Saline/ Alkaline Soil :: ಸವಳು ಮಣ್ಣಿನಿಂದ ಇಳುವರಿ ಕುಂಠಿತ!! ಮಣ್ಣನ್ನು ಫಲವತ್ತಾದ ಮಣ್ಣಾಗಿ ಪರಿವರ್ತಿಸಿ!!
ಮಣ್ಣಿನ ಫಲವತ್ತತೆ ಕಡಿಮೆಯಾಗಿದೆಯೇ??:: ಸವಳು ಮಣ್ಣಿನಿಂದ ಇಳುವರಿ ಕುಂಠಿತ, ಹಾಗದರೆ ಸವಳು ಮಣ್ಣನ್ನು ಫಲವತ್ತಾದ ಮಣ್ಣಾಗಿ ಪರಿವರ್ತಿಸಲು ಇಲ್ಲಿದೆ ಮಾಹಿತಿ!!
Fertile Land is a land that is rich in nutrients suitable for agriculture, however sometimes this fertile land converted into marshland due to because of natural disasters and man made disasters.
When excess water accumulates in the soil for long period and propper drainage not available, the land becomes waterlogged this converts fertile land to marsh land which is not suitable for farming.
Crack this solution farmers should follow various methods those are very helpful for farmers.
ರೈತರು ಅಕಾಲಿಕ ಮಳೆ ಅತಿವೃಷ್ಟಿ ಅನಾವೃಷ್ಟಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಈ ಸಮಸ್ಯೆಗಳ ಪಟ್ಟಿಯಲ್ಲಿ ಸವಳು ಭೂಮಿಯ ಸಮಸ್ಯೆ ಕೂಡ ರೈತರನ್ನು ಭಾದಿಸುತ್ತಿದ್ದು, ಮತ್ತಷ್ಟು ಚಿಂತಾ ಜನಕ ಪರಿಸ್ಥಿತಿಗೆ ತಲುಪಲು ಈ ಸವಳು ಭೂಮಿಯ ಸಮಸ್ಯೆ ಕಾರಣವಾಗುತ್ತಿದೆ.
ಸವಳು ಭೂಮಿ ಎಂದರೇನು?
What is Marsha or salty soil?
“ಸವಳು ಭೂಮಿ ಎಂದರೆ ಅತಿಯಾದ ಲವಣಾಂಶ ಮತ್ತು ನೀರಿನ ನಿಲ್ಲುವಿಕೆಯಿಂದ ತನ್ನ ಫಲವತ್ತತೆಯನ್ನು ಕಳೆದುಕೊಂಡಿರುವ ಮಣ್ಣು ಎನ್ನಬಹುದು”. ಇಂತಹ ಭೂಮಿಯಲ್ಲಿ “ಯಾವುದೇ ಬೆಳೆಯನ್ನು ಬೆಳೆಯಲಾಗುವುದಿಲ್ಲ”.
ಭೂಮಿಯ ಫಲವತ್ತತೆ ಕಾಪಾಡುವುದು ರೈತ ರೈತರ ಪ್ರಮುಖ ಕರ್ತವ್ಯವಾಗಿದ್ದು, ಜಮೀನಿನಲ್ಲಿರುವ ಮಣ್ಣಿನ ಬಗ್ಗೆ ತಿಳಿದು ಕೊಳ್ಳುವ ಮುಖ್ಯ ಉದ್ದೇಶ ರೈತರಿಗೆ ಅತ್ಯಗತ್ಯವಾಗಿ ಇರಬೇಕು.
* “ಹೆಚ್ಚು ರಾಸಾಯನಿಕದ ಬಳಕೆ” ಯಿಂದ ಅಥವಾ ನಮ್ಮ ಅಜಾಗರೂಕತೆ ಇಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಸವಳು ಮಣ್ಣಾಗಿ ಬದಲಾದಾಗುತ್ತದೆ, ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ.
• ಕೃಷ್ಣ ನದಿ ದಂಡೆ ಭಾಗದಲ್ಲಿ ಹೆಚ್ಚು ಕಪ್ಪು ಮಣ್ಣು ಕಂಡುಬರುತ್ತದೆ, ಇದಕ್ಕೆ ನೀರನ್ನು ಹೀರಿಕೊಳ್ಳುವ ಅಂಶವಿರುವುದರಿಂದ ಈ “ಕಪ್ಪು ಮಣ್ಣಿನಲ್ಲಿ ಉತ್ತಮ ಬೆಳೆಯನ್ನು ಬೆಳೆಯಬಹುದು”.
* ಅಲ್ಲದೆ “ಹೆಚ್ಚಿನ ನೀರಾವರಿ ಅಥವಾ ಬೋರ್ ನೀರನ್ನು ಹಾಯಿಸುವುದರಿಂದ” ಅಥವಾ ಹಳ್ಳದ ನೀರು ಹಾಯಿಸುವುದರಿಂದ ಕಪ್ಪು ಮಣ್ಣು ತನ್ನ “ಫಲವತ್ತತೆ ಕಡಿಮೆಯಾಗಿಸಿ ಕೊಂಡು ಅದು ಬಿಳಿ ಬಣ್ಣ”ಕ್ಕೆ ತಿರುಗುತ್ತದೆ. ಇದರರ್ಥ ಫಲವತ್ತಾಗಿರುವ ಮಣ್ಣು ಸವಳು ಮಣ್ಣಾಗಿ ಪರಿವರ್ತನೆ ಆಗುತ್ತಿದೆ ಎಂದರ್ಥ,
ಫಲವತ್ತಾದ ಮಣ್ಣು ಸವಳು ಮಣ್ಣಾಗಲು ಕಾರಣವೇನು?
What are the reasons for conversion of fertile land to marsh land?
* ಅತಿಯಾದ “ರಾಸಾಯನಿಕ ಗೊಬ್ಬರಗಳ ಬಳಕೆ”
• “ಹೆಚ್ಚಿನ ನೀರು ನೀರಾವರಿ”
* ”ಅತಿವೃಷ್ಟಿ”
• ”ಸವಳುನೀರಿನ ಬಳಕೆ”
* ಪದೇ ಪದೇ “ಒಂದೇ ರೀತಿಯ ಬೆಳೆಗಳನ್ನು ಬೆಳೆಯುವುದು”.
ಉದಾಹರಣೆಗೆ ಕಬ್ಬು, ಭತ್ತ.
• ಭತ್ತಕ್ಕೆ ಯಥೇಚ್ಛವಾಗಿ ಅಂದರೆ “120 cm ಗಿಂತ ಹೆಚ್ಚು ನೀರನ್ನು ಹಾಯಿಸುವುದರಿಂದಲೂ” ಸವಳು ಅಂಶ ಹೆಚ್ಚಾಗುತ್ತದೆ .
ಫಲವತ್ತಾದ ಭೂಮಿ ಸವಳು ಮಣ್ಣಾಗಿ ಪರಿವರ್ತನೆಗೊಳ್ಳುವುದನ್ನು ತಡೆಗಟ್ಟುವುದು ಹೇಗೆ?
How to control conversion of fertile land to marsh land?
1.“ಬಸಿ ಕಾಲುವೆ”ಗಳನ್ನು ಅಡ್ಡಲಾಗಿ ನಿರ್ಮಿಸುವುದು.
2. “ಸವಳು ಪೈಪು”ಗಳನ್ನು ಅಳವಡಿಸುವುದು.
3. ಇದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು .
4. ಈಗಾಗಲೇ “ನಾಲೆ(ಗಳು ಇದ್ದರೆ ಅದನ್ನು ಪ್ರತಿವರ್ಷ ಶುದ್ದಿ ಪಡಿಸಬೇಕು.
5.ನಾಲೆಗಳು ಭೂಮಿಯಿಂದ ಕನಿಷ್ಠ ಮೂರು ಅಥವಾ ಮೂರುವರೆ ಅಡಿ ಅಷ್ಟು ಆಳವಿರಬೇಕು.
*ಇದರಿಂದ ಸವಳಿನ ಅಂಶ ಕಡಿಮೆ ಮಾಡಬಹುದಾಗಿದೆ.
•“ಮಳೆಗಾಲದಲ್ಲಿ ಹೆಚ್ಚಿನ ಮಳೆ ನೀರನ್ನು ಶೇಖರಿಸಿ ಮರುದಿನ ನೀರನ್ನು ಹೊರಬಿಡುವುದರಿಂದ ಸಹ ಸವಳಿನ ಅಂಶವನ್ನು ಕಡಿಮೆ ಮಾಡಬಹುದು5”.
*30 ದಿನದ ಸಸಿಗಳನ್ನು ನೆಡುವ ಬದಲು 35 ಅಥವಾ 40 ದಿನದ ಸಸಿಗಳನ್ನು ನೆಡುವುದರಿಂದಲೂ ಸಹ ಸವಳನ್ನು ಕಡಿಮೆ ಮಾಡಬಹುದು
• ಕೃಷಿ ಭೂಮಿಯು ಸವಳು ಮಣ್ಣು ಎಂದು ಕಂಡುಬಂದಲ್ಲಿ ಮಾತ್ರವೇ ಅಥವಾ ಕೃಷಿ ಸಂಶೋಧನಾ ಕೇಂದ್ರದಿಂದ ಮಣ್ಣಿನ ಪರೀಕ್ಷೆ ಮಾಡಿಸಿ ಸವಳು ಮಣ್ಣು ಎಂದು ಖಚಿತವಾದಲ್ಲಿ ಮಾತ್ರ ಜಿಪ್ಸಂ /ಕ್ಯಾಲ್ಸಿಯಂ ಸಲ್ಫೇಟ್ ಅನ್ನು ಅಳವಡಿಸಬೇಕಾಗುತ್ತದೆ
* “ಜಿಪ್ಸಂ ಅನ್ನು ಅಳವಡಿಸುವುದರಿಂದ ಸೋಡಿಯಂ” ಅಂಶವನ್ನು ಕಡಿಮೆ ಮಾಡಬಹುದು .
**ಜಿಪ್ಸಂಉಪಯೋಗಿಸುವುದು ಹೇಗೆ ಮತ್ತು ಯಾವಾಗ**
When to use gypsum?
• ಆಗಸ್ಟ್ ತಿಂಗಳಲ್ಲಿ ಕೃಷಿ ಕೆಲಸವನ್ನು ಪ್ರಾರಂಭಿಸುವುದರಿಂದ, “ಜುಲೈ ತಿಂಗಳಿನಲ್ಲಿ ಮಳೆ ಬಂದು ಹಸಿಯಾದಾಗ ಮತ್ತು ಹಸಿ ಇದ್ದಾಗ ಮಾತ್ರವೇ ಜಿಪ್ಸಂ ಅನ್ನು ಹಾಕಬೇಕು”.
* ಹತ್ತಿರದ ಕೃಷಿ ಇಲಾಖೆಯಿಂದ ಮಣ್ಣಿನ ಪರೀಕ್ಷೆ ಮಾಡಿಸಲು ಕೇವಲ “200 ರಿಂದ 300 ರೂಪಾಯಿ” ಮಾತ್ರ. ರೈತರು ತಮ್ಮ ಜಮೀನಿನ ಮಣ್ಣನ್ನು ವಿ ಶೇಪಿನಲ್ಲಿ ಒಂದು ಅಡಿ ಆಳವಾಗಿ ಹಗೆದು ಅರ್ಧ ಕೆಜಿ ಎಷ್ಟು ಮಣ್ಣನ್ನು ಕೃಷಿ ಸಂಶೋಧನಾ ಕೇಂದ್ರದಲ್ಲಿ ಪರೀಕ್ಷೆಗೆ ಕೊಡಬೇಕು.
ಬೋರ್ವೆಲ್ ನೀರನ್ನು ಸಹ ರೈತರು ಸಂಶೋಧನಾ ಕೇಂದ್ರದಲ್ಲಿ ಪರೀಕ್ಷೆಗೆ ಕೊಡಬಹುದು. ಈ ಸಂಶೋಧನಾ ಕೇಂದ್ರವು ಮಣ್ಣಿನ ಗುಣಮಟ್ಟ ಹಾಗೂ ನೀರಿನ ಗುಣಮಟ್ಟವನ್ನು ತಿಳಿದು ರೈತರಿಗೆ “ಪರಿಶೀಲನ ಪ್ರಮಾಣ ಪತ್ರ”ವನ್ನು ನೀಡಿ ಇದರಿಂದ ಮಣ್ಣು ಆರೋಗ್ಯಕರವಾಗಿದೆಯೇ? ಎಂಬುದನ್ನು ರೈತರು ಸುಲಭವಾಗಿ ತಿಳಿದುಕೊಳ್ಳಬಹುದು
ಸವಳು ಮಣ್ಣಿನಿಂದ ರೈತರು ತಮ್ಮ ಬೆಳೆಯನ್ನು ಸಂರಕ್ಷಿಸಿಕೊಳ್ಳಲು ಕೆಲವು ಪರಿಹಾರೋಪದಿಗಳು:-
some measures to protect productivity of their crops from marsh land?
1. ಬಳಸುವ ನೀರನ್ನು ಕಡಿಮೆ ಹಾಯಿಸಬೇಕು.
2. ಒಂದು ಬೆಳೆಯನ್ನು ಸ್ಕಿಪ್ ಮಾಡಬೇಕು, “ಹಸಿರೆಲೆ ಗೊಬ್ಬರ ಹಸಿರೆಲೆ ಡಯಾಂಚ, ಸೆಣಬು ಗೊಬ್ಬರವನ್ನು ಹೂ ಆಡುವ ಹಂತದಲ್ಲಿ ರೋಟವೇಟರಿ ಇಂದ ಮಣ್ಣಲ್ಲಿ ಸೇರಿಸಬೇಕು”. ಇದರಿಂದ “ಭೂಮಿಗೆ ಹಸಿರೆಲೆ ಗೊಬ್ಬರ” ದೊರಕುತ್ತದೆ.
3. ರಸಾಯನ ಗೊಬ್ಬರವನ್ನು ಕಡಿಮೆ ಮಾಡಿ, ಕುರಿ ಗೊಬ್ಬರ ಮತ್ತು ಸಾವಯವಗೊಬ್ಬರ ಅಳವಡಿಸುವುದರಿಂದ ನಾವು ನಮ್ಮ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು .
4. ಹತ್ತಿ ಮತ್ತು ಭತ್ತದ ಬೆಳೆಯ ರಾಶಿ ಅಥವಾ ಕೊಯ್ಲು ಮಾಡಿದ ನಂತರ ಸುಡಬಾರದು ಅದನ್ನು ಹಾಗೆಯೇ ಮಣ್ಣಿನಲ್ಲಿ ಮುಚ್ಚಬೇಕು. ಸುಡುವುದರಿಂದ ಕೊಯ್ಲು ಮಾಡಿದ ಬೆಳೆಯಲ್ಲಿ ಇರುವ ಕ್ಯಾಲ್ಸಿಯಂ ಅಂಶ ನಾಶವಾಗುತ್ತದೆ.
ಮತ್ತು ಮಣ್ಣಿನಲ್ಲಿ ಇರುವಂತಹ ಸೂಕ್ಷ್ಮಾಣು ಜೀವಿಗಳು ನಾಶ ಹೊಂದುತ್ತವೆ, ಇದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ.
ಒಟ್ಟಾರೆಯಾಗಿ ನದಿ ಪಾತ್ರದ ರೈತರಿಗೆ ವಿಶೇಷವಾಗಿ ಕೃಷ್ಣಾ ನದಿ ದಂಡೆಯ ರೈತರಿಗೆ ಈ ಸವಳು ಮಣ್ಣು ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು ರೈತರು ಕಂಗಾಲಾಗುವಂತೆ ಮಾಡುತ್ತಿದೆ. ಇತ್ತೀಚಿನ ವರದಿಯ ಪ್ರಕಾರ ಕರ್ನಾಟಕದಲ್ಲಿ 6500 ಹೆಕ್ಟರ್ ಭೂಮಿ ಸವಳು ಭೂಮಿಯಾಗಿ ಪರಿವರ್ತನೆ ಆಗಿದೆ,
ಇದರಿಂದ ರೈತರು ಸ್ವಂತ ಕೃಷಿ ಭೂಮಿ ಇದ್ದರೂ ಬೆಳೆ ತೆಗೆಯಲಾಗದ ಪರಿಸ್ಥಿತಿಯಲ್ಲಿದ್ದಾರೆ ಹಾಗಾಗಿ ರೈತರು ಸವಳು ಮಣ್ಣನ್ನು ಕಡಿಮೆ ಮಾಡಲು ಮೇಲೆ ತಿಳಿಸಿರುವ ಕ್ರಮಗಳನ್ನು ಅನುಸರಿಸಿದರೆ ಈ ಸವಳು ಭೂಮಿಯನ್ನು ಮತ್ತೆ ಫಲವತ್ತಾದ ಭೂಮಿಯನ್ನಾಗಿಸಿ ಉತ್ತಮ ಲಾಭ ಪಡೆಯಬಹುದು.
Hence, conversion of fertile land to marsh land mainly occurs due to water accumulation, poor drainage system and in improper Land management. This negatively effect production and farmers livelihoods.
Therefore proper irrigation method less use of chemical fertilizers careful Land management aap necessary to protect fertile land uN maintain productivity.
Thank you
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅಡಿಕೆ ರೋಗ , ಅಡಿಕೆಗೆ ಗೊಬ್ಬರ ಸಿಂಪರಣೆ, ಅಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply