"Agriculture is our CULTURE"

PM kisan reject list:: 19 ನೇ ಕಿಸಾನ್ ಸಮ್ಮಾನ್ ಹಣ?ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಹಣ ಬರಲ್ಲ! 

ದೇಶದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM kisan samman nidhi) ಅಡಿಯಲ್ಲಿ ರೈತರಿಗೆ ವಾರ್ಷಿಕವಾಗಿ 6,000ಗಳನ್ನು ಮೂರು ಕಂತುಗಳಲ್ಲಿ ನೇರವಾಗಿ

ರೈತರ ಖಾತೆಗೆ ಜಮೆಗೊಳಿಸುವ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಆರ್ಥಿಕವಾಗಿ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. 

 ಈಗಾಗಲೇ 17 ಕಂತುಗಳಲ್ಲಿ ರೈತರಿಗೆ ಪಿ ಎಮ್ ಕಿಸಾನ್ ಯೋಜನೆ ಅಡಿಯಲ್ಲಿ ಹಣ ದೊರಕಿದ್ದು, ಅಕ್ಟೋಬರ್ 5 ರಂದು 18ನೇ ಕಂತಿನ ಹಣವು ಕೂಡ ಬಿಡುಗಡೆಯಾಗಿದೆ

ಆದರೆ ಅದೆಷ್ಟೋ ರೈತರಿಗೆ 18ನೇ ಕಂತಿನ ಹಣ ಇನ್ನು ಜಮೆಯಾಗಿಲ್ಲ ಅಂತಹ ರೈತರ ಗೊಂದಲದಲ್ಲಿದ್ದು ಯಾಕೆ ಹಣ ಬಂದಿಲ್ಲ ಎಂಬ ಬಗ್ಗೆ ಚಿಂತಿಸುತ್ತಿದ್ದಾರೆ ಆದ್ದರಿಂದ

ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. 

 ಯಾವ ರೈತರಿಗೆ 18ನೇ ಕಂತಿನ ಹಣ ಇನ್ನು ಜಮೆಯಾಗಿಲ್ಲವೋ ಅಂತಹ ರೈತರು ಈ ಲೇಖನವನ್ನು ಸಂಪೂರ್ಣವಾಗಿ

ಓದಿ ಇದರಲ್ಲಿ ತಿಳಿಸಿದ ಮಾಹಿತಿಯಂತೆ ನೀವು ಕೂಡ ನಿಮ್ಮ ಖಾತೆಗೆ ಹಣ ಏಕೆ ಬಂದಿಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಿ. 

 ಈ ಲೇಖನದಲ್ಲಿ 18ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM kisan samman nidhi)ಯಡಿಯಲ್ಲಿ ಒಂದಿಷ್ಟು ರೈತರ ಅಜಿ೯ಗಳನ್ನು ರಿಜೆಕ್ಟ್ ಮಾಡಲಾಗಿದ್ದು,

ಅಂತಹ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಇದಕ್ಕೆ ಮುಖ್ಯ ಕಾರಣ ರೈತರುಇ ಕೆವೈಸಿ ಮಾಡಿಸದಿರುವುದು. 

ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಹಣ ಬರಲ್ಲ! 

ಆದ್ದರಿಂದ ಯಾರೆಲ್ಲಾ ರೈತರಿಗೆ ಇನ್ನೂ ಕೂಡ ಹಣ ಜಮೆಯಾಗಿಲ್ಲವೋ ಅಂತಹ ರೈತರು ಈ ಕೂಡಲೇ ಈ ಕೆಳಗಿನ ಸ್ಟೆಪ್ ಗಳನ್ನು ಫಾಲೋ ಮಾಡಿ ರಿಜೆಕ್ಟ್ ಲಿಸ್ಟ್ ನಲ್ಲಿ

ನಿಮ್ಮ ಹೆಸರು ಇದೆಯೇ ಎಂಬ ಬಗ್ಗೆ ಪರಿಶೀಲಿಸಿ. ಅದರಲ್ಲಿ ಹೆಸರು ಇದ್ದರೆ ನಿಮಗೆ 18 ನೇ ಕಂತಿನ ಹಣ ಬರುವುದಿಲ್ಲ. ಆದರೆ ನೀವು ಕೂಡಲೇ ಇ ಕೆವೈಸಿ (E KYC) ಮಾಡಿಸಿದರೆ

18ನೇ ಕಂತಿನ ಹಣವಿಲ್ಲದಿದ್ದರೂ ಕೂಡ ಮುಂದಿನ ಕಂತಿನ ಹಣವಾದರೂ ಬರುತ್ತದೆ. ಇಲ್ಲವಾದಲ್ಲಿ ಮುಂದೆಯೂ ಕೂಡ ನಿಮಗೆ ಹಣ ಬರುವುದಿಲ್ಲ. 

ರಿಜೆಕ್ಟ್ ಲಿಸ್ಟ್ (reject list) ಪರಿಶೀಲಿಸುವುದು ಹೇಗೆ? 

 ನಿಮ್ಮ ಅರ್ಜಿಯನ್ನು ಸಿಎಸ್‌ಸಿ ಸೆಂಟರ್ಗಳ ಮೂಲಕ ಪರಿಶೀಲಿಸಬಹುದಾಗಿದ್ದು, ಪಿಎಂ ಕಿಸಾನ್ ವೆಬ್ಸೈಟ್ ಮೂಲಕ ಸಿ ಎಸ್ ಸಿ ಲಾಗಿನ್ ಮಾಡಿಕೊಳ್ಳಿ

*ನಂತರದಲ್ಲಿ ಓಪನ್ ಆಗುವ ಪೇಜ್ ನಲ್ಲಿ ರಿಪೋರ್ಟ್ ಎಂಬ ಆಯ್ಕೆ ಇದ್ದು, ಅದರ ಮೇಲೆ ಕ್ಲಿಕ್ ಮಾಡಿದ ನಂತರ 3 ನೇ ಆಯ್ಕೆ ಇಕೆವೈಸಿ ಪೆಂಡಿಂಗ್ ರಿಪೋರ್ಟ ಮೇಲೆ ಕ್ಲಿಕ್ ಮಾಡಿ

*ನಿಮ್ಮ ರಾಜ್ಯ ಮತ್ತು ಜಿಲ್ಲೆ ಈಗಾಗಲೇ ಆಟೋಮ್ಯಾಟಿಕ್ ಆಗಿ ಸೆಲೆಕ್ಟ್ ಆಗಿರುತ್ತದೆ. ರೂರಲ್ ಅಥವಾ ಅಬ೯ನ್ ಅಂತಾ ಸೆಲೆಕ್ಟ್ ಮಾಡಿ

*ಸಬ್ ಡಿಸ್ಟ್ರಿಕ್ಟ್, ಬ್ಲಾಕ್ ಮತ್ತು ವಿಲೇಜ್ ಸೆಲೆಕ್ಟ್ ಮಾಡಿ ನಂತರ ಗೆಟ್ ಡಾಟಾ ಆಯ್ಕೆ ಮೇಲೆ ಕ್ಲಿಕ್ ಮಾಡಿ

*ಆಗ ನಿಮಗೆ ನಿಮ್ಮ ಹಳ್ಳಿಯಲ್ಲಿ ಯಾರೆಲ್ಲಾ ರೈತರ ಇಕೆವೈಸಿ ಆಗಿಲ್ಲವೋ ಆ ಲಿಸ್ಟ್ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ನೋಡಿ.

ಅಲ್ಲಿ ಹೆಸರಿದ್ದರೆ ನಿಮ್ಮ ಕೆವೈಸಿ ಆಗದಿರುವ ಕಾರಣ ನಿಮಗೆ 18 ನೇ ಕಂತಿನ ಹಣ ಬರುವುದಿಲ್ಲ. 

* ಆ ಲಿಸ್ಟ್ ನಲ್ಲಿ ಹೆಸರಿದ್ದರೆ ಕೂಡಲೇ ನೀವು ವೆಬ್ಸೈಟ್ ಮೂಲಕ ನೀವೇ ಅಥವಾ ಸಿಎಸ್ ಸಿ ಕೇಂದ್ರದಲ್ಲಿ ಬಯೋಮೆಟ್ರಿಕ್ ಮೂಲಕ ಇಕೆವೈಸಿ ಮಾಡಿಸಿಕೊಳ್ಳಿ

< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >

1) ಫೇಸ್ಬುಕ್ / Facebook – ಜೈನ್ ಆಗಿ/ join facebook

2)ವಾಟ್ಸಾಪ್ ಗ್ರೂಪ್ /Whatsapp ಗುಂಪು ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ

3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್

ರೈತರ ಸೇವೆಯಲ್ಲಿ ನಿಮ್ಮ vkgrowmore.com 💚

  V.K

ಪರಿಸರ ಪರಿಸರದೊಂದಿಗೆ ಆರ್ಥಿಕತೆ


"Agriculture is our CULTURE"