Work From Home, Free training :: ಉದ್ಯೋಗ ಅವಕಾಶ, ಮನೆಯಲ್ಲೇ ಮಾಡುವ 100 ಕೆಲಸಗಳ? ಯಾವುದೇ ಹಣ ಕಟ್ಟುವಂತಿಲ್ಲ?

"Agriculture is our CULTURE"

Work From Home, Free training :: ಉದ್ಯೋಗ ಅವಕಾಶ, ಮನೆಯಲ್ಲೇ ಮಾಡುವ 100 ಕೆಲಸಗಳ? ಯಾವುದೇ ಹಣ ಕಟ್ಟುವಂತಿಲ್ಲ?

ಉಚಿತ ತರಬೇತಿ – ಸುವರ್ಣ ಅವಕಾಶ ನಿಮ್ಮ ಮನೆಬಾಗಿಲಿಗೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ!!
Free Training – A Golden Opportunity at Your Doorstep and how to apply!!
ಗುಡಗೆರೆ ಚಾಮುಂಡೇಶ್ವರಿ ಬಸವಪ್ಪ ಸೇವಾ ಚಾರಿಟೇಬಲ್ ಟ್ರಸ್ಟ್ ಅವರು ನೀಡುತ್ತಿರುವ ಉಚಿತವಾಗಿ ಮನೆಯಲ್ಲೇ ಮಾಡುವ ಕೆಲಸದ ತರಬೇತಿಯ ಬಗ್ಗೆ ::

ಕಾರ್ಯಕ್ರಮದ ಮುಖ್ಯ ಗುರಿ:-

Main objective of the program :-

ಮಹಿಳೆಯರು ಮತ್ತು ಆಸಕ್ತಿ ಇರುವವರು ಸ್ವಂತಂತ್ರವಾಗಿ ಬದುಕಲು ಮನೆಯಲ್ಲೇ ಕುಳಿತು ಮಾಡಬಹುದಾದ ಸುಮಾರು 100ಕ್ಕೂ ಹೆಚ್ಚು ಬೇರೆ ಬೇರೆ ಕೆಲಸಗಳ ಬಗ್ಗೆ ಉಚಿತ ತರಬೇತಿ ಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ತರಬೇತಿ ನೀಡುವ ಮುಖ್ಯ ವಿಭಾಗಗಳು:-

Training categiries :-

ತರಬೇತಿಯನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಲಾಗಿದೆ:

ಪೂಜಾ ಸಾಮಗ್ರಿಗಳು- ಅಗರಬತ್ತಿ, ಕರ್ಪೂರ, ಧೂಪ, ದೀಪದ ಬತ್ತಿ, ಗೆಜ್ಜೆ ಬತ್ತಿ, ವಿಭೂತಿ ಮತ್ತು ದೇವರ ಫ್ರೇಮ್‌ಗಳ ತಯಾರಿ.

* ಅಡುಗೆ ಮನೆಗೆ ಬೇಕಾದ ವಸ್ತುಗಳು – ಅಡಿಕೆ ತಟ್ಟೆ ತಯಾರಿ, ತೆಂಗಿನ ನಾರಿನಿಂದ ಮಾಡುವ ವಸ್ತುಗಳು, ಮರದ ಸೌಟು, ಚಪಾತಿ ಲಟ್ಟಣಿಗೆ ಮತ್ತು ನೈಸರ್ಗಿಕ ಹಸಿರು ನಾರಿನ ವಸ್ತುಗಳು.

ಮನೆ ಅಲಂಕಾರ – ಮಾವಿನ ಎಲೆ ತೋರಣ, ಬಾಗಿಲ ತೋರಣ, ಕೃತಕ ಹೂವಿನ ಗುಚ್ಛ, ಫೋಟೋ ಫ್ರೇಮ್ ಮತ್ತು ಗೋಡೆಗೆ ಹಾಕುವ ಅಲಂಕಾರಿಕ ವಸ್ತುಗಳು.

