
Less Salary, 50-30-20 Rule :: ಕಡಿಮೆ ಸಂಬಳದಲ್ಲೂ ಕೋಟ್ಯಾಧಿಪತಿ ಆಗುವುದು ಹೇಗೆ?ಹಣಕಾಸಿನ ನಕ್ಷೆ ಹಾಗು ಯೋಜನೆ!!
ಕಡಿಮೆ ಸಂಬಳದಲ್ಲೂ ಕೋಟ್ಯಾಧಿಪತಿ ಆಗುವುದು ಹೇಗೆ?
How to become a Crorepati with a Small Salary?
ಕಡಿಮೆ ಸಂಬಳದಲ್ಲೂ ಆರ್ಥಿಕವಾಗಿ ಸ್ವತಂತ್ರರಾಗಿ, ಹಣ ಗಳಿಸುವುದು ಹೇಗೆ ಎಂಬುದರ ಬಗ್ಗೆ !
ಹಣಕಾಸಿನ ನಕ್ಷೆ ಹಾಗು ಯೋಜನೆ:-
Financial Mapping & Planning:-
* ಪ್ರಯಾಣಕ್ಕೆ ನಕ್ಷೆ ಎಷ್ಟು ಮುಖ್ಯನೋ, ಹಾಗೆಯೇ ಆರ್ಥಿಕ ಗುರಿ ತಲುಪಲು ಯೋಜನೆ ಮುಖ್ಯ. ನಿಮ್ಮ ಕೈಗೆ ಬರುವ ಸಂಬಳ ಎಷ್ಟು, ಖರ್ಚುಗಳಾದ ಬಾಡಿಗೆ, ಬಿಲ್, ಊಟಕ್ಕೆ ಎಷ್ಟು ಖರ್ಚಾಗುತ್ತದೆ ಮತ್ತು ಸಾಲ ಎಷ್ಟಿದೆ ಎಂದು ಬರೆದಿಡಿ. ಇದರಿಂದ ಅರ್ಧದಷ್ಟು ಗೊಂದಲ ಕಡಿಮೆಯಾಗುತ್ತದೆ.
50-30-20 ನಿಯಮ :-
The 50-30-20 Rule:-
ಹಣ ಉಳಿಯುತ್ತಿಲ್ಲ ಎನ್ನುವವರಿಗೆ ಇದು ಒಳ್ಳೆಯ ಸೂತ್ರ:
• 50% ಅಗತ್ಯಗಳು (Needs) – ಸಂಬಳದ ಅರ್ಧದಷ್ಟು ಹಣ ಊಟ, ಬಾಡಿಗೆ, ಪ್ರಯಾಣಕ್ಕೆ ಬಳಸಿ.
* 30% ಜೀವನಶೈಲಿ (Wants) – ಸಿನಿಮಾ, ಶಾಪಿಂಗ್, ಊಟಕ್ಕೆ ಈ ಹಣವನ್ನು ಬಳಸಿ
• 20% ಉಳಿತಾಯ ಮತ್ತು ಹೂಡಿಕೆ (Savings & Investment) – ಈ ಹಣವನ್ನು ಮುಟ್ಟಬೇಡಿ. ಸಂಬಳ ಬಂದ ಕೂಡಲೇ ಆಟೋ-ಡೆಬಿಟ್ (SIP) ಮೂಲಕ ಹೂಡಿಕೆ ಮಾಡಿ.
ತುರ್ತು ಹಣ ಮತ್ತು ವಿಮೆ:-
Emergency Fund & Insurance:-
ಹೂಡಿಕೆ ಮಾಡುವ ಮೊದಲು ಸುರಕ್ಷತೆಗಾಗಿ:
* ಕನಿಷ್ಠ 3 ರಿಂದ 6 ತಿಂಗಳ ಸಂಬಳದಷ್ಟು ಹಣವನ್ನು ಎಫ್‌ಡಿ (FD) ಅಥವಾ ಲಿಕ್ವಿಡ್ ಫಂಡ್‌ನಲ್ಲಿ ಇಡಿ. ಕೆಲಸ ಹೋದಾಗ ಅಥವಾ ಆರೋಗ್ಯದಲ್ಲಿ ತೊಂದರೆಯಾದಾಗ ಇದು ಸಹಾಯ ಮಾಡುತ್ತದೆ.
• ವಿಮೆ (Insurance) – ಕುಟುಂಬದ ರಕ್ಷಣೆಗಾಗಿ ‘ಟರ್ಮ್ ಇನ್ಶೂರೆನ್ಸ್’ ಮತ್ತು ಆಸ್ಪತ್ರೆ ಖರ್ಚಿಗಾಗಿ ‘ಹೆಲ್ತ್ ಇನ್ಶೂರೆನ್ಸ್’ ಮಾಡಿಸಿ.
ಸಾಲದಿಂದ ಬಿಡುಗಡೆ:-
Debt Management:-
ಕಡಿಮೆ ಸಂಬಳ ಇದ್ದಾಗ ಕ್ರೆಡಿಟ್ ಕಾರ್ಡ್ ಮತ್ತು ಪರ್ಸನಲ್ ಲೋನ್ ಮಾಡಬೇಡಿ. ಒಂದು ವೇಳೆ ಇದ್ದರೆ ಈ ರೀತಿ ಮಾಡಿ:
* ಡೆಟ್ ಅವಲಾಂಚ್ (Debt Avalanche) – ಹೆಚ್ಚು ಬಡ್ಡಿ ಇರುವ ಸಾಲವನ್ನು ಮೊದಲು ತೀರಿಸಿ.
• ಡೆಟ್ ಸ್ನೋಬಾಲ್ (Debt Snowball) – ಸಣ್ಣ ಸಾಲಗಳನ್ನು ಮೊದಲು ತೀರಿಸಿ ನೆಮ್ಮದಿ ಪಡೆಯಿರಿ.
ಶ್ರೀಮಂತಿಕೆ ತೋರಿಸುವುದು ಬೇಡ :-
Being Rich vs Looking Rich:-
ಇಂದಿನ ಯುವಕರು ಐಫೋನ್, ಬೈಕ್ ಅಥವಾ ಬ್ರಾಂಡೆಡ್ ಬಟ್ಟೆಗಳಿಗಾಗಿ ಇಎಂಐ (EMI) ಮಾಡುತ್ತಾರೆ. ಇದು ನಿಮ್ಮನ್ನು ಸಾಲಕ್ಕೆ ತಳ್ಳುತ್ತದೆ. ಅನಗತ್ಯ ಸಬ್‌ಸ್ಕ್ರಿಪ್ಷನ್‌ಗಳನ್ನು ತಪ್ಪಿಸಿ ಮತ್ತು ಮನೆಯಲ್ಲೇ ಅಡುಗೆ ಮಾಡಿ ಹಣ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ.
ಚಕ್ರಬಡ್ಡಿಯ ಶಕ್ತಿ :-
Power of Compounding:-
ಬೇಗ ಹೂಡಿಕೆ ಮಾಡುವುದರಿಂದ ಬಹಳ ಲಾಭ ಇದೆ. ಉದಾಹರಣೆಗೆ, 25ನೇ ವಯಸ್ಸಿನಲ್ಲಿ 5000 ರೂ. ಹೂಡಿಕೆ ಮಾಡುವವನು, 35ನೇ ವಯಸ್ಸಿನಲ್ಲಿ ಮಾಡುವವನಿಗಿಂತ 60ನೇ ವಯಸ್ಸಿಗೆ ಹೆಚ್ಚು ಹಣ ಪಡೆಯುತ್ತಾನೆ. ಹಣವನ್ನು ಉಳಿಸುವುದಲ್ಲ, ಅದನ್ನು ಬೆಳೆಸಬೇಕು.
ಕೌಶಲ್ಯ ಹೆಚ್ಚಿಸಿ ಮತ್ತು ತೆರಿಗೆ ಉಳಿಸಿ :-
Skill Building & Tax Saving:-
– ಕೇವಲ ಸಂಬಳವನ್ನೇ ನೆಚ್ಚಿಕೊಳ್ಳಬೇಡಿ. ಹೊಸ ಕೌಶಲ್ಯಗಳನ್ನು ಕಲಿಯಿರಿ ಮತ್ತು ಆದಾಯವನ್ನು ಹೆಚ್ಚಿಸಿಕೊಳ್ಳಿ. ಫ್ರೀಲ್ಯಾನ್ಸಿಂಗ್ ಅಥವಾ ಪಾರ್ಟ್ ಟೈಮ್ ಕೆಲಸ ಮಾಡಿ.
* ಸರ್ಕಾರದ ತೆರಿಗೆ ಉಳಿತಾಯ ಯೋಜನೆಗಳಾದ (PPF, NPS) ಮೂಲಕ ನಿಮ್ಮ ಕೈಯಲ್ಲಿ ಹೆಚ್ಚು ಹಣ ಉಳಿಯುವಂತೆ ನೋಡಿಕೊಳ್ಳಿ.
ಉಳಿತಾಯದ ಸೂತ್ರ:-
Savings is the formula :-
ಕಡಿಮೆ ಆದಾಯ ಇದ್ದರೂ ಸರಿಯಾಗಿ ದುಡ್ಡು ನಿರ್ವಹಣೆ ಮಾಡಿದರೆ ಸಾಲದ ತೊಂದರೆಯಿಂದ ಪಾರಾಗಬಹುದು. ೫೦-೩೦-೨೦ ಸೂತ್ರ ಬಳಸುವುದರಿಂದ ಅಗತ್ಯ ಖರ್ಚು ಹಾಗೂ ಉಳಿತಾಯದ ಮಧ್ಯೆ ಸರಿಯಾದ ಹೊಂದಾಣಿಕೆ ಆಗುತ್ತದೆ ,
ಇದರಿಂದ ಮುಂದೆ ದುಡ್ಡಿನ ಚಿಂತೆ ಇರುವುದಿಲ್ಲ.ಇದ್ದಕ್ಕಿದ್ದಂತೆ ಬರುವ ಖರ್ಚುಗಳಿಗೆ ಹಣ ಇಟ್ಟುಕೊಂಡರೆ ಕೆಲಸ ಹೋದಾಗ ಅಥವಾ ಆರೋಗ್ಯ ಸರಿ ಇಲ್ಲದಿದ್ದಾಗ ಬೇರೆಯವರ ಹತ್ತಿರ ಸಹಾಯ ಕೇಳುವುದು ತಪ್ಪುತ್ತದೆ,
ಇದು ಧೈರ್ಯ ಹಾಗೂ ನೆಮ್ಮದಿ ನೀಡುತ್ತದೆ.ಜೊತೆಗೆ, ಚಿಕ್ಕ ವಯಸ್ಸಿನಲ್ಲೇ ಹಣ ಹೂಡಿಕೆ ಮಾಡಲು ಶುರುಮಾಡಿದರೆ ಅದರ ಲಾಭದಿಂದ ನಿವೃತ್ತಿ ಹೊಂದುವ ವೇಳೆಗೆ ಬಹಳಷ್ಟು ಹಣ ಕೂಡಿಡಬಹುದು,
ಇದರಿಂದ ವಯಸ್ಸಾದ ಮೇಲೆ ಯಾರಿಗೂ ತೊಂದರೆ ಕೊಡದೆ ನೆಮ್ಮದಿಯಿಂದ ಬದುಕಬಹುದು. ಕೊನೆಯದಾಗಿ, ಕೌಶಲ್ಯ ಬೆಳೆಸುವುದು ಮತ್ತು ಹಣ ಹೂಡಿಕೆ ಮಾಡುವ ಅಭ್ಯಾಸದಿಂದ ಕೇವಲ ಶ್ರೀಮಂತರಂತೆ ಕಾಣುವುದಲ್ಲ,
ನಿಜವಾಗಿಯೂ ಶ್ರೀಮಂತರಾಗಿ ಜೀವನ ನಡೆಸಲು ಸಹಾಯವಾಗುತ್ತದೆ
Even with a low income, good money management avoids debt. The 50-30-20 rule balances expenses and savings, preventing future financial worry.
An emergency fund removes the need for financial help during crises, providing peace of mind.
Investing young leverages compounding to build retirement wealth, enabling a peaceful, independent old age. Developing skills and investing builds real wealth for a secure life.
Thank you
<<< Arecanut Market : Daily Arecanut Market ( Click Here ) >>>
< For job updates and employment related information and carrier paths please follow below Facebook Group and WhatsApp Group >
1) ” Facebook Group ” – Click Here
2) ” WhatsApp Group ” – Click Here
Forever helpful and useful updates
– VK
Knowledge Lead’s & Live’s Life
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
