"Agriculture is our CULTURE"

LPG vs Induction Stove :: ಗ್ಯಾಸ್ ಸ್ಟವ್ ಅಥವಾ ಇಂಡಕ್ಷನ್ ಸ್ಟವ್ ಯಾವುದು ಉತ್ತಮ? ಯಾವುದು ಕಡಿಮೆ ಖರ್ಚು ಮತ್ತು ಸುರಕ್ಷಿತ!!

LPG vs ಇಂಡಕ್ಷನ್ – ಯಾವುದು ಸ್ಮಾರ್ಟ್?

LPG vs. Induction – Which is Smarter?

ಎಲ್ಪಿಜಿ ಗ್ಯಾಸ್ ಮತ್ತು ಇಂಡಕ್ಷನ್ ಸ್ಟವ್‌ಗಳ ನಡುವಿನ ವ್ಯತ್ಯಾಸಗಳು ಮತ್ತು ಹೊಸ ಇಂಡಕ್ಷನ್ ಸ್ಟವ್ ಕೊಳ್ಳುವಾಗ ಗಮನಿಸಬೇಕಾದ ವಿಷಯಗಳ ಬಗ್ಗೆ::

ಇಂಡಕ್ಷನ್ ಸ್ಟವ್‌ಗಳಿಗೆ ಹೆಚ್ಚಾದ ಬೇಡಿಕೆ:-

Increase in Demand for Induction Stoves:-

ಇತ್ತೀಚೆಗೆ ಇರಾನ್ ಯುದ್ಧದ ಭಯದಿಂದ ಎಲ್ಪಿಜಿ ಸಿಲಿಂಡರ್ ಸಿಗುವುದು ಕಷ್ಟವಾಗಬಹುದು ಎಂಬ ಆತಂಕ ಶುರುವಾಗಿದೆ. ಇದರಿಂದ ದೇಶದಲ್ಲಿ ಎಲೆಕ್ಟ್ರಿಕ್ ಮತ್ತು ಇಂಡಕ್ಷನ್ ಸ್ಟವ್‌ಗಳ ಮಾರಾಟವು ಬಹಳ ಹೆಚ್ಚಾಗಿದೆ. 

Amazon ಮತ್ತು Flipkart ನಂತಹ ಆನ್‌ಲೈನ್ ತಾಣಗಳಲ್ಲಿ ಸ್ಟಾಕ್ ಖಾಲಿಯಾಗುವಷ್ಟು ಬೇಡಿಕೆ ಬಂದಿದೆ.

ಇಂಡಕ್ಷನ್ ಕೆಲಸ ಮಾಡುವ ರೀತಿ:-
How Induction Technology Works:-

ಇದು ಸಾಮಾನ್ಯ ಎಲೆಕ್ಟ್ರಿಕ್ ಹೀಟರ್‌ಗಿಂತ ಬೇರೆಯಾಗಿದೆ. ಇದು ‘ಎಲೆಕ್ಟ್ರೋ ಮ್ಯಾಗ್ನೆಟಿಕ್ ಇಂಡಕ್ಷನ್‘ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತದೆ. ಸ್ಟವ್‌ನ ಗಾಜಿನ ಕೆಳಗಿರುವ ತಾಮ್ರದ ಕಾಯಿಲ್ ಕಾಂತೀಯ ಕ್ಷೇತ್ರ.

ಅದರ ಮೇಲೆ ಕಬ್ಬಿಣ ಅಥವಾ ಸ್ಟೀಲ್ ಪಾತ್ರೆ ಇಟ್ಟಾಗ ‘ಎಡಿ ಕರೆಂಟ್ಸ್‘ ಉತ್ಪತ್ತಿಯಾಗಿ ಪಾತ್ರೆಯ ತಳ ಮಾತ್ರ ಬಿಸಿಯಾಗುತ್ತದೆ.

ಗ್ಯಾಸ್ ಸ್ಟವ್‌ನಲ್ಲಿ 60% ಶಾಖ ವ್ಯರ್ಥವಾದರೆ, ಇಂಡಕ್ಷನ್‌ನಲ್ಲಿ 90% ಶಾಖ ನೇರವಾಗಿ ಅಡುಗೆಗೆ ಉಪಯೋಗವಾಗುತ್ತದೆ.

ಇಂಡಕ್ಷನ್ ಸ್ಟವ್ ಕೊಳ್ಳುವಾಗ ಗಮನಿಸಬೇಕಾದ 5 ಅಂಶಗಳು:-

5 Key Factors to Consider Before Buying:-

1. ವ್ಯಾಟೇಜ್ (Wattage) – ಭಾರತದ ಅಡುಗೆಗೆ 1800 ರಿಂದ 2000 ವ್ಯಾಟ್ಸ್‌ನ ಸ್ಟವ್ ಒಳ್ಳೆಯದು.

2. ಪ್ರೀಸೆಟ್ ಮೆನು (Preset Menus) – ದೋಸೆ, ಚಪಾತಿ ಅಥವಾ ಹಾಲು ಕಾಯಿಸಲು ಪ್ರತ್ಯೇಕ ಬಟನ್‌ಗಳಿದ್ದರೆ ಕೆಲಸ ಸುಲಭವಾಗುತ್ತದೆ.

3. ಸುರಕ್ಷತಾ ವೈಶಿಷ್ಟ್ಯಗಳು (Safety Features)- ಅಡುಗೆ ಸೀದುಹೋದರೆ ಆಟೋ ಕಟ್-ಆಫ್ ಆಗುವ ಮತ್ತು ಪಾತ್ರೆ ಇಲ್ಲದಿದ್ದಾಗ ತಾನಾಗಿಯೇ ಆಫ್ ಆಗುವ ವೈಶಿಷ್ಟ್ಯ ಇರಬೇಕು.

4. ಪಾತ್ರೆಗಳ ಹೊಂದಾಣಿಕೆ – ಕೇವಲ ಸ್ಟೀಲ್ ಅಥವಾ ಕಬ್ಬಿಣದ ಪಾತ್ರೆಗಳು ಮಾತ್ರ ಕೆಲಸ ಮಾಡುತ್ತವೆ. ಪಾತ್ರೆಯ ತಳಕ್ಕೆ ಮ್ಯಾಗ್ನೆಟ್ ಅಂಟಿದರೆ ಮಾತ್ರ ಅದು ಇಂಡಕ್ಷನ್ ಮೇಲೆ ಉಪಯೋಗಿಸಲು ಸರಿಯಾಗಿದೆ ಎಂದರ್ಥ.

5. ವಾರಂಟಿ ಮತ್ತು ಬ್ರ್ಯಾಂಡ್ – ಕನಿಷ್ಠ 1-2 ವರ್ಷ ವಾರಂಟಿ ಇರುವ ಒಳ್ಳೆಯ ಬ್ರ್ಯಾಂಡ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.

ಖರ್ಚಿನ ಲೆಕ್ಕಾಚಾರ :-

LPG vs Induction:-

ಎಲ್ಪಿಜಿ- ಒಂದು ಸಿಲಿಂಡರ್ ಬೆಲೆ ಸುಮಾರು 920 ರೂಪಾಯಿಗಳು.

* ಇಂಡಕ್ಷನ್ – ದಿನಕ್ಕೆ ಒಂದೂವರೆ ಗಂಟೆ ಬಳಸಿದರೆ ತಿಂಗಳಿಗೆ ಸುಮಾರು 90 ಯೂನಿಟ್ ಕರೆಂಟ್ ಖರ್ಚಾಗುತ್ತದೆ. ಒಂದು ಯೂನಿಟ್‌ಗೆ 8 ರೂಪಾಯಿಯಂತೆ ಲೆಕ್ಕ ಹಾಕಿದರೂ 720 ರೂಪಾಯಿ ಬಿಲ್ ಬರಬಹುದು.

ಕರ್ನಾಟಕದವರಿಗೆ ಲಾಭ – ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಫ್ರೀ ಇರುವುದರಿಂದ, ನಿಮ್ಮ ಒಟ್ಟು ಬಳಕೆ ಮಿತಿಯ ಒಳಗಿದ್ದರೆ ಅಡುಗೆಯ ಖರ್ಚು ಇರುವುದಿಲ್ಲ.

ಕಿವಿ ಮಾತು:-

Suggestion:-

ಹೆದರಿಕೆಗೊಂಡು (Panic Buying) ಖರೀದಿಸಬೇಡಿ. ಅಗತ್ಯವಿದ್ದಲ್ಲಿ ಮಾತ್ರ ಕೊಳ್ಳಿ. ಗ್ಯಾಸ್ ಸಮಸ್ಯೆ ಬಂದಾಗ ಅಥವಾ ತುರ್ತು ಪರಿಸ್ಥಿತಿಯಲ್ಲಿ ಇದು ಉತ್ತಮ ಪರ್ಯಾಯ ವ್ಯವಸ್ಥೆಯಾಗಿದೆ. ಆದರೆ ಮೊದಲಿಗೆ ಸ್ಟವ್ ಮತ್ತು ಹೊಸ ಪಾತ್ರೆಗಳಿಗಾಗಿ 5 ರಿಂದ 7 ಸಾವಿರ ರೂಪಾಯಿ ಬೇಕಾಗಬಹುದು.

ಸುರಕ್ಷಿತ ಅಡುಗೆಗೆ ಇಂಡಕ್ಷನ್ ತಂತ್ರಜ್ಞಾನ :-

Future of Cooking – Safe & Fast:-

ಇಂಡಕ್ಷನ್ ಸ್ಟವ್ ಬರೀ ಅಡುಗೆ ಮಾಡೋಕೆ ಇರುವ ಇನ್ನೊಂದು ದಾರಿ ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಇದು ತುಂಬಾನೆ ಮುಖ್ಯವಾದ ಒಂದು ಬ್ಯಾಕಪ್ ತರಹ ಕೆಲಸ ಮಾಡುತ್ತೆ.

ಗ್ಯಾಸ್ ಸಿಲಿಂಡರ್ ಸಿಗದಿದ್ದಾಗ, ಗ್ಯಾಸ್ ಲೀಕ್ ಆಗೋ ತೊಂದರೆ ಆದಾಗ, ಇಲ್ಲಾಂದ್ರೆ ಸಿಲಿಂಡರ್ ಬೇಗ ಖಾಲಿಯಾದಾಗ ಇಂಡಕ್ಷನ್ ಸ್ಟವ್ ತಕ್ಷಣಕ್ಕೆ ಸಹಾಯಕ್ಕೆ ಬರುತ್ತೆ. ಇದು 90% ಶಾಖವನ್ನು ಬಳಸಿಕೊಳ್ಳುವುದರಿಂದ ಅಡುಗೆ ಬೇಗ ಆಗುತ್ತೆ,

ಜೊತೆಗೆ ಕರ್ನಾಟಕದ ಗೃಹಜ್ಯೋತಿ ಯೋಜನೆಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಇರೋದ್ರಿಂದ ಜನಸಾಮಾನ್ಯರಿಗೆ ಖರ್ಚಿಲ್ಲದೆ ಅಡುಗೆ ಮಾಡಬಹುದು. ಇದು ಸೇಫ್ಟಿಗೂ ಒಳ್ಳೆಯದು,

ಬೆಂಕಿಯ ಭಯ ಇರೋದಿಲ್ಲ ಮತ್ತೆ ಆಟೋ ಕಟ್-ಆಫ್ ತಂತ್ರಜ್ಞಾನ ಇರೋದ್ರಿಂದ ಅಡುಗೆ ಕೆಲಸವನ್ನು ಸುಲಭ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಬಹುದು.

Induction stoves are now essential backup systems. They offer immediate help during LPG delays, gas leaks, or empty cylinders. With 90% thermal efficiency, cooking is faster.

Karnataka’s Gruha Jyothi Scheme

Offers up to 200 free electricity units, enabling zero-cost cooking. Induction stoves are also safer due to the absence of open flames, 

Auto cut-off technology simplifies kitchen work, making it more economical.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"