Snake bite What to do :: ಹಾವು ಕಡಿದರೆ ಏನು ಮಾಡಬೇಕು? ಈ ನಿಯಮಗಳನ್ನು ಪಾಲಿಸಿ ನಿಮ್ಮ ಜೀವ ರಕ್ಷಿಸಿಕೊಳ್ಳಿ!!
“ಹಾವು ಕಡಿತಕ್ಕೆ ಭಯ ಬೇಡ!! :: ಹಾವು ಕಚ್ಚಿದರೆ ಸಾಯುವುದಿಲ್ಲ, ಏಕೆಂದರೆ ಹಾವು ಕಚ್ಚಿದಾಗ ಆತಂಕ ಕ್ಕಿಂತ ಧೈರ್ಯ ಬಹಳ ಮುಖ್ಯ”!!!
Snake is one of the important reptile in our environment, it plays a crucial role in balancing environment and ecosystem snakes are found in different habitats like forest, grassland, wetland and Agriculture fields.
Snakes act as both Predator and prey in the food chain. Due to submits believed by human being snake consider as dangerous animal but basically it is not.
When venomous snakes bites it may life threaten but all snakes are not venomous.
ಭಾರತೀಯ ಸಂಸ್ಕೃತಿಯಲ್ಲಿ ಮತ್ತು ಪುರಾಣಗಳಲ್ಲಿ ಹಾವಿಗೆ ಒಂದು ಸ್ಥಾನವಿದೆ, ಪ್ರಮುಖವಾಗಿ ಶಿವನ ಕತ್ತಲ್ಲಿರುವ “ವಾಸುಕಿ”ಯಾಗಿ, ವಿಷ್ಣುವಿನ ಹಾಸಿಗೆಯಾಗಿರುವ “ಶೇಷ” ನಾಗಿ ಪ್ರತಿ ಸಂದರ್ಭದಲ್ಲಿಯೂ, ಪ್ರತಿ ಪುರಾಣದಲ್ಲೂ ಹಾವಿನ ಉಲ್ಲೇಖವಿದೆ,
ಆದರೆ ವಾಸ್ತವವಾಗಿ ಮನುಷ್ಯರು ಕಲ್ಲಿನ ನಾಗರಕ್ಕೆ ಹಾಲಿರೆದಷ್ಟು ಸುಲಭವಾಗಿ ಜೀವವಿರುವ ಹಾವುಗಳನ್ನು “ರಕ್ಷಿಸುವುದು” ತುಂಬಾ ವಿರಳ. ಕಾರಣ ಹಲವಾರಿವೆ, ಅವುಗಳಲ್ಲಿ ಪ್ರಮುಖವಾಗಿ ಹಾವುಗಳ ಬಗೆಗಿರುವ “ಭಯ ಹಾಗೂ ಕೆಲವು ಮೂಡನಂಬಿಕೆ”ಗಳು,
ಏಕೆಂದರೆ ಹೆಚ್ಚಿನ ಸಮಯದಲ್ಲಿ ಹಾವುಗಳು ಕಚ್ಚಿದಾಗ “ವಿಷದ ಪ್ರಭಾವದಿಂದ ಸಾಯುವುದಕ್ಕಿಂತ, ಹೆಚ್ಚಿನ ಅನುಪಾತದಲ್ಲಿ ಹಾವು ಕಚ್ಚಿದೆ ಎನ್ನುವ ಭಯ” ದಲ್ಲಿ ವ್ಯಕ್ತಿ ಸಾಯುವ ಸಾಧ್ಯತೆಯೇ ಸಾಕಷ್ಟು ಇರುತ್ತದೆ. ಹಾಗಾಗಿ ಮನುಷ್ಯರು ಪ್ರಮುಖವಾಗಿ ವಿಷಕಾರಿ ಹಾವುಗಳು ಯಾವ್ಯಾವು?
ಹಾವುಗಳು ಕಚ್ಚಿದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು ಯಾವ್ಯಾವು? ನಿಜಕ್ಕೂ ಹಾವುಗಳಿಗೆ ದ್ವೇಷ ಎನ್ನುವುದು ಇರುತ್ತದೆಯೇ? ಎನ್ನುವ ಕೆಲವು ವಿಚಾರಗಳ ಬಗ್ಗೆ ನೈಜ ಮಾಹಿತಿ ಪಡೆದುಕೊಳ್ಳುವುದು ಅತಿ ಮುಖ್ಯ. ಈ ಕುರಿತು ಇಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿದೆ.
ಹಾವುಗಳು ವಿಷ ಕಾರಿಯೇ?
did all snakes are venomous?
* “ಖಂಡಿತ ಇಲ್ಲ”!!, ಎಲ್ಲಾ ಹಾವುಗಳು ವಿಷಕಾರಿ ಆಗಿರುವುದಿಲ್ಲ ಈ ಪ್ರಮುಖವಾಗಿ ನಾವು ಮೂರು ರೀತಿಯ ಹಾವುಗಳನ್ನು ಕಾಣಬಹುದು.
ಹಾವಿನಲ್ಲಿ ಮೂರು ರೀತಿಯ ವಿಂಗಡನೆ :-
*“ವಿಷಪೂರಿತ ಹಾವುಗಳು”: – ಈ ವಿಷಪೂರಿತ ಹಾವುಗಳಲ್ಲಿ ವಿಷ ತುಂಬಿದ “ಎರಡು ದಂತ”ಗಳಿರುತ್ತವೆ.ಈ ಹಾವುಗಳು ಅಪಾಯಕಾರಿ ಮತ್ತು ಕಚ್ಚಿದಾಗ ಸೂಕ್ತ ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ಉದಾಹರಣೆಗೆ ನಾಗರಹಾವು, ಕೊಳಕು ಮಂಡಲ, ಕಟ್ಟಾವು, ಮತ್ತು ಉರಿ ಹಾವು, ಕಾಳಿಂಗಸರ್ಪ.
*“ಅರೆ ವಿಷಪೂರಿತ ಹಾವುಗಳು” :- ಈ ಹಾವುಗಳಲ್ಲಿ “ಹೆಚ್ಚಿನ ವಿಷವಿರುವುದಿಲ್ಲ”, ಈ ಹಾವುಗಳು ಕಚ್ಚಿದಾಗ ಜೀವಕ್ಕೆ ಅಪಾಯಕಾರಿ ಏನೂ ಇರುವುದಿಲ್ಲ, ಆದರೆ ಈ ಹಾವಿನ ವಿಶೇಷತೆ ಏನೆಂದರೆ ಈ ಹಾವುಗಳು
ತಮ್ಮ “ಹಿಂಭಾಗದಲ್ಲಿ ಹಲ್ಲುಗಳನ್ನು ಹೊಂದಿರುತ್ತವೆ”, ಹಲ್ಲುಗಳ ಮೂಲಕ ವಿಷಕಾರಿದಾಗ ಸುಲಭವಾಗಿ ಬೇಟೆಯಾಡಲು ಈ ಹಲ್ಲುಗಳನ್ನು ಬಳಸುತ್ತದೆ.
ಅರೆ ವಿಷಪೂರಿತ ಹಾವುಗಳಿಗೆ ಉದಾಹರಣೆ ಎಂದರೆ, “ಗ್ರೀನ್ ವೈನ್ ಸ್ನೇಕ್, ಕ್ಯಾಟ್ ಸ್ನೇಕ್ ಬ್ರೌನ್ ಬ್ಯಾಕ್ ಟ್ರೀ ಸ್ನೇಕ್”.
*“ವಿಷವಿಲ್ಲದ ಹಾವುಗಳು” :- ಇನ್ನು ಕೊನೆಯದಾಗಿ ವಿಷವಿಲ್ಲದ ಹಾವುಗಳು ಎಂದರೆ ತಿಳಿದಿರುವಂತೆ, ಈ ಹಾವುಗಳ ಹಲ್ಲಿನಲ್ಲಿ ಯಾವುದೇ ವಿಷಕಾರಿ ಅಂಶ ಇರುವುದಿಲ್ಲ.
ಈ ಹಾವುಗಳಿಗೆ ಮನುಷ್ಯರಿಗೆ ಇರುವಂತೆಯೇ “ದಂತ ಪಟ್ಟಿ” ಇರುತ್ತದೆ. ಹಾಗಾಗಿ ಈ ಹಾವುಗಳು ಕಚ್ಚಿದರೂ ಸಹ ಗಂಭೀರ ಪರಿಣಾಮವೇನು ಆಗದು.
ವಿಷಕಾರಿ ಅಲ್ಲದ ಹಾವುಗಳಿಗೆ ಉದಾಹರಣೆ ಎಂದರೆ, ರಾಟ್ ಸ್ನೇಕ್, ಸ್ಯಾಂಡ್ ಬೋವಾ.
ಈ ಮೇಲೆ ನಮೂದಿಸಿದ ಎಲ್ಲಾ ಹಾವುಗಳು ವಿವಿಧ ರೀತಿಯ ಹಾವುಗಳಾಗಿವೆ.
ಹಾಗಾದರೆ ವಿಷಕಾರಿ ಹಾವಿನಲ್ಲಿ ಇರುವ ವಿಂಗಡಣೆಗಳು ಎಷ್ಟು?
how many types of venomous snakes are there?
ಈ ವಿಷಕಾರಿ ಹಾವುಗಳಲ್ಲಿ “3 ರೀತಿಯ ಹಾವು”ಗಳನ್ನು ಕಾಣಬಹುದು. ಈ ವಿಂಗಡಣೆಯನ್ನು “ಹಾವು ಕಚ್ಚಿದ ನಂತರ ಮನುಷ್ಯನ ದೇಹದಲ್ಲಿ ವಿಷ ಪಸರಿಸುವ ಆಧಾರದ ಮೇಲೆ” ವಿಂಗಡಿಸಲಾಗಿದೆ
* ನ್ಯೂರೊಟಾಕ್ಸಿಕ್ (neurotoxic):-
ಹಾವು ಕಚ್ಚಿದಾಗ “ವಿಷವು ನರದಿಂದ ನರಕ್ಕೆ ಸಂಚಾರವಾಗಿ ಮೆದುಳಿನ ವರೆಗೆ ತಲುಪಿ ಮೆದುಳಿನ ಕೋಶಗಳನ್ನು ನಿಷ್ಕ್ರಿಯ”ಗೊಳಿಸುತ್ತದೆ. ಆಗ ಮನುಷ್ಯನು ಸಾವನ್ನಪ್ಪುತ್ತಾನೆ.
ಇದು ತುಂಬಾ ಅಪಾಯಕಾರಿಯಾದ ವಿಷವಾಗಿದೆ. ಅಲ್ಲದೆ ಇಲ್ಲಿ ಮನುಷ್ಯ ಬದುಕುಳಿಯುವ “ಸಾಧ್ಯತೆ ತುಂಬಾ ಕಡಿಮೆ” ಇರುತ್ತದೆ.
• ಹಿಮೋಟಾಕ್ಸಿಕ್ (hemotoxic):-
ಇಲ್ಲಿ ಹಾವು ವ್ಯಕ್ತಿ ಯ “ದೇಹದ ಒಂದು ಭಾಗಕ್ಕೆ ಕಚ್ಚಿದಾಗ ವಿಷವು ರಕ್ತಕಣದಿಂದ ರಕ್ತ ಕಣಕ್ಕೆ ಸಂಚರಿಸುತ್ತಾ, ಚಿಕಿತ್ಸೆ ಸಿಗುವವರೆಗೂ ವಿಷ ತಲುಪುವ ಜಾಗ ಕೊಳೆಯುವಂತೆ (gangrin)ಮಾಡುತ್ತದೆ”.
* ಸೈಟೋಟಾಕ್ಸಿಕ್(cytotoxic): ವಿಷವು ಜೀವಕೋಶದಿಂದ ಜೀವಕೋಶಕ್ಕೆ ಹರಡುವುದು.
