"Agriculture is our CULTURE"

30,000 Loan :: ಕೇಂದ್ರ ಸರ್ಕಾರದಿಂದ 30,000 ಬಡ್ಡಿ ರಹಿತ ಹಣ!!! ಪಿ. ಎಂ ಸ್ವನಿಧಿ ಯೋಜನೆ ಅಡಿಯಲ್ಲಿ!!

 ₹30,000 ವರೆಗೆ ಬಡ್ಡಿರಹಿತ ಹಣ! ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್!!

Interest-Free Credit of ₹30,000 through PM SVANidhi RuPay Card !! 

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪಿಎಂ ಸ್ವನಿಧಿ (PM SVANidhi) ಯೋಜನೆಯ ಕ್ರೆಡಿಟ್ ಕಾರ್ಡ್‌ನ ಕುರಿತಾದ ಸಂಪೂರ್ಣ ವಿವರವಾದ ಮಾಹಿತಿ ಇಲ್ಲಿದೆ:

ಮುಖ್ಯ ಅಂಶಗಳು:

* ಕ್ರೆಡಿಟ್ ಮಿತಿ, ಈ ಯೋಜನೆಯ ಅಡಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸರಿ ಸುಮಾರು ₹30,000 ಗಳ ವರೆಗೆ ಉಚಿತವಾದ ರೂಪೆ (RuPay) ಕ್ರೆಡಿಟ್ ಕಾರ್ಡ್ ಅನ್ನು ವಿತರಿಸಲಾಗುವುದು.

• ಈ ಕ್ರೆಡಿಟ್ ಕಾರ್ಡ್ ಪಡೆಯಲು ಯಾವುದೇ ರೀತಿಯ ಜಾಯಿನಿಂಗ್ ಶುಲ್ಕವಿರುವುದಿಲ್ಲ ಮತ್ತು ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ.

* ಈ ಕ್ರೆಡಿಟ್ ಕಾರ್ಡ್ ಬಳಸಿ ಹಣವನ್ನು ಉಪಯೋಗಿಸಿದ ನಂತರ ಮರುಪಾವತಿ ಮಾಡಲು ಸರಿಸುಮಾರು 20 ದಿನಗಳ ಕಾಲಾವಕಾಶ ನೀಡಲಾಗುತ್ತದೆ, ಈ ಒಂದು ಅವಧಿಯಲ್ಲಿ ಯಾವುದೇ ರೀತಿಯ ಬಡ್ಡಿಯನ್ನು ವಿಧಿಸಲಾಗುವುದಿಲ್ಲ.

ಬಳಕೆಯ ವಿಧಾನ: 
How to use : 

ಈ ಕಾರ್ಡನ್ನು ಫೋನ್-ಪೇ (PhonePe) ಅಥವಾ ಗೂಗಲ್-ಪೇ (Google Pay) ನಂತಹ ಯುಪಿಐ (UPI) ಆಪ್ಲಿಕೇಶನ್‌ಗಳಿಗೆ ಜೋಡಣೆ ಮಾಡಿ ಸ್ಕ್ಯಾನ್ (Scan) ಮಾಡುವ ಮುಖಾಂತರ ಹಣವನ್ನು ಪಾವತಿಸಬಹುದಾಗಿದೆ.

ಅರ್ಹತೆಗಳು ಮತ್ತು ಅಗತ್ಯವಿರುವ ದಾಖಲೆಗಳು:

Eligibility and Documents required :

ಯಾರು ಅರ್ಜಿ ಸಲ್ಲಿಸಬಹುದು?

ಕೇವಲ ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ಪ್ರಮಾಣದ ವ್ಯಾಪಾರ ಮಾಡುವವರು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಆಧಾರ್ ಕಾರ್ಡ್ (ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗಿರಬೇಕು).

* ವಾಸದ ವಿಳಾಸದ ಸಂಪೂರ್ಣ ಮಾಹಿತಿ.

• ಬ್ಯಾಂಕ್ ಪಾಸ್‌ಬುಕ್‌ನ ಜೆರಾಕ್ಸ್ ಪ್ರತಿ.

* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

ಅರ್ಜಿ ಸಲ್ಲಿಸುವ ಕ್ರಮ : 
Procedure to apply :

1. ವೆಬ್‌ಸೈಟ್ ವಿಳಾಸ: ಪಿಎಂ ಸ್ವನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ (pmsvanidhi.mohua.gov.in) ಭೇಟಿ ನೀಡಿ.

2. ವೆಬ್‌ಸೈಟ್‌ನಲ್ಲಿ ‘Apply for Credit Card‘ ಎಂಬ ಆಯ್ಕೆಯನ್ನು ಆರಿಸಿ, ನಿಮ್ಮ ಮೊಬೈಲ್ ಸಂಖ್ಯೆ ಮತ್ತು OTP ಅನ್ನು ನಮೂದಿಸುವುದರ ಮೂಲಕ ಲಾಗಿನ್ ಆಗಬೇಕು.

