Chemical Fertilizer :: ರಾಸಾಯನಿಕ ಗೊಬ್ಬರಗಳ ಬಳಕೆಯಿಂದ, ಮಣ್ಣಿನ ಫಲವತ್ತತೆಗೆ ಕಡಿಮೆಯಾಗಿದ್ದರೆ, ರೈತರು ಚಿಂತಿಸುವ ಅಗತ್ಯವಿಲ್ಲ!!
ರಾಸಾಯನಿಕ ರಸಗೊಬ್ಬರದಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆಯೇ? :: ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆಗೆ ಕಡಿಮೆಯಾಗಿದ್ದರೆ, ರೈತರು ಚಿಂತಿಸುವ ಅಗತ್ಯವಿಲ್ಲ!! ಫಲವತ್ತತೆ ಹೆಚ್ಚಿಸಲು ಇಲ್ಲಿದೆ ಸರಳ ಮಾರ್ಗ!!
Now a days farmers heavily depends on chemical fertilizers than organics but When chemicals react with soil it causes to lose its fertility with texture of soil also change gradually.
Farmers can reduce chemical fertilizer usage by using organic fertilizer like green leaves are very healthy fertilizer for crop and soil and also it act as shield for control soil erosion.
ಇತ್ತೀಚಿನ ದಿನಗಳಲ್ಲಿ “ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ’ಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಜೊತೆಗೆ ಮಣ್ಣಿನ ಸವಕಳಿಯೂ ಹೆಚ್ಚಾಗುತ್ತದೆ, ಇದರಿಂದ ಇಳುವರಿ ಕಡಿಮೆಯಾಗುತ್ತಿದ್ದು
ಕೃಷಿಯನ್ನೇ ನಂಬಿರುವ ರೈತರಲ್ಲಿ ಆತಂಕ ಎಡೆ ಮಾಡಿದೆ ಆದರೆ ಸಾಮಾನ್ಯವಾಗಿ ತಿಳಿದಿರುವಂತೆ ಅಗತ್ಯ ಪ್ರಮಾಣದ ನೀರಿನ ನಿರ್ವಹಣೆ ಹಾಗೂ ಸೂಕ್ಷ್ಮ ಪೋಷಕಾಂಶಗಳ ನಿರ್ವಹಣೆ ತಕ್ಕಮಟ್ಟಿಗೆ
“ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ“, ಜೊತೆಗೆ “ಇಳುವರಿಯನ್ನು ಹೆಚ್ಚಿಸುತ್ತದೆ” ಆದರೆ ಸೂಕ್ಷ್ಮ “ಪೋಷಕಾಂಶ ಮತ್ತು ನೀರಿನ ನಿರ್ವಹಣೆ” ಜೊತೆಗೆ ಸಾವಯವ ಗೊಬ್ಬರದ ಬಳಕೆಯು ಅತಿ ಮುಖ್ಯವಾಗುತ್ತದೆ.
ಹಾಗಾಗಿ ರೈತರು ತಮ್ಮ ಕೃಷಿ ಪದ್ಧತಿಯಲ್ಲಿ ಸಾವಯವ ಗೊಬ್ಬರಗಳ ಬಳಕೆಯನ್ನು ಯಥೇಚ್ಛವಾಗಿ ಮಾಡುತ್ತಿರಬೇಕು ಸಾಮಾನ್ಯವಾಗಿ ರೈತರಿಗೆ ಹಲವಾರು ಸಾವಯವ ಗೊಬ್ಬರಗಳ ಪರಿಚಯವಿರುತ್ತದೆ ಉದಾಹರಣೆಗೆ
“ಬೇವಿನ ಎಲೆಯಿಂದ ಮಾಡುವ ಜೀವಾಮೃತ“, ಬೆಲ್ಲದಿಂದ ಮಾಡುವ ಸಾವಯವ ಗೊಬ್ಬರ ಹಾಗೂ ಇತರ ಸಾವಯವ ಗೊಬ್ಬರಗಳ ಬಗ್ಗೆ ಮಾಹಿತಿ ಇರುತ್ತದೆ.
