PM KISAN::ಕಿಸಾನ್ ಸಮ್ಮಾನ್ ನಿಧಿಯ 17 ನೇ ಕಂತಿನ ಹಣ ಯಾವಾಗ ಬರುತ್ತೆ! ಇನ್ನೂ 16 ಕಂತಿನ ಹಣ ಬರದೇ ಇರುವವರು ಏನು ಮಾಡಬೇಕು!
2019 ರಲ್ಲಿ ಪ್ರಾರಂಭವಾಗಿರುವ ಪಿಎಂ ಕಿಸಾನ್ (PM kisan samman nidhi) ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ 6,000ಗಳ ಆರ್ಥಿಕ ಸಹಾಯವನ್ನು ಕೇಂದ್ರ ಸರ್ಕಾರವು ನೀಡುತ್ತಿದ್ದು,
ಇದರಿಂದ ರೈತರಿಗೆ ಸಾಕಷ್ಟು ಸಹಾಯವಾಗುತ್ತಿದೆ. ರಾಷ್ಟ್ರಾದ್ಯಂತ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಂತೆ 3 ಕಂತುಗಳಲ್ಲಿ ವರ್ಷಕ್ಕೆ ಒಟ್ಟು 6,000ಗಳನ್ನು ಪಡೆಯುತ್ತಾರೆ.
ಈ ಹಣದಲ್ಲಿ ರೈತರು ಕೃಷಿಗೆ ಸಂಬಂಧಿಸಿದ ಅಥವಾ ಕೃಷಿಯೇತರ ಚಟುವಟಿಕೆಗಳಿಗೆ ಈ ಹಣವನ್ನು ಬಳಸಿ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸ್ವಲ್ಪಮಟ್ಟಿಗೆ ಇದು ಸಹಾಯ ಮಾಡುತ್ತಿದೆ.
17 ನೇ ಕಂತಿನ ಹಣ ಯಾವಾಗ ಬರುತ್ತೆ!
ಈಗಾಗಲೇ ರೈತರಿಗೆ 16 ಕಂತುಗಳ ಕಿಸಾನ್ ಸಮ್ಮಾನ್ ನಿಧಿ (PM kisan samman nidhi)ಹಣವು ದೊರೆತಿದ್ದು, ಇದೀಗ 17ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ರೈತರು ಕಾಯುತ್ತಿದ್ದಾರೆ.
ಕಳೆದ ಫೆಬ್ರವರಿಯಲ್ಲಿ 16ನೇ ಕಂತಿನ ಹಣ ಬಂದಿದ್ದು ಮುಂದಿನ ಜೂನ್ ತಿಂಗಳಲ್ಲಿ 17ನೇ ಕಂತಿನ ಹಣ ಬರಬೇಕಿತ್ತು.
ಆದರೆ ಲೋಕಸಭಾ ಚುನಾವಣೆಗಳು ದೇಶಾದ್ಯಂತ ನಡೆಯುತ್ತಿದ್ದು ಈ ಸಂದರ್ಭದಲ್ಲಿ ರೈತರಿಗೆ 17ನೇ ಕಂತಿನ ಬರುವುದು ಸಂದೇಹವಾಗಿದ್ದು, ಹೀಗಾಗಿ 17ನೇ ಕಂತಿನ ಹಣ ಬರುವುದು ಸ್ವಲ್ಪ ತಡವಾಗಬಹುದು ಎನ್ನಲಾಗುತ್ತಿದೆ.
16 ಕಂತಿನ ಹಣ ಬಂದಿಲ್ಲವೇ? ಹೀಗೆ ಮಾಡಿ ಖಂಡಿತ ಹಣ ಬರುತ್ತೆ!
ಫೆಬ್ರುವರಿ 28 2024 ರಂದು 16ನೇ ಕಂತಿನ ಹಣ ಜಮೆಯಾಗಿದ್ದು, ಒಟ್ಟು 9 ಕೋಟಿ ರೈತರಿಗೆ ಸುಮಾರು 81000 ಕೋಟಿ ರೂಪಾಯಿಗಳು ಜಮೆಯಾಗಿವೆ ಎನ್ನಲಾಗಿದೆ.
