PM KISAN :: 22ನೇ ಕಂತಿನ ಪಿಎಂ ಕಿಸಾನ್ ಹಣ ಯಾವಾಗ ಜಮಾವಾಗುತ್ತೆ!! ಪಟ್ಟಿಯಲ್ಲಿ ನಿಮ್ಮ ಹೆಸರಿಗೆ ಚೆಕ್ ಮಾಡಿಕೊಳ್ಳಿ?
22ನೇ ಕಂತಿನ ಪಿಎಂ ಕಿಸಾನ್ ಹಣ!! ಫೆಬ್ರವರಿ ಕೊನೆಯಲ್ಲಿ ರೈತರ ಖಾತೆಗೆ ಹಣ ಜಮಾ ಸಂಬಂಧಿಸಿದಂತೆ ಕೆಲವು ಮಹತ್ವದ ವಿವರಗಳು ::
Important Updates 22nd installment of the PM-KISAN scheme and release date ::
22ನೇ ಕಂತಿನ ಸಹಾಯಧನವಾಗಿ 2,000 ರೂಪಾಯಿಗಳನ್ನು ಫೆಬ್ರವರಿ 2026ರ ಅಂತ್ಯದ ವೇಳೆಗೆ ಅಥವಾ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಸಾಧ್ಯತೆಗಳಿವೆ.
* ಭಾರತದ ಕೇಂದ್ರ ಸರ್ಕಾರವು ಈ ಧನ ಸಹಾಯವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಮಾಡುತ್ತದೆ. ಹಿಂದಿನ 21ನೇ ಕಂತಿನ ಹಣವು ನವೆಂಬರ್ 2025 ರಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಲಾಗಿತ್ತು.
ರೈತರು ಪಾಲಿಸಬೇಕಾದ ಕಡ್ಡಾಯದ ಕಾರ್ಯಗಳು (ಹಣವನ್ನು ಪಡೆಯಲು)
ಯಾವುದೇ ತೊಂದರೆಗಳಿಲ್ಲದೆ ಹಣವು ನಿಮ್ಮ ಖಾತೆಗೆ ತಲುಪಲು, ನೀವು ಈ ಕೆಳಗಿನ ನಾಲ್ಕು ಕಾರ್ಯಗಳನ್ನು ತಪ್ಪದೆ ಪೂರ್ಣಗೊಳಿಸಿರಬೇಕು:
1. ಇ-ಕೆವೈಸಿ (e-KYC) ಇದು ಅತ್ಯಂತ ಅವಶ್ಯಕವಾಗಿದೆ.
ಸಾರ್ವಜನಿಕ ತಾಣದಲ್ಲಿ ಆಧಾರ್ ಒಟಿಪಿ (OTP) ಸಹಾಯದಿಂದ ಅಥವಾ ಸಿಎಸ್ಸಿ (CSC) ಕೇಂದ್ರಗಳಲ್ಲಿ ನಿಮ್ಮ ಬೆರಳಚ್ಚು ಗುರುತಿಸುವಿಕೆಯ ಮೂಲಕ ಇದನ್ನು ಪೂರ್ಣಗೊಳಿಸಬಹುದಾಗಿದೆ.
2. ಭೂಮಿ ಜೋಡಣೆ (Land Seeding) ನಿಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಅಂತರ್ಜಾಲ ತಾಣದಲ್ಲಿ ನವೀಕರಿಸಿರಬೇಕು.
ಒಂದು ವೇಳೆ ‘Land ಸೀಡಿಂಗ್, No‘ ಎಂದು ನಮೂದಿತವಾಗಿದ್ದರೆ, ನಿಮಗೆ ಹಣವು ಬರುವುದಿಲ್ಲ. ಈ ಬಗ್ಗೆ ನೀವು ಕೃಷಿ ಇಲಾಖೆ ಅಥವಾ ಕಂದಾಯ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು.
3. ಆಧಾರ್ ಬ್ಯಾಂಕ್ ಜೋಡಣೆ (NPCI Mapping) ಹಣವನ್ನು ಡಿಬಿಟಿ (DBT) ಮುಖಾಂತರ ವರ್ಗಾವಣೆ ಮಾಡುವುದರಿಂದ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡಿರಬೇಕು ಮತ್ತು ಎನ್ಪಿಸಿಐ ಮ್ಯಾಪಿಂಗ್ ಆಗಿರಬೇಕು.