ಆದರೆ ಬಹಳಷ್ಟು ರೈತರಿಗೆ ಹಸಿರೆಲೆಗಳನ್ನು ಉಪಯೋಗಿಸಿ ಫಲವತ್ತಾದ ರಸ ಗೊಬ್ಬರವನ್ನು ತಯಾರಿಸುವ ಬಗ್ಗೆ ಮಾಹಿತಿ ಕಡಿಮೆ ಇರುತ್ತದೆ. ಹಾಗಾದರೆ 9 ರೀತಿಯ ಧಾನ್ಯಗಳನ್ನು
ಬೆಳೆಯುವ ಸಸ್ಯಗಳಿಂದ ಸಿಗುವ ಎಲೆಗಳ ಮೂಲಕ ಮಣ್ಣನು ಫಲವತ್ತತೆ ಗೊಳಿಸಲು ಹಾಗೂ ಇಳುವರಿಯನ್ನು ಹೆಚ್ಚಿಸಲು ಉಪಯೋಗವಾಗುವಂತಹ ಸಾವಯವ ಗೊಬ್ಬರವನ್ನು ತಯಾರಿಸುವ ವಿಧಾನವನ್ನು ತಿಳಿಯೋಣ.
ಹಸಿರೆಲೆ ಗೊಬ್ಬರ ಎಂದರೆ ಏನು?
What is green manure?
ಹಸಿರೆಲೆ ಗೊಬ್ಬರ ಎಂದರೆ “ಹಸಿರು ಸಸ್ಯಗಳನ್ನು ಹೊಲದಲ್ಲಿ ಬೆಳೆಸಿ ಆ ಸಸ್ಯಗಳು ಹಸಿರಿರುವಾಗಲೇ, ಮಣ್ಣಿಗೆ ಬೆರೆಸಿ ಗೊಬ್ಬರ ಮಾಡುವ ವಿಧಾನ” ಇದರಿಂದ “ಮಣ್ಣಿನಲ್ಲಿರುವ ಫಲವತ್ತತೆ” ಹೆಚ್ಚಾಗಿ “ಮಣ್ಣು ಸರಾಗವಾಗಿ ಉಸಿರಾಡಲು” ಉಪಯೋಗವಾಗುತ್ತದೆ.
ಹಸಿರು ಗೊಬ್ಬರದ ಉಪಯೋಗಗಳೇನು?
What are the benefits from green manure?
ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳನ್ನು ಹೆಚ್ಚಿಸುತ್ತದೆ.
ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಮಣ್ಣನ್ನು ಗಟ್ಟಿಯಾಗದಂತೆ ಸರಿಲವಾಗಿರಿಸಲು ಸಹಾಯಕವಾಗುತ್ತದೆ.
* ನೈಟ್ರೋಜನ್ ನ ಅಂಶ ಹೆಚ್ಚಾಗುತ್ತದೆ.
ಮಣ್ಣಿಗೆ ನೀರನ್ನು ಹೀರಿಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ.
ಕಳೆಗಳ ಬೆಳವಣಿಗೆ ಕಡಿಮೆಯಾಗುತ್ತದೆ.
ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಿಸುತ್ತದೆ.
* ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ.
ಈ ಮೇಲಿನ ಎಲ್ಲಾ ಅಂಶಗಳು ಹಸಿರೆಲೆ ಗೊಬ್ಬರದಿಂದ ರೈತರಿಗೆ “ಅತಿ ಕಡಿಮೆ ವೆಚ್ಚ“ದಲ್ಲಿ ಆಗುವ ಅತಿ ದೊಡ್ಡ ಉಪಯೋಗಗಳೇ ಆಗಿವೆ.
ಹಾಗಾದರೆ ರೈತರು ಉಪಯೋಗಿಸಬಹುದಾದಂತಹ ನವಧಾನ್ಯ ಹಸಿರೆಲೆ ಗೊಬ್ಬರದಲ್ಲಿ ಬಳಸುವ ಸಸ್ಯಗಳು ಯಾವ್ಯಾವು?
Then what type of plants can used by farmers in green manure?
ಈ ನವಧಾನ್ಯ ಹಸಿರೆಲೆ ಗೊಬ್ಬರದಲ್ಲಿ ರೈತರು “14 ರಿಂದ 16 ಸಸ್ಯಗಳನ್ನು ಬಳಸಬಹುದಾಗಿದೆ”.
