PM KISAN :: ಪಿ ಎಂ ಕಿಸಾನ್ 22ನೇ ಕಂತಿನ ದಿನಾಂಕ? ಪಿ ಎಂ ಕಿಸಾನ್ ರೈತರ ಅಂತಿಮ ಪಟ್ಟಿ!!!
ರೈತರ ಗೆಳೆಯ ಪಿಎಂ-ಕಿಸಾನ್, ರೈತರ ಬಾಳಿಗೆ ಆಧಾರವಾದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ.
PM-KISAN 22nd Installment – Strengthening India’s Small Farmers from debt ::
• ಕೇಂದ್ರ ಸರ್ಕಾರವು ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಅಂದರೆ ಸುಮಾರು ಫೆಬ್ರವರಿ 24 ರಿಂದ 28 ರ ನಡುವೆ 22ನೇ ಕಂತಿನ ತಲಾ ₹2,000 ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ.
ಆದಷ್ಟು ಬೇಗ ರೈತರ ಖಾತೆಗಳಿಗೆ ಹಣವನ್ನು ವರ್ಗಾಯಿಸಲು ಸರ್ಕಾರವು ಸಿದ್ಧವಾಗಿದೆ.
* ಈ ಯೋಜನೆಯ ಹಣವನ್ನು ಪಡೆಯಲು ಇ-ಕೆವೈಸಿ ಮಾಡಿಸುವುದು ಅತ್ಯಗತ್ಯ. ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿದ ರೈತರಿಗೆ ಮಾತ್ರ ಈ ಹಣ ಸಿಗುತ್ತದೆ. ಒಂದು ವೇಳೆ ರೈತರು ಇ-ಕೆವೈಸಿ ಮಾಡಿಸುವುದು ಬಾಕಿ ಇದ್ದರೆ,
ತಕ್ಷಣವೇ ಹತ್ತಿರದ ಸಿಎಸ್ಸಿ (CSC) ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಆನ್‌ಲೈನ್ ಮೂಲಕ ನವೀಕರಿಸಿಕೊಳ್ಳಲು ಸೂಚಿಸಲಾಗಿದೆ. ಇ-ಕೆವೈಸಿ ಮಾಡಿಸದಿದ್ದರೆ ರೈತರು ಈ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಫಲಾನುಭವಿಗಳ ಪಟ್ಟಿ ಪರಿಶೀಲನೆ:-
How to search beneficiary list :-
Step 1 :: ಈ ಕೆಳಗಿನ ಲಿಂಕ್ ಮೇಲೆ ಪ್ರೆಸ್ ಮಾಡಿ
https://share.google/fzg5sKmtbm34Va7v5
Click above link

Click On Get Report
Step 2 :: ಅಗತ್ಯವಿರುವ ವಿವರಗಳನ್ನು ನಮೂದಿಸಿ, ಮುಂದಿನ ಪುಟದಲ್ಲಿ, ನಿಮ್ಮ ರಾಜ್ಯ(State), ನಿಮ್ಮ ಜಿಲ್ಲೆ(District), ನಿಮ್ಮ ಉಪ-ಜಿಲ್ಲೆ(Sub-district), ನಿಮ್ಮ ಬ್ಲಾಕ್(Block) ಮತ್ತು ಅಂತಿಮವಾಗಿ ನಿಮ್ಮ ಗ್ರಾಮವನ್ನು(Village) ಆಯ್ಕೆ ಮಾಡಿ.
Step 3 :: ಜಿಲ್ಲೆ, ಉಪ-ಜಿಲ್ಲೆ, ನಿಮ್ಮ ಬ್ಲಾಕ್ ಮತ್ತು ನಿಮ್ಮ ಗ್ರಾಮವನ್ನು ಫೀಲ್ ಮಾಡಿ
Step 4 :: ಎಲ್ಲ ಅಗತ್ಯವಾದ ಮಾಹಿತಿ ಮತ್ತು ವಿವರಗಳನ್ನು ಭರ್ತಿ ಮಾಡಿದ ನಂತರ, ‘Get Report‘ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
Step 5 :: ನೀವು ‘Get Report‘ ಬಟನ್ ಕ್ಲಿಕ್ ಮಾಡಿದ ತಕ್ಷಣ, ನಿಮ್ಮ ಗ್ರಾಮದ ಫಲಾನುಭವಿಗಳ ಸಂಪೂರ್ಣ ಪಟ್ಟಿ ನಿಮ್ಮ ಕಂಪ್ಯೂಟರ್ ಪರದೆಯ ಮೇಲೆ ಅಥವಾ ಮೊಬೈಲ್ ಪರದೆಯ ಮೇಲೆ ಕಾಣಿಸುತ್ತದೆ.