ಆದರೆ ಇನ್ನು ಕೆಲವು ರೈತರಿಗೆ ಈ ಹಣ ತಲುಪಿಲ್ಲ. ಇದಕ್ಕೆ ರೈತರು ಇ-ಕೆವೈಸಿ ಮಾಡಿಸದಿರುವುದು ಮುಖ್ಯ ಕಾರಣವಾಗಿರಬಹುದು ಆದ್ದರಿಂದ ರೈತರು ಕೂಡಲೇ ಇ-ಕೆವೈಸಿ ಮಾಡಿಸಿ.
ಇದರಿಂದ ಹಿಂದಿನ ಕಂತಿನ ಹಲವು ಬರುತ್ತದೆ ಹಾಗೂ ಮುಂದಿನ ಕಂತುಗಳ ಹಣವು ಸರಿಯಾಗಿ ನಿಮ್ಮ ಖಾತೆಗೆ ಸರಿಯಾದ ಸಮಯದಲ್ಲಿ ಬರುತ್ತದೆ.
ಅಜಿ೯ಯ ಸಮಸ್ಯೆಗೆ ಪರಿಹಾರ ಬೇಕಾದಲ್ಲಿ ಸಂಪಕಿ೯ಸಿ!
PM kisan samman nidhi ಅಜಿ೯ಯಲ್ಲಿ ಅಥವಾ ನಿಮ್ಮ ದಾಖಲೆಗಳಲ್ಲಿ ಏನಾದರೂ ಬದಲಾವಣೆ ಮಾಡಿದ್ದಲ್ಲಿ ನಿಮ್ಮ ವಿವರಗಳು ತಪ್ಪಾಗಿದ್ದರೆ ಅಥವಾ
ಹೆಚ್ಚಿನ ಮಾಹಿತಿ ಅಥವಾ ಸಹಾಯ ಬೇಕಾಗಿದ್ದಲ್ಲಿ ನೀವು ಪಿಎಂ ಕಿಸಾನ್ ಯೋಜನಾ ಸಹಾಯವಾಣಿ ಸಂಖ್ಯೆ- 155261 ಅಥವಾ ಟೋಲ್-ಫ್ರೀ ಸಂಖ್ಯೆ- 1800115526 ಗೆ ಕರೆ ಮಾಡಬಹುದಾಗಿದೆ. ಅಥವಾ 011-23381092 ಸಂಖ್ಯೆಗೆ ಕಾಲ್ ಮಾಡಬಹುದು.
ಅಥವಾ ನೀವು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಇಮೇಲ್ ಐಡಿ- pmkisan-ict@gov.in ಗೆ ನಿಮ್ಮ ಸಮಸ್ಯೆಯ ಬಗ್ಗೆ ತಿಳಿಸಿ ಮೇಲ್ ಮಾಡಬಹುದು.
ನಿಮಗೆ ಕಿಸಾನ್ ಸಮ್ಮಾನ್ ಹಣ (PM kisan samman nidhi) ಬಂದಿರುವ ಬಗ್ಗೆ ತಿಳಿಯುವುದು ಹೇಗೆ?
ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ನಂತರ ಓಪನ್ ಆಗುವ ವೆಬ್ಸೈಟ್ ನಲ್ಲಿ ರೈತರ ಕಾರ್ನರ್ ಎಂದು ಇದ್ದು, ಅದರ ಮೇಲೆ ಕ್ಲಿಕ್ ಮಾಡಿ
*ನಂತರ ‘ನಿಮ್ಮ ಸ್ಥಿತಿಯನ್ನು ತಿಳಿಯಿರಿ’ ಮೇಲೆ ಕ್ಲಿಕ್ ಮಾಡಿ.
*ಅಲ್ಲಿ ನಿಮ್ಮ ಅರ್ಜಿ ಸಂಖ್ಯೆ ಹಾಕಿ ಕೊಟ್ಟಿರುವ ಕ್ಯಾಪ್ಚಾ ಎಂಟರ್ ಮಾಡಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ
*ಆಗ ನಿಮ್ಮ ಅಜಿ೯ಯ ಸ್ಥಿತಿ ಹಾಗೂ ನಿಮಗೆ ಬಂದಿರುವ ಕಂತುಗಳ ಹಣದ ಸ್ಥಿತಿ ನಿಮಗೆ ಗೊತ್ತಾಗುತ್ತದೆ.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