PM Kisan 12000 Rs :: ಇನ್ಮುಂದೆ ಪಿ.ಎಂ ಕಿಸಾನ್ ರೈತರಿಗೆ ಸಿಗಲಿದೆ 12000 ರೂ!! ರೈತರಿಗೆ ಹೊಸ ವಷ೯ಕ್ಕೆ ಭಜ೯ರಿ ಗಿಫ್ಟ್ ಕೊಟ್ಟ ಕೇಂದ್ರ ಸಕಾ೯ರ!
ಪಿ ಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM kisan samman nidhi yojane) ಅಡಿಯಲ್ಲಿ ರೈತರಿಗೆ ನೀಡಲಾಗುತ್ತಿರುವ 6000/- ಗಳ ಪ್ರೋತ್ಸಾಹ ಧನವನ್ನು 12,000/- ಗಳಿಗೆ ಹೆಚ್ಚಿಸಲು ಕೇಂದ್ರ ಸಕಾ೯ರದ ಮುಂದೆ ಪ್ರಸ್ತಾಪಿಸಲಾಗಿದೆ. ಇದು ರೈತರಿಗೂ ಸಂತಸ ತಂದಿದ್ದು, ಮುಂದಿನ ಬಜೆಟ್ ನಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪಿಎಂ ಕಿಸಾನ್(PM kisan) ಪ್ರೋತ್ಸಾಹಧನ 12000/- ಕ್ಕೆ ಏರಿಕೆ!
ಹೌದು, ಇತ್ತೀಚೆಗೆ 2025-26 ನೇ ಸಾಲಿನ ಬಜೆಟ್ ತಯಾರಿಸಲು ಬಜೆಟ್ ಪೂವ೯ ಸಭೆಯನ್ನು ಕೇಂದ್ರ ಹಣಕಾಸು ಸಚಿವೆ ನಿಮ೯ಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು,ಅದರಲ್ಲಿ ಭಾಗವಹಿಸಿರುವ ರೈತ ಸಂಘದವರು ಕಿಸಾನ್ ಸಮ್ಮಾನ್ ಯೋಜನೆಯ ಪ್ರೋತ್ಸಾಹ ಧನದ ಮೊತ್ತವನ್ನು 12000/- ಕ್ಕೆ ಹೆಚ್ಚಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
6000/- ಗಳ ಪ್ರೋತ್ಸಾಹ ಧನ ರೈತರಿಗೆ ಅನುಕೂಲವಾಗಿದ್ದರೂ ಕೂಡ ಎಲ್ಲಾ ಮೂಲಭೂತ ಅವಶ್ಯಕ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ ಆದ್ದರಿಂದ ಪ್ರೋತ್ಸಾಹ ಧನವನ್ನು 12000/- ಹೆಚ್ಚಿಸಿದರೆ ರೈತರಿಗೆ ಇನ್ನು ಸ್ವಲ್ಪ ಮಟ್ಟಿಗೆ ಸಹಕಾರಿಯಾಗುವುದು ಎಂದು ರೈತ ಸಂಘ ತಿಳಿಸಿದೆ.
ಸಾಲದ ಬಡ್ಡಿದರ ಇಳಿಕೆ ಹಾಗೂ ಶೂನ್ಯ ಪ್ರಿಮಿಯಂ ವಿಮೆಗೆ ಮನವಿ!
ಇದರೊಂದಿಗೆ ರೈತರಿಗೆ ನೀಡಲಾಗುವ ದೀರ್ಘಾವಧಿ ಸಾಲದ ಮೇಲಿನ ಬಡ್ಡಿದರವನ್ನು 1% ಕ್ಕೆ ಇಳಿಸುವಂತೆ ಮನವಿ ಸಲ್ಲಿಸಿದ್ದಾರೆ. ಹಾಗೂ ಅತಿ ಸಣ್ಣ ಹಾಗೂ ಸಣ್ಣ ರೈತರಿಗೆ ಶೂನ್ಯ ಪ್ರಿಮಿಯಂ ವಿಮೆ ಜಾರಿಗೊಳಿಸಿ ಫಸಲ್ ಭಿಮಾ ಯೋಜನೆ(Fasal Bima Yojane) ಯಡಿ ಬೆಳೆ ನಷ್ಟವಾದಾಗ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.
ಈಗಾಗಲೇ 2025-26 ಬಜೆಟ್ ಗೆ ಪೂವ೯ ಸಿದ್ದತೆಗಳು ಪ್ರಾರಂಭವಾಗಿದ್ದು, ರೈತರಿಗೆ ಅನುಕೂಲವಾಗುವಂತೆ ಕೆಲವು ಬೇಡಿಕೆಗಳನ್ನು ರೈತಸಂಘ ಸಲ್ಲಿಸಿದೆ. ಈ ಬಗ್ಗೆ ಕೇಂದ್ರ ಸಕಾ೯ರ ಏನು ಕ್ರಮ ಕೈಗೊಳ್ಳುತ್ತದೆ ಹಾಗೂ ಬಜೆಟ್ ನಲ್ಲಿ ರೈತರ ಬೇಡಿಕೆಯನ್ನು ಈಡೇರಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
Pm kisan 19 ನೇ ಕಂತಿನ ಹಣ ಯಾವಾಗ ಬರುತ್ತೆ?
ಈಗಾಗಲೇ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ( PM kisan samman nidhi yojane) ಯಡಿಯಲ್ಲಿ 18 ಕಂತುಗಳು ಜಮೆಯಾಗಿದ್ದು, 19 ನೇ ಕಂತಿನ ಹಣ ಪಡೆಯಲು ಅಹ೯ ರೈತರ ಲಿಸ್ಟ್ ನ್ನು ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅಹ೯ ರೈತರಿಗೆ ಫೆಬ್ರುವರಿ 2025 ರ ತಿಂಗಳಲ್ಲಿ, 19 ನೇ ಕಂತಿನ ಹಣ ಜಮೆಯಾಗಲಿದೆ
ಕಿಸಾನ್ ಸಮ್ಮಾನ್ ಹಣ (PM kisan samman nidhi) ಗೆ ಅಹ೯ರಾದ ರೈತರ ಲಿಸ್ಟ್ ಪಡೆಯುವುದು ಹೇಗೆ?
step 1:ಅದಕ್ಕಾಗಿ ನೀವು ಮೊದಲು ಈ ಕೆಳಗಿನ ಲಿಂಕ್(link) ಮೇಲೆ ಕ್ಲಿಕ್ ಮಾಡಿ
https://pmkisan.gov.in/Rpt_BeneficiaryStatus_pub.aspx
step 2: ಆಗ ಓಪನ್ ಆಗುವ ಪೇಜ್ ನಲ್ಲಿ ನಿಮ್ಮ ರಾಜ್ಯ(state) , ಜಿಲ್ಲೆ(district), ತಾಲ್ಲೂಕು(taluk),ಹೋಬಳಿ(Hobli) ಹಾಗೂ ಗ್ರಾಮ(village) ವನ್ನು ಎಂಟರ್ ಮಾಡಿ ಗೆಟ್ ರಿಪೋರ್ಟ್ (Get report) ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದಲ್ಲಿ ಯೋಜನೆಗೆ ಅಹ೯ರಾದ ಎಲ್ಲಾ ರೈತರ ಲಿಸ್ಟ್ ತೋರಿಸುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಹುಡುಕಬಹುದು.
ಧನ್ಯವಾದಗಳು
< ದಿನನಿತ್ಯ ಕೃಷಿ ಮಾಹಿತಿ ತಿಳಿಯಲು ಕೆಳಗಿನ ಫೇಸ್ಬುಕ್ , ವಾಟ್ಸಪ್ಪ್ & ಟ್ವಿಟ್ಟರ್ ಗುಂಪು ಜೈನ್ ಆಗಿ >
1) ಫೇಸ್ಬುಕ್ / Facebook – ಜೈನ್ ಆಗಿ/ join facebook
2)ವಾಟ್ಸಾಪ್ ಗ್ರೂಪ್ /Whatsapp ಗುಂಪು – ಜೈನ್ ಆಗಿ/ whatsapp ಗೆ ಸೇರಿಕೊಳ್ಳಿ
3) ” ಟ್ವಿಟರ್ /ಟ್ವಿಟರ್ – ಸೇರು/ಜೈನ್
ಮಾರುಕಟ್ಟೆ ದರವನ್ನು ದಿನನಿತ್ಯ ತಿಳಿದುಕೊಳ್ಳಲು….
ಇತರ ಜಿಲ್ಲೆಗಳ ಕೊಬ್ಬ ರಿ ಮಾರುಕಟ್ಟೆಯ ದರವು ನಿಮಗೆ ಬೆಳೆದ ಫಸಲಿಗೆ ಒಳ್ಳೆ ದರವು ದೊರೆತಂತಾಗುತ್ತದೆ. ಈ ಕಾರಣಕ್ಕಾಗಿ ರೈತರಿಗೆ ಸಹಾಯವಾಗಲು ನಮ್ಮ ವೆಬ್‌ಸೈಟ್‌ನಲ್ಲಿ ಇರುವ ದಿನಾಂಕಗಳಲ್ಲಿ ಇಂದಿನ ಮಾರುಕ ಟ್ಟೆ ದರವನ್ನು ಪ್ರಕಟಿಸಲಾಗುತ್ತದೆ.
<<< ಅಡಿಕೆ ಮಾರುಕಟ್ಟೆ : ಇಂದಿನ ಅಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ತೆಂಗಿನ ಮಾರುಕಟ್ಟೆ : ಇಂದಿನ ತೆಂಗಿನ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಕೊಬ್ಬರಿ ಮಾರುಕಟ್ಟೆ : ಇಂದಿನ ಕೊಬ್ಬರಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
<<< ಹತ್ತಿ ಮಾರುಕಟ್ಟೆ : ಇಂದಿನ ಹತ್ತಿ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ )>>>
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
ವಿ.ಕೆ
ಪರಿಸರ ಪರಿಸರದೊಂದಿಗೆ ಆರ್ಥಿಕತೆ