* ತಾಂತ್ರಿಕ ತರಬೇತಿ – ಬೇಸಿಕ್ ಕಂಪ್ಯೂಟರ್ ಶಿಕ್ಷಣ, YouTube ಚಾನೆಲ್ ನಿರ್ವಹಣೆ, ಫೋಟೋ ಮತ್ತು ವಿಡಿಯೋ ಎಡಿಟಿಂಗ್.

ವ್ಯಾಪಾರ ಮತ್ತು ರಫ್ತು- ತಯಾರಿಸಿದ ವಸ್ತುಗಳನ್ನು Amazon, Flipkart ನಲ್ಲಿ ಮಾರಾಟ ಮಾಡುವುದು ಹೇಗೆ ಮತ್ತು ಬೇರೆ ದೇಶಕ್ಕೆ ರಫ್ತು (Export) ಮಾಡಲು ಬೇಕಾಗುವ ಲೈಸೆನ್ಸ್ ಪಡೆಯುವ ಬಗ್ಗೆ ಮಾಹಿತಿ.

ಸೌಲಭ್ಯಗಳು ಮತ್ತು ಮುಖ್ಯ ಅಂಶಗಳು:-

Facilitaties and feztures:-

ಸಂಪೂರ್ಣ ಉಚಿತ – ತರಬೇತಿಗೆ ಯಾವುದೇ ಹಣವಿಲ್ಲ (ಯಾರಿಗೂ ಹಣ ಕೊಡಬೇಡಿ).

* 7 ದಿನಗಳ ತರಬೇತಿಯಲ್ಲಿ ಉಚಿತವಾಗಿ ಊಟ ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಇರುತ್ತದೆ.

• ಬೈ-ಬ್ಯಾಕ್ ಸೌಲಭ್ಯ (Buy-back), ನೀವು ಮನೆಯಲ್ಲಿ ತಯಾರಿಸಿದ ವಸ್ತುಗಳನ್ನು ಟ್ರಸ್ಟ್‌ನವರೇ ವಾಪಸ್ಸು 

ಕೊಂಡುಕೊಳ್ಳುತ್ತಾರೆ, ಇದರಿಂದ ನಿಮಗೆ ಮಾರುಕಟ್ಟೆಯ ಚಿಂತೆ ಇರುವುದಿಲ್ಲ.

ಅರ್ಹತೆ: ಕರ್ನಾಟಕದ ಯಾವುದೇ ಜಿಲ್ಲೆಯವರಾದರೂ ಈ ತರಬೇತಿಗೆ ಸೇರಬಹುದು.

ಅರ್ಜಿ ಸಲ್ಲಿಸುವ ವಿಧಾನ :-

How to apply:-

1. ದೂರವಾಣಿ ಕರೆ: ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ನಿಮ್ಮ ಹೆಸರನ್ನು ಬರೆದುಕೊಳ್ಳಿ.

ಸಂಖ್ಯೆ 1 – 9008536879

ಸಂಖ್ಯೆ 2- 9964676625

2. ಕರೆ ಮಾಡಿದಾಗ ನಿಮ್ಮ ಹೆಸರು, ಊರು ಮತ್ತು ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ತಿಳಿಸಿ. ಅವರು ಮುಂದಿನ ಬ್ಯಾಚ್ ಯಾವಾಗ ಶುರುವಾಗುತ್ತದೆ ಮತ್ತು ನೀವು ಬರಬೇಕಾದ ದಿನಾಂಕವನ್ನು ಹೇಳುತ್ತಾರೆ.

3. ನಿಗದಿಪಡಿಸಿದ ದಿನಾಂಕದಂದು ಗೌಡಗೆರೆ ಚಾಮುಂಡೇಶ್ವರಿ ದೇವಸ್ಥಾನ (ಚನ್ನಪಟ್ಟಣ ತಾಲೂಕು) ಇಲ್ಲಿರುವ ಟ್ರಸ್ಟ್ ಕಚೇರಿಗೆ ತರಬೇತಿಗಾಗಿ ಬರಬೇಕು.