ಆ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬಹುದು.

Benificeries List
ಮಾದರಿ ಫಲಾನುಭವಿಗಳ ಪಟ್ಟಿ / Model beneficiary list
ಪಿ. ಎಂ ಕಿಸಾನ್ ಯೋಜನೆಯ ಮಾಹಿತಿ:-
More information related to PM kisan :-
ಪಿಎಂ-ಕಿಸಾನ್ ಯೋಜನೆಯು ಭಾರತದ ಕೃಷಿ ರಂಗದಲ್ಲಿ ಅತ್ಯಂತ ಮಹತ್ವಪೂರ್ಣವಾದ ನೇರ ನಗದು ವರ್ಗಾವಣೆ (DBT) ಕಾರ್ಯಕ್ರಮಗಳಲ್ಲಿ ಒಂದು ಎನಿಸಿದೆ. ಈ ಯೋಜನೆಯು ರೈತರಿಗೆ ಅನೇಕ ವಿಧಗಳಲ್ಲಿ ಸಹಾಯ ಮಾಡುತ್ತದೆ.
ಬಿತ್ತನೆ ಕಾಲದಲ್ಲಿ, ರೈತರಿಗೆ ಬೀಜಗಳು, ರಸಗೊಬ್ಬರಗಳು ಮತ್ತು ಕ್ರಿಮಿನಾಶಕಗಳನ್ನು ಕೊಳ್ಳಲು ಹಣದ ಅವಶ್ಯಕತೆ ಇದ್ದೇ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಈ ₹2,000 ಮೊತ್ತದ ಕಂತುಗಳು ರೈತರಿಗೆ ಬಹುದೊಡ್ಡ ಆಧಾರವಾಗಿ ನಿಲ್ಲುತ್ತವೆ.
ಅಲ್ಲದೆ ಸಣ್ಣ ಪ್ರಮಾಣದ ಖರ್ಚುಗಳಿಗಾಗಿ ರೈತರು ದುಬಾರಿ ಬಡ್ಡಿಯ ಲೇವಾದೇವಿಯವರ ಹತ್ತಿರ ಸಾಲ ಪಡೆಯುವುದನ್ನು ತಪ್ಪಿಸಲು ಇದು ನೆರವಾಗುತ್ತದೆ.
ಪಿಎಂ ಕಿಸಾನ್ ಹೇಗೆ ರೈತರಿಗೆ ಸಹಾಯವಾಗುತ್ತದೆ?
How PM kisan wil help farmer’s?
ರೈತರು ಕೃಷಿ ಸಲಕರಣೆಗಳನ್ನು ಬಾಡಿಗೆಗೆ ಪಡೆಯಲು ಅಥವಾ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಈ ಹಣವು ಉಪಯುಕ್ತವಾಗಿದೆ. ಒಂದು ವರ್ಷದಲ್ಲಿ ಮೂರು ಬಾರಿ ಈ ಸಹಾಯಧನವು ರೈತರ ಕುಟುಂಬದ ನಿತ್ಯದ ಜೀವನ ನಿರ್ವಹಣೆಗೆ ಮತ್ತು ಕನಿಷ್ಠ ಆರ್ಥಿಕ ಭದ್ರತೆಗೆ ಸಹಕಾರಿಯಾಗಿದೆ.
ಯಾವುದೇ ಮಧ್ಯವರ್ತಿಗಳ ಕೈವಾಡವಿಲ್ಲದೆ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದರಿಂದ ಭ್ರಷ್ಟಾಚಾರದಂತಹ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ.
The PM-KISAN program is a key Direct Benefit Transfer (DBT) initiative for Indian agriculture, offering farmers wide-ranging help.
It gives money on time so farmers have funds to buy important items like seeds, fertilizers, and pesticides when they need them most, like during planting seasons.
This program greatly cuts down on farmers’ debt, since the regular payments help them avoid borrowing money at high interest rates from local lenders for small farming costs.
The money also helps farmers modernize their work by paying for equipment rentals or handling small technical needs on their farms. Because the money comes in three set payments each year,
Farmers feel more secure financially and can better afford daily living costs. Most importantly, sending the money straight to bank accounts removes middlemen, which makes the process clear and stops money from being lost to waste or corruption.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply