Gruhalakshmi :- 50 ಲಕ್ಷ ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮಾ ಆಗಿದೆ!!! ಯಾರಿಗೆ ಜಮಾ ಆಗಿದೆ? ನಿಮ್ಮ ಖಾತೆ ಪರಿಶೀಲಿಸಿ!!!
ಬದಲಾವಣೆಯ ಹಣತೆ – ಮಹಿಳಾ ಹಿತಾಸಕ್ತಿಯ ಗೃಹಲಕ್ಷ್ಮಿ!! 26ನೇ ಕಂತಿನ ಹಣ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗುತ್ತಿರುವ ಕುರಿತು!!
26th current update on women welfare scheme – Gruhalakshmi!!
ಕುಟುಂಬದ ಕಣ್ಣಿಗೆ ಆಸರೆಯ ಬೆಳಕು ಎಂದರೆ, ಒಂದು ಆಧಾರ ಸ್ತಂಭದಂತೆ ಬೆಂಬಲವಾಗಿರುವುದು. “ಯಾವುದೇ ಒಂದು ಕುಟುಂಬವು ಅಭಿವೃದ್ಧಿ ಹೊಂದಬೇಕಾದರೆ,
ಅದು ಆ ಮನೆಯ ಹೆಣ್ಣುಮಕ್ಕಳ ಸಬಲೀಕರಣದಿಂದ ಮಾತ್ರ ಸಾಧ್ಯ” ಎಂಬ ಸತ್ಯವಾದ ತತ್ವದ ಆಧಾರದ ಮೇಲೆ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ‘ಗೃಹಲಕ್ಷ್ಮಿ‘ ಯೋಜನೆಯು ಕೇವಲ ಒಂದು ಆರ್ಥಿಕ ಸಹಾಯಧನವಾಗಿ ಮಾತ್ರ ಉಳಿಯದೆ,
ಇದು ಹೆಣ್ಣುಮಕ್ಕಳ ಶಕ್ತಿಯನ್ನು ಹೆಚ್ಚಿಸುವ ಮತ್ತು ಅವರ ಗೌರವವನ್ನು ಎತ್ತಿ ಹಿಡಿಯುವ ಸಂಕೇತವಾಗಿದೆ.
ಹಣ ಜಮೆ ಪ್ರಕ್ರಿಯೆಯ ವಿವರ :-
Progress rate of money tranfer :-
ಕಳೆದ ಮೂರು ದಿನಗಳಿಂದ ಗೃಹಲಕ್ಷ್ಮಿ ಯೋಜನೆಯ 26ನೇ ಕಂತಿನ ಹಣವನ್ನು ಸರ್ಕಾರವು ಬಿಡುಗಡೆ ಮಾಡುತ್ತಿದೆ. ಈವರೆಗೆ ಅಂದಾಜು 35% ರಿಂದ 40% ಫಲಾನುಭವಿಗಳಿಗೆ,
ಅಂದರೆ ಸುಮಾರು 50 ಲಕ್ಷ ಮಹಿಳೆಯರ ಖಾತೆಗಳಿಗೆ ಹಣವನ್ನು ತಲುಪಿಸಲಾಗಿದೆ . ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ.
ಯಾವ ಜಿಲ್ಲೆಗಳಲ್ಲಿ ಹಣ ಜಮೆಯಾಗುತ್ತಿದೆ?
District’s receiving money ?
ಪ್ರಸ್ತುತವಾಗಿ 18 ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಣ ಜಮೆಯಾಗುತ್ತಿದೆ .
ಜಿಲ್ಲೆಗಳ ಪಟ್ಟಿ
List of Districts
1. ಬಾಗಲಕೋಟೆ
2. ಕೊಪ್ಪಳ
3. ಚಿಕ್ಕಬಳ್ಳಾಪುರ
4. ಬೆಂಗಳೂರು ನಗರ
5. ಬೆಂಗಳೂರು ಗ್ರಾಮಾಂತರ
6. ಬೆಂಗಳೂರು ದಕ್ಷಿಣ (ನಗರ ಭಾಗ)
7. ಮೈಸೂರು
8. ಕೋಲಾರ
9. ದಾವಣಗೆರೆ
10. ರಾಮನಗರ
11. ಉತ್ತರ ಕನ್ನಡ
12. ಕಲ್ಬುರ್ಗಿ (ಕಲಬುರಗಿ)
13. ತುಮಕೂರು
14. ಶಿವಮೊಗ್ಗ
15. ಹಾಸನ
16. ಗದಗ
17. ತುಮಕೂರು
18. ಕೊಡಗು
ನಮಗೆ ಲಭ್ಯವಿರುವ ಅಧಿಕೃತ ಮಾಹಿತಿಯ ಪ್ರಕಾರ, ಗದಗ ಮತ್ತು ತುಮಕೂರು ಸೇರಿದಂತೆ ಇನ್ನಿತರ ಜಿಲ್ಲೆಗಳ ಫಲಾನುಭವಿಗಳ ಖಾತೆಗಳಿಗೆ ಹಣವನ್ನು ತಲುಪಿಸಲಾಗಿದೆ.
ಈ ನಿರ್ದಿಷ್ಟ ಜಿಲ್ಲೆಗಳ ಫಲಾನುಭವಿಗಳು, ಅವರಿಗೆ ಹಣ ಸಂದಾಯವಾಗಿರುವ ಬಗ್ಗೆ ಖಚಿತಪಡಿಸಿ, ಸ್ಕ್ರೀನ್ಶಾಟ್ಗಳ ಮೂಲಕ ಮಾಹಿತಿಯನ್ನು ನಮಗೆ ಕಳುಹಿಸಿದ್ದಾರೆ.

Money Credited Status in Tumkur
ತುಮಕೂರು

Money Credited Status in Gadag
ಗದಗ

Money Credited Status In Gulbarga
ಕಲ್ಬುರ್ಗಿ

Money Credited Status For Kodagu
ಕೊಡಗು
4000 ರೂ. ಜಮೆ ಬಗ್ಗೆ ಇರುವ ಗೊಂದಲ ನಿವಾರಣೆ:-
confusion regarding the ₹4,000 deposit:-
ಸಾಮಾಜಿಕ ಜಾಲತಾಣಗಳಲ್ಲಿ ಗೃಹಲಕ್ಷ್ಮಿ ಯೋಜನೆಯ 26ನೇ ಮತ್ತು 27ನೇ ಕಂತುಗಳನ್ನು ಒಟ್ಟಿಗೆ ಸೇರಿಸಿ 4000 ರೂ.ಗಳನ್ನು ಜಮೆ ಮಾಡಲಾಗುತ್ತಿದೆ ಎಂಬ ವದಂತಿಗಳು ಹಬ್ಬುತ್ತಿವೆ.
ಆದರೆ, ಇದು ಸತ್ಯವಲ್ಲ .ಒಂದು ವೇಳೆ, ಫಲಾನುಭವಿಯೊಬ್ಬರಿಗೆ ಈ ಹಿಂದೆ 25ನೇ ಕಂತಿನ ಹಣವು ಬಾಕಿ ಇದ್ದಲ್ಲಿ, ಅಂತಹ ಫಲಾನುಭವಿಗಳಿಗೆ ಮಾತ್ರ ಈಗ 25ನೇ ಮತ್ತು 26ನೇ ಕಂತುಗಳನ್ನು ಸೇರಿಸಿ ಒಟ್ಟು 4000 ರೂ.ಗಳನ್ನು ಜಮೆ ಮಾಡಲಾಗುತ್ತಿದೆ .ಈ ಬಗ್ಗೆ ಫಲಾನುಭವಿಗಳು ಗಮನಹರಿಸಬೇಕು.
ಹಣ ಜಮೆ ಆಗಲು ತೆಗೆದುಕೊಳ್ಳುವ ಸಮಯ:-
Required time for account deposit:-
ಸರ್ಕಾರವು ಇದೇ ವೇಗದಲ್ಲಿ ಹಣವನ್ನು ಬಿಡುಗಡೆ ಮಾಡುವುದನ್ನು ಮುಂದುವರೆಸಿದರೆ, ಅಂದಾಜಿನ ಪ್ರಕಾರ ಇನ್ನು 8 ರಿಂದ 10 ದಿನಗಳಲ್ಲಿ ಸುಮಾರು 90% ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವು ಜಮೆಯಾಗುವ ಸಾಧ್ಯತೆ ಇದೆ ,
ಆದಷ್ಟು ಬೇಗನೆ ಎಲ್ಲಾ ಫಲಾನುಭವಿಗಳಿಗೂ ಹಣ ತಲುಪುವಂತೆ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಯು ರಾಜ್ಯದ ಹಲವಾರು ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಮೂಲಕ ಒಂದು ಮಹತ್ವದ ಬದಲಾವಣೆಯನ್ನು ತರುತ್ತಿದೆ.
ಈ ಯೋಜನೆಯು ಮಹಿಳೆಯರನ್ನು ಕೇವಲ ಮನೆಯ ಕೆಲಸಗಳನ್ನು ನಿರ್ವಹಿಸುವ ‘ಗೃಹಿಣಿ’ಯರನ್ನಾಗಿ ಮಾತ್ರ ಪರಿಗಣಿಸದೆ, ಅವರನ್ನು ಆರ್ಥಿಕ ವಿಷಯಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ‘ಹಣಕಾಸು ನಿರ್ಧಾರಕರು‘ ಆಗಿ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ನೇರ ನಗದು ವರ್ಗಾವಣೆ :-
DBT – Direct Benefit Transfer :-
ಅಲ್ಲದೆ, ಇದು ಭಾರತದ ಅತ್ಯಂತ ದೊಡ್ಡ ನೇರ ನಗದು ವರ್ಗಾವಣೆ (DBT – Direct Benefit Transfer) ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಮತ್ತು ಕ್ರಾಂತಿಕಾರಕ ಹೆಜ್ಜೆಯಾಗಿದೆ.
In short, the Gruhalakshmi Scheme is an important and forward-thinking plan to help women in Karnataka become more financially independent and empowered.
By directly giving money to the female head of the household, the program helps women move from being passive recipients to active participants in financial decisions within their families and communities.
Although there may be some technical issues with using Direct Benefit Transfer (DBT) methods, the scheme’s success depends mainly on how well it improves the living standards of those it helps and creates a vital financial safety net,
Especially for families with limited financial resources and low incomes. Also, when combined with thorough skill development and training programs, this regular monthly financial support can create a large multiplier effect,
Boosting wider economic activity and leading to more inclusive and “Women-led” economic growth across Karnataka.
ಧನ್ಯವಾದಗಳು
Thank You
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply