Ration card Cancel List :: ಯಾವ ಜಿಲ್ಲೆಯಲ್ಲಿ ಎಷ್ಟು ಬಿಪಿಎಲ್ ಕಾರ್ಡ ರದ್ದು ಮಾಡಲಾಗಿದೆ !!ಜಿಲ್ಲಾ ವಾರು ಪಟ್ಟಿ ಬಿಡುಗಡೆ!!
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಬಗ್ಗೆ ಕೋಲಾಹಲ ಸೃಷ್ಟಿಯಾಗಿದ್ದು, ರಾಜ್ಯ ಸರ್ಕಾರವು ಸುಮಾರು ಸಾವಿರಕ್ಕೂ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲು ಮುಂದಾಗಿದೆ ಎಂದು ಮಾಹಿತಿ ಸಿಕ್ಕಿದೆ.
ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳೇ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಒಂದು ಸಾವಿರ ಕುಟುಂಬಗಳಲ್ಲಿ 850ಕ್ಕೂ ಹೆಚ್ಚು ಕುಟುಂಬಗಳು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು ರಾಜವು ಅಷ್ಟು ತೀರ ಬಡತನವನ್ನು ಹೊಂದಿಲ್ಲ ಆದರೆ ಅನರ್ಹರು ಕೂಡ ಬಿಪಿಎಲ್ ಕಾರ್ಡು ಹೊಂದಿದ್ದಾರೆ.
ಇದರಿಂದಾಗಿ ಸರ್ಕಾರದ ಮೇಲೆ ಆರ್ಥಿಕವಾಗಿ ಹೊರೆ ಬೀಳುತ್ತಿದ್ದು, ಅನರ್ಹರನ್ನು ಗುರುತಿಸಿ ಅಂತಹವರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಹೆಚ್ಚಾಗಿ ಬಿಪಿಎಲ್ ಕಾರ್ಡ್ ಆಧಾರಿತವಾಗಿ ಕೊಡಲಾಗುತ್ತಿತ್ತು.
ರಾಜ್ಯದ 85% ಗಿಂತಲೂ ಹೆಚ್ಚಿನ ಕುಟುಂಬಗಳು ಬಿಪಿಎಲ್ ಕಾರ್ಡ್ ದಾರರಾಗಿರುವುದರಿಂದ ಗ್ಯಾರಂಟಿ ಯೋಜನೆ ಜಾರಿಗೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಅನುದಾನ ವೆಚ್ಚವಾಗುತ್ತಿದೆ.
ಅಲ್ಲದೆ ಅನರ್ಹರು ಈ ಯೋಜನೆಗಳ ಉಪಯೋಗ ಪಡೆದುಕೊಳ್ಳುತ್ತಿರುವುದರಿಂದ ಅಂಥಹವರನ್ನು ಗುರುತಿಸಿ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ.
ಬಿಪಿಎಲ್ ಕಾಡ್೯ ಗೆ ಅನಹ೯ರು ಯಾರು?
ಆದಾಯ ತೆರಿಗೆ ಪಾವತಿಸುವ, ಜಿಎಸ್ಟಿ ಪಾವತಿದಾರರು, ವಾಷಿ೯ಕ ಆದಾಯ, ಪ್ಯಾನ್ ಕಾಡ್೯ ಹೊಂದಿರುವ, ಸಕಾ೯ರಿ ನೌಕರಿಯಲ್ಲಿರುವವರು ಬಿಪಿಎಲ್ ಕಾಡ್೯ ಹೊಂದಲು ಅಹ೯ರಲ್ಲ.
ಆದರೂ ಕೂಡ ಇಂತಹ ಕುಟುಂಬಗಳು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದು ಅಂತವರನ್ನು ಗುರುತಿಸಿ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ ಗಳನ್ನಾಗಿ ಬದಲಾಯಿಸಲಾಗುತ್ತಿದೆ.
ಈವರೆಗೂ ಎಷ್ಟು ಕಾಡ್೯ಗಳು ಎಪಿಎಲ್ ಆಗಿ ಬದಲಾಗಿವೆ?
ವಿಜಯಪುರದಲ್ಲಿ 4359, ಮೈಸೂರಿನಲ್ಲಿ 4221, ಹಾಸನ 3925, ಚಿಕ್ಕಮಗಳೂರಿನಲ್ಲಿ 9441, ಕೋಲಾರ 6500, ಉಡುಪಿಯಲ್ಲಿ 6422, ಬಾಗಲಕೋಟೆಯಲ್ಲಿ 6299, ಮಂಡ್ಯದಲ್ಲಿ 2824, ಶಿವಮೊಗ್ಗದಲ್ಲಿ 2346 ಬಿಪಿಎಲ್ ಕಾಡ್೯ಗಳನ್ನು ಎಪಿಎಲ್ ಕಾರ್ಡುಗಳಾಗಿ ಬದಲಾಯಿಸಲಾಗಿದೆ.
ಬಿಪಿಎಲ್ ಕಾಡ್೯ ರದ್ದಾದರೆ ಆಗುವ ತೊಂದರೆಗಳು!
ಬಿಪಿಎಲ್ ಕಾರ್ಡ್ ಗಳು ರದ್ದಾದರೆ ಆಯುಷ್ಮಾನ್ ಯೋಜನೆಯ ಸವಲತ್ತು ವಿದ್ಯಾರ್ಥಿ ವೇತನ ಹಾಗೂ ಸಿಎಂ ಪರಿಹಾರ ನಿಧಿ ಹೀಗೆ ಮುಂತಾದ ಯೋಜನೆಗಳಿಂದ ಅಂತಹವರನ್ನು ಹೊರಗಿಡಲಾಗುತ್ತದೆ.
ಸರ್ಕಾರದ ಈ ಕ್ರಮವು ಅನರ್ಹರನ್ನು ಹೊರಗಿಡುವುದಾಗಿದ್ದರು ಕೂಡ ಸರ್ಕಾರಕ್ಕೆ ಅದಕ್ಕೆ ಅನುಸರಿಸುತ್ತಿರುವ ಕ್ರಮಗಳಿಂದಾಗಿ ಅರ್ಹ ಕುಟುಂಬಗಳು ಸಹ ಯೋಜನೆಗಳಿಂದ ವಂಚಿತರಾಗಬಹುದು
ಏಕೆಂದರೆ ಇತ್ತೀಚಿಗೆ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಗಳಿಗೆ ಪ್ಯಾನ್ ಕಾರ್ಡ್ಗಳನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಬೇಕು ಎಂಬ ಕಾರಣಕ್ಕೆ ಆದಾಯ ತೆರಿಗೆ ಪಾವತಿ ಮಾಡದಿದ್ದರೂ ಕೂಡ ಎಲ್ಲರೂ ಪ್ಯಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ.
ಹೀಗೆ ಬಡತನದಲ್ಲಿದ್ದರೂ ಕೂಡ ಕೆಲವು ಅಹ೯ತೆಗಳನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದು ಮಾಡಿದಲ್ಲಿ ಜನರಿಗೆ ತೊಂದರೆಯಾಗುತ್ತದೆ.
ವಿರೋಧ ಪಕ್ಷಗಳಿಂದ ತರಾಟೆ!
ಇದು ಸರ್ಕಾರದ ಆರನೇ ಗ್ಯಾರಂಟಿ ಎಂದು ವಿರೋಧ ಪಕ್ಷಗಳು ಸರ್ಕಾರದ ಕ್ರಮದ ವಿರುದ್ಧ ರೊಚ್ಚಿಗೆದ್ದಿದ್ದು, ಸಕಾ೯ರದ ಈ ಕ್ರಮದಿಂದ ರಾಜ್ಯದ 11 ಲಕ್ಷ ಕುಟುಂಬಗಳು
ಬಿಪಿಎಲ್ ಕಾರ್ಡ್ ಕಳೆದುಕೊಳ್ಳುತ್ತವೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅಲ್ಲದೆ ಈಗಾಗಲೇ ಒಂದು ಲಕ್ಷ ಕಾರ್ಡ್ಗಳನ್ನು ಎಪಿಎಲ್ ಕಾರ್ಡ್ಗಳಾಗಿ ಬದಲಾಯಿಸಲಾಗಿದೆ ಎಂದು ಕೂಡ ವಿರೋಧ ಪಕ್ಷಗಳು ಆರೋಪ ಮಾಡುತ್ತಿವೆ.
ಒಟ್ಟಿನಲ್ಲಿ ಸಕಾ೯ರ ಸರಿಯಾದ ಕ್ರಮಗಳನ್ನು ಅನುಸರಿಸಿ ಅನಹ೯ರಿಗೆ ಮಾತ್ರ ಕಾಡ್೯ ರದ್ದು ಮಾಡಿ ಅಹ೯ರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ನಮ್ಮ ಆಶಯ.
ಸರ್ಕಾರವು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಒಂದು ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಯಾರು ಬಿಪಿಎಲ್ ಕಾಡ್೯ ಹೊಂದಿದ್ದಾರೆ ಎಂದು ಲಿಸ್ಟ್ ಕೊಟ್ಟಿದ್ದಾರೆ.
ಈ ಲಿಸ್ಟನ್ನು ಚೆಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದೆ.ಲೇಖನವನ್ನು ಸಂಪೂರ್ಣವಾಗಿ ಓದಿ.
ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡಿಕೊಳ್ಳೋದು ಹೇಗೆ?
*ಲಿಸ್ಟ್ ಪಡೆಯಲು ಮೊದಲು ನೀವು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://ahara.kar.nic.in/Home/EServices
* ನಂತರ ಎಡಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ
*ಅದರಲ್ಲಿ ಇ-ರೇಷನ್ ಕಾಡ್೯ ಎಂಬ ಆಯ್ಕೆ ಇದು ಅದರ ಮೇಲೆ ಕ್ಲಿಕ್ ಮಾಡಿ
* ನಂತರ ಕೊನೆಯಲ್ಲಿ show village list ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ಜಿಲ್ಲೆ,ತಾಲೂಕು, ಗ್ರಾಮ ಪಂಚಾಯತ್ ಹಾಗೂ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
* ಆಗ ನಿಮ್ಮ ಊರಿನಲ್ಲಿ ಯಾರೆಲ್ಲಾ ರೇಷನ್ ಕಾಡ್೯ ಹೊಂದಿದ್ದಾರೋ ಅವರ ಹೆಸರು ಕ
ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ. ಅದರ ಮುಂದೆಯೇ ಬಿಪಿಎಲ್ ಕಾಡ್೯ ಮಾಹಿತಿ ಸಿಗುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