
Money being cut unknowingly Cut :: ನಿಮ್ಮ ಖಾತೆಯಿಂದ, ನಿಮಗೆ ಗೊತ್ತಿಲ್ಲದೆ ಹಣ ಕಟ್!! ಒಮ್ಮೆ ಚೆಕ್ ಮಾಡಿಕೊಳ್ಳಿ!!
ಗೊತ್ತಿಲ್ಲದೆ ಕಟ್ ಆಗೋ ಹಣಕ್ಕೆ ಬ್ರೇಕ್ ಹಾಕಿ – ಇಲ್ಲಿದೆ ಸಿಂಪಲ್ ಟ್ರಿಕ್!
Put a break on money being cut unknowingly – here is a simple trick!
ನಿಮಗೆ ಅರಿವಿಲ್ಲದೆಯೇ ಫೋನ್ಪೇ (PhonePe) ಅಪ್ಲಿಕೇಶನ್ನಿಂದ ಪ್ರತಿ ತಿಂಗಳು ಹಣ ಕಡಿತವಾಗುವುದನ್ನು (Autopay) ತಡೆಯುವುದು ಹೇಗೆ ಎಂಬುದರ ಬಗ್ಗೆ:
ಆಟೋ ಪೇ (Autopay) ಎಂದರೇನು?
What is Autopay?
* ಆನ್ಲೈನ್ನಲ್ಲಿ ನಾವು ಚಂದಾದಾರಿಕೆಗಳನ್ನು (Subscriptions) ಪಡೆದುಕೊಳ್ಳುವಾಗ (ಉದಾಹರಣೆಗೆ ನೆಟ್ಫ್ಲಿಕ್ಸ್ (Netflix), ಗೂಗಲ್ ಸ್ಟೋರೇಜ್ (Google Storage), ಅಥವಾ ಯಾವುದೇ ಅಪ್ಲಿಕೇಶನ್ಗಳು) ಅಥವಾ ಆನ್ಲೈನ್ ಪಾವತಿಗಳನ್ನು ಮಾಡುವಾಗ,
ಆಟೋ ಪೇ (Autopay) ಆಯ್ಕೆಯು ನಮಗೆ ತಿಳಿಯದ ರೀತಿಯಲ್ಲಿ ಸಕ್ರಿಯಗೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ, ಪ್ರತಿ ತಿಂಗಳು ಅಥವಾ ವರ್ಷಕ್ಕೊಮ್ಮೆ ನಿರ್ದಿಷ್ಟ ಮೊತ್ತವು ನಮ್ಮ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ.
ಪರಿಶೀಲಿಸುವ ವಿಧಾನ ಹೇಗೆ:
* ನಿಮ್ಮ ಫೋನ್ಪೇ (PhonePe) ಅಪ್ಲಿಕೇಶನ್ನಲ್ಲಿ ನಿಮ್ಮ ಖಾತೆಯಿಂದ ಹಣ ಕಡಿತವಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು, ಈ ಕೆಳಗಿನ ವಿಧಾನದ ಮೂಲಕ ನೀವೇ ಪರೀಕ್ಷಿಸಿಕೊಳ್ಳಬಹುದು.
* ಹಂತಗಳು:
1. Step 1 –ನಿಮ್ಮ ಫೋನ್ಪೇ (PhonePe) ಅಪ್ಲಿಕೇಶನ್ ಅನ್ನು ತೆರೆಯಿರಿ (Open).
2. Step 2 – ಅಪ್ಲಿಕೇಶನ್ನ ಕೆಳಭಾಗದಲ್ಲಿರುವ ‘Manage Payments‘ ವಿಭಾಗಕ್ಕೆ ಹೋಗಿ, ಅಲ್ಲಿ ‘View All‘ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Manage Payments
3. Step 3 – ನಂತರ, ಕೆಳಭಾಗದಲ್ಲಿರುವ ‘More Options‘ನಲ್ಲಿ ‘AutoPay‘ ಎಂಬ ಆಯ್ಕೆಯನ್ನು ಆರಿಸಿ.

AutoPay
4. Step 4- ಇಲ್ಲಿ, ನೀವು ಸಕ್ರಿಯವಾಗಿರುವ (Active) ಎಲ್ಲಾ ಆಟೋ ಪೇಗಳ ಪಟ್ಟಿಯನ್ನು ನೋಡಬಹುದು.

Active subscriptions
* ತೆಗೆದುಹಾಕುವ ವಿಧಾನ (Remove/Delete) ಒಂದು ವೇಳೆ ಆಟೋ ಪೇ ಬೇಡವೆನಿಸಿದರೆ,
ಅದನ್ನು ತೆಗೆದುಹಾಕುವುದು ಹೇಗೆ?
• ನೀವು ರದ್ದುಗೊಳಿಸಲು ಬಯಸುವ ಆಟೋ ಪೇ ಮೇಲೆ ಕ್ಲಿಕ್ ಮಾಡಿ.
* ನಂತರ, ಕೆಳಭಾಗದಲ್ಲಿರುವ ‘Delete AutoPay‘ ಬಟನ್ ಅನ್ನು ಒತ್ತಿರಿ.

Delete AutoPay
• ನಿಮ್ಮನ್ನು ಕಾರಣವನ್ನು ಕೇಳಲಾಗುತ್ತದೆ, ಸೂಕ್ತವಾದ ಕಾರಣವನ್ನು ಆಯ್ಕೆ ಮಾಡಿ ‘Proceed’ ನೀಡಿ.
* ಕೊನೆಯದಾಗಿ, ನಿಮ್ಮ ಯುಪಿಐ ಪಿನ್ (UPI PIN) ಅನ್ನು ನಮೂದಿಸಿದರೆ, ಆಟೋ ಪೇ ಯಶಸ್ವಿಯಾಗಿ ರದ್ದಾಗುತ್ತದೆ.
ಯಾವುದೇ ಅನಗತ್ಯ ಹಣದ ನಷ್ಟವನ್ನು ತಪ್ಪಿಸಲು, ನಿಮ್ಮ ಫೋನ್ನಲ್ಲಿ ಈ ಸೆಟ್ಟಿಂಗ್ಗಳನ್ನು ಒಮ್ಮೆ ಪರಿಶೀಲಿಸುವುದು ಉತ್ತಮ ಅಭ್ಯಾಸವಾಗಿದೆ.
ಆಟೋ ಪೇ (Autopay) ಅಲರ್ಟ್:-
PhonePe Auto-Pay Alert:-
ಈಗೆಲ್ಲಾ ಡಿಜಿಟಲ್ ಪೇಮೆಂಟ್ಗಳು ಜಾಸ್ತಿಯಾಗ್ತಾ ಇವೆ, ಆದ್ರೆ ತುಂಬಾ ಜನಕ್ಕೆ ಟೆಕ್ನಿಕಲ್ ಸೆಟ್ಟಿಂಗ್ಸ್ ಬಗ್ಗೆ ಸರಿಯಾಗಿ ಗೊತ್ತಿರೋದಿಲ್ಲ. ಕೆಲವರು ಆಪ್ ಅಥವಾ ಸಬ್ಸ್ಕ್ರಿಪ್ಷನ್ ತಗೊಳ್ಳುವಾಗ ಗೊತ್ತಿಲ್ಲದೆ ‘AutoPay‘ ಅಂತ ಆನ್ ಮಾಡಿರ್ತಾರೆ.
ಇದರಿಂದ ಪ್ರತಿ ತಿಂಗಳು ಅವರ ಅಕೌಂಟ್ನಿಂದ ₹150 ಇಂದ ₹2000 ತನಕ ಹಣ ಕಟ್ ಆಗ್ತಾ ಇರುತ್ತೆ. ಇದು ಮಿಡಲ್ ಕ್ಲಾಸ್ ಜನರಿಗೆ ಮತ್ತೆ ಹಣಕಾಸಿನ ಬಗ್ಗೆ ಗಮನ ಇರೋರಿಗೆ ದೊಡ್ಡ ತೊಂದರೆ ಆಗಬಹುದು. ಈ ವಿಡಿಯೋದಲ್ಲಿ ಹೇಳಿರುವ ಸುಲಭವಾದ ಸ್ಟೆಪ್ಸ್ ಫಾಲೋ ಮಾಡೋದ್ರಿಂದ,
ಜನರು ಅವರ ಫೋನಲ್ಲೇ ಬೇಡದಿರೋ ಪೇಮೆಂಟ್ಗಳನ್ನು ಕಂಡುಹಿಡಿದು ಕ್ಯಾನ್ಸಲ್ ಮಾಡಬಹುದು. ಇದು ಕಷ್ಟಪಟ್ಟು ದುಡಿದ ಹಣ ವೇಸ್ಟ್ ಆಗೋದನ್ನ ತಪ್ಪಿಸುತ್ತೆ, ಸೈಬರ್ ಫ್ರಾಡ್ ಅಥವಾ ಕಂಪೆನಿಗಳ ಕಡೆಯಿಂದ ಆಗುವ ಸಣ್ಣಪುಟ್ಟ ಫೈನಾನ್ಸಿಯಲ್ ಮೋಸಗಳಿಂದ ಜನರನ್ನು ಕಾಪಾಡಬಹುದು.
Digital payments are increasing, but many users don’t understand the technical settings and unknowingly activate ‘AutoPay‘. Consequently, ₹150-₹2000 is deducted monthly,
which is problematic for middle-class and budget-conscious individuals. This video shows how to identify and cancel unnecessary payments on their phones,
Preventing wasted money and protecting against cyber fraud or financial traps set by corporations.
Thank you.
Best Product in Amazon Online shopping based on our Live usage::
ಅಮೆಜಾನ್ ಆನ್ಲೈನ್ ಶಾಪಿಂಗ್ ಅಲ್ಲಿ ಸಿಗುವ, ಬೆಸ್ಟ್ ಪ್ರಾಡಕ್ಟ್ ಗಳನ್ನು, ಒಮ್ಮೆ ಅದನ್ನು ಯೂಸ್ ಮಾಡಿ ಅದು ಚೆನ್ನಾಗಿದ್ದಾರೆ ನಮ್ಮ ಲೇಖನ ಓದುವವರಿಗೆ ಸಹಾಯವಾಗಲಿ, ಲಿಂಕ್ ಅನ್ನ ಪ್ರಕಟಿಸುತ್ತೇವೆ.
Click below link to purchase it
We are using this washing machine since many year, best washing machine for daily use dress.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

