"Agriculture is our CULTURE"

Milking Competition :: ಹಾಲು ಕರೆಯುವ ಸ್ಪರ್ಧೆ, ನೊಂದಾಯಿಸಿ !! ಪ್ರಥಮ ಬಹುಮಾನ 1.5 ಲಕ್ಷ, ದ್ವಿತೀಯ 1 ಲಕ್ಷ, ತೃತೀಯ 75,000 ರೂ!!!

ಗ್ರಾಮೀಣ ಹಾಲು ಉತ್ಪಾದಕರಿಗೆ ಬಂಪರ್ ಆಫರ್:: ಗೋಪಾಲಕರಿಗೆ ಹಾಲು ಕರೆಯುವ ಸ್ಪರ್ಧೆ ಆಯೋಜಿಸಿರುವ ಮೈಸೂರು ನಗರ ಗೋಪಾಲಕರ ಸಂಘ!! 

Milking competitions are a part of traditional rural celebrations that reflect cultural values, unity, and respect for agriculture and dairy farming. Such events are organized to encourage community participation, preserve age-old customs, and highlight the importance of milk in daily life.

By bringing farmers and villagers together, these competitions create a festive atmosphere while promoting social bonding and cultural heritage.

 ಮೈಸೂರು ನಗರ ಗೋಪಾಲಕರ ಸಂಘದ “20ನೇ ವಾರ್ಷಿಕೋತ್ಸವ”ದ ಪ್ರಯುಕ್ತ “ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ”ಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯು ಕೇವಲ ಗೋಪಾಲಕರಿಗೆ ನೀಡುವ ಆಕರ್ಷಕ ಪ್ರಶಸ್ತಿ ಗಿಂತಲೂ, ಹಾಲು ಕರೆಯುವ ಸ್ಪರ್ಧೆ ಯಾಕಾಗಿ ಆಯೋಜಿಸಲಾಗಿದೆ ಮತ್ತು ಅದರ ಉದ್ದೇಶವೇನು ಎಂದು ತಿಳಿಯುವುದು ಅತ್ಯಗತ್ಯವಾಗಿದೆ. 

ಏನಿದು ಸ್ಪರ್ಧೆ:-
About competition:-

 ಈ ಸ್ಪರ್ಧೆಯು “ಮೈಸೂರು ನಗರ ಗೋಪಾಲಕರ ಸಂಘ”ದ “20ನೇ ವಾರ್ಷಿಕೋತ್ಸವ”ದ ಪ್ರಯುಕ್ತ ದಿನಾಂಕ – ಜನವರಿ 24 ಮತ್ತು 25ರಂದು ಹಾಲು ಕರೆಯುವ ಸ್ಪರ್ಧೆಯನ್ನು ಗೋಪಾಲಕರಿಗಾಗಿ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಗೋಪಾಲಕರಿಗೆ “ಆಕರ್ಷಕ ಬಹುಮಾನ”ದ ವಿತರಣೆಯು ಇದ್ದು,

ಹಾಲಿನ ಉತ್ಪನ್ನಗಳ “ಅವಶ್ಯಕತೆ ಮತ್ತು ಪೂರೈಕೆ”ಯ ಬಗ್ಗೆ ಜನರಿಗೆ ಅಗತ್ಯ ನೆರವು ಮೂಡಿಸುವುದು ಹಾಗೂ ಗೋಪಾಲಕರಿಗೆ “ಆರ್ಥಿಕ”ವಾಗಿ “ಸದೃಢ”ರಾಗುವಂತೆ ಮಾಡುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿರುತ್ತದೆ.

ಈ ಸ್ಪರ್ಧೆ ಎಲ್ಲಿ ನಡೆಯುತ್ತದೆ ಮತ್ತು ಎಂದು ನಡೆಯುತ್ತದೆ? 
Where and when this competition will happen? 

* ಈ ಸ್ಪರ್ಧೆಯು “ಜನವರಿ 24 ಮತ್ತು 25” ರಂದು ಮೈಸೂರಿನ “ಜೆ.ಕೆ.ಮೈದಾನ”ದಲ್ಲಿ ನಡೆಯುತ್ತದೆ.

* ಈ ಸ್ಪರ್ಧೆ ನಡೆಸಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದ್ದು, ಗೋಪಾಲಕರು ಬೆಳಗ್ಗೆ ಹಾರು ಮೂವತ್ತು ಹಾಗೂ ಸಂಜೆ 5:30ಕ್ಕೆ ಸರಿಯಾಗಿ ಸ್ಪರ್ಧೆ ನಡೆಯುವ ಜಾಗದಲ್ಲಿ ಹಾಜರಿರಬೇಕು. 

ಈ ಸ್ಪರ್ಧೆಗೆ ಯಾರು ಅರ್ಹರು? 
Who can register for this competition? 

 ಈ ಸ್ಪರ್ಧೆಯು ರಾಜ್ಯದಾದ್ಯಂತ ಆಸಕ್ತಿ ಇರುವ ಗೋಪಾಲಕರಿಗೆ ಸಿಗುವ ಅವಕಾಶವಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ಗೋಪಾಲಕರು ಅಗತ್ಯವಾಗಿ ಹಸುವನ್ನು ತಾವೇ ಜೊತೆಯಲ್ಲಿ ಕರೆತರಬೇಕಾಗುತ್ತದೆ.

ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರಿಗೆ ಹಸು ಇರುವುದು ಕಡ್ಡಾಯ ಮಾನದಂಡವಾಗಿರುತ್ತದೆ.

 ಸ್ಪರ್ಧೆಗೆ ಭಾಗವಹಿಸಲು ಇಚ್ಚಿಸುವವರು ತರಬೇಕಾದ ದಾಖಲೆಗಳು? 
Documents of candidate who participate in competition? 

ನೊಂದಾಯಿಸಿಕೊಳ್ಳಲು ಇಚ್ಚಿಸುವವರ 

ಆಧಾರ್ ಕಾರ್ಡ್, 

ಶಾಶ್ವತ ಮೊಬೈಲ್ ಸಂಖ್ಯೆ, 

ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ, 

 ಸ್ಪರ್ಧೆಗೆ ಭಾಗವಹಿಸಬೇಕಾದರೆ ಎಲ್ಲಿ ಸಂಪರ್ಕಿಸಬೇಕು? 
Where to contact if to participate in competition? 

ಆಸಕ್ತಿ ಇರುವ ಗೋಪಾಲಕರು, ಕೆಳಗಿನ ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಅಗತ್ಯ ಮಾಹಿತಿಗಳನ್ನು ಪಡೆಯಬಹುದು.

 ಮೊಬೈಲ್ ಸಂಖ್ಯೆ:- 9986416956.

* ಈ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೂಲಕ ಆಸಕ್ತಿ ಇರುವ ಗೋಪಾಲಕರು ಒಂದಲ್ಲ ಒಂದು ರೀತಿಯಲ್ಲಿ ನೋಡುವ ಗೊಂದಲಗಳಿಗೆ ಸರಿಯಾದ ಮಾಹಿತಿಯನ್ನು ಪಡೆಯಬಹುದು.

ಗೆದ್ದ ತಂಡಗಳಿಗೆ ನೀಡುವ ಬಹುಮಾನ ಎಷ್ಟು? 
What is the prizing amount for winners? 

* ಹಾಲು ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಹಾಲು ಕರೆಯುವ ಗೋಪಾಲಕರು ಬಂದಿರುತ್ತಾರೆ. 

* ಹೀಗಾಗಿ ಈ ಕಾರ್ಯಕ್ರಮವನ್ನು ಈ ಸ್ಪರ್ಧೆಯನ್ನು “ಎರಡು ದಿನ”ಗಳ ಮಟ್ಟಿಗೆ ಆಯೋಜಿಸಲಾಗಿದೆ ಈ ಸ್ಪರ್ಧೆ ಮುಗಿದ ನಂತರ ಅಂದರೆ “ಜನವರಿ 25ನೇ ತಾರೀಕಿನ ಸಂಜೆ”ಯ ವೇಳೆಗೆ ವಿಜೇತರಾದ ಗೋಪಾಲಕರಿಗೆ ಮತ್ತು ಹಸುವಿಗೆ “ವಿಶೇಷ ಬಹುಮಾನ” ವಿರುತ್ತದೆ ಅದುವೇ,

1st prize :- 1.50 ಲಕ್ಷ

2nd praize:- 1 ಲಕ್ಷ

3rd prize:- 75,000

4th praize:- 50,00

5th praize:- 25000

 ಈ ರೀತಿಯಾಗಿ ಆಕರ್ಷಕ ಧನ ಸಹಾಯದ ಬಹುಮಾನಗಳಿದ್ದು ಆಸಕ್ತರು ಕೂಡಲೇ ಮೇಲೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ನೊಂದಾಯಿಸಿಕೊಳ್ಳಬಹುದು.

