By Election result:: ರಾಜ್ಯದಲ್ಲಿ 3 ಕ್ಷೇತ್ರಗಳಿಗೆ ಉಪಚುನಾವಣೆ! ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ?
ಕರ್ನಾಟಕದಲ್ಲಿ ಖಾಲಿ ಇದ್ದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಇದೇ ನವೆಂಬರ್ 13ರಂದು ಉಪಚುನಾವಣೆ ನಡೆದಿದ್ದು,
ತೀರಾ ಜಿದ್ದಾಜಿದ್ದಿ ಕಣಗಳಾಗಿದ್ದ ಮೂರು ಕ್ಷೇತ್ರಗಳ ಚುನಾವಣಾ ಫಲಿತಾಂಶವು ಇದೇ ಶನಿವಾರ ನವೆಂಬರ್ 23ನೇ ತಾರೀಕಿನಂದು ಹೊರಬೀಳಲಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಬಿಜೆಪಿ ಪಕ್ಷಗಳಿಗೆ ಈ ಉಪಚುನಾವಣೆಗಳು ಪ್ರತಿಷ್ಠೆಯ ಕಣಗಳಾಗಿದ್ದು, ಕಾಂಗ್ರೆಸ್ ಸರ್ಕಾರದ ಒಂದೂವರೆ ವರ್ಷದ ಸಾಧನೆಯ ಬಗ್ಗೆ ರಾಜ್ಯದ ಜನರ ಅಭಿಪ್ರಾಯವನ್ನು
ಈ ಉಪಚುನಾವಣೆಗಳು ಪ್ರತಿನಿಧಿಸುತ್ತವೆ ಎಂದು ಬಿಂಬಿಸಲಾಗಿದೆ. ಹಾಗಾಗಿ ಚನ್ನಪಟ್ಟಣ ಸಂಡೂರು ಹಾಗೂ ಶಿಗ್ಗಾವಿ ಉಪಚುನಾವಣೆಯ ಪಲಿತಾಂಶದ ಮೇಲೆ ಇಡೀ ರಾಜ್ಯವೇ ಕಣ್ಣಿಟ್ಟಿದೆ.
ಮತ್ತೇ ಜೆಡಿಎಸ್ ಕೋಟೆ ಭದ್ರವಾಗುತ್ತಾ ಚನ್ನಪಟ್ಟಣದಲ್ಲಿ?
ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವ ಚನ್ನಪಟ್ಟಣದಲ್ಲಿ ಈ ಬಾರಿ 88.80% ರಷ್ಟು ಮತದಾನವಾಗಿದ್ದು, ಇದು ದಾಖಲೆಯ ಮತದಾನವಾಗಿದೆ.
ಕಳೆದ ಬಾರಿ ಇದಕ್ಕಿಂತ ಕಡಿಮೆಯಾಗಿತ್ತು. ಆಗ ಎಚ್. ಡಿ ಕುಮಾರಸ್ವಾಮಿ ರವರು ಗೆದ್ದಿದ್ದರು. ಆದರೆ ಅವರು ಲೋಕಸಭೆಗೆ ಸ್ಪಧಿ೯ಸಿದ್ದರಿಂದ ಈ ಕ್ಷೇತ್ರ ಖಾಲಿಯಾಗಿತ್ತು.
ಈಗ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ನಿಂದ ಹಾಗೂ ಸಿ. ಪಿ ಯೋಗೇಶ್ವರ್ ರವರು ಕಾಂಗ್ರೆಸ್ ನಿಂದ ಸ್ಪಧಿ೯ಸಿದ್ದು, ತೀರಾ ಜಿದ್ದಾಜಿದ್ದಿ ಕಣವಾಗಿದೆ. ಸಕಾ೯ರದ 10 ಸಚಿವರು ಮುಖ್ಯಮಂತ್ರಿಗಶು,
ಉಪ ಮುಖ್ಯಮಂತ್ರಿಗಳು ಕ್ಷೇತ್ರದಲ್ಲಿ ಬೀಡುಬಿಟ್ಟು ಸಿ. ಪಿ ಯೋಗೇಶ್ವರ್ ಪರ ಪ್ರಚಾರ ಮಾಡಿದ್ದಾರೆ. ಆದರೆ ಇದು ಬಹಳ ವಷ೯ಗಳಿಂದ ಜೆಡಿಎಸ್ ಭದ್ರ ಕೋಟೆಯಾಗಿದ್ದು,
ಈ ಬಾರಿಯೂ ಜೆಡಿಎಸ್ ಹೆಚ್ಚಿನ ಪ್ರಚಾರ ನಡೆಸಿದೆ. ಹಾಗಾಗಿ ಸಮೀಕ್ಷೆಗಳ ಪ್ರಕಾರ ಜೆಡಿಎಸ್ ತನ್ನ ಭದ್ರ ಕೋಟೆಯನ್ನು ಉಳಿಸಿಕೊಳ್ಳಲಿದೆ ಎಂಬ ಮಾಹಿತಿ ವ್ಯಕ್ತವಾಗುತ್ತಿದೆ.
ಸಂಡೂರಿನಲ್ಲಿ ಅರಳುತ್ತಾ ಕಮಲ!
ಸಂಡೂರಿನಲ್ಲಿ ಈ ಬಾರಿ ಕಳೆದ ಚುನಾವಣೆಗಿಂತ ಕಡಿಮೆ ಮತದಾನವಾಗಿದೆ. ಈ ಬಾರಿ 76.24% ಮತದಾನವಾಗಿದೆ ಎಂದು ಮಾಹಿತಿ ಸಿಕ್ಕಿದೆ.
ಸಂಡೂರು ಕಾಂಗ್ರೆಸ್ ನ ಭದ್ರ ಕೋಟೆ. ಅಲ್ಲಿ ರೆಡ್ಡಿಗಳ ಪ್ರಾಬಲ್ಯವಿದ್ದಾಗಲೇ ಬಿಜೆಪಿ ಗೆಲ್ಲಲಾಗಿಲ್ಲ. ಆದರೆ ಈಗ ಸ್ವಲ್ಪ ಸಂದರ್ಭಗಳು ಬದಲಾಗಿದ್ದು,
ಅಲ್ಲಿ ಅನ್ನಪೂರ್ಣ ತುಕಾರಾಮರವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದು, ಪಕ್ಷದ ಕಾಯ೯ಕತ೯ರಿಗೆ ಅಸಮಾಧಾನವಾಗಿತ್ತು.
ಇದು ಬಿಜೆಪಿಯ ಬಂಗಾರು ಹನಮಂತು ರವರಿಗೆ ಎಷ್ಟು ವರದಾನವಾಗಲಿದೆ, ಈ ಬಾರಿ ಸಂಡೂರಿನಲ್ಲಿ ಕಮಲ ಅರಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಮಗ ಹಾರಿಸುತ್ತಾರಾ ವಿಜಯ ಪತಾಕೆ!
ಶಿಗ್ಗಾಂವಿ ಹೇಳಿ ಕೇಳಿ ಬೊಮ್ಮಾಯಿಯವರ ತವರು ಕ್ಷೇತ್ರ. ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ಈಗ ಅವರು ಲೋಕಸಭಾ ಸದಸ್ಯರಾಗಿರುವದರಿಂದ ಅವರ ಮಗ ಭರತ್ ಬೊಮ್ಮಾಯಿ ಇಲ್ಲಿ ಬಿಜೆಪಿಯಿಂದ ಸ್ಪಧಿ೯ಸಿದ್ದಾರೆ.
ಕಾಂಗ್ರೆಸ್ ನಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ನಿಲ್ಲಿಸಿದೆ. ಈ ಬಾರಿ ಕ್ಷೇತ್ರದಲ್ಲಿ 80.48% ಮತದಾನವಾಗಿದ್ದು, ಇಲ್ಲೂ ಕೂಡ ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಿದೆ.
ಇದು ಬಿಜೆಪಿಗೆ ಇನ್ನಷ್ಟು ವರವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಷ್ಟವಾಗಿದ್ದರೂ ಕೂಡ ಮುಸ್ಲಿಂ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ ಗೆ ಹೋಗಿರುವ ಸಾಧ್ಯತೆ ಹೆಚ್ಚಾಗಿದ್ದು, ಗೆಲುವಿನ ಅಂತರ ತೀರಾ ಕಡಿಮೆ ಇರಬಹುದು ಅಂದಾಜಿಸಲಾಗಿದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