PM KISAN :: 22ನೇ ಕಂತಿನ ಹಣ ಯಾವಾಗ ಜಮಾವಾಗುತ್ತೆ?? “ರೈತ ಐಡಿ” ಮಾಡಿಸಿಕೊಳ್ಳುವುದು ತುಂಬಾ ಸುಲಭ!!!!
PM-KISAN 22ನೇ ಕಂತು ಬಿಡುಗಡೆಗೆ ದಿನಾಂಕ ಫಿಕ್ಸ್!! ಆದರೆ “ರೈತ ಐಡಿ” ಕಡ್ಡಾಯ :: ರೈತ ಐಡಿ ಇದ್ದರೆ ಮಾತ್ರ 22ನೇ ಕಂತಿನ ಹಣ ನೇರವಾಗಿ ರೈತರ ಖಾತೆಗೆ ಜಮಾ!!!PM-KISAN ಫಲಾನುಭವಿಗಳೇ, “ರೈತ ಐಡಿ” ಮಾಡಿಸಿಕೊಳ್ಳುವುದು ತುಂಬಾ ಸುಲಭ!!!!
PM-KISAN Farmer ID is a unique identification number provided to farmers registered under the Pradhan Mantri Kisan Samman Nidhi scheme.
It is linked with the farmer’s Aadhaar, bank account, and land records.
This ID helps the government identify genuine and eligible farmers accurately. It ensures timely and direct transfer of financial assistance to farmers’ bank accounts.
The system helps prevent duplicate and fake farmer registrations.
PM-KISAN Farmer ID ಎನ್ನುವುದು Pradhan Mantri Kisan Samman Nidhi (PM-KISAN) ಯೋಜನೆಯಡಿ ನೋಂದಾಯಿಸಿದ ರೈತರಿಗೆ ನೀಡಲಾಗುವ ವಿಶಿಷ್ಟ ಗುರುತು ಸಂಖ್ಯೆ ಆಗಿದೆ.
ಈ ಐಡಿ ಮೂಲಕ ಭಾರತ ಸರ್ಕಾರವು ಅರ್ಹ ರೈತರನ್ನು ಸರಿಯಾಗಿ ಗುರುತಿಸಿ, ಆರ್ಥಿಕ ಸಹಾಯವು ನೇರವಾಗಿ ಮತ್ತು ಸಮಯಕ್ಕೆ ಸರಿಯಾಗಿ ನಿಜವಾದ ಫಲಾನುಭವಿಗಳಿಗೆ ತಲುಪುವಂತೆ ಮಾಡುತ್ತದೆ. ಇದರಿಂದ ನಕಲಿ ಅಥವಾ ಅನರ್ಹ ರೈತರ ನೋಂದಣಿಯನ್ನು ತಡೆಯಲು ಸಹಾಯವಾಗುತ್ತದೆ.
ಇತ್ತೀಚೆಗೆ PM-KISAN ಯೋಜನೆಯಲ್ಲಿ ಹೊಸ ಅಪ್ಡೇಟ್ ಜಾರಿಗೆ ಬಂದಿದ್ದು, “ಒಂದು ರಾಷ್ಟ್ರ – ಒಂದು ರೈತ ಐಡಿ” ಯೋಜನೆಯ ಅಡಿಯಲ್ಲಿ ರೈತ ಐಡಿ (Farmer ID) ಅನ್ನು PM-KISAN ಯೋಜನೆಗೆ ಕಡ್ಡಾಯವಾಗಿ ಪರಿಚಯಿಸಲಾಗುತ್ತಿದೆ.
“PM-KISAN ರೈತ ಐಡಿ” ಎಂದರೇನು?
What is farmer id?
PM-KISAN (ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ) ಯೋಜನೆಯಲ್ಲಿ ನೋಂದಾಯಿತ ರೈತರಿಗೆ ನೀಡಲಾಗುವ ಒಂದು “ವೈಯಕ್ತಿಕ ಮತ್ತು ವಿಶಿಷ್ಟ ಗುರುತು ಸಂಖ್ಯೆ“ಯೇ ರೈತ ಐಡಿ. ಈ ಐಡಿ ಮೂಲಕ ಸರ್ಕಾರವು:
“ಅರ್ಹ ರೈತ“ರನ್ನು ಸುಲಭವಾಗಿ ಗುರುತಿಸಬಹುದು.
“ಆರ್ಥಿಕ ನೆರವು‘ ಸರಿಯಾದ ಸಮಯದಲ್ಲಿತಲುಪುವಂತೆ ಮಾಡಬಹುದು.
“ಅನರ್ಹ ವ್ಯಕ್ತಿ“ಗಳು ಯೋಜನೆಯ ಲಾಭ ಪಡೆಯುವುದನ್ನು ತಡೆಯಬಹುದು.
ಒಂದು ಕುಟುಂಬದಿಂದ “ಒಬ್ಬ ಸದಸ್ಯ“ರಿಗೆ “ಮಾತ್ರ ಲಾಭ” ಸಿಗುವಂತೆ ಮಾಡಬಹುದು.
“ನಕಲಿ ಖಾತೆ” ಗಳನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ.
ಹೀಗಾಗಿ ಪ್ರತಿಯೊಬ್ಬ PM-KISAN ಫಲಾನುಭವಿಯು ರೈತ ಐಡಿ ಹೊಂದಿರುವುದು ಕಡ್ಡಾಯವಾಗಿದೆ.
ರೈತ ಐಡಿ ಎಂದರೇನು?
What is Farmer ID?
ರೈತ ಐಡಿ ಎನ್ನುವುದು ರೈತರಿಗೆ ನೀಡಲಾಗುವ ಒಂದು “ವಿಶಿಷ್ಟ ಗುರುತು ಸಂಖ್ಯೆ” ಆಗಿದ್ದು, ಇದು “ರೈತರ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಮತ್ತು ಭೂ ದಾಖಲೆ”ಗಳಿಗೆ ಲಿಂಕ್ ಆಗಿರುತ್ತದೆ. ಇದರಿಂದ ಸರ್ಕಾರಕ್ಕೆ ಅನರ್ಹ ಫಲಾನುಭವಿಗಳನ್ನು ಗುರುತಿಸುವುದು ಸುಲಭವಾಗುತ್ತದೆ.
ರೈತ ಐಡಿ ಮಾಡಿಸುವುದು ಹೇಗೆ?
How to get Farmer ID?
Step 1:
ಮೊದಲು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ ಅಧಿಕೃತ ಜಾಲತಾಣಕ್ಕೆ ಹೋಗಿ:
https://pmkisan.gov.in/homenew.aspx?aspxerrorpath=/RegistrationFormupdated.aspx
Click above link to get Farmer ID

Select New Farmer Registration
Step 2: ಜಾಲತಾಣದ ಮುಖಪುಟದಲ್ಲಿ “New Farmer Registration” ಎಂಬ ಆಯ್ಕೆಯನ್ನು ಆಯ್ಕೆಮಾಡಿ.

Enter Aadhar Number
Step 3: ನಂತರ ರೈತರು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾ ನಮೂದಿಸಿ OTP ಪಡೆಯಬೇಕು.

Farmer Namer As Per Aadhar Card
Step 4: ಮುಂದಿನ ಹಂತದಲ್ಲಿ ರೈತರು ತಮ್ಮ ಭೂ ವಿವರಗಳು (RTC ನಂಬರ್ / ಪಹಣಿ) ಹಾಗೂ ಬ್ಯಾಂಕ್ ಖಾತೆ ಮಾಹಿತಿಗಳನ್ನು ಅಪ್ಲೋಡ್ ಮಾಡಬೇಕು.
Step 5: ಮಾಹಿತಿ ಸಲ್ಲಿಸಿದ ಬಳಿಕ, ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಅರ್ಹರಾಗಿದ್ದರೆ ರೈತ ಐಡಿ ವಿತರಿಸಲಾಗುತ್ತದೆ.
ಇದೀಗ ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ “FRUIT (Farmer Registration & Unified Beneficiary Information System) ಐಡಿ” ಮಾದರಿಯಂತೆ, ಈ “ರೈತ ಐಡಿ ವ್ಯವಸ್ಥೆಯೂ ನಕಲಿ ಫಲಾನುಭವಿ”ಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ.
ಕರ್ನಾಟಕದಲ್ಲಿ FRUIT ಐಡಿ ಮೂಲಕ ಈಗಾಗಲೇ ಸುಮಾರು “11 ಲಕ್ಷಕ್ಕೂ ಹೆಚ್ಚು ನಕಲಿ ಖಾತೆ”ಗಳನ್ನು ಗುರುತಿಸಿ ಯೋಜನೆಯಿಂದ ಕೈಬಿಡಲಾಗಿದೆ. ಇದೇ ಯಶಸ್ವಿ ಮಾದರಿಯನ್ನು ಈಗ ದೇಶದಾದ್ಯಂತ ವಿಸ್ತರಿಸಲಾಗುತ್ತಿದೆ. ಹೀಗಾಗಿ ಎಲ್ಲಾ ರೈತರು ರೈತ ಐಡಿ ಹೊಂದಿರುವುದು ಕಡ್ಡಾಯ.
FRUIT ಐಡಿ ಹೊಂದಿರುವ ರೈತರು ಹೊಸದಾಗಿ ಮಾಡಿಸುವ ಅಗತ್ಯವಿಲ್ಲ, ಆದರೆ ಅದು ಅಪ್ಡೇಟ್ ಆಗಿದೆಯೇ ಎಂಬುದನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ.
ಒಂದು ವೇಳೆ FRUIT ಐಡಿ ಇಲ್ಲದ ರೈತರು PM-KISAN 22ನೇ ಕಂತಿನ ಹಣ ವಿಳಂಬವಾಗಬಾರದು ಎಂದು ಬಯಸಿದರೆ, ತಡಮಾಡದೆ ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ತಮ್ಮ ರೈತ ಐಡಿಯನ್ನು ತಕ್ಷಣ ಪಡೆಯಬಹುದು.
PM-KISAN Farmer IDಯ ಉಪಯೋಗಗಳು:-
Benifit from farmer id:-
ಅರ್ಹ ರೈತರನ್ನು ನಿಖರವಾಗಿ ಗುರುತಿಸಲು ಸಹಾಯ ಮಾಡುತ್ತದೆ.
ಆರ್ಥಿಕ ಸಹಾಯವನ್ನು ನೇರವಾಗಿ ಮತ್ತು ಸಮಯಕ್ಕೆ ಸರಿಯಾಗಿ ಜಮಾ ಮಾಡುತ್ತದೆ.
ಡುಪ್ಲಿಕೇಟ್ ಮತ್ತು ನಕಲಿ ಫಲಾನುಭವಿಗಳನ್ನು ತಡೆಯುತ್ತದೆ.
ಡಿಜಿಟಲ್ ವ್ಯವಸ್ಥೆಯಿಂದ ಕಂತುಗಳ ಮಾಹಿತಿ ಪರಿಶೀಲನೆ ಸುಲಭ.
ಯೋಜನೆಯಲ್ಲಿ ಪಾರದರ್ಶಕತೆ ಮತ್ತು ನಂಬಿಕೆಯನ್ನು ಹೆಚ್ಚಿಸುತ್ತದೆ.
ಒಟ್ಟಾರೆ, Farmer ID ರೈತರ ಸಬಲೀಕರಣದ ದಿಕ್ಕಿನಲ್ಲಿ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ.
PM-KISAN 22ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ?
When will 22nd installment of PM-KISAN release?
ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ರಿಮೋಟ್ ಒತ್ತುವ ಮೂಲಕ ದಿನಾಂಕ: 19 ನವೆಂಬರ್ 2025 ರಂದು PM KISAAN ಯೋಜನೆಯ 21ನೇ ಕಂತನ್ನು ದೇಶದಾದ್ಯಂತ ಏಕಕಾಲಕ್ಕೆ ಬಿಡುಗಡೆಗೊಳಿಸಿದರು.
ಅಲ್ಲದೆ 22ನೇ ಕಂತನ್ನು, ಇದೇ ತಿಂಗಳ 26ರಂದು ಅಂದರೆ “ಗಣರಾಜ್ಯೋತ್ಸವ ದಿನ” ದಂದು ಬಿಡುಗಡೆಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಇಲ್ಲವಾದರೂ, ಗಣರಾಜ್ಯೋತ್ಸವದ ಪ್ರಯುಕ್ತ “ರೈತರಿಗೆ ಸಿಹಿ ಸುದ್ದಿ”ಯನ್ನು ನೀಡಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಜ್ಜಾಗುತ್ತಿದೆ ಎಂದು ಮಾಹಿತಿ ಇದೆ.
ಹಾಗಾಗಿ ಗಣರಾಜ್ಯೋತ್ಸವದ ಒಳಗಾಗಿ ರೈತರು ತಮ್ಮ ರೈತ ಐಡಿಯನ್ನು ಪಡೆದುಕೊಂಡು 22ನೇ ಕಂತಿನ ಹಣವನ್ನು ಪಡೆಯಲು ಅರ್ಹರಾಗಬಹುದು.
ಏಕೆಂದರೆ PM-KISANಯೋಜನೆಯ ಹಣವನ್ನು ಹಲವಾರು ಅನರ್ಹ ಖಾತೆಗಳು ಪಡೆಯುತ್ತಿದ್ದು, ರೈತ ಐಡಿಯಿಂದ ಈ ಎಲ್ಲಾ ನಕಲಿ ಖಾತೆಗಳನ್ನು PM-KISAN ಯೋಜನೆಯಿಂದ ಹೊರಹಾಕಬಹುದು.
The PM-KISAN scheme is a “landmark initiative” aimed at providing “financial stability” to small and marginal farmers in India.
It ensures direct income support to farmers through transparent “Direct Benefit Transfer” (DBT). The scheme helps farmers meet agricultural expenses and household needs.
PM-KISAN reduces farmers’ dependence on informal loans and moneylenders.
The introduction of the Farmer ID has further strengthened the PM-KISAN system. Farmer ID acts as a “unique identity” for every registered farmer.
It is linked with Aadhaar, land records, and bank accounts. Also Farmer ID supports the concept of “One Nation, One Farmer ID.”
Overall PM-KISAN empowers farmers by providing assured financial support. Farmer ID improves “efficiency in implementing agricultural welfare schemes”.
PM-KISAN and Farmer ID together play a crucial role in farmer empowerment and sustainable rural development.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.
Leave a Reply