ಗೊಬ್ಬರವನ್ನು ಗಿಡಗಳು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆದ್ದರಿಂದ ಬಾಳೆ ಗಿಡಗಳಿಗೆ ನಿಯಮಿತವಾಗಿ ಮತ್ತು ಅಚ್ಚುಕಟ್ಟಾಗಿ ನೀರಿನ ಪೂರೈಕೆಯನ್ನು ಮಾಡಬೇಕು.
ಕಂದುಗಳ ಕತ್ತರಿಸುವಿಕೆ :-
Desuckering:-
• ಪ್ರತಿ 15 ದಿನಗಳಿಗೊಮ್ಮೆ ಬಾಳೆ ಗಿಡದ ಬುಡದಲ್ಲಿ ಬರುವ ಸಣ್ಣ ಕಂದುಗಳನ್ನು ತಪ್ಪದೇ ಕತ್ತರಿಸಬೇಕು.
• ಒಂದು ವೇಳೆ ಈ ಕಂದುಗಳನ್ನು ಹಾಗೆಯೇ ಬಿಟ್ಟರೆ, ನಾವು ನೀಡುವ ಗೊಬ್ಬರ ಮತ್ತು ನೀರನ್ನು ಅವುಗಳೇ ಹೀರಿಕೊಳ್ಳುತ್ತವೆ.
* ಇದರಿಂದ ಮುಖ್ಯ ಗಿಡಕ್ಕೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಗುವುದಿಲ್ಲ ಮತ್ತು ಗೊನೆಯ ತೂಕವು ಕಡಿಮೆಯಾಗುತ್ತದೆ.
ಹೂವು ಕತ್ತರಿಸುವುದು:-
Bunching stage:-
• ಗೊನೆ ಪೂರ್ತಿಯಾಗಿ ಬಿಟ್ಟ ನಂತರ, ಗೊನೆಯ ಕೊನೆಯಲ್ಲಿರುವ ಹೂವನ್ನು (ಬಾಳೆ ಮೂತಿ) ಕಡ್ಡಾಯವಾಗಿ ಕಟ್ ಮಾಡಬೇಕು. ಹೀಗೆ ಮಾಡುವುದರಿಂದ ಬಾಳೆಕಾಯಿಗಳು ಬೇಗನೆ ದಪ್ಪಗಾಗುತ್ತವೆ ಮತ್ತು ಕಾಯಿಗಳ ಗಾತ್ರವೂ ದೊಡ್ಡದಾಗುತ್ತದೆ.
ನಿರೀಕ್ಷಿತ ಆರ್ಥಿಕ ಲಾಭ:-
Unexceptionable economic gain:-
* ಬಾಳೆ ಗೊನೆ ಹೊಡೆಯುವ ಹಂತದಲ್ಲಿ, ಮೇಲೆ ತಿಳಿಸಿದ ಆರೈಕೆ ಕ್ರಮಗಳನ್ನು ಸರಿಯಾಗಿ ಅನುಸರಿಸಿದರೆ, ರೈತರು ಕನಿಷ್ಠ ೧೦ ಕೆಜಿ ಮೇಲ್ಪಟ್ಟ ತೂಕದ ಗೊನೆಗಳನ್ನು ಪಡೆಯಬಹುದು.
• ಒಂದು ಎಕರೆಗೆ ಸುಮಾರು ೧೦ ಟನ್ ಇಳುವರಿಯನ್ನು ನಿರೀಕ್ಷೆ ಮಾಡಬಹುದು. ಮಾರುಕಟ್ಟೆ ದರವು ಉತ್ತಮವಾಗಿದ್ದರೆ, ಲಕ್ಷಾಂತರ ರೂಪಾಯಿ ಲಾಭವನ್ನು ಗಳಿಸಲು ಸಾಧ್ಯವಿದೆ.
ಬಾಳೆ ಕೃಷಿ – ಉತ್ತಮ ಇಳುವರಿಗಾಗಿ ಸರಳ ಸೂತ್ರಗಳು:-
Banana Farming- Simple Tips for Better Yield:-
ಬಾಳೆ ಕೃಷಿಯಲ್ಲಿ ಗೊನೆ ಬಿಡುವ ಹಂತ ನಿರ್ಣಾಯಕ. ಈ ಸಮಯದಲ್ಲಿ ನಿರ್ವಹಣೆ ರೈತರಿಗೆ ಆರ್ಥಿಕ ಲಾಭ ತರುತ್ತದೆ. ದ್ರವರೂಪದ ಗೊಬ್ಬರದಿಂದ ಬೇರಿಗೆ ತಕ್ಷಣ ಪೋಷಕಾಂಶ ಲಭ್ಯವಾಗಿ, ಕಾಯಿಗಳು ಚೆನ್ನಾಗಿ ತುಂಬಿ ತೂಕ ಹೆಚ್ಚುತ್ತದೆ.
ಕಂದುಗಳನ್ನು ತೆಗೆಯುವುದರಿಂದ ಪೋಷಕಾಂಶ ವ್ಯರ್ಥವಾಗದೆ, ಗೊನೆಗೆ ಶಕ್ತಿ ಬಳಕೆಯಾಗಿ 10-15 ಕೆಜಿ ತೂಕದ ಗೊನೆ ಪಡೆಯಬಹುದು.
ಸರಿಯಾದ ನೀರಾವರಿ, ಹೂವು ಕತ್ತರಿಸುವ ಕ್ರಮಗಳಿಂದ ಹಣ್ಣುಗಳು ಸಮವಾಗಿ ಬೆಳೆದು ಉತ್ತಮ ಬೆಲೆಗೆ ಮಾರಾಟವಾಗುತ್ತವೆ. ಒಂದು ಎಕರೆಗೆ 10 ಟನ್ ಇಳುವರಿ ಪಡೆಯುವ ಮೂಲಕ ರೈತರು ಲಾಭ ಗಳಿಸಬಹುದು.
ಈ ಕ್ರಮಗಳು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿ ಮತ್ತು ಅಕಾಲಿಕ ಹಣ್ಣುಗಳ ಉದುರುವಿಕೆ ತಡೆಯಲು ಸಹಕಾರಿ.ಒಟ್ಟಾರೆಯಾಗಿ ಹೇಳುವುದಾದರೆ,
ಗೊಬ್ಬರ, ನೀರು ಮತ್ತು ಕಂದುಗಳ ನಿರ್ವಹಣೆಯನ್ನು ರೈತರು ಸಮರ್ಪಕವಾಗಿ ಮಾಡಿದರೆ, ಬಾಳೆ ಕೃಷಿಯಲ್ಲಿ ಯಶಸ್ಸು ಖಂಡಿತ ಎಂಬುದೇ ಈ ವಿಡಿಯೋದ ಮುಖ್ಯ ಸಂದೇಶವಾಗಿದೆ.
The bunching stage is critical because proper management directly benefits farmers financially. Liquid fertilizers ensure nutrients are immediately available, helping fingers fill out and gain weight.
Sucker removal prevents nutrient wastage, directing energy to the bunch for yields of 10–15 kg. Correct irrigation and denavelling promote uniform fruit growth, improving market price.
Following these steps, farmers can achieve 10 tons per acre, maximizing profits via higher yields at a lower cost while preventing premature fruit drop.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