4. ಡಿಜಿಟಲ್ ರೈತ ಗುರುತಿನ ಚೀಟಿ (Digital Farmer ID) ರೈತರು ತಮ್ಮ ಡಿಜಿಟಲ್ ಗುರುತಿನ ಚೀಟಿಯನ್ನು ಹೊಂದುವುದು ಬಹಳ ಉತ್ತಮವಾಗಿದೆ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು (PM Kisan List) ನಿಮ್ಮ ಮೊಬೈಲ್ ಫೋನ್ನಲ್ಲಿ ಹೇಗೆ ಸುಲಭವಾಗಿ ನೋಡುವುದು ಎಂದು ಇಲ್ಲಿ ವಿವರಿಸಲಾಗಿದೆ.
ಆರಂಭದಲ್ಲಿ, ಗೂಗಲ್ನಲ್ಲಿ ‘PM Kisan‘ ಎಂದು ಟೈಪ್ ಮಾಡಿ ಅಧಿಕೃತ ವೆಬ್ಸೈಟನ್ನು ತೆರೆಯಿರಿ. https://pmkisan.gov.in/
* ಅಲ್ಲಿರುವ ‘Beneficiary Status’ ಅಥವಾ ಫಲಾನುಭವಿಗಳ ಪಟ್ಟಿಯನ್ನು ವೀಕ್ಷಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಬೆನಿಫಿಕೇರ್ಯ ಲಿಸ್ಟ್ / benificary list
* ವಿವರಗಳನ್ನು ಭರ್ತಿ ಮಾಡಿ: ನಿಮ್ಮ ರಾಜ್ಯ (State), ಜಿಲ್ಲೆ (District), ಉಪ-ಜಿಲ್ಲೆ, ಬ್ಲಾಕ್ ಮತ್ತು ನಿಮ್ಮ ಗ್ರಾಮವನ್ನು ಸೂಕ್ತವಾಗಿ ಆಯ್ಕೆ ಮಾಡಿಕೊಳ್ಳಿ.

Click On Benificeries
ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿದ ನಂತರ, ‘Get Report’ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿಯು ಪರದೆಯ ಮೇಲೆ ಗೋಚರಿಸುತ್ತದೆ.
* ಪುಟಗಳ ಪರಿಶೀಲನೆ: ಒಂದು ವೇಳೆ ನಿಮ್ಮ ಹೆಸರನ್ನು ಮೊದಲ ಪುಟದಲ್ಲಿ ಗುರುತಿಸಲು ಸಾಧ್ಯವಾಗದಿದ್ದಲ್ಲಿ, ಮುಂದಿನ ಪುಟಗಳನ್ನು (Page 2, 3…) ಕ್ಲಿಕ್ ಮಾಡಿ ಪರಿಶೀಲನೆ ಮಾಡಬಹುದು.
ಪಿ.ಎಂ. ಕಿಸಾನ್ (PM-KISAN) ಯೋಜನೆಯು ಭಾರತದ ಸಣ್ಣ ಮತ್ತು ಅತಿಸಣ್ಣ ರೈತರ ಆರ್ಥಿಕ ಭದ್ರತೆಯನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಈ ಯೋಜನೆಯಡಿ, ವಾರ್ಷಿಕವಾಗಿ ₹6,000 ಮೊತ್ತವನ್ನು ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಈ ಆರ್ಥಿಕ ಸಹಾಯವು ರೈತರಿಗೆ ಕೃಷಿಗೆ ಸಂಬಂಧಿಸಿದ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಅವರನ್ನು ಲೇವಾದೇವಿಗಾರರ ಸಾಲದ ಸುಳಿಯಿಂದ ಪಾರು ಮಾಡುತ್ತದೆ.
ತಾಂತ್ರಿಕವಾಗಿ ಹೇಳುವುದಾದರೆ, ಇದು ಕೇಂದ್ರ ವಲಯದ ಯೋಜನೆಯಾಗಿದ್ದು, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಯೋಜನೆಯು ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಅರ್ಹ ಫಲಾನುಭವಿಗಳನ್ನು ನಿಖರವಾಗಿ ಗುರುತಿಸುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದರೆ,
ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಒಂದು ಪರಿಣಾಮಕಾರಿ ಸಾಧನವಾಗಲಿದೆ.
PM KISAN through DBT transfers the money to the beneficiary avoiding the interference of intermediaries reducing farmersvdependence on money lenders for informal credit.
This process ensures that the full financial benefit reaches the farmers’ bank accounts without any leakages,the scheme empowers farmers to invest in essential agricultural inputs like seeds and fertilizers, ultimately helping rural economic stability and self-reliance.
Thank you.
ಧನ್ಯವಾದಗಳು
<<< ಅ ಡಿಕೆ ಮಾರುಕಟ್ಟೆ : ಇಂದಿನ ಅ ಡಿಕೆ ಮಾರುಕಟ್ಟೆ ( ಇಲ್ಲಿ ಕ್ಲಿಕ್ ಮಾಡಿ ) >>>
< ದಿನನಿತ್ಯ ಅ ಡಿಕೆ ಮಾರುಕಟ್ಟೆಯ ದರವನ್ನು, ಅ ಡಿಕೆ ರೋಗ , ಅ ಡಿಕೆಗೆ ಗೊಬ್ಬರ ಸಿಂಪರಣೆ, ಅ ಡಿಕೆಯ ಸಂಪೂರ್ಣ ಮಾಹಿತಿ ಕೆಳಗಿನ ಫೇಸ್ಬುಕ್ , ವಾಟ್ಸಪ್ ಮತ್ತು ಟ್ವಿಟರ್ ಗುಂಪು ಜೈನ್ ಆಗಿ >
1) ” Facebook / Facebook ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
2) ” ವಾಟ್ಸಾಪ್ ಗ್ರೂಪ್ /Whatsapp ಗುಂಪು ” – ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
3) ” Twitter /ಟ್ವಿಟರ್ “- ಇಲ್ಲಿ ಕ್ಲಿಕ್ ಮಾಡಿ / ಕ್ಲಿಕ್ ಮಾಡಿ
ನಿಮಗೆ ಯಾವ ಜಿಲ್ಲೆಯಲ್ಲಿ ಯಾವ ದಿನ ಎಷ್ಟು ಅ ಡಿಕೆ ಬಂದಿದೆ ಗರಿಷ್ಠ ದರವನ್ನು ನೋಡಬಹುದು.ಯಾವ ವೆರೈಟಿಯ ದರವನ್ನು ನೀವು ನೋಡಬಹುದು.
ಹೊಸ ಅಡಿಕೆ, ಹಳೆಯ ಅಡಿಕೆ ರಾಶಿ ಇಪ್ಪಿ ಬೆಟ್ಟಿ ಕೆಂಪುಗೋಟು ಚಿಪ್ಪು,ಹಳೆಯ ಚಾಲಿ, ಹೊಸ ಚಾಲಿ ಬಿಳಿಗೋಟು, ಸಿಪ್ಪೆಗೋಟು, ಸರಕು, ಬೆಟ್ಟಿ.
ರೈತರಿಗೆ ಯಾವ ಅ ಡಿಕೆ ವೆರೈಟಿಯ ಬೆಲೆ ಹೇಗಿದೆ ಎಂಬುದು ತಿಳಿಸಿಕೊಡಲು ಎಲ್ಲಾ ವೆರೈಟಿ ಅ ಡಿಕೆ ದರವನ್ನು ತಿಳಿಸಲಾಗಿದೆ.
ರೈತರ ಸೇವೆಯಲ್ಲಿ ನಿಮ್ಮ vkgrowmore.com 💚
– V K
ಪರಿಸರ ಪರಿಸದೊಂದಿಗೆ ಆರ್ಥಿಕತೆ
I am Vilas, Agriculture graduate from UAS Dharwad and an agriculture blogger since 2020. Specialized in arecanut cultivation, organic farming, and government schemes, sharing practical and research-based knowledge for farmers.

Leave a Reply