ಹಾಗಾದರೆ ಈ ವಿಷಕಾರಿ ಹಾವುಗಳು ಕಚ್ಚಿದಾಗ ಏನು ಮಾಡಬೇಕು?
how to face when snakes bites?
* ಒಂದು ವರ್ಷಕ್ಕೆ ಸರಿ ಸುಮಾರು “50ರಿಂದ 60 ಸಾವಿರ ಜನರು ಹಾವು ಕಡಿತದಿಂದ ಸಾವನ್ನಪ್ಪುತ್ತಿದ್ದಾರೆ” ಮತ್ತು ಹಳ್ಳಿಗಳ ಪ್ರದೇಶದಲ್ಲಿ ಹೆಚ್ಚಾಗಿ “ರೈತರು ಹಾವು ಕಡಿತದಿಂದ ಸಾವನ್ನಪ್ಪುತ್ತಿರುವುದು ದುರಂತ”.
ಈ ಹಾವಿನ ಕಡಿತದಿಂದ ಸಂಭವಿಸುವ ಸಾವನ್ನು ತಪ್ಪಿಸಲು ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಇಡೀ ದೇಶದಲ್ಲಿ ಮೊದಲ “ಆಂಟಿ ವೇನಮ್” ಅನ್ನು ಕರ್ನಾಟಕ ತಯಾರಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
• ಹಾಗಾದರೆ ಹಾವು ಕಚ್ಚಿದಾಗ ಮೊದಲು ಮಾಡಬೇಕಾದ ಕೆಲಸಗಳು ಏನೆಂದರೆ,
*ಹಾವು “ಕಚ್ಚಿದೆಯೋ ಇಲ್ಲವೋ” ಎಂದು ದೃಢಪಡಿಸಿಕೊಳ್ಳುವುದು,
• ಹಾವಿನ ಹಲ್ಲಿನ “ಎರಡು ಗುರುತು” ವ್ಯಕ್ತಿಯ ದೇಹದಲ್ಲಿ ಹುಡುಕುವುದು.
*ಹಾವು ಕಚ್ಚಿದ ಗುರುತು ಕಂಡುಬಂದಲ್ಲಿ ಅದನ್ನು ಖಚಿತಪಡಿಸಿಕೊಳ್ಳಬೇಕು. ಮತ್ತು “ಪ್ಲಸ್ ಅಥವಾ ಇಂಟು” ಆಕಾರದಲ್ಲಿ ಗುರುತು ಮಾಡಿಕೊಳ್ಳಬೇಕು.
ಆದರೆ “ಬ್ಲೇಡ್ ಅಥವಾ ಯಾವುದೇ ಒಂದು ಲೋಹದಿಂದ ಹಾವು ಕಚ್ಚಿದ ಭಾಗವನ್ನು ಕೊಯ್ಯಬಾರದು”. ಏಕೆಂದರೆ ಹಾವು ಕಚ್ಚಿದ ನಂತರ ವ್ಯಕ್ತಿಯು 5 ರಿಂದ 6 ಗಂಟೆಗಳವರೆಗೂ ಬದುಕುಳಿಯಬಹುದು,
ಹಾವು ಕಚ್ಚಿದ ಭಾಗವನ್ನು ಕೊಯ್ಯುವುದರಿಂದ ಹೆಚ್ಚಿನ ರಕ್ತಸ್ರಾವವಾಗಿ ಬೇಗನೆ ಸಾವನ್ನಪ್ಪಬಹುದು .ಮತ್ತು ಹಾವು ಕಚ್ಚಿದ ಭಾಗ ದಾರವನ್ನಾಗಲಿ, ಬಟ್ಟೆಯಾಗಲಿ ಕಟ್ಟಬಾರದು.
