"Agriculture is our CULTURE"

Documents Check :: ಆಸ್ತಿ ಖರೀದಿಸುವಾಗ ಯಾವ ಯಾವ ದಾಖಲೆಗಳನ್ನು ಪರಿಶೀಲಿಸಬೇಕು?

ಈ ತಪ್ಪುಗಳನ್ನು ಮಾಡಿ ಮೋಸಕ್ಕೆ ಒಳಗಾಗಬೇಡಿ!!

ನೀವು ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ, ಈ ದಾಖಲೆಗಳು ನಿಮ್ಮ ಹತ್ತಿರ ಇದ್ದೇ ಇರಬೇಕು!

Avoid Property Frauds, Must-Check Documents Before You Buy ::
ಆಸ್ತಿಯನ್ನು ಕೊಳ್ಳುವ ಮುನ್ನ ಈ ಕೆಳಕಂಡ 14 ದಾಖಲೆಗಳನ್ನು ಯಾವುದೇ ಕಾರಣಕ್ಕೂ ಮರೆಯದೆ ಪರಿಶೀಲಿಸಿ! ಈ ಕೆಳಗಿನ ದಾಖಲೆಗಳು ಅತ್ಯಂತ ಅವಶ್ಯಕವಾಗಿವೆ:

1. RTC (ಪಹಣಿ)- ಇದು ಜಮೀನಿನ ಮಾಲೀಕತ್ವವನ್ನು ಮತ್ತು ಅದರಲ್ಲಿ ಬೆಳೆಯಲಾದ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ.

2. Akarbandh (ಅಕಾರಬಂಧ) – ಜಮೀನಿನ ವಿಸ್ತೀರ್ಣ ಮತ್ತು ಅದಕ್ಕೆ ಕಟ್ಟಬೇಕಾದ ಕಂದಾಯದ ವಿವರಗಳನ್ನೊಳಗೊಂಡ ದಾಖಲೆ ಇದಾಗಿರುತ್ತದೆ.

3. EC (Encumbrance Certificate – ಋಣಭಾರ ಪ್ರಮಾಣಪತ್ರ) – ಈ ಪ್ರಮಾಣಪತ್ರವು ಆಸ್ತಿಯ ಮೇಲೆ ಯಾವುದೇ ಸಾಲದ ಹೊರೆ ಅಥವಾ ಕಾನೂನಿನ ತೊಡಕುಗಳು ಇಲ್ಲ ಎಂಬುದನ್ನು ಖಚಿತಪಡಿಸುತ್ತದೆ.

4 . MR (Mutation Register – ವಂಶಾವಳಿ/ವರ್ಗಾವಣೆ ದಾಖಲೆ) – ಆಸ್ತಿಯ ಮಾಲೀಕತ್ವವು ಹೇಗೆ ಬದಲಾಯಿತು ಎಂಬುದರ ಸಂಪೂರ್ಣ ಇತಿಹಾಸವನ್ನು ಈ ದಾಖಲೆ ತಿಳಿಸುತ್ತದೆ.

5. Sale Deed (ಕ್ರಯ ಪತ್ರ) – ಆಸ್ತಿಯನ್ನು ಕೊಂಡುಕೊಂಡ ಬಗ್ಗೆ ಇರುವಂತಹ ಅಧಿಕೃತವಾದ ನೋಂದಾಯಿತ ಪತ್ರ ಇದಾಗಿದೆ.

6. Mother Deed (ಮೂಲ ದಾಖಲೆ) – ಆಸ್ತಿಯ ಹಿಂದಿನ ಮಾಲೀಕರ ಎಲ್ಲಾ ವಿವರಗಳನ್ನು ತೋರಿಸುವಂತಹ ಮೂಲ ದಾಖಲೆ ಇದಾಗಿರುತ್ತದೆ.

7. Form 10 (ಫಾರ್ಮ್ 10) – ಭೂ ಸುಧಾರಣಾ ಕಾಯ್ದೆಯ ಅಡಿಯಲ್ಲಿ ಮಂಜೂರಾದಂತಹ ಜಮೀನಿಗೆ ಸಂಬಂಧಪಟ್ಟ ದಾಖಲೆ ಇದಾಗಿದೆ.

8. 11E (Sketch – 11ಇ ನಕ್ಷೆ) – ಜಮೀನನ್ನು ವಿಭಜನೆ ಮಾಡಿದಾಗ ನೀಡಲಾಗುವಂತಹ ನಕ್ಷೆ ಇದಾಗಿದೆ.

9. Survey Sketch (ಸರ್ವೆ ನಕ್ಷೆ)- ಜಮೀನಿನ ಎಲ್ಲೆಗಳನ್ನು ಮತ್ತು ವಿಸ್ತೀರ್ಣವನ್ನು ತೋರಿಸುವಂತಹ ನಕ್ಷೆ ಇದಾಗಿದೆ.

10.Tippani (ಟಿಪ್ಪಣಿ) – ಸರ್ವೆ ಇಲಾಖೆಯಿಂದ ಕೊಡಲಾಗುವ ಭೂಮಿಯ ಅಳತೆಯ ಬಗ್ಗೆಗಿನ ವಿವರವಾದ ವರದಿಯಾಗಿದೆ.

11. Vamshavruksha (ವಂಶವೃಕ್ಷ) – ಮಾಲೀಕರ ಕುಟುಂಬದ ವಂಶಾವಳಿಯ ಬಗ್ಗೆಗಿನ ವಿವರಣೆ ( ತಂದೆ ತಾತಂದಿರು ಗಳಿಸಿದ ಆಸ್ತಿಗಳಿಗೆ ಇದು ಬಹಳ ಮುಖ್ಯ).

12. PTC.VL – ಇದು ಪರಿಶಿಷ್ಟ ಜಾತಿ/ಪಂಗಡಕ್ಕೆ ಸೇರಿದ ಭೂಮಿಯಾಗಿದ್ದಲ್ಲಿ ಅದರ ವರ್ಗಾವಣೆ ನಿಯಮಗಳ ಬಗ್ಗೆ ತಿಳಿಸುವಂತಹ ದಾಖಲೆ.

13. Saguvali Chithi (ಸಾಗುವಳಿ ಚೀಟಿ) – ಸರ್ಕಾರದಿಂದ ಮಂಜೂರಾದ ಜಮೀನಿಗೆ ನೀಡಲಾಗುವ ಸಾಗುವಳಿ ಪತ್ರ ಇದಾಗಿದೆ.

14. Kandaya Rashidi (ಕಂದಾಯ ರಶೀದಿ) – ಆಸ್ತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪಾವತಿಸಿದ ತೆರಿಗೆಯ ರಶೀದಿ ಇದಾಗಿದೆ.

ಯಾವುದೇ ಆಸ್ತಿಯನ್ನು ಕೊಳ್ಳುವ ಮೊದಲು, ಎಲ್ಲಾ ದಾಖಲೆಗಳನ್ನು ಪರಿಣಿತ ವಕೀಲರ ಮೂಲಕ ಪರಿಶೀಲಿಸುವುದು ಬಹಳ ಒಳ್ಳೆಯದು.

ಗಮನಿಸಬೇಕಾದ ಅಂಶಗಳು:

ಜಾತಿ ಪ್ರಮಾಣಪತ್ರ: PTCL ಅಡಿ ಬರುವ ಜಮೀನಿಗೆ ಸರ್ಕಾರದ ಅನುಮತಿ ಕಡ್ಡಾಯ.

ಪರಿವರ್ತನಾ ಪತ್ರ: ಕೃಷಿಯೇತರ ಬಳಕೆಗೆ DC Conversion ಆಗಿದೆಯೇ ಪರಿಶೀಲಿಸಿ.

* ಲೇಔಟ್ ಪ್ಲಾನ್: ಸೈಟ್ BMRDA, BIAPPA, DTCP ಅನುಮೋದನೆ ಇದೆಯೇ ಎಂದು ಪರಿಶೀಲಿಸಿ.

 ಪಹಣಿ ಮತ್ತು ಆಧಾರ್ ಜೋಡಣೆ: ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ, ಹೆಸರು ತಾಳೆ ನೋಡಿ.

* ಬ್ಯಾಂಕ್ ಸಾಲ: ಆಸ್ತಿ ಮೇಲೆ ಸಾಲವಿದ್ದರೆ ಬ್ಯಾಂಕಿನಿಂದ NOC ಪಡೆಯಿರಿ.

ದಾಖಲೆಗಳು ಎಲ್ಲಿ ಸಿಗುತ್ತವೆ?

1. RTC ಮತ್ತು 11E: ನೆಮ್ಮದಿ ಕೇಂದ್ರ/ನಾಡಕಚೇರಿ, ಆನ್‌ಲೈನ್‌ನಲ್ಲಿ ‘ಭೂಮಿ’ ಪೋರ್ಟಲ್‌ನಲ್ಲಿ ಲಭ್ಯ.

2. EC: ಸಬ್ ರಿಜಿಸ್ಟ್ರಾರ್ ಆಫೀಸ್/ ‘ಕಾವೇರಿ 2.0’ ವೆಬ್‌ಸೈಟ್‌ನಲ್ಲಿ ಲಭ್ಯ.

3. ವಂಶವೃಕ್ಷ: ಗ್ರಾಮ ಲೆಕ್ಕಾಧಿಕಾರಿಗಳಿಂದ (VA) ಪಡೆಯಿರಿ.

ಖರೀದಿಸುವ ಮೊದಲು ಪತ್ರಿಕೆಯಲ್ಲಿ “ಸಾರ್ವಜನಿಕ ಪ್ರಕಟಣೆ” ನೀಡಿ, ಆಕ್ಷೇಪಣೆಗಳಿದ್ದರೆ ತಿಳಿಯುತ್ತದೆ.

ಆಸ್ತಿ ಖರೀದಿ ಮುಖ್ಯವಾದದ್ದು, ಆದರೆ ಸೂಕ್ತ ಮುನ್ನೆಚ್ಚರಿಕೆ, ದಾಖಲೆಗಳ ಪರಿಶೀಲನೆ ಅಗತ್ಯ. ದಾಖಲೆಗಳನ್ನು ಪರಿಶೀಲಿಸಿ, ಹೂಡಿಕೆಯು ಕಾನೂನುಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಜಾಗರೂಕತೆಯಿಂದ ನಿಮ್ಮ ಆಸ್ತಿಯನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

Krishna Byregowda Revenue Minister

Buying a property is a big achievement, but checking documents and being careful is key. By looking closely at all legal papers, you make sure your investment is legal and safe. Being watchful now protects your property and gives you peace of mind later.

Thank you.

ಧನ್ಯವಾದಗಳು

<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>

< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.

ಹೊಸ ಅ ಡಿಕೆ, ಹಳೆಯ ಅ ಡಿಕೆ ರಾಶಿ ಇಪ್ಪಿ ​​ಬೆಟ್ಟಿ ಕೆಂಪುಗೋಟು ಚಿಪ್ಪು, ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.

ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ. 

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"