ಗಮನಿಸಿ – ಮಾರ್ಚ್ ೮ ರಿಂದ ಮೊದಲ ಬ್ಯಾಚ್ ತರಬೇತಿ ಶುರುವಾಗುತ್ತಿದೆ. ಇದು ನಿರಂತರವಾಗಿ ಬ್ಯಾಚ್‌ಗಳ ರೂಪದಲ್ಲಿ ನಡೆಯುತ್ತಿರುತ್ತದೆ, ಆದ್ದರಿಂದ ನೀವು ಯಾವಾಗ ಬೇಕಾದರೂ ಕರೆ ಮಾಡಿ ಹೆಸರನ್ನು ನೊಂದಾಯಿಸಿಕೊಳ್ಳಬಹುದು.

ಸ್ವಾವಲಂಬನೆಯತ್ತ ನಮ್ಮ ನಡಿಗೆ:-

A Step Towards Self-Reliance:-

ತಮ್ಮ ಸ್ವಂತ ದುಡಿಮೆಯಿಂದ ಬದುಕಲು ಇಷ್ಟಪಡುವ ಮಹಿಳೆಯರಿಗೆ ಮತ್ತು ಕೆಲಸ ಇಲ್ಲದೆ ಇರುವ ಯುವಕರಿಗೆ ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪ ಟ್ರಸ್ಟ್ ಆಯೋಜಿಸಿರುವ ಈ ಉಚಿತ ತರಬೇತಿ ಕಾರ್ಯಕ್ರಮವು ಒಂದು ಒಳ್ಳೆಯ ಅವಕಾಶ.

ಇಲ್ಲಿ ಹಣ ಹಾಕದೆ, ಮನೆಯಲ್ಲೇ ಕುಳಿತು ಗೌರವದಿಂದ ದುಡಿಯಲು ಬೇಕಾದ ಕಲೆಗಳನ್ನು ಕಲಿಸುತ್ತಾರೆ. ತರಬೇತಿ ಜೊತೆಗೆ ಊಟ, ವಸತಿ ಮತ್ತು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಸಹಾಯ ಮಾಡುವುದು ಈ ಯೋಜನೆಯ ವಿಶೇಷತೆ.

ಆಸಕ್ತಿ ಇರುವವರು ತಡ ಮಾಡದೆ ಕೊಟ್ಟಿರುವ ಫೋನ್ ನಂಬರ್ ಮೂಲಕ ಹೆಸರನ್ನು ನೊಂದಾಯಿಸಿ ಈ ಒಳ್ಳೆಯ ಅವಕಾಶವನ್ನು ಬಳಸಿಕೊಳ್ಳಬಹುದು. ಇದು ಬರೀ ತರಬೇತಿ ಅಲ್ಲ, ಬದಲಿಗೆ ದುಡ್ಡಿಗಾಗಿ ಬೇರೆಯವರನ್ನು ಅವಲಂಬಿಸದೆ ಇರುವ ಒಂದು ನಂಬಿಕೆಯ ದಾರಿಯಾಗಿದೆ.

The Gaudagere Chamundeshwari Basavappa Trust offers free training for women and unemployed youth to become self-sufficient. Skills to earn a dignified living from home without investment are taught.

Free food, accommodation, and marketing assistance are provided. Interested candidates can register via phone. This program promotes financial independence.

ಧನ್ಯವಾದಗಳು 

Thank you

<<< Arecanut Market : Daily Arecanut Market ( Click Here ) >>>

<  For job updates and employment related information and carrier paths please follow below Facebook Group and WhatsApp Group  >

1) ” Facebook Group ” – Click Here

2) ” WhatsApp Group ” – Click Here

Forever helpful and useful updates

 vkgrowmore.com 💚

– VK
Knowledge Lead’s & Live’s Life

"Agriculture is our CULTURE"

By Vilas

I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

.