ಒಂದು ವೇಳೆ ದಾರಾ ಅಥವಾ ಬಟ್ಟೆಯನ್ನು ಕಟ್ಟಿದರೂ ಒಂದು ಪೆನ್ ಅಥವಾ ಪೆನ್ಸಿಲ್ ಆಡುವಷ್ಟು ಜಾಗವನ್ನು ಬಿಟ್ಟು ಬಟ್ಟೆ ಅಥವಾ ದಾರ ಕಟ್ಟಬೇಕು ಇದರಿಂದ ವಿಷವು ನಿಧಾನವಾಗಿ ಚಲಿಸಲು ಆರಂಭಿಸುತ್ತದೆ.
ಹಾವು ಕಚ್ಚಿದ ನಂತರ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು?
after snakes bites what type of treatment should take?
• ಹಾವು ಕಚ್ಚಿದಾಗ ವ್ಯಕ್ತಿಗೆ ನೀಡುವ ಪ್ರಥಮ ಚಿಕಿತ್ಸೆ ಎಂದರೆ “ಮನೋಸ್ಥೈರ್ಯ”. ಹಾವು ಕಚ್ಚಿದ ವ್ಯಕ್ತಿ ಗಾಬರಿ ಮತ್ತು ಗಲಿಬಿಲಿಗೆ ಒಳಗಾಗದಂತೆ ಹಾಗೂ “ಧೈರ್ಯದಿಂದ ಇರುವಂತೆ ಸೂಚಿಸಬೇಕು”.
*“ಕ್ರಾಬ್ ಬ್ಯಾಂಡೇಜ್” ಅನ್ನು ಅಥವಾ ಹತ್ತಿ ಬಟ್ಟೆಯನ್ನ ಸುತ್ತಿ ಒಂದು ಪೆನ್ಸಿಲ್ ನಷ್ಟು ಜಾಗ ಇರಬೇಕು. ಏಕೆಂದರೆ ರಕ್ತ ಚಲನೆಯು ನಿಧಾನವಾಗಿ ಇರುವಂತೆ ಮಾಡಬೇಕು.
• ಹಾವು ಕಚ್ಚಿದ ವ್ಯಕ್ತಿಗೆ ವಿಷದಿಂದ ನಿದ್ದೆಯ ಮತ್ತು ಬಂದಂತಾಗುವುದು. ಆದ್ದರಿಂದ ಆ ವ್ಯಕ್ತಿಯನ್ನು “ನಿದ್ರೆ ಜಾರದಂತೆ ತಟ್ಟಿ ತಟ್ಟಿ ಎಬ್ಬಿಸುವ ಕೆಲಸ ಮಾಡಬೇಕು”. ಇದರಿಂದ ಆ ವ್ಯಕ್ತಿಯು ಕೋಮಕ್ಕೆ ಹೋಗದಂತೆ ತಡೆಯಬಹುದು.
* ಹಾವು ಕಚ್ಚಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ”ವೈದ್ಯರಿಗೆ ಸರಿಯಾದ ಮಾಹಿತಿ ನೀಡಬೇಕು”.
ಹಾವು ಕಚ್ಚಿದಾಗ ಯಾವ ಕೆಲಸಗಳನ್ನು ಮಾಡಬಾರದು?
which works do not do when snake bites?
* ಹಾವು ಕಚ್ಚಿದ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ “ಓಡಿಸಿಕೊಂಡು” ಕರೆದೊಯ್ಯಬಾರದು ನಿಧಾನವಾಗಿ ಆಸ್ಪತ್ರೆಗೆ ಕರೆದೊಯ್ಯಬೇಕು.
• ನೀರನ್ನು “ಕುಡಿಸಬಾರದು”.
*“ನಾಟಿ ಔಷಧಿ”ಯನ್ನು ಕುಡಿಸಬಾರದು.
•“ಬಾಯಿಂದ ವಿಷವನ್ನು ತೆಗೆಯಬಾರದು” ಹೀಗೆ ಮಾಡುವುದರಿಂದ, ವಿಷವನ್ನು ತೆಗೆಯುವ ವ್ಯಕ್ತಿಯ ಬಾಯಿ ಅಥವಾ ಗಂಟಲಿನಲ್ಲಿ ಹುಣ್ಣು ಇದ್ದರೆ, ಆ ಹಾವಿನ ವಿಷವು ವಿಷ ತೆಗೆಯುವ ವ್ಯಕ್ತಿಯ ಮೆದುಳಿಗೆ ಬೇಗನೆ ಸೇರಿ ಈ ವ್ಯಕ್ತಿಯು ಕೂಡ ಸಾವನ್ನಪ್ಪುವ ಸಂಭವವಿರುತ್ತದೆ.
