"Agriculture is our CULTURE"

Top 5 YouTubers Income :: ಯುಟ್ಯೂಬ್ದಿಂದ  ಲಕ್ಷ ಲಕ್ಷ ಗಳಿಕೆ ಮಾಡುವವರಿದ್ದಾರೆ! ಕನ್ನಡದ ಟಾಪ್ 5 ಯೂಟ್ಯೂಬರ್ ಗಳ ಸಂಪಾದನೆ ಎಷ್ಟು?

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಹಾಗಾಗಿ ಜನರು ಕೆಲಸಕ್ಕಾಗಿ ಕಂಪನಿಗಳನ್ನು ಸರ್ಕಾರವನ್ನು ನೆಚ್ಚಿಕೊಳ್ಳದೆ ತಮ್ಮ ಪ್ರತಿಭೆಯನ್ನು  ಸೋಶಿಯಲ್ ಮೀಡಿಯಾಗಳ ಮೂಲಕ ಜನರಿಗೆ ತೋರಿಸುತ್ತಾ  ಫೇಮಸ್ ಆಗುವುದರೊಂದಿಗೆ ಹಣವನ್ನು ಕೂಡ ಗಳಿಸುತ್ತಿದ್ದಾರೆ.  ಹೌದು 2017-18ರಲ್ಲಿ ಟಿಕ್ ಟಾಕ್ ಎಂಬ ಆ್ಯಪ್ ಮುಖಾಂತರ ವಿಡಿಯೋಗಳನ್ನು  ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಟ್ರೆಂಡ್ ಸ್ಟಾರ್ಟ್ ಆಯ್ತು.

ಆದರೆ ಕೆಲವು ವರ್ಷಗಳ ಹಿಂದೆ ಟಿಕ್ ಟಾಕ್ ಭಾರತದಲ್ಲಿ ಬ್ಯಾನ್ ಆಯ್ತು ಅದರ ನಂತರ instagram ಹಾಗೂ ಯೂಟ್ಯೂಬ್ ಮೂಲಕ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ  ಯೂಟ್ಯೂಬರ್ಗಳು ಹಣ ಸಂಪಾದಿಸುತ್ತಿದ್ದಾರೆ.

ಹಾಗಾದ್ರೆ ಕರ್ನಾಟಕದಲ್ಲಿ  ಯೂಟ್ಯೂಬ್ ಮೂಲಕ ಅತಿ ಹೆಚ್ಚು  ಫೇಮಸ್ ಆಗಿರುವ ಹಾಗೂ ಹೆಚ್ಚು ಸಂಪಾದನೆ ಮಾಡುತ್ತಿರುವ ಕೆಲವೊಬ್ಬ ಹೆಸರಾಂತ ಯೂಟ್ಯೂಬರ್ಗಳ ಮಾಹಿತಿಗಳನ್ನು ನಾವು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.   ಇದರಿಂದ ನಿಮಗೂ ಕೂಡ ಯೂಟ್ಯೂಬ್ ಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಹಣ ಗಳಿಸುವ ಯೋಚನೆಯಿದ್ದಲ್ಲಿ ಇದರಿಂದ ನೀವು ಹೆಚ್ಚಿನ ಆಸಕ್ತಿ ಮತ್ತು ಇನ್ಸ್ಪೈರ್ ಆಗಿ ನೀವು ಕೂಡ ಫೇಮಸ್ ಆಗಲಿ ಎಂಬುದು ನಮ್ಮ ಆಶಯ.

ಕರ್ನಾಟಕದಲ್ಲಿ  ಕನ್ನಡ ಯೂಟ್ಯೂಬ್ ಚಾನೆಲ್ ನಿಂದ ಅತಿ ಹೆಚ್ಚು ಸಂಪಾದನೆ ಮಾಡುವ  ಐದು ಫೇಮಸ್ ಯೂಟ್ಯೂಬರ್ಗಳ ವಿವರಗಳನ್ನು ಈ ಕೆಳಗೆ ಹಂಚಿಕೊಂಡಿದ್ದೇವೆ.

  Top 5 youtubers revenue!