ಈ ಕಾರ್ಯಕ್ರಮವು ಗ್ರಾಮೀಣ ಸೌಹಾರ್ದತೆಯನ್ನು ಬಲಪಡಿಸುವುದರ ಜೊತೆಗೆ, ಹಾಲು ಉದ್ಯಮದ ಮಹತ್ವವನ್ನು ಸಾರುತ್ತದೆ. ಸಾಂಪ್ರದಾಯಿಕ ಆಚರಣೆಗಳಿಗೆ ಹೊಸ ಉತ್ಸಾಹ ನೀಡುವ ಈ ಸ್ಪರ್ಧೆಯಾಗಿದೆ, ಗ್ರಾಮೀಣ ಬದುಕಿನ ಸೌಂದರ್ಯವನ್ನು ಪ್ರತಿಬಿಂಬಿಸುವ ಉತ್ತಮ ಉದಾಹರಣೆಯಾಗಿದೆ.

 ಅಲ್ಲದೆ, ಹಾಲು ಕರೆಯುವ ಸ್ಪರ್ಧೆ ಮಾತ್ರವಲ್ಲದೆ, ಚಿಕ್ಕಮಗಳೂರಿನ ಕಡೂರಿನಲ್ಲಿ “ಅಮೃತ ಮಹಲ್ ತಳಿ”ಯ ಎತ್ತಿನ ಬೆಲೆ, ಹರಾಜಿನಲ್ಲಿ ದಾಖಲೆ ಮೊತ್ತವನ್ನು ತನ್ನದಾಗಿಸಿಕೊಂಡಿದೆ.

* ಚಿಕ್ಕಮಗಳೂರಿನ ಕಡೂರಿನ ಬೀರೂರಿನಲ್ಲಿ “ಅಮೃತ ಮಹಲ್ ತಳಿ”’ಗಳ ಹರಾಜು ಪ್ರಕ್ರಿಯೆ ನಡೆಯಿತು. 

* ಈ ಹರಾಜಿನಲ್ಲಿ ಬೀಜದ ಹೋರಿಗೆ 1.50ಲಕ್ಷದಷ್ಟು ಹರಾಜು ಕೂಗಿದ ರೈತರ ಹರಾಜಿನ ಮೊತ್ತ 2.32 ಲಕ್ಷಕ್ಕೆ ಹೋಗಿ ನಿಂತಿತು. 

 ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು “170ಹೋರಿ ಕರುಗಳು ಹಾಗೂ 8 ಬೀಜದ ಹೋರಿ” ಗಳು ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗಿದೆ. 

 ಹಾಗಾಗಿ ಈ ಹರಾಜು ಪ್ರಕ್ರಿಯೆಯಲ್ಲಿ ಒಟ್ಟಾರೆಯಾಗಿ ₹1.02 ಕೋಟಿಯಷ್ಟು ಹಣ ಸಂಗ್ರಹವಾಗಿದೆ ಎಂದು ಚಿಕ್ಕಮಗಳೂರಿನ ಕಡೂರು ತಾಲೂಕಿನ ಬೀರೂರಿನ “ಸಂವರ್ಧನಾ ಕೇಂದ್ರ”ದ ಅಧಿಕಾರಿಗಳು ತಿಳಿಸಿದರು. 

 ಹಾಲು ಕರೆಯುವ ಸ್ಪರ್ಧೆ ಅಥವಾ ಎತ್ತಿನ ಮಾರಾಟ, ಈ ಎರಡು ವಿಷಯಗಳು ಗೋಪಾಲಕರ ಹಿತದೃಷ್ಟಿಯನ್ನು ಕಾಯುವುದೇ ಆಗಿದೆ. ಅಲ್ಲದೆ ಹಾಲು ಕರೆಯುವ ಸ್ಪರ್ಧೆಯ ಆಯೋಜನೆಯಿಂದ ಹಾಲು ಉತ್ಪಾದಕರಲ್ಲಿ ಉತ್ಸಾಹ ಹೆಚ್ಚು ಮಾಡುತ್ತದೆ ಹಾಗೂ ಹೋರಿಗಳ ಹರಾಜು ಪ್ರಕ್ರಿಯೆಯಿಂದ ಹೋರಿ “ಸಾಕಾಣಿಕೆ”ಯು ಉತ್ತೇಜನಗೊಳ್ಳುತ್ತದೆ. 

Milking competitions and bull auctions are both activities aimed at protecting and promoting the interests of cattle rearers. Organizing milking competitions boosts the enthusiasm and motivation of milk producers, while the auction process of bulls encourages and strengthens the practice of bull rearing. These events are organized to encourage community participation, preserve age-old customs, and highlight the importance of milk in daily life. By bringing farmers and villagers together, these competitions create a festive atmosphere while promoting social bonding and cultural heritage. 

Thank you.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚


"Agriculture is our CULTURE"