* ಹಾವು ಕಚ್ಚಿರುವ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ “ಗಾಬರಿಗೊಳಿಸಬಾರದು”.
ಹಾವುಗಳ ಜೀವನ ಚಕ್ರ ಯಾವ ರೀತಿಯಲ್ಲಿ ಇರುತ್ತದೆ?
What is the life cycle of snakes?
ಹಾವುಗಳು ಸಾಮಾನ್ಯವಾಗಿ “12 ವರ್ಷಗಳ ಬದುಕುತ್ತವೆ”. ಈ ಹಾವುಗಳಲ್ಲಿ ಎರಡು ರೀತಿಯ ಹಾವುಗಳನ್ನು ಕಾಣಬಹುದು.
• ಮೊದಲನೆಯದು “ಮೊಟ್ಟೆ ಇಟ್ಟು ರಕ್ಷಿಸುವ ಹಾವುಗಳು, ಓವಿ ಪರಸ್” ಉದಾಹರಣೆಗೆ ನಾಗರಹಾವು.
* ಎರಡನೆಯದು “ಮರಿಗಳನ್ನು ಮಾಡುವ ಪ್ರಾಣಿಗಳು ಹಾವುಗಳು ವಿವಿ ಪರಸ್” ಉದಾಹರಣೆಗೆ ಕೆಲವು ವೈಪರ್ ಹಾವುಗಳು.
ಹಾಗಾದರೆ, ಹಾವುಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?
hiw the matong procedure occurs in snakes?
ಹಾವುಗಳ ಮಿಲನದ ಬಗ್ಗೆ ಇಂದಿಗೂ ಸಾಕಷ್ಟು ಜನರಲ್ಲಿ ತಪ್ಪು ಮಾಹಿತಿ ಇದೆ. ಏಕೆಂದರೆ ಬಹಳಷ್ಟು ಜನ ತಿಳಿದಿರುವಂತೆ ಎರಡು ಹಾವುಗಳು ಒಂದನ್ನೊಂದು ಬಳಸಿದಾಗ ಈ ಮಿಲನ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಯುತ್ತಾರೆ.
ಆದರೆ ಹಾವುಗಳು ಒಂದನ್ನೊಂದು ಬಳಸಿದಾಗ ನಡೆಯುವುದು “ಮಿಲನವಲ್ಲ ಬದಲಾಗಿ ಬಲಿಷ್ಠ ಗಂಡು ಹಾವಿನ ಹುಡುಕಾಟಕ್ಕಾಗಿ ನಡೆಯುವ ಕಾಳಗ”.
ಸಾಮಾನ್ಯವಾಗಿ ಹಾವುಗಳಲ್ಲಿ ಈ ಮೇಲಿನ ಪ್ರಕ್ರಿಯೆ ಮಳೆಗಾಲ ಬಿಟ್ಟು, ಉಳಿದ ಸಮಯದಲ್ಲಿ ನಡೆಯುತ್ತದೆ.
* ಮೊದಲು ಹೆಣ್ಣು ಹಾವು ಹೋಗಿ “ಫರೋಮಾನ್ಸ್” ಎನ್ನುವ ಸುಗಂಧ ಬೀರುವ ರಾಸಾಯನಿಕವನ್ನು ಬಿಡುಗಡೆ ಮಾಡಿ ಹೆಣ್ಣು ಹಾವು ಸಂತಾನೋತ್ಪತ್ತಿ ಪ್ರಕ್ರಿಯೆಗೆ ತಯಾರಾಗಿರುವುದಾಗಿ ಸಂದೇಶ ರವಾನಿಸುತ್ತದೆ.
• ನಂತರ ಇದನ್ನು ಗ್ರಹಿಸಿಕೊಂಡು ಗಂಡು ಹಾವುಗಳು ಹೆಣ್ಣು ಹಾವು ಇರುವ ಕಡೆಗೆ ಬರುತ್ತದೆ. ಇಲ್ಲಿ ಬಂದ “ಗಂಡು ಹಾವುಗಳ ಮಧ್ಯೆ ಬಲಿಷ್ಠ ಗಂಡು ಹಾವು ಉಳಿಯಲು ಕಾಳಗ” ಶುರುವಾಗುತ್ತದೆ.
* ನಂತರ ಎಲ್ಲಾ ಹಾವುಗಳನ್ನು “ಸೋಲಿಸಿ ಗೆದ್ದ ಗಂಡು ಹಾವು, ಹೆಣ್ಣು ಹಾವಿನೊಂದಿಗೆ ಮಿಲನ ಪ್ರಕ್ರಿಯೆ”ಯಲ್ಲಿ ಭಾಗವಹಿಸುತ್ತದೆ.
• ಪ್ರಕ್ರಿಯೆ ಆದಮೇಲೆ ಅಂದರೆ “40 ರಿಂದ 50 ದಿನಗಳ ನಂತರ ಹೆಣ್ಣು ಹಾವು ಮೊಟ್ಟೆ ಇಡುತ್ತದೆ”.
* ನಂತರ ಆ ಮೊಟ್ಟೆಗಳು “ಮರಿ ಆಗುವವರೆಗೂ ರಕ್ಷಿಸಿ, ಪೋಷಣೆ ಮಾಡುತ್ತದೆ”.
ಈ ರೀತಿಯಾಗಿ ಹಾವುಗಳಲ್ಲಿ ಆಸಕ್ತಿದಾಯಕ ಅಂಶಗಳನ್ನು ನೋಡಬಹುದು ಮೊದಲನೆಯದಾಗಿ ತಿಳಿಯಬೇಕಾದ ಅಂಶವೆಂದರೆ ಎಲ್ಲಾ ಹಾವುಗಳು ವಿಷಕಾರಿ ಅಲ್ಲ, ಕೆಲವು ಪರಿಸರ ಸ್ನೇಹಿ ಹಾವು ಗಳು ಇರುತ್ತವೆ,
ಅಲ್ಲದೆ ಹಾವುಗಳು ಆಹಾರ ಸರಪಳಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವುದರಿಂದ ಹಾವುಗಳ ಸಂರಕ್ಷಣೆ ಜೀವ ವೈವಿಧ್ಯತೆಯ ದೃಷ್ಟಿಯಿಂದ ಅತ್ಯಂತ ಅವಶ್ಯಕವಾಗಿದೆ.
ಮೇಲೆ ತಿಳಿಸಿರುವಂತೆ ಹಾವುಗಳಿಗೆ ಪುರಾಣ ಮತ್ತು ನೀತಿ ಕಥೆಗಳಲ್ಲಿ ಇರುವಷ್ಟು ಭಕ್ತಿ ವಾಸ್ತವದಲ್ಲಿ ಭಯವಾಗಿ ಬದಲಾಗಿದೆ, ಇದರಿಂದ ಕಲ್ಲು ನಾಗರಕ್ಕೆ ಹಾಲೆರೆಯುವವರು ನಿಜನಾದರ ಬಂದರೆ ದೊಣ್ಣೆಯಿಂದ ಹೊಡೆಯುತ್ತಾರೆ.
Hence, basically all snakes are dangerous animals venomous snakes like cobra they are life threatening but non venomous snakes like rat Snake the cleans the agriculture field by killing rats and insects
Which are harming to crops anyway most people having misconception that all snakes are dangerous to human life when people Saw snake they hit and kill the snakes,
Killing snakes may cause ecological imbalance because snakes are the important predator and prey in the food chain. Also snake bite has the anti venom treatment
Which saves people lives from snake biting so people don’t panic.
Thank you.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
From Nature to Economy
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply