"Agriculture is our CULTURE"

Borewell new rules:: ಹೊಸ ಕೊಳವೆಬಾವಿ ಕೊರೆಸುವವರಿಗೆ ಸಕಾ೯ರದಿಂದ ಹೊಸ ರೂಲ್ಸ್! 1 ವಷ೯ ಜೈಲು ಹಾಗೂ 25000 ರೂ ಗಳ ದಂಡ?

ಕೊಳವೆಬಾವಿಗಳನ್ನು ಕೊರೆಯಿಸಿ ಹೇಗೆಂದರೆ ಹಾಗೆ ಬಿಟ್ಟುಬಿಡುತ್ತಿರುವುದು ತುಂಬಾ ದೊಡ್ಡ ಸಮಸ್ಯೆಗಳನ್ನುುಂಟು ಮಾಡುತ್ತಿದ್ದು, ಅನೇಕ ಜೀವಗಳು ಬಲಿಯಾಗಿವೆ. ಇದರಿಂದಾಗಿ ಕೊಳವೆ ಬಾವಿಗಳನ್ನು ಕೊರೆಸುವವರಿಗೆ ಸಕಾ೯ರದಿಂದ ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದ್ದು, ಈ ಎಲ್ಲಾ ರೂಲ್ಸ್ ಗಳನ್ನು ಕೊಳವೆ ಬಾವಿ ತೆಗೆಸುವವರು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಸಕಾ೯ರ ತಿಳಿಸಿದೆ. ಇಲ್ಲವಾದಲ್ಲಿ ಕಠಿಣ ಶಿಕ್ಷೆ ವಿಧಿಸುವುದಾಗಿ ಸಕಾ೯ರ ಎಚ್ಚರಿಸಿದೆ.

ಕೊಳವೆ ಬಾವಿ ತೆಗೆಯುವ ಮುನ್ನದಿಂದ ಮರಳಿ ಮುಚ್ಚಿಸುವವರೆಗೂ ಪಾಲಿಸಬೇಕಾದ ನಿಯಮಗಳು!

* ಕೊಳವೆಬಾವಿ ತೆಗೆಯುವ 15 ದಿನಕ್ಕೂ ಮುಂಚಿತವಾಗಿಯೇ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮಾಹಿತಿ ನೀಡಬೇಕು. ( ಇದು ಮೊದಲಿನಿಂದಲೂ ಇತ್ತು ಅದರ ಕೆಲವರಿಗೆ ಮಾತ್ರ ಅನ್ವಯವಾಗುತ್ತಿತ್ತು ಈಗ ಕರ್ನಾಟಕದ ಎಲ್ಲಾ ಪ್ರದೇಶಗಳಿಗೆ ಇದು ಅನ್ವಯವಾಗುತ್ತಿದೆ)
* ಕೊಳವೆಬಾವಿ ತೆಗೆದ 24 ಗಂಟೆಗಳ ಒಳಗಾಗಿ ಅದನ್ನು ಸಂಪೂರ್ಣವಾಗಿ ಮುಚ್ಚಬೇಕು. ಅಲ್ಲದೆ ಮನ್ನು ಕೊಳವೆಬಾವಿ ಒಳಗೆ ಇಳಿಯದಂತೆ ಅದರಲ್ಲಿ ಕಲ್ಲು ಹಾಕಿ ಮನು ಇಳಿಯದಂತೆ ಸರಿಯಾಗಿ ಮುಚ್ಚಬೇಕು.
* ಕೊಳವೆಬಾವಿಯನ್ನು ಕೊಳವೆ ಬಾವಿಗೆ ಒಂದು ಗೋಣಿ ಚೀಲ ಹಾಕಿ ಪ್ಲಾಸ್ಟಿಕ್ ಕವರ್ ಇಟ್ಟು ಅಥವಾ ಒಂದು ಕಲ್ಲಿಟ್ಟು ಹೇಗೆ ಹೇಗೋ ಮುಚ್ಚುವಂತಿಲ್ಲ. ಅದನ್ನು ಕಬ್ಬಿಣದ ಅತವಾ ಸಿಮಿಂಟಿನ ದೊಡ್ಡ ಬ್ಲಾಕ್ ಮೂಲಕ ಗೊತ್ತಾಗುವಂತೆ ಎತ್ತರಕ್ಕೆ ಸೀಲ್ ಮಾಡಬೇಕು. ಕೊಳವೆ ಬಾವಿಗಳು ಗುಂಡಿ ಬೀಳಬಾರದ ಹಾಗೆ ಮುಚ್ಚಿಸಿ ಸುತ್ತ ನೆಲಮಟ್ಟದಿಂದ ಎರಡು ಅಡಿ ಎತ್ತರದಲ್ಲಿ ಗುಡ್ಡ ನಿರ್ಮಾಣ ಮಾಡಬೇಕು.
*ಕೊಳವೆ ಬಾವಿ ಕೊರೆದಿರುವ ಏಜೆನ್ಸಿ ಯಾವುದು ಮತ್ತು ಜಮೀನು ಮಾಲಿಕರ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ತಿಳಿಸಬೇಕು
*ನಂತರ ಸಂಬಂಧಿಸಿದ ನಗರಸಭೆಯ ಆಯುಕ್ತರು ಅಥವಾ ನಗರ ಸ್ಥಳೀಯ ಸಂಸ್ಥೆಯ ಮುಖ್ಯ ಅಧಿಕಾರಿಯ ಅಡಿಯಲ್ಲಿ ಕೆಲಸ ಮಾಡುವ ಕಿರಿಯ ಇಂಜಿನಿಯರ್ ಗೆ ಮತ್ತು ಗ್ರಾಮ ಪಂಚಾಯತಿ ಅಥವಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜಂಟಿ ಘೋಷಣೆಯನ್ನು ಸಲ್ಲಿಸಬೇಕು
*ನಂತರ ಪ್ರಾಧಿಕಾರದ ಅಧಿಕಾರಿಗಳು ಸರಿಯಾಗಿ ಎಲ್ಲವನ್ನು ಪರಿಶೀಲಿಸಿ ಪ್ರಮಾಣಪತ್ರವನ್ನು ಕೊಡಬೇಕು.
*ಕೊಳವೆ ಬಾವಿ ಕೊರೆಸುವ ಸ್ಥಳದಲ್ಲಿ ಜಮೀನು ಮಾಲಿಕರು ಮತ್ತು ಬಾವಿ ಕೊರೆಯುವ ಕಂಪನಿಯ ವಿಳಾಸದ ಫಲಕವನ್ನು ಹಾಕಬೇಕು.

ಈ ಎಲ್ಲ ರೂಲ್ಸ್ ಫಾಲೋ ಮಾಡಲೇಬೇಕು. ರೂಲ್ಸ್ ಪಾಲಿಸದಿದ್ದಲ್ಲಿ ಜಮೀನು ಮಾಲೀಕರಿಗೆ ಮಾತ್ರವಲ್ಲದೆ ಕೊಳವೆ ಬಾವಿ ತೆಗೆದಿರುವ ಏಜೆನ್ಸಿಯವರು, ಅಧಿಕಾರಿಗಳಿಗೂ ಜೈಲು ಶಿಕ್ಷೆಯಾಗಬಹುದು.

ರೂಲ್ಸ್ ಫಾಲೋ ಮಾಡಿಲ್ಲ ಅಂದ್ರೆ ಶಿಕ್ಷೆ ಹಾಗೂ ದಂಡ!

*ಈ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಜಮೀನು ಮಾಲೀಕರು, ಅಧಿಕಾರಿಗಳು ಹಾಗೂ ಕೊರೆಯುವ ಏಜೆನ್ಸಿಯವರಿಗೆ 1 ವಷ೯ ಜೈಲು ಹಾಗೂ 25000 ರೂ ಗಳ ದಂಡ ವಿಧಿಸಲಾಗುತ್ತದೆ.

ಆದ್ದರಿಂದ ಮುಂದಿನ ದಿನಗಳಲ್ಲಿ ಯಾರೆಲ್ಲಾ ಕೊಳವೆ ಬಾವಿಗಳನ್ನು ತೆಗೆಸಬೇಕು ಎಂದುಕೊಂಡಿದ್ದೀರೋ ದಯವಿಟ್ಟು ಈ ಎಲ್ಲಾ ನಿಯಮಗಳನ್ನು ಫಾಲೋ ಮಾಡಿ ನಿಮಗೂ ತೊಂದರೆ ಆಗದೆ ಬೇರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ.

ಅಂತಜ೯ಲ ಖಾಲಿಯಾಗುತ್ತಿದೆ!

ಇದೆಲ್ಲಾ ಒಂದು ಕಡೆಯಾದರೆ ವರ್ಷದಿಂದ ವರ್ಷಕ್ಕೆ ಭೂಮಿ ಅಂತರಾಳದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ದೊಡ್ಡ ಆತಂಕಕಾರಿ ವಿಷಯವಾಗಿದ್ದು, ನೀರಿನ ಕೊರತೆಯಿಂದ ಹಾಗೂ ಲಭ್ಯವಿರುವ ನೀರಿನ ಸರಿಯಾದ ಬಳಕೆ ಮಾಡಿಕೊಳ್ಳದೆ ಬೋರ್ ವೆಲ್ ಗಳನ್ನು ಕೊರೆಯಿಸಿ ಅಂತರ್ಜಲದಿಂದ ಹೆಚ್ಚು ಹೆಚ್ಚು ನೀರನ್ನು ಹೀರಿಕೊಳ್ಳಲಾಗುತ್ತಿದೆ ಇದರಿಂದ ಅಂತಜ೯ಲದ ನೀರು ಕಡಿಮೆಯಾಗಿ ಪರಿಸರಕ್ಕೆ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕೆ ದೊಡ್ಡ ಕಂಟಕವನ್ನು ತಂದೊಡುತ್ತಿದ್ದೇವೆ.

ಧನ್ಯವಾದಗಳು

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚


"Agriculture is our CULTURE"