"Agriculture is our CULTURE"

Shakti scheme:: ಫ್ರೀ ಬಸ್ ಗ್ಯಾರಂಟಿ ಮರು ಚಿಂತನೆ!! ಫ್ರೀ ಟಿಕೆಟ್ ಯೋಜನೆ ಬಂದ್ ಆಗುತ್ತಾ? 

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಘೋಷಿಸಿದ್ದ 5 ಗ್ಯಾರಂಟಿಗಳನ್ನು ಗೆದ್ದ ನಂತರ ಜಾರಿ ಮಾಡಿತ್ತು ಅದರಲ್ಲಿ ಶಕ್ತಿ ಯೋಜನೆಯ ಕೂಡ ಒಂದು ಅಂದರೆ

ಈ ಶಕ್ತಿ ಯೋಜನೆ (Shakti scheme)ಅಡಿಯಲ್ಲಿ ಕರ್ನಾಟಕ ರಾಜ್ಯದ ಮಹಿಳಾ ನಾಗರಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಸವಲತ್ತನ್ನು ಒದಗಿಸಿತ್ತು. 

ಶಕ್ತಿ ಯೋಜನೆ(Shakti scheme)ಯ ದುರುಪಯೋಗವಾಗುತ್ತಿದೆಯೇ? 

 ಆದರೆ ಈ ಗ್ಯಾರಂಟಿ ಯೋಜನೆಗಳು ಜಾರಿಗೊಂಡ ನಂತರ ಸಾರ್ವಜನಿಕರು ಗ್ಯಾರಂಟಿ ಯೋಜನೆಗಳ ವಿರುದ್ಧ ಹಲವು ಬಾರಿ ಧ್ವನಿ ಎತ್ತಿದ್ದು ಇವುಗಳಿಂದಾಗಿ ಜನರಿಗೆ ಆಗುತ್ತಿರುವ

ಅನುಕೂಲಕ್ಕಿಂತ ಅನಾನುಕೂಲಗಳೆ ಜಾಸ್ತಿ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. 

 ಅದರಲ್ಲೂ ಕೂಡ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಒದಗಿಸಿದ್ದಕ್ಕಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣಿಸಲು

ಪ್ರಾರಂಭಿಸಿದ್ದರಿಂದಾಗಿ ಬಸ್ಸುಗಳಲ್ಲಿ ಜನದಟ್ಟನೆ ಹೆಚ್ಚಾಯಿತು ಅಲ್ಲದೆ ಮಹಿಳೆಯರ ನಡುವೆ ಜಗಳ ವಾಗುವಂತಹ ಘಟನೆಗಳ ಸಂಖ್ಯೆಯು ಕೂಡ ಹೆಚ್ಚಾಯಿತು. 

ಲೋಕಸಭಾ ಚುನಾವಣೆಯ ಹಿನ್ನೆಡೆ ಕಾರಣವಾಯಿತಾ? 

 ಇದರಿಂದಾಗಿ ಸಾಕಷ್ಟು ಜನರು ಈ ಗ್ಯಾರಂಟಿ ಯೋಜನೆಯನ್ನು ರದ್ದುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದು,

ಉಪಮುಖ್ಯಮಂತ್ರಿಗಳು ಕೂಡ ಶಕ್ತಿ ಯೋಜನೆಯ ಬಗ್ಗೆ ಮರುಪರಿಶೀಲಿಸುವುದಾಗಿ ಪ್ರಸ್ತುತ ಹೇಳಿಕೆ ನೀಡಿದ್ದಾರೆ ಆದರೆ ಉಪಮುಖ್ಯಮಂತ್ರಿಗಳ

ಈ ಮಾತಿನ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕಡಿಮೆ ಸೀಟು ಬಂದಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದು, ಇಷ್ಟೆಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಸಾರ್ವಜನಿಕರು

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಿಲ್ಲವೆಂದು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಸಚಿವರು ಗ್ಯಾರಂಟಿಗಳನ್ನು ಹಿಂತೆಗೆದುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. 

ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನವಿಲ್ಲ! 

 ಇದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 58,000 ಕೋಟಿ ರೂಪಾಯಿಗಳು ವೆಚ್ಚವಾಗುತ್ತಿದ್ದು

ಇಷ್ಟೊಂದು ದೊಡ್ಡ ಮೊತ್ತವನ್ನು ಬರೀ ಗ್ಯಾರಂಟಿ ಯೋಜನೆಗಳಿಗೆ ಹಾಕಿದಲ್ಲಿ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಶಾಸಕರಿಗೆ ಅನುದಾನ ದೊರೆಯುತ್ತಿಲ್ಲ

ಆದ್ದರಿಂದ ಶಾಸಕರು ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನುದಾನ ಒದಗಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 

ಮಹಿಳೆಯರು ಟಿಕೆಟ್ ಕೊಳ್ಳಲು ಶಕ್ತರು! 

 ಅಲ್ಲದೆ ಈ ಶಕ್ತಿ ಯೋಜನೆ(Shakti scheme)ಯು ಅಡಿಯಲ್ಲಿ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣದ ವ್ಯವಸ್ಥೆ ಇದ್ದು, ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಳ್ಳಲು ಶಕ್ತರಾಗಿರುವ ಮಹಿಳೆಯರಿಗೂ ಕೂಡ ಉಚಿತ ಟಿಕೆಟ್ ನೀಡಲಾಗುತ್ತದೆ.

ಮಹಿಳೆಯರೇ ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಳ್ಳಲು ಮುಂದಾದರೂ ಕೂಡ ಕಂಡಕ್ಟರ್ ಗಳು ಉಚಿತ ಟಿಕೆಟ್ಗಳನ್ನು ನೀಡುತ್ತಿದ್ದಾರೆ. ಇದರಿಂದಾಗಿ ಮಹಿಳೆಯರೇ ಈ ಯೋಜನೆಯ ಬಗ್ಗೆ ಮರು ಪರಿಶೀಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದು,

ಕೊನೆಯ ಪಕ್ಷ ಟಿಕೆಟ್ ಕೊಳ್ಳಲು ಶಕ್ತರಿರುವ ಮಹಿಳೆಯರು ದುಡ್ಡು ಕೊಟ್ಟು ಟಿಕೆಟ್ ತೆಗೆದುಕೊಂಡರೆ ಸರ್ಕಾರದ ಮೇಲಿನ ಸ್ವಲ್ಪಮಟ್ಟಿನ ಹೊರೆ ಕಡಿಮೆಯಾಗಬಹುದು. 

ಸಧ್ಯದಲ್ಲಿಯೇ ಸಾರಿಗೆ ಸಚಿವರೊಂದಿಗೆ ಸಭೆ! 

ಆದ್ದರಿಂದ ಈ ಶಕ್ತಿ ಯೋಜನೆ (Shakti scheme)ಅಡಿಯಲ್ಲಿ ಯಾವುದೇ ಷರತ್ತು ವಿಧಿಸದೆ ಪ್ರತಿಯೊಬ್ಬ ಮಹಿಳೆಯರಿಗೂ ಉಚಿತ ಟಿಕೆಟ್ ಕೊಡುತ್ತಿರುವ ಬಗ್ಗೆ ಮತ್ತೊಮ್ಮೆ ಮರುಪರಿಶೀಲಿಸಲು

ಸಾರಿಗೆ ಸಚಿವರೊಂದಿಗೆ ಸಧ್ಯದಲ್ಲಿಯೇ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"