5. DV IN KANNADA:-

ಈ ಚಾನಲ್ ಅನ್ನು ಪ್ರಾರಂಭಿಸಿದವರು ಮೊದಲು ಹಿಂದಿಯಲ್ಲಿ ವಿಡಿಯೋ ಮಾಡುತ್ತಿದ್ದರು ಆದರೆ ಒಂದು ವರ್ಷದ ಕಾಲ ವಿಡಿಯೋ ಮಾಡಿ ಅಪ್ಲೋಡ್ ಮಾಡಿದರು ಆದರೆ 1 ಲಕ್ಷ ಸಬ್ ಸ್ಕ್ರೈಬರ್ ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಇವರು ಕನ್ನಡದಲ್ಲಿ ವಿಡಿಯೋ ಮಾಡಲು ಪ್ರಾರಂಭಿಸಿದರು ಆಗ ಆರು ತಿಂಗಳಿನಲ್ಲಿಯೇ 1 ಲಕ್ಷ ಸಬ್ ಸ್ಕ್ರೈಬರ್ಸ್ ಆದರು. ನಂತರ ಫೇಮಸ್ ಆಗಿ ಹಣ ಬರಲು ಪ್ರಾರಂಭವಾಯಿತು ಹಾಗೂ ಸಿಲ್ವರ್ ಪ್ಲೇ ಬಟನ್ ಕೂಡ ಸಿಕ್ಕಿತು. ಇವತ್ತಿಗೆ ಇವರ ಸಬ್ ಸ್ಕ್ರೈಬರ್ಸ್ ಸಂಖ್ಯೆ 4.57 ಲಕ್ಷ. ಇವರ  ತಿಂಗಳ ಆದಾಯ ಒಂದು ಸಾವಿರ ಡಾಲರ್ ನಿಂದ 16.3 ಸಾವಿರ ಡಾಲರ್ ಅಂದರೆ  ಭಾರತೀಯ ಕರೆನ್ಸಿಯಲ್ಲಿ  81,000 ದಿಂದ 12,96,000 ರೂಪಾಯಿವರೆಗೆ ಗಳಿಸುತ್ತಿದ್ದಾರೆ.

4.News alert

ಈ ಚಾನೆಲ್ ಓಪನ್ ಮಾಡಿರುವವರು ಚಂದನ್. ಇವರು ಮಂಡ್ಯ  ಜಿಲ್ಲೆಯ ಕೆ ಆರ್ ಪೇಟೆಯವರು.   2018ರಲ್ಲಿ ಯುಟ್ಯೂಬ್ ಚಾನೆಲ್ ಆರಂಭಿಸುತ್ತಾರೆ ಅದು 2019 ರಿಂದ ಹೆಚ್ಚಿನ ಸಬ್ಸ್ಕ್ರೈಬರ್ ಗಳನ್ನು ಪಡೆದುಕೊಳ್ಳುತ್ತದೆ. ಇವರ ಚಾನೆಲ್ ನಲ್ಲಿ ಈಗ 6.32 ಸಾವಿರ ಸಬ್ ಸ್ಕ್ರೈಬರ್ಸ್ ಹೊಂದಿದ್ದಾರೆ.  ಇವರು ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು 8,000 ಕ್ಕೂ  ಹೆಚ್ಚಿನ ಮತಗಳನ್ನು ಪಡೆದಿದ್ದಾರೆ ಆದರೆ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಈಗಲೂ ಕೂಡ ಸಾಮಾನ್ಯ ಜನರಿಗೆ ಸಹಾಯ ಮಾಡುತ್ತಿದ್ದಾರೆ.

ಇವರ ಯೂಟ್ಯೂಬ್ ನಿಂದ ಬರುವ ಆದಾಯ 2.4 ಸಾವಿರ ನಿಂದ 38.1 ಸಾವಿರ ಡಾಲರ್ ಅಂದರೆ 1.94 ಲಕ್ಷದಿಂದ 13 ಲಕ್ಷ ದುಡಿಯುತ್ತಾರೆ.

3.Tech in kannada

ಈ ಚಾನಲ್ ನಡೆಸುತ್ತಿರುವುದು ಸಂದೀಪ್ ಎನ್ನುವವರು ಇವರು ಇಂಜಿನಿಯರಿಂಗ್ ಪದವಿದರರಾಗಿದ್ದು,  ಮೊದಲು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು ಆದರೆ ಅದರಲ್ಲಿ ಆಸಕ್ತಿ ಕಳೆದುಕೊಂಡು ನಂತರ ಯುಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು ಅದರಲ್ಲಿ ಮಾರುಕಟ್ಟೆಗೆ ಬರುವ ಹೊಸ ಹೊಸ ಮೊಬೈಲ್ ಫೋನ್ಗಳ ಹಾಗೂ ಗ್ಯಾಡ್ಜೆಟ್ಸ್ ಗಳ  ಬಗ್ಗೆ ಮಾಹಿತಿಯನ್ನು ನೀಡುತ್ತಾರೆ ಇವರ ಚಾನೆಲ್ನಲ್ಲಿ ಇದೀಗ 8.7 ಲಕ್ಷ ಸಬ್ಸ್ಕ್ರೈಬರ್ಸ್ ಇದ್ದಾರೆ.  ಇವರಿಗೆ ಕೇವಲ ಯೂಟ್ಯೂಬ್ ನಿಂದ ಮಾತ್ರವಲ್ಲದೆ ಮೊಬೈಲ್ ಫೋನ್ಗಳ ಹಾಗೂ ಇತರೆ ಗ್ಯಾಡ್ಜೆಟ್ಸ್ ಗಳ  ಪ್ರಮೋಷನ್ ಮಾಡುವುದಕ್ಕಾಗಿ ಕಂಪನಿಗಳಿಂದಲೂ ಹಣ ಬರುತ್ತದೆ. ಇವರ  ತಿಂಗಳ ಆದಾಯ ಒಂದು ಸಾವಿರ ಡಾಲರ್ ನಿಂದ 16.3 ಸಾವಿರ ಡಾಲರ್ ವರೆಗೆ ಅಂದರೆ  ಭಾರತೀಯ ಕರೆನ್ಸಿಯಲ್ಲಿ  81,000 ದಿಂದ 12,96,000 ರೂಪಾಯಿವರೆಗೆ ಗಳಿಸುತ್ತಿದ್ದಾರೆ. ಅಲ್ಲದೇ ಸ್ಪಾನ್ಸರ್ ಗಳಿಂದ ತಿಂಗಳಿಗೆ 10 ಲಕ್ಷ ಕೂಪಾಯಿಗೂ ಕ್ಕೂ ಹೆಚ್ಚಿನ ಹಣ ಗಳಿಸುತ್ತಿದ್ದಾರೆ.

2. ಕಲಾ ಮಾದ್ಯಮ:-

ಈ ಚಾನಲ್ ಅನ್ನು ನಡೆಸುತ್ತಿರುವವರು ಪರಮೇಶ್ವರ್ ಎಂದು ಅವರು  ಸಿನಿಮಾ ನಟರ ಸಂದರ್ಶನಗಳನ್ನು ನಡೆಸುತ್ತಾರೆ ಇವರು ಮಾಡುವ ವಿಡಿಯೋಗಳು ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚಿನ ವೀವ್ಸ್ ಪಡೆದುಕೊಳ್ಳುತ್ತದೆ ಇವರ ತಿಂಗಳ ಆದಾಯ 3.7 ಸಾವಿರದಿಂದ 59.6 ಸಾವಿರ ಡಾಲರ್ ವರೆಗೆ ಅಂದರೆ 3 ಲಕ್ಷದಿಂದ 47.79 ಲಕ್ಷ ರೂಪಾಯಿ ವರೆಗೆ ಗಳಿಸುತ್ತಾರೆ. ನಿಶ್ಚಯವಾಗಿ ಹೇಳಬೇಕೆಂದರೆ ಇವರು ತಿಂಗಳಿಗೆ 10 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.

1. ಡಾಕ್ಟರ್ ಬ್ರೋ :-

ತುಂಬಾ ಬಡತನದಲ್ಲಿ ಬೆಳೆದ ಅರ್ಚಕರ ಮಗ ಇಂದು ಕನ್ನಡದ ಯೂಟ್ಯೂಬರ್ಗಳಲ್ಲಿ ಅತ್ಯಂತ ಹೆಚ್ಚು  ಸಬ್ಸ್ಕ್ರೈಬರ್ ಗಳನ್ನು ಹೊಂದಿ  ರಾಜ್ಯದೆಲ್ಲೆಡೆ  ಫೇಮಸ್ ಆಗಿದ್ದಾನೆ.  ತನ್ನನ್ನು ತಾನೇ ಡಾಕ್ಟರ್ ಬ್ರೋ ಎಂದು ಕರೆದುಕೊಳ್ಳುವ  ಈತನ ನಿಜವಾದ ಹೆಸರು ಗಗನ್.   ಈತ ಬೇರೆ ಬೇರೆ ದೇಶಗಳಿಗೆ ಹೋಗಿ ಟ್ರಾವೆಲ್ ವ್ಲಾಗ್ಸ್ ಗಳನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ ಅತಿ ಹೆಚ್ಚು ಸಂಪಾದನೆ ಮಾಡುತ್ತಿದ್ದಾನೆ.  ಇವರ ತಿಂಗಳ ಆದಾಯ 15 ರಿಂದ 20 ಲಕ್ಷ ರೂಪಾಯಿಗಳು.  ಇದರೊಂದಿಗೆ ಪ್ರಮೋಷನ್ ಫೇಸ್ಬುಕ್ ವಾಟ್ಸಾಪ್ ಗಳಿಂದಲೂ ಕೂಡ ಇವರಿಗೆ ಹಣ ಬರುತ್ತದೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….

ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.

<<< ಅಡಿಕೆ ಮಾರುಕಟ್ಟೆ     : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ತೆಂಗಿನ ಮಾರುಕಟ್ಟೆ   : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>

<<< ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ : ಇಂದಿನ ಮೆಕ್ಕೆಜೋಳ / ಗೋವಿನ ಜೋಳ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  ವಿ.ಕೆ

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"