Click Here For Credit Card

ಸ್ವನಿಧಿ (PM SVANidhi) ಮುಖಪುಟ,Apply for Credit Card

3. ಅರ್ಜಿದಾರರ ವರ್ಗವನ್ನು ಪರಿಶೀಲನೆ ಮಾಡುವುದು, ಅರ್ಜಿಯನ್ನು ಭರ್ತಿ ಮಾಡುವುದು ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡುವಂತಹ ನಾಲ್ಕು ಹಂತಗಳಿವೆ.

PM SVAnidhi

Application steps 

4. ಕೊನೆಯಗೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಒಂದು ಸ್ವೀಕೃತಿ ಪತ್ರ (Acknowledgement) ದೊರೆಯುತ್ತದೆ, ಅದನ್ನು ತೆಗೆದುಕೊಂಡು ನಿಮ್ಮ ಬ್ಯಾಂಕಿಗೆ ಹೋಗಿ ಸಲ್ಲಿಸಬೇಕು. ಈ ಪ್ರಕ್ರಿಯೆ ಮುಗಿದ ನಂತರವೇ ನಿಮಗೆ ಕ್ರೆಡಿಟ್ ಕಾರ್ಡನ್ನು ವಿತರಿಸಲಾಗುತ್ತದೆ.

ಬಂಡವಾಳದ ಸಹಾಯದಿಂದ ಬೀದಿ ವ್ಯಾಪಾರಿಗಳು ತಮ್ಮ ದಿನದ ವ್ಯಾಪಾರಕ್ಕೆ ಬೇಕಾದ ಸ್ವಲ್ಪ ಹಣಕ್ಕಾಗಿ ಬೇರೆಯವರ ಹಂಗು ಇಟ್ಟುಕೊಳ್ಳಬೇಕಿಲ್ಲ. ಈ ಯೋಜನೆಯಲ್ಲಿ ಸಿಗುವ ₹30,000ದ ವರೆಗಿನ ಕ್ರೆಡಿಟ್ ಮೊತ್ತ ಹೊಸ ವಸ್ತುಗಳನ್ನು ಕೊಳ್ಳಲು ಸಹಾಯ ಮಾಡುತ್ತದೆ.

ಈ ಕಾರ್ಡ್ ಬಳಸಿ ತೆಗೆದ ಹಣವನ್ನು 20 ದಿನಗಳಲ್ಲಿ ಮರುಪಾವತಿ ಮಾಡಿದರೆ ಬಡ್ಡಿ ಕಟ್ಟಬೇಕಾಗಿಲ್ಲ. ಇದು ಸಣ್ಣ ವ್ಯಾಪಾರ ಮಾಡುವವರಿಗೆ ಸಾಲದ ಚಿಂತೆ ಇಲ್ಲದೆ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ. 

ಈ ರೂಪೆ (RuPay) ಕ್ರೆಡಿಟ್ ಕಾರ್ಡನ್ನು ಗೂಗಲ್-ಪೇ ಅಥವಾ ಫೋನ್-ಪೇ ರೀತಿಯ UPI ಆಪ್‌ಗಳಿಗೆ ಸೇರಿಸಬಹುದು. ಇದರಿಂದ ವ್ಯಾಪಾರಿಗಳು ಸ್ಕ್ಯಾನ್ ಮಾಡಿ ಹಣವನ್ನು ಸುಲಭವಾಗಿ ಪಡೆಯಬಹುದು.

ಇದು ಡಿಜಿಟಲ್ ಪೇಮೆಂಟ್ ಮಾಡುವ ಹೊಸ ಪದ್ಧತಿಯಾಗಿದೆ. ಈ ಕಾರ್ಡ್ ಪಡೆಯಲು ಯಾವುದೇ ಜಾಯಿನಿಂಗ್ ಫೀಸ್ ಇರುವುದಿಲ್ಲ. ಇದು ಲೈಫ್ ಟೈಮ್ ಫ್ರೀ ಆಗಿರುತ್ತದೆ. ಹಾಗೆಯೇ, ಯಾವುದೇ ಖಾತರಿ (Collateral) ಇಲ್ಲದೆ ಈ ಸೌಲಭ್ಯ ಸಿಗುವುದರಿಂದ ಸಣ್ಣ ವ್ಯಾಪಾರಿಗಳಿಗೆ ಇದು ತುಂಬಾ ಅನುಕೂಲಕರವಾಗಿದೆ.

As street vendors can get financial help,they don’t have to depend on others for the small daily funds they need for their businesses.

The program provides a credit limit of up to ₹30,000, helping vendors purchase new business supplies. If the money used through this card is repaid within 20 days, no interest is charged. 

This lets small business owners operate without the stress of debt. This RuPay Credit Card can be linked to UPI apps like Google Pay or PhonePe.

This makes it simple for vendors to receive or send payments by scanning QR codes, promoting a modern digital payment system. There are no charges to get this card, and it remains free.

Since this service is offered without needing any collateral (guarantee), it’s very useful and simple for small street vendors to use.

ಧನ್ಯವಾದಗಳು
Thank You

1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V K

ಪರಿಸರ ಪರಿಸದೊಂದಿಗೆ ಆರ್ಥಿಕತೆ


"Agriculture is our CULTURE"