"Agriculture is our CULTURE"

Arecanut Crop :: ಅಡಿಕೆ ತೋಟದ ವೈಫಲ್ಯಕ್ಕೆ ಕಾರಣಗಳೇನು?? ವೈಜ್ಞಾನಿಕವಾಗಿ ಅಡಿಕೆ ತೋಟವನ್ನು ಮಾಡುವುದು ಹೇಗೆ?

ಅಡಿಕೆ ಬೆಳೆಯನ್ನು ಬೆಳೆಯುವ ಸುಲಭ ವಿಧಾನ:: ಅತಿ ಕಡಿಮೆ ಹೂಡಿಕೆಯಲ್ಲಿ ಅತಿ ಹೆಚ್ಚು ಲಾಭ ಹೇಗೆ? ಎನ್ನುವುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ !!!

Arecanut is called as “supari”, it is the seed of a arecanut palm tree, it is also important crop grown in India especially near coastal States.

it grows well in hot and wet places,like coastal areas. Many farmers grow arecanut because it is useful and give good income.

ಭಾರತದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ಪ್ರದೇಶವೆಂದರೆ ಅದು “ಕರ್ನಾಟಕ” ರಾಜ್ಯ, ಅಲ್ಲದೆ, ಕರ್ನಾಟಕದ ವಿವಿಧ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಇತರೆ ಜಿಲ್ಲೆಗಳಲ್ಲಿ ಅಡಿಕೆಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತದೆ.

ಅಡಿಕೆಯನ್ನು ಬೆಳೆಯುವುದು ಕಷ್ಟದ ಕೆಲಸವೇನಲ್ಲ, ಆದರೂ ಕೆಲವೊಮ್ಮೆ ರೈತರು “ಸರಿಯಾದ ಮಾರ್ಗದರ್ಶನ”ವಿಲ್ಲದ ಕಾರಣ ಈ ಅಡಿಕೆ ಬೆಳೆಯಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ, ಹಾಗಾಗಿ ನಷ್ಟದ ಹಾದಿಯಿಂದ ಲಾಭದೆಡೆಗೆ ಬರುವುದು ಹೇಗೆ? ಎನ್ನುವ ಮಾಹಿತಿ ಇಲ್ಲಿದೆ. 

ಅಡಿಕೆ ತೋಟದ ವೈಫಲ್ಯಕ್ಕೆ ಕಾರಣಗಳೇನು??

what are the reasons for arecanut crop failure? 

~“ನೀರಿನ ನಿರ್ವಹಣೆ“, ಸರಿಯಾಗಿ ಇಲ್ಲದಿರುವುದು

* “ಪೋಷಕಾಂಶಗಳ ನಿರ್ವಹಣೆ” ಕಡಿಮೆ ಪ್ರಮಾಣದಲ್ಲಿ ಸಸ್ಯಗಳಿಗೆ ದೊರಕುವುದು.

~ “ಗೊಬ್ಬರದ ನಿರ್ವಹಣೆ“, ಉತ್ತಮವಾಗಿಲ್ಲದೇ ಇರುವುದು

* “ಕಳೆಗಳ ನಿರ್ವಹಣೆ” ಇಲ್ಲದಿರುವುದು

~ “ಅಂತರ್ಜಲ ಕಡಿಮೆ ಪ್ರಮಾಣದಲ್ಲಿ ಇರುವುದು”

* “ಅಡಿಕೆ ಗಿಡದ ಬೇರಿನ ಬಗ್ಗೆ ಮಾಹಿತಿ ಕಡಿಮೆ” ಇರುವುದು ,

~ ಅಡಿಕೆ ಸಸ್ಯಗಳನ್ನು “ನೆಡುವ ಅಂತರ“ದ ಬಗ್ಗೆ ಅಪೂರ್ಣ ಮಾಹಿತಿ ಇರುವುದು,

* ಮುಖ್ಯವಾಗಿ “ಮಣ್ಣಿನ ಫಲವತ್ತತೆ“ಯನ್ನು ಹೆಚ್ಚಿಸುವ ಸಲಹೆಗಳ ಕೊರತೆ ಇರುವುದು.

ಈ ಎಲ್ಲಾ ಪ್ರಮುಖ ಮಾಹಿತಿಗಳ ಬಗ್ಗೆ ರೈತರಲ್ಲಿ ತಿಳುವಳಿಕೆ ಇದ್ದರೆ ಆ ರೈತ ಅಡಿಕೆ ಬೆಳೆಯಲ್ಲಿ ಉತ್ತಮ ಇಳುವರಿಯ ಜೊತೆಗೆ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ಅಡಿಕೆ ಸಸ್ಯದ ಹಂತಗಳು:-

Steps of arecanut cropping:-

ಮೊದಲ ಹಂತ:- ಅಡಿಕೆ ಸಸಿಯನ್ನು “ನೆಡುವ ವಿಧಾನ”:-

Planting method of areca nut:-

* ಮೊದಲ ಮೂರು ವರ್ಷದಲ್ಲಿ ಅಡಿಕೆ ಬೆಳೆಯ ಸಸಿಯು “ಬದುಕು ಹಾಗೂ ಸಾವಿನ ಹಂತ”ದಲ್ಲಿರುತ್ತದೆ ಎಂದು ಹೇಳಬಹುದು. ಏಕೆಂದರೆ, ಈ ಮೊದಲ ಮೂರು ವರ್ಷದಲ್ಲಿ ಅಡಿಕೆ ಬೆಳೆಯ ಸಸಿಯು ತುಂಬ “ಸೂಕ್ಷ್ಮವಾಗಿರುತ್ತದೆ”.

ಈ ಹಂತದಲ್ಲಿ ಗಿಡದ ಪೋಷಣೆ ಚಿಕ್ಕ ಮಗುವಿನ ಪೋಷಣೆಯ ರೀತಿ ಇರಬೇಕಾಗುತ್ತದೆ, “ಎಳೆಯ ಎಲೆಗಳು 32 ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕ ಬಿಸಿಲಿಗೆ ತಮ್ಮನ್ನು ಒಡ್ಡಿಕೊಂಡಾಗ ಅತಿಯಾದ ಬಿಸಿಲಿನಿಂದ ಎಲೆಗಳು ನರಳುತ್ತವೆ”, ಅಲ್ಲದೆ

* ಎಲೆಗಳು ಹಳದಿಯಾಗುತ್ತವೆ

~ ಬೇರಿನ ಮೇಲೆ ಒತ್ತಡ ಬೀಳುತ್ತದೆ

* ಮಣ್ಣು ಗಟ್ಟಿಯಾಗುತ್ತದ

ಈ ಎಲ್ಲ ಸಮಸ್ಯೆಗಳು ಗಿಡದ ಇಳುವರಿಯನ್ನು ಕುಂಠಿತಗೊಳಿಸುತ್ತವೆ. 

ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು?

then what is the solution this problem? 

ಅತಿಯಾದ ಬಿಸಿಲಿನಿಂದ ಸಂರಕ್ಷಿಸಲು ರೈತರು “ನೈಸರ್ಗಿಕ ಕಾಡನ್ನು ಸೃಷ್ಟಿಸಬಹುದು”. ಅಂದರೆ ತಮ್ಮ ಅಡಿಕೆ ತೋಟದಲ್ಲಿ ಖಾಲಿ ಜಾಗ ಇರದಂತೆ “ಎಲೆಗಳಿಂದ ನೆಲ ಮುಚ್ಚುವಂತೆ ಗಿಡಗಳನ್ನು ಬೆಳೆಸುವುದು” ಇದರಿಂದ ಸೂರ್ಯನ ಬೆಳಕು ನೇರವಾಗಿ ಅಡಿಕೆ ಗಿಡಗಳ ಮೇಲೆ ಬೀಳುವುದಿಲ್ಲ.

ಬದಲಿಗೆ “ಹದವಾದ ನೆರಳು, ಮಣ್ಣಿನಲ್ಲಿ ತೇವಾಂಶ ಹಾಗೂ ಸಮತೋಲಿತ ವಾತಾವರಣವನ್ನು ಸೃಷ್ಟಿಸುತ್ತದೆ”.

 ಈ ರೀತಿಯ ನೈಸರ್ಗಿಕ ಕಾಡನ್ನು ಬೆಳೆಸುವುದರಿಂದ ಅಡಿಕೆಗೆ ಉತ್ತಮ ಇಳುವರಿ ಉತ್ಪನ್ನ ಮಾಡಲು ಅನುಕೂಲವಾಗುತ್ತದೆ.

ಹಾಗಾದರೆ ಈ ರೀತಿಯ ನೈಸರ್ಗಿಕ ಕಾಡನ್ನು ಬೆಳೆಸುವುದು ಹೇಗೆ?

How to grow natural forest in our arecanut farm? 

ಅಡಿಕೆ ತೋಟದಲ್ಲಿ ನೈಸರ್ಗಿಕ ಕಾಡನ್ನು ಬೆಳೆಸಲು “ಸುವರ್ಣ ರಚನೆ” ಎನ್ನುವ ವಿಧಾನ ಇದೆ, ಈ ವಿಧಾನದಿಂದ ಅಡಿಕೆ ತೋಟದಲ್ಲಿ “ಪರಿಪೂರ್ಣ ಸಮತೋಲಿತ ವಾತಾವರಣ”ವನ್ನು ಸೃಷ್ಟಿಸಬಹುದು

  • ಹಂತ 1:- ಮೊದಲ ಹಂತದಲ್ಲಿ “ಅಡಿಕೆ ಗಿಡದ ಸಾಲಿನಲ್ಲಿ ಯಾವ ಗಿಡವನ್ನು ನೆಡುವ ಹಾಗಿಲ್ಲ”.
  • ಹಂತ 2:- “ಪ್ರತಿ ನಾಲ್ಕು ಅಡಿಕೆ ಗಿಡದ ಮಧ್ಯದ ಭಾಗದಲ್ಲಿ ಒಂದು ಬಾಳೆ ಸಸಿಯನ್ನು ನೆಡಬೇಕು”.
  • ಹಂತ 3:- ನಂತರ ಈ “ಬಾಳೆ ಗಿಡದ ಸಾಲಿನಿಂದ 4.5 ಅಡಿ ಅಂತರದಲ್ಲಿ ಚೊಗಚೆ, ಡೈಯಂಚ, ಅಲಸಂದೆಯಂತಹ ದ್ವಿದಳ ಧಾನ್ಯದ ಸಸ್ಯಗಳನ್ನು ನೆಡಬೇಕು”. 

“ಬಾಳೆ ಹದವಾದ ನೆರಳನ್ನು ನೀಡುತ್ತದೆ ಮತ್ತು ಚೊಗಚೆ ನೇರವಾಗಿ ಬೀಳುವ ಬಿಸಿಲನ್ನು ತಡೆಯುತ್ತದೆ”. ಅಂತಿಮವಾಗಿ ಅಡಿಕೆ ಬೆಳೆಗೆ ಪರಿಪೂರ್ಣ ಸಮತೋಲಿತ ವಾತಾವರಣ ದೊರೆಯುತ್ತದೆ.

ಅಡಿಕೆ ಗಿಡದ ಸಾಲಿನಲ್ಲಿಯೇ ಬಾಳೆ ಸಸಿಗಳನ್ನು ನೆಡುವುದರಿಂದ ಆಗುವ ಪರಿಣಾಮವೇನು?

What is the impact of when we plant banana plants in the same line of areca nut ?

ಬಹುತೇಕ ರೈತರು ಅಡಿಕೆ ಗಿಡದ ಸಾಲಿನಲ್ಲಿ ಬಾಳೆ ಸಸಿಗಳನ್ನು ನೆಡುತ್ತಾರೆ, ಇದರಿಂದ ಆಗುವ ಪರಿಣಾಮವೆಂದರೆ, 

* ಬಾಳೆ ಗಿಡಗಳು ಹದವಾದ ನೆರಳನ್ನು ನೀಡುವುದರಿಂದ, ಅಡಿಕೆ ಸಸ್ಯಗಳಿಗೆ ಉಸಿರಾಡಲು ಕಷ್ಟವಾಗುತ್ತದೆ ಅಲ್ಲದೆ, “ತೇವಾಂಶ ಹೆಚ್ಚಾಗಿ ಅಡಿಕೆ ಗಿಡದ ಕಾಂಡವು ಸೊರಗುತ್ತದೆ” ಮತ್ತು “ಅತಿಯಾದ ನೆರಳು ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ”.

ಇದರಿಂದ ರೈತರು ಬಾಳೆ ಗಿಡಗಳನ್ನು ನಿಖರವಾಗಿ ನಾಲ್ಕು ಅಡಿಕೆ ಸಸ್ಯಗಳ ಮಧ್ಯದಲ್ಲಿ ನೆಟ್ಟರೆ ಉತ್ತಮವಾದ ಇಳುವರಿಯನ್ನು ಪಡೆಯಬಹುದು. 

ಎರಡನೇ ಹಂತ:- ಮಣ್ಣನ್ನು ಜೀವಂತವಾಗಿಸುವುದು,

 liveliness of soil.

ರೈತರು ತಮ್ಮ ಅಡಿಕೆ ತೋಟವನ್ನು “ಸ್ವಾವಲಂಭಿ ಪರಿಸರ ವ್ಯವಸ್ಥೆಯನ್ನಾಗಿ ಪರಿವರ್ತಿಸಬೇಕು”,

ಇದಕ್ಕಾಗಿ ರೈತರು ಮೂರು ಸೂತ್ರಗಳನ್ನು ಅನುಸರಿಸಬೇಕು.

ಒಂದನೇ ಸೂತ್ರ:- ಈ ಹಂತದಲ್ಲಿ ರೈತರು ತಮ್ಮ ತೋಟದಲ್ಲಿಯೇ ಒಂದು “ಜೀವಂತ ಗೊಬ್ಬರದ ಕಾರ್ಖಾನೆ”ಯನ್ನು ಶುರು ಮಾಡಬೇಕು.

ಹೆಗೆಂದರೆ, ಬಾಳೆ ಗಿಡದಿಂದ 4.5 ಅಡಿ ಅಂತರದಲ್ಲಿ ನೆಟ್ಟ ದ್ವಿದಳ ಧಾನ್ಯದ ಸಸ್ಯಗಳ ರೆಂಬೆಗಳನ್ನು ನೆಲದ ಮೇಲೆ ಹರಡಬೇಕು, ಇದರಿಂದ ನೈಸರ್ಗಿಕ “ಹಸಿರೆಲೆ ಗೊಬ್ಬರವಾಗಿ ಹಾಗೂ ಮಲ್ಚಿಂಗ್” ಆಗಿ ತಮ್ಮ ಕೆಲಸ ನಿರ್ವಹಿಸುತ್ತವೆ.

ಹೀಗಾಗಿ ಒಂದೇ ಗಿಡದಿಂದ “ನೆರಳು ಸಿಗುತ್ತದೆ, ಗೊಬ್ಬರ ಸಿಗುತ್ತದೆ ಹಾಗೂ ಮಲ್ಚಿಂಗ್” ಕೂಡ ಆಗುತ್ತದೆ. ಈ ವಿಧಾನವನ್ನೇ ಜೀವಂತ ಗೊಬ್ಬರದ ಕಾರ್ಖಾನೆ ಎಂದು ಹೇಳಬಹುದು.

ಎರಡನೇ ಸೂತ್ರ:- ಅಡಿಕೆ ತೋಟಕ್ಕೆ “ಒಬ್ಬ ಮಣ್ಣಿನ ವೈದ್ಯ”ರನ್ನು ನೇಮಿಸುವುದು.

ಇಲ್ಲಿ ಮಣ್ಣಿನ ವೈದ್ಯರಾಗಿ ಕೆಲಸ ಮಾಡುವುದು ವ್ಯಕ್ತಿಗಳಲ್ಲ ಬದಲಾಗಿ ”ಅಲಸಂದೆ, ತೊಗರಿ ಅವರೆ ಅಂತಹ ಆಂತರಿಕ ಬೆಳೆ”ಗಳನ್ನು ಬೆಳೆಯುವುದು. ಈ ಬೆಳೆಗಳನ್ನು ಅಡಿಕೆ ಸಸ್ಯಗಳಲ್ಲಿ ಮಧ್ಯದಲ್ಲಿ ಬೆಳೆಯುವುದರಿಂದ ಮಣ್ಣಿಗೆ “ನೇರವಾಗಿ ನೈಟ್ರೋಜನ್” ದೊರೆಯುತ್ತದೆ.

ಅಲ್ಲದೆ ಕೋಟ್ಯಂತರ ಸೂಕ್ಷ್ಮ ಜೀವನಗಳಿಗೆ ಆಹಾರವನ್ನು ಪೂರೈಸುತ್ತದೆ ಮತ್ತು “ಬೆಳೆಗೆ ಅಗತ್ಯವಾದ ಪೋಷಕಾಂಶ”ಗಳನ್ನು ಒದಗಿಸುತ್ತದೆ.

ಮೂರನೇ ಸೂತ್ರ:- ವ್ಯವಸಾಯದ ಹೃದಯವನ್ನು ಸಕ್ರಿಯಗೊಳಿಸಬೇಕು.

ರೈತರು ಪ್ರತಿ ತಿಂಗಳು “ಜೀವಾಮೃತ ಗೋಕೃಪಾ ಮೃತ ಅಥವಾ OWDC” ಯನ್ನು ಮಣ್ಣು ಹಾಗೂ ಎಲೆಗಳ ಮೇಲೆ ಸ್ಪ್ರೇ ಮಾಡುವುದರಿಂದ “ಬೇರಿನ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ”.ಸಸ್ಯಗಳ ಹೃದಯ ಬಡಿತವನ್ನು ಚಾಲನೆಯಲ್ಲಿ ಇಡುತ್ತದೆ.

ಮೂರನೇ ಹಂತ:- ದೀರ್ಘಕಾಲಿಕ ನಿರ್ವಹಣೆ ಹೇಗೆ?

How to manage for long term?

ಅಂತಿಮವಾಗಿ ರೈತರಿಗೆ ಕಾಡುವ ಪ್ರಶ್ನೆ ಎಂದರೆ ಈ ಅಡಿಕೆ ಬೆಳೆಯನ್ನು ದೀರ್ಘಕಾಲದವರೆಗೂ ನಿರ್ವಹಿಸುವುದು ಹೇಗೆ ಎಂದು, ಆ ಪ್ರಶ್ನೆಗೆ ಇಲ್ಲಿದೆ ಉತ್ತರ,

 ದೀರ್ಘ ಕಾಲದವರೆಗೂ ನಿರ್ವಹಿಸುವುದಕ್ಕಾಗಿ ರೈತರು ಹಂತಗಳನ್ನು ಪಾಲಿಸಬೇಕು,

1) ನಿರಂತರವಾಗಿ ಗಳ “ತುದಿಗಳನ್ನು ಕತ್ತರಿಸುತ್ತಿರಬೇಕು”, ಇದರಿಂದ ಅತಿಯಾದ ನೆರಳು ಗಿಡಕ್ಕೆ ಹಾನಿ ಮಾಡುವುದನ್ನು ತಪ್ಪಿಸಬಹುದು. 

2) ಕಾಲಕಾಲಕ್ಕೆ ರೈತರು ತಮ್ಮ ತೋಟದಲ್ಲಿ “ನೀರಿನ ನಿರ್ವಹಣೆ, ಮಲ್ಚಿಂಗ್ ಹಾಗೂ ಗೊಬ್ಬರ”ವನ್ನು ನೀಡುವುದರಿಂದ ಇಳುವರಿಯನ್ನು ಹೆಚ್ಚಿಸಬಹುದು ಹಾಗೂ ದೀರ್ಘಕಾಲದವರೆಗೂ ನಿರ್ವಹಿಸಬಹುದು.

 3) ಅಡಿಕೆ ತೋಟದಲ್ಲಿ ಯಾವುದೇ ಕಾರಣಕ್ಕೂ “ಉಳುಮೆ ಮಾಡಬಾರದು”. ಉಳುಮೆ ಮಾಡುವುದರಿಂದ “ಅಡಿಕೆ ಸಸ್ಯದ ಬೇರುಗಳು ಘಾಸಿಯಾಗುವ ಸಾಧ್ಯತೆ ಇರುತ್ತದೆ”. ಇದರಿಂದ ದೀರ್ಘಕಾಲದ ನಿರ್ವಹಣೆಯಾಗುವುದಿಲ್ಲ.

ಈ ಎಲ್ಲಾ ಕ್ರಮಗಳನ್ನು ಅನುಸರಿಸಿದರೆ ಮುಂದಿನ 20 ವರ್ಷದವರೆಗೂ ರೈತರು ಉತ್ತಮ ಆದಾಯ ವನ್ನು ಪಡೆಯಬಹುದು. 

Arecanut cultivation is important and profitable plantation crop that supports the lovely food of millions of farmers especially in Karnataka.

Successful Arecanut farming depends on sustainable climate well drained soil and proper management of water and fertilizer.

This method ensures healthy plant growth, high yield nut and long term soil fertility.

Overall Arecanut cultivation when managed efficiently offers stable returns employment opportunities and significantly contributing to agriculture economy.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್< ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು,

ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"