ಈ 14 ರಿಂದ 16 ಸಸ್ಯಗಳು ಒಂದೊಂದು ಪೋಷಕಾಂಶಗಳನ್ನು ಪ್ರಮುಖವಾಗಿ ಹೊಂದಿದ್ದು, “ಆ ಎಲ್ಲಾ ಪೋಷಕಾಂಶಗಳು ಗೊಬ್ಬರವಾಗಿ ಬದಲಾವಣೆಯಾದರೆ ಮಣ್ಣಿನ ಫಲವತ್ತತೆ ಯಥೇಚ್ಛವಾಗಿ ಹೆಚ್ಚುತ್ತದೆ” ಹಾಗೂ ದೀರ್ಘಕಾಲದವರಿಗೂ ಪೋಷಕಾಂಶಗಳು ಮಣ್ಣಿನಲ್ಲಿ ಉಳಿಯುವುದರಿಂದ, ಬೆಳೆಗಳ ಇಳುವರಿಯು ಸಹ ಸಮೃದ್ಧವಾಗಿರುತ್ತದೆ.
ಸಾಮಾನ್ಯವಾಗಿ ರೈತರು ಹಸಿರೆಲೆ ಗೊಬ್ಬರ ಎಂದರೆ ಯಾವುದಾದರೂ ಒಂದು ರೀತಿಯ ಬೆಳೆಯನ್ನು ಬೆಳೆದು ಅದನ್ನು ಗೊಬ್ಬರವನ್ನಾಗಿ ಪರಿವರ್ತಿಸುತ್ತಾರೆ.
ಆದರೆ ಈ ಪದ್ಧತಿಯಲ್ಲಿ ರೈತರು “ಏಕದಳ, ದ್ವಿದಳ ಮತ್ತು ಎಣ್ಣೆಕಾಳು“ಗಳ ಸಸ್ಯಗಳನ್ನು ಬಳಸಿ, ಹಸಿರೆಲೆ ಗೊಬ್ಬರವನ್ನು ತಯಾರಿಸಲಾಗುತ್ತದೆ.
ಈ ಹಸಿರೆಲೆ ಗೊಬ್ಬರವನ್ನು ಮಾಡುವ ವಿಧಾನ ಹೇಗೆ?
How to prepare green manure?
“ಏಕದಳ ಸಸ್ಯಗಳಾದ ರಾಗಿ, ಜೋಳ ಹಾಗೂ ದ್ವಿದಳ ಸಸ್ಯಗಳಾದ ಕಡಲೆಕಾಳು, ಶೇಂಗಾ, ಬೇಳೆ ಕಾಳುಗಳಂತಹ ಬೆಳೆಗಳು ಮತ್ತು ಎಣ್ಣೆ ಕಾಳುಗಳ ಸಸ್ಯಗಳಾದಂತಹ ಸೂರ್ಯಕಾಂತಿ, ಎಳ್ಳು ಹಾಗೂ ಇತರೆ ಬೆಳೆ”ಗಳನ್ನು “ಒಂದು ಎಕರೆಗೆ 10 ಕೆಜಿ ಎಷ್ಟು ಬೀಜಗಳನ್ನು ಮಿಶ್ರಣ” ಮಾಡಿ ಚೆಲ್ಲಿ ಬೆಳೆಯನ್ನು ಬೆಳೆಸಬಹುದು.
ಈ ರೀತಿಯಾಗಿ ಚೆಲ್ಲಿದ ಬೀಜಗಳು ಚಿಗುರಿ “30 ರಿಂದ 40 ದಿನದ ಒಳಗೆ” ಹೂ ಬಿಡಲು ಆರಂಭಿಸುತ್ತದೆ. ಹೂವು ಬಿಡಲು ಆರಂಭಿಸಿದ ತಕ್ಷಣವೇ ಟ್ಯಾಕ್ಟರ್ ಮೂಲಕ “ಹಸಿರೆಲೆ ಬೆಳೆದಿರುವ ಭೂಮಿಯನ್ನು ಉಳುಮೆ ಮಾಡಿಸಿ“, ಆ ಸಸ್ಯಗಳನ್ನು “ಮಣ್ಣಿನಲ್ಲಿ ಮಿಶ್ರಣವಾಗುವಂತೆ ಮಾಡಬೇಕು”.
* ಈ ರೀತಿಯಾಗಿ ಮಿಶ್ರಣವಾದ ಹಸಿರೆಲೆಯೂ “ಮಣ್ಣಿನಲ್ಲಿ ಬೆರೆತು ಗೊಬ್ಬರವಾಗಲು ಆರಂಭಿಸುತ್ತದೆ“.
ಈ ರೀತಿ 9 ಧಾನ್ಯಗಳನ್ನು ಬೆಳೆಯುವ ಬೆಳೆಗಳನ್ನು ಗೊಬ್ಬರವಾಗಿಸಿದರೆ ಏನು ಉಪಯೋಗ?
What is the benifit from these type of green manure?
ಇಲ್ಲಿ ರೈತರು ಯಾವುದೊ ಒಂದು ರೀತಿಯ ಸಸ್ಯಗಳನ್ನು ಬೆಳೆಯದೆ, 14 ರಿಂದ 16 ರೀತಿಯ ಸಸ್ಯಗಳನ್ನು ಬೆಳೆಯುತ್ತಾರೆ. ಅದರಲ್ಲಿ “ಏಕದಳ ದ್ವಿದಳ ಮತ್ತು ಎಣ್ಣೆ ಕಾಳುಗಳು” ಸೇರಿರುವುದರಿಂದ ಪ್ರತಿಯೊಂದು ರೀತಿಯ ಸಸ್ಯಗಳ “ಬೇರಿನ ರಚನೆಯು ವಿಭಿನ್ನ”ವಾಗಿರುತ್ತದೆ.
* ಏಕದಳಗಳ ಸಸ್ಯದ ಬೇರು ತಂತು ಬೇಕಾಗಿದ್ದರೆ, ದ್ವಿದಳಗಳ ಸಸ್ಯಗಳ ಬೇರು ತಾಯಿ ಬೇರಾಗಿರುತ್ತದೆ.
“ತಂತು ಬೇರುಗಳು ಮಣ್ಣನ್ನು ಸಡಿಲವಾಗಿಸಿದರೆ“, ತಾಯಿಬೇರಿನ ರಚನೆಯು “ಮಣ್ಣಿನ ಆಳದವರೆಗೂ ಹೋಗಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ”.
* ಅಲ್ಲದೆ ವಿಭಿನ್ನ ರೀತಿಯ ಬೇರುಗಳು ಮಣ್ಣನ್ನು “ಸರಾಗವಾಗಿ ಉಸಿರಾಡುವಂತೆ ಮಾಡುತ್ತವೆ“.
ಸಾಮಾನ್ಯವಾಗಿ ಆಯುರ್ವೇದದಲ್ಲಿ ಆರೋಗ್ಯದ ಸಮತೋಲನಕ್ಕೆ ವೈದ್ಯರು “6 ರೀತಿಯ ರಸ“ಗಳನ್ನು ತಮ್ಮ ಆಹಾರದಲ್ಲಿ ಇರುವಂತೆ ನೋಡಿಕೊಳ್ಳಲು ಶಿಫಾರಸ್ಸು ಮಾಡುತ್ತಾರೆ, ಈ ಆರು ರಸಗಳು ಮನುಷ್ಯನ “ಮಾನಸಿಕ ಮತ್ತು ದೈಹಿಕ ಆರೋಗ್ಯ“ವನ್ನು ಸಂರಕ್ಷಿಸುತ್ತದೆ.
* ಅದೇ ರೀತಿಯಾಗಿ ಈ ಒಂಬತ್ತು ಧಾನ್ಯಗಳ ಬೆಳೆಗಳನ್ನು ಹಸಿರೆಲೆ ಗೊಬ್ಬರವನ್ನಾಗಿಸಿದರೆ ಒಂದೊಂದು ಧಾನ್ಯದಲ್ಲಿರುವ ಒಂದೊಂದು ಪೋಷಕಾಂಶ ಮಣ್ಣಿಗೆ ಸೇರಿ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ.
ಮಣ್ಣಿನ ಫಲವತ್ತತೆ ಹೆಚ್ಚಾಗುವುದರಿಂದ, ರೈತರ ಇಳುವರಿಯೂ ಹೆಚ್ಚುತ್ತದೆ ಜೊತೆಗೆ ರಾಸಾಯನಿಕ ಗೊಬ್ಬರಗಳ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸುತ್ತದೆ.
Green manure is one of the best organic mnaure for farmers to “maximize their profit” with small investment.
especially when farmers use monocots, di cots and oilseeds together to prepare manure it gives 5x faster result with less investment.
different root formation can helps to “soil structure better” and improves the “water observing power” of soil, with “increasing fertility of soil”.
This method will be very useful for farmers to minimize their losses due to low fertility of soil and high investment on chemical fertilizers, with minimum cost farmers can prepare healthy and best green manure on own for increase the productivity and profit.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್<span style=”vertical-align: inherit;”> ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು. ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,
ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